ಪ್ರವಾಹ ಪೀಡಿತ ಪ್ರದೇಶಗಳಿಗೆ ನೆರವಾಗಿ ಕೈ ಜೋಡಿಸಿ ನಿಲ್ಲುವ ಕಾರ್ಯವನ್ನು ಸಾಕಷ್ಟು ಮಂದಿ ಮಾಡುತ್ತಿದ್ದಾರೆ. ನೆರವಿನ ಹಸ್ತ ಚಾಚುತ್ತಿದ್ದಾರೆ. ವಿವಿಧತೆಯಲ್ಲಿ ಏಕತೆ ಎನ್ನುವುದಕ್ಕೆ ಸಾಕ್ಷಿಯಾಗುವಂತಿದೆ ಈ ಕೆಲಸ.

ನೆರೆ ಸಂತ್ರಸ್ತರಿಗೆ ಕೊಲ್ಲೂರು ದೇವಳದಿಂದ 1 ಕೋಟಿ ರು. ನೆರವು

 

ಉತ್ತರ ಕರ್ನಾಟಕದ ಪ್ರವಾಹಕ್ಕೆ ಸ್ಯಾಂಡಲ್ ವುಡ್ ಸ್ಟಾರ್ ಗಳು ಹಾಗೂ ಅವರ ಅಭಿಮಾನಿಗಳು ಕೈ ಜೋಡಿಸಿ ಸಹಾಯ ಮಾಡುತ್ತಿದ್ದಾರೆ. ಹೀಗಿರುವಾಗ ನೆರೆ ಸಂತ್ರಸ್ತರಿಗೆ ಸಹಾಯ ಮಾಡಿ ಸೆನ್ಸೇಷನಲ್ ಆಗುತ್ತಿರುವುದು ತೆಲುಗು ಸೆನ್ಸೇಷನಲ್ ಬರ್ನಿಂಗ್ ಸ್ಟಾರ್ ಸಂಪೂರ್ಣೇಶ್ ಬಾಬು.

ಕುಕ್ಕೆ ದೇಗುಲದಿಂದ 1 ಕೋಟಿ ನೆರವು

ಬರ್ನಿಂಗ್ ಸ್ಟಾರ್ ಬೇರೆ ಯಾರೂ ಅಲ್ಲ. ತೆಲುಗು ಇಂಡಸ್ಟ್ರಿಯ ಕಲಾವಿದ ಸಂಪೂರ್ಣೇಶ್ ಬಾಬು. ‘ಉತ್ತರ ಕರ್ನಾಟಕದ ಪ್ರವಾಹ ಸುದ್ದಿ ನನ್ನ ಮನ ಕಲಕಿಬಿಟ್ಟಿತು. ಕನ್ನಡದ ಜನ ತೆಲುಗು ಚಿತ್ರಗಳನ್ನು ದಶಕಗಳ ಕಾಲದಿಂದ ಆದರಿಸುತ್ತಾ ಬಂದಿದ್ದಾರೆ. ನನ್ನನ್ನು ಸಹ ‘ಹೃದಯಕಾಲೇಯಂ’ ಚಿತ್ರದಿಂದ ಬಹಳ ಮೆಚ್ಚಿದ್ದೀರಿ. ಪ್ರೋತ್ಸಾಹ ನೀಡಿದ್ದೀರಿ. ಅದಕ್ಕೆ ನಾನು ಚಿರ ಋಣಿ. ಇತ್ತೀಚಿನ ಪ್ರವಾಹದ ಫೋಟೋಗಳನ್ನು ಮತ್ತು ಆ ಭಾಗದ ಜನರ ನೋವನ್ನು ನೋಡಿ ನನಗೆ ತುಂಬಾ ದುಃಖ ಉಂಟಾಗಿದೆ. ಈಗ ತೆಲುಗು ಚಿತ್ರ್ಯೋದ್ಯಮ ಕನ್ನಡದ ಪ್ರಜೆಗಳಿಗೆ ಸಹಾಯ ಮಾಡುವ ಸಮಯ ಬಂದಿದೆ. ನನ್ನ ಅಳಿಲು ಸೇವೆಯಾಗಿ 2 ಲಕ್ಷರೂ ನೆರವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡುತ್ತಿದ್ದೇನೆ. ಜೈ ಹಿಂದ್ ’ ಎಂದು ಕನ್ನಡದಲ್ಲಿ ಟ್ಟೀಟ್ ಮಾಡಿದ್ದಾರೆ.