ಚಿಕ್ಕಮಗಳೂರು [ಆ.16]:  ಮಲೆನಾಡಲ್ಲಿ ಮಳೆ ನಿಂತರೂ ಕೂಡ ಅನಾಹುತಗಳು ಇನ್ನೂ ನಿಂತಿಲ್ಲ. ಕಳೆದ ಕೆಲ ದಿನಗಳಿಂದ ಸುರಿದ ಭಾರೀ ಮಳೆ ಮಲೆನಾಡಿಗರು ಸಂಪೂರ್ಣ ತತ್ತರಿಸಿ ಹೋಗುವಂತೆ ಮಾಡಿದೆ. 

ಹಲವು ಗುಡ್ಡ ಬೆಟ್ಟಗಳು ನಿರಂತರವಾಗಿ ಕುಸಿಯುತ್ತಿದ್ದು, ಇನ್ನೂ ಕೂಡ ಬದುಕು ಕಟ್ಟಿಕೊಳ್ಳುವುದು ಸಾಧ್ಯವಾಗುತ್ತಿಲ್ಲ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಭೂ ಕುಸಿತ ನಿರಂತರವಾಗಿದ್ದು, ಹಲವು ಮಾರ್ಗಗಳು ಬಂದ್ ಆಗಿವೆ. 

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇಲ್ಲಿನ ಕೊಟ್ಟಿಗೆಹಾರದ ಬಳಿ ಮತ್ತೆ ಭೂ ಕುಸಿತವಾಗಿದ್ದು, ಬಾಳೆ ಹೊಳೆ, ಕಳಸ, ಹಿರೇಬೈಲು ಸಂಪರ್ಕ ಕಡಿತಗೊಂಡಿದೆ. 

ಮೂಡಿಗೆರೆ ತಾಲೂಕಿನ ಬಾಳೆಹೊಳೆ ಸಮೀಪದಲ್ಲಿ ರಸ್ತೆಯು ಸಂಪೂರ್ಣ ಕುಸಿದ ಪರಿಣಾಮ ಮುನ್ನೆಚ್ಚರಿಕಾ ಕ್ರಮವಾಗಿ ಸಂಪರ್ಕ ಸ್ಥಗಿತ ಮಾಡಿ ಜಿಲ್ಲಾಡಳಿತ ಆದೇಶ ನೀಡಿದೆ.