ಮಾರ್ಚ್ 1, 2 ರಂದು ಆಕಾಶದಲ್ಲಿ ಗುರು ಶುಕ್ರಗಳ ಜೋಡಿ ಝಲಕ್

ಈಗ ಕೆಲ ದಿನಗಳಿಂದ ಪಶ್ಚಿಮ ಆಕಾಶದಲ್ಲಿ ಸಂಜೆಯಾಗುತ್ತಿದ್ದಂತೆ ಸೂರ್ಯಾಸ್ತಕ್ಕೆ ಹಿಡಿದ ಅವಳಿ ದೀವಟಿಕೆಯೋ ಎನ್ನುವಂತೆ ಅಕ್ಕಪಕ್ಕದಲ್ಲಿ ಗುರು ಮತ್ತು ಶುಕ್ರ ಗ್ರಹಗಳು ಹೊಳೆಯುತ್ತಿವೆ.

witness the beauty of Jupiter and Venus on evening sky skr

ಶಶಿಧರ ಮಾಸ್ತಿಬೈಲು, ಉಡುಪಿ

ಈಗ ಕೆಲ ದಿನಗಳಿಂದ ಸಂಜೆಯ ಪಶ್ಚಿಮ ಆಕಾಶದಲ್ಲಿ ಗುರು ಶುಕ್ರರ ಜೋಡಿ ಬಲು ಸುಂದರವಾಗಿ ಕಾಣುತ್ತಿದೆ . ಮಾರ್ಚ್ 1ರಂದು ಈ ಗುರು ಗ್ರಹ ಶುಕ್ರ ಗ್ರಹದ ಅರ್ಧ ಡಿಗ್ರಿ ಸಮೀಪ ಕಾಣಿಸಲಿದೆ. ಬರಿ ಕಣ್ಣಿಗೆ ಕಾಣುವ ಅತಿ ಸುಂದರ ಗ್ರಹಗಳಾದ ಗುರು ಹಾಗೂ ಶುಕ್ರ ರ ಜೋಡಾಟ ಆಕಾಶದಲ್ಲಿ  ಈಗ ನಡೆಯುತ್ತಿದೆ. ಗುರು ಗ್ರಹ ಹಾಗೂ ಶುಕ್ರಗಳು ಬರಿ ಕಣ್ಣಿಗೂ ಸುಂದರವಾಗಿ ಗೋಚರಿಸುತ್ತವೆ.

ಇವು ಈಗ ಕೆಲ ದಿನದಿಂದ ಪಶ್ಚಿಮ ಆಕಾಶದಲ್ಲಿ ಸಂಜೆಯಾಗುತ್ತಿದ್ದಂತೆ ಸೂರ್ಯಾಸ್ತಕ್ಕೆ ಹಿಡಿದ ಅವಳಿ ದೀವಟಿಕೆಯೋ ಎನ್ನುವಂತೆ ಅಕ್ಕಪಕ್ಕದಲ್ಲಿ ಹೊಳೆಯುತ್ತಿವೆ. ಇದೊಂದು ಅಪರೂಪದ ವಿದ್ಯಮಾನವಾಗಿದೆ. ಅವುಗಳಲ್ಲೂ ನಾನೇ ಚೆಂದ ವೆಂದು ಹೊಳೆಯುತ್ತಿರುವ ಶುಕ್ರ , ಭೂಮಿಯಿಂದ ಈಗ ಸುಮಾರು 20.5 ಕೋಟಿ ಕಿಮೀ ದೂರದಲ್ಲಿದ್ದರೆ , ಗುರು ಗ್ರಹವೀಗ ಭೂಮಿಯಿಂದ 86 ಕೋಟಿ ಕಿಮೀ ದೂರವಿದೆ.

ಗುರು ಗ್ರಹದ ಗಾತ್ರ  ಶುಕ್ರನಿಗಿಂತ ಸುಮಾರು 1400 ಪಟ್ಟು ದೊಡ್ಡದು. ಆದರೂ ಶುಕ್ರ ಫಳಫಳ ಹೊಳೆಯುತ್ತಿದೆ. ಶುಕ್ರ ಹೊಳೆಯಲು ಆ ಗ್ರಹದ ವಾತಾವರಣವೇ ಕಾರಣ. ಸ್ವಯಂಪ್ರಭೆ ಇಲ್ಲದ ಈ ಗ್ರಹದ ವಾತಾವರಣದಲ್ಲಿರುವ ಕಾರ್ಬನ್ ನ ಅಕ್ಸೈಡುಗಳು ಹಾಗೂ ಸಲ್ಫರ್ ಡೈಆಕ್ಸೈಡ್ ನ ತೆಳು ಕವಚ ಸುಮಾರು 80 ಅಂಶ ಸೂರ್ಯನ ಬೆಳಕನ್ನು ಪ್ರತಿಫಲಿಸುವುದೇ ಕಾರಣವಾಗಿದೆ.

ಚಂದ್ರಯಾನ - 3ಗೆ ಬಲ: ಪ್ರಮುಖ ರಾಕೆಟ್ ಎಂಜಿನ್ ಪರೀಕ್ಷೆಯಲ್ಲಿ ISROಗೆ ಯಶಸ್ಸು

ಶುಕ್ರ ಆಗಸ್ಟ್ ವರೆಗೂ ಸಂಜೆ ಆಕಾಶದಲ್ಲಿ ಬೇರೆ ಬೇರೆ ಎತ್ತರದಲ್ಲಿ ಹೊಳೆಯಲಿದೆ. ಆದರೆ ಗುರು ಗ್ರಹ ಕೆಲವೇ ದಿನಗಳಲ್ಲಿ ಮರೆಯಾಗಲಿದೆ. ಸಂಜೆಯ ಸೂರ್ಯಾಸ್ತ  ಹಾಗೂ ಸೂರ್ಯೋದಯ ಕೆಂಬಣ್ಣದ ಬಣ್ಣ ಈಗ ಅತಿ ಸುಂದರವಾಗಿದ್ದು ಎಲ್ಲರೂ ನೋಡಿ ಆನಂದಿಸಬಹಯದು ಎಂದು ಖಗೋಳಶಾಸ್ತ್ರಜ್ಞ ಡಾ.ಎ.ಪಿ.ಭಟ್ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios