ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ 9 ತಿಂಗಳ ನಂತರ ಭೂಮಿಗೆ ಮರಳಿದ್ದಾರೆ. ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಣೆ ಇಲ್ಲದಿರುವುದರಿಂದ ಕೂದಲು ತೇಲುತ್ತದೆ. ಇದರಿಂದ ಕೂದಲು ಕಣ್ಣಿಗೆ ಬರುವುದಿಲ್ಲ ಮತ್ತು ಸಿಕ್ಕಾಗುವ ಸಾಧ್ಯತೆ ಕಡಿಮೆ ಇರುತ್ತದೆ. ಆದ್ದರಿಂದ, ಅಲ್ಲಿ ಕೂದಲು ಕಟ್ಟುವ ಅಥವಾ ಬ್ರಷ್ ಮಾಡುವ ಅಗತ್ಯವಿರುವುದಿಲ್ಲ.
ಭಾರತೀಯ ಮೂಲದ ಅಮೆರಿಕದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ 9 ತಿಂಗಳ ನಂತರ ಭೂಮಿಗೆ ಮರಳಿದ್ದಾರೆ. ಇತ್ತೀಚೆಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನಾಸಾದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಬಗ್ಗೆ ತಮಾಷೆ ಮಾಡುತ್ತಾ ಅವರನ್ನು "ಕಾಡು ಕೂದಲಿನ ಮಹಿಳೆ" ಎಂದು ಕರೆದರು. ಅವರ ಈ ಹೇಳಿಕೆಯ ನಂತರ, ತಕ್ಷಣವೇ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯ ವಿಷಯವಾಯಿತು ಮತ್ತು ಇಂಟರ್ನೆಟ್‌ನಲ್ಲಿ ಮೀಮ್‌ಗಳ ಪ್ರವಾಹವೇ ಉಂಟಾಯಿತು. ಈಗ ದೊಡ್ಡ ಪ್ರಶ್ನೆ ಎಂದರೆ ಸುನಿತಾ ಅವರು ಬಾಹ್ಯಾಕಾಶದಲ್ಲಿ ಕೂದಲು ಏಕೆ ಕಟ್ಟುತ್ತಿರಲಿಲ್ಲ ಎಂಬುದು.
ಬಾಹ್ಯಾಕಾಶದಲ್ಲಿ ಸುನಿತಾ ವಿಲಿಯಮ್ಸ್ ಕೂದಲು ಏಕೆ ಬಿಚ್ಚಿಡುತ್ತಿದ್ದರು?:ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಣೆ ಇರುವುದಿಲ್ಲ, ಅಂದರೆ ಬಾಹ್ಯಾಕಾಶದಲ್ಲಿ ನಿಮ್ಮ ಸಾಮಾನ್ಯ ಕೂದಲಿನ ಸಮಸ್ಯೆಗಳು ಅಷ್ಟೇನೂ ಮುಖ್ಯವಾಗುವುದಿಲ್ಲ. ಭೂಮಿಯ ಮೇಲೆ ಗುರುತ್ವಾಕರ್ಷಣೆಯು ಕೂದಲನ್ನು ಕೆಳಕ್ಕೆ ಎಳೆಯುತ್ತದೆ, ಇದರಿಂದಾಗಿ ಜನರ ಕೂದಲು ಕೆಳಕ್ಕೆ ಇರುತ್ತದೆ ಮತ್ತು ಸಿಕ್ಕಿಹಾಕಿಕೊಳ್ಳುತ್ತದೆ. ಆದರೆ ಬಾಹ್ಯಾಕಾಶದಲ್ಲಿ ಕೂದಲು ಯಾವುದೇ ತೊಂದರೆಯಿಲ್ಲದೆ ಅತ್ತಿಂದಿತ್ತ ತೇಲುತ್ತದೆ. ಗಗನಯಾತ್ರಿಗಳು ಕೆಲಸ ಮಾಡುವಾಗ ತಮ್ಮ ಕೂದಲು ಕಣ್ಣಿಗೆ ಬೀಳುವ ಚಿಂತೆ ಇರುವುದಿಲ್ಲ. ಬಾಹ್ಯಾಕಾಶದಲ್ಲಿ ಕೂದಲು ಕಣ್ಣಿಗೆ ಬರದ ಕಾರಣ ಅಲ್ಲಿ ಕೂದಲು ಕಟ್ಟುವ ಅಗತ್ಯವಿಲ್ಲ.
ಕೇವಲ 8 ದಿನದ ಯಾನಕ್ಕೆ ಹೋಗಿ, ತಾಂತ್ರಿಕ ಸಮಸ್ಯೆಯಿಂದ 9 ತಿಂಗಳ ಬಾಹ್ಯಾಕಾಶ ವಾಸ ಬಳಿಕ ಸುನಿತಾ, ಸಹ ಗಗನಯಾತ್ರಿ ಭುವಿಗೆ!,
ಬ್ರಷ್ ಮಾಡದೆಯೇ ತಿಂಗಳಾನುಗಟ್ಟಲೆ ಬಾಹ್ಯಾಕಾಶದಲ್ಲಿರಬಹುದು
ಗುರುತ್ವಾಕರ್ಷಣೆಯ ಅನುಪಸ್ಥಿತಿಯಲ್ಲಿ ಕೂದಲು ಸಿಕ್ಕು ಮತ್ತು ಗಂಟುಗಳಾಗುವ ಅಪಾಯವಿರುವುದಿಲ್ಲ. ಭೂಮಿಯ ಮೇಲೆ ಕೂದಲನ್ನು ಸಿಕ್ಕಾಗದಂತೆ ನೋಡಿಕೊಳ್ಳಲು ನಿರಂತರವಾಗಿ ಬಾಚಬೇಕಾಗುತ್ತದೆ. ಆದರೆ ಬಾಹ್ಯಾಕಾಶದಲ್ಲಿ ನೀವು ಹಾಗೆ ಮಾಡುವ ಅಗತ್ಯವಿಲ್ಲ. ಅಲ್ಲಿ ಕೂದಲು ಗಾಳಿಯಲ್ಲಿ ತೇಲುತ್ತಿರುತ್ತದೆ, ಇದರಿಂದ ಸಿಕ್ಕಾಗುವ ಸಾಧ್ಯತೆ ಕಡಿಮೆ ಇರುತ್ತದೆ. ಹೀಗಾಗಿ ತಿಂಗಳುಗಟ್ಟಲೆ ಬಾಚದೆಯೇ ಇರಬಹುದು.
ಫ್ಲೋರಿಡಾ ಸಮುದ್ರದಲ್ಲಿ ಇಳಿದ ನೌಕೆ: ಸುನಿತಾ ವಿಲಿಯನ್ಸ್, ಬುಚ್ ವಿಲ್ಮೋರ್, ರಷ್ಯಾದ ಅಲೆಕ್ಸಾಂಡರ್ ಗೋರ್ಬುನೋವ್ ಮತ್ತು ಅಮೆರಿಕದ ನಿಕ್ ಹೇಗ್ ಅವರನ್ನು ಹೊತ್ತ ಸ್ಪೇಸ್‌ಎಕ್ಸ್‌ನ ಕ್ರ್ಯೂ ಡ್ರ್ಯಾಗನ್ ನೌಕೆ ಮಂಗಳವಾರ ಬೆಳಗ್ಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಭೂಮಿಯ ಕಡೆಗೆ ಪ್ರಯಾಣ ಆರಂಭಿಸಿ ಭಾರತೀಯ ಕಾಲಮಾನದ ಪ್ರಕಾರ ಮಾ.19ರ ಬೆಳಗ್ಗೆ 3.27ಕ್ಕೆ ಫ್ಲೋರಿಡಾ ಸಮುದ್ರದಲ್ಲಿ ಇಳಿಯಿತು. ಒಟ್ಟು 15 ಗಂಟೆಗಳ ಪ್ರಯಾಣದ ನಂತರ ಫ್ಲೋರಿಡಾ ಸಮುದ್ರದ ಮೇಲೆ ಬಂದು ಅಪ್ಪಳಿಸಿತು. ಬಳಿಕ ಎಲ್ಲಾ ನಾಲ್ವರು ಯಾತ್ರಿಗಳನ್ನು ಬೋಟ್‌ಗಳ ಮೂಲಕ ದಡಕ್ಕೆ ತರೆತಂದು ಭೂಮಿಯ ವಾತಾವರಣಕ್ಕೆ ಹೊಂದಿಕೊಳ್ಳುವ ಸಲುವಾಗಿ ಕೆಲ ಕಾಲ ನಿಗಾದಲ್ಲಿ ಇಟ್ಟು ಮುಂದಿನ ಪ್ರಕ್ರಿಯೆ ನಡೆಸಲಾಯ್ತು.
ಹೊಸ ದಾಖಲೆ: 8 ದಿನಗಳ ತುರ್ತು ಕೆಲಸಕ್ಕೆಂದು ಕಳೆದ ವರ್ಷ ಐಎಸ್‌ಎಸ್‌ಗೆ ತೆರಳಿದ್ದ ಸುನಿತಾ ಮತ್ತು ಬುಚ್ ಭೂಮಿಗೆ ಮರಳಲು ಸೂಕ್ತ ನೌಕೆಯ ಕೊರತೆಯಿಂದಾಗಿ 9 ತಿಂಗಳು ಅಲ್ಲೇ ಉಳಿದಿದ್ದರು.
ಈ ಅವಧಿಯಲ್ಲಿ ಸುನಿತಾ 9 ಸಲ ಒಟ್ಟು 62 ಗಂಟೆಗಳ ಅವಧಿಯಷ್ಟು ಬಾಹ್ಯಾಕಾಶ ನಡಿಗೆ ಮಾಡಿ ಹಲವು ದುರಸ್ತಿ ಕಾರ್ಯ ಮಾಡಿದ್ದರು. ಈ ಮೂಲಕ ಅತ್ಯಂತ ಹೆಚ್ಚಿನ ಅವಧಿಯ ಬಾಹ್ಯಾಕಾಶ ನಡಿಗೆ ಮಾಡಿದ ಮಹಿಳೆ ಎಂಬ ದಾಖಲೆಗೂ ಸುನಿತಾ ಪಾತ್ರರಾಗಿದ್ದಾರೆ.
ಭಾರತ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್‌ಗೆ ಪ್ರಧಾನಿ ಮೋದಿ ಅವರು ಭಾವನಾತ್ಮಕ ಪತ್ರ ಬರೆದಿದ್ದಾರೆ. ಸುನಿತಾರನ್ನು ಭಾರತದ ಹೆಮ್ಮೆಯ ಪುತ್ರಿ ಎಂದು ಬಣ್ಣಿಸಿರುವ ಮೋದಿ, ಭಾರತಕ್ಕೆ ಆಗಮಿಸುವಂತೆ ಆಹ್ವಾನ ನೀಡಿದ್ದಾರೆ. ಮಾ.1ರಂದು ಬರೆದಿರುವ ಈ ಪತ್ರವನ್ನು ನಾಸಾದ ಮಾಜಿ ಗಗನಯಾತ್ರಿ ಮೈಕ್ ಮೆಸ್ಸಿಮಿನೋ ಅವರ ಮೂಲಕ ಮೋದಿ ಅವರು ಕಳುಹಿಸಿಕೊಟ್ಟಿದ್ದಾರೆ.
