ಮರಭೂಮಿಯಲ್ಲಿ ಹಿಮಪಾತ! ಹಿಂದೆಂದೂ ಕಂಡು ಕೇಳರಿಯದ ಪ್ರಕೃತಿ ವಿಸ್ಮಯಕ್ಕೆ ಸಾಕ್ಷಿಯಾಯ್ತು ಸೌದಿ... ವಿಡಿಯೋ ವೈರಲ್​

ಮರಭೂಮಿ ಸೌದಿ ಅರೇಬಿಯಾದ ಇತಿಹಾಸದಲ್ಲಿ ಇದೇಮೊದಲ ಬಾರಿಗೆ ಹಿಮಪಾತವಾಗಿದೆ. ಆಲಿಕಲ್ಲು ಮಳೆಯೂ ಆಗಿದ್ದು, ಜನರು ಖುಷಿಯ ಜೊತೆ ಭಯಭೀತರೂ ಆಗಿದ್ದಾರೆ.
 

Saudi Arabia desert sees rare snowfall netizens say climate is really changing not good sign suc

ಪ್ರಕೃತಿಯ ಸೋಜಿಗದ ಮುಂದೆ ಎಲ್ಲವೂ ಗೌಣ. ಈಗಂತೂ ಹವಾಮಾನ ವೈಪರೀತ್ಯಗಳು ಯಾವ ರೀತಿಯಾಗಿವೆ ಎಂದರೆ, ಯಾವ ಕಾಲದಲ್ಲಿ ಏನಾಗುತ್ತದೋ ತಿಳಿಯುತ್ತಿಲ್ಲ. ಬೇಸಿಗೆಯಲ್ಲಿ ಮಳೆ, ಮಳೆಗಾಲದಲ್ಲಿ ಬಿಸಿಲು, ಚಳಿಗಾಲದಲ್ಲಿ ಇನ್ನೇನೋ... ಹೀಗೆ ಪ್ರಕೃತಿ ಏನೇನೋ ವಿಸ್ಮಯ ಮಾಡುತ್ತಲೇ ಮನುಷ್ಯನ ಊಹೆಗೂ ನಿಲುಕದ ಚಿತ್ರ-ವಿಚಿತ್ರ ಸನ್ನಿವೇಶಗಳನ್ನು ಸೃಷ್ಟಿ ಮಾಡುತ್ತಲೇ ಇದೆ. ಇದೀಗ ಮರಭೂಮಿಯಲ್ಲಿ ಹಿಮಪಾತವಾಗಿದೆ! ಕೇಳಲು ವಿಚಿತ್ರ ಎನಿಸಿದರೂ, ಹೀಗೆ ಆಗಿರುವುದು ಸೌದಿ ಅರೇಬಿಯಾದಲ್ಲಿ. ಇದರ ವಿಡಿಯೋಗಳು ಸೋಷಿಯಲ್​  ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ. ಅಷ್ಟಕ್ಕೂ ಸೌದ ಗಲ್ಫ್‌ ದೇಶ. ಗಲ್ಫ್​ ದೇಶಗಳ ಸುತ್ತಲೂ ಮರುಭೂಮಿಯೇ ಇರುವುದು. ದುಬೈ, ಸೌದಿ ಅರೇಬಿಯಾ, ಮಸ್ಕತ್‌ನಂತಹ ಅರಬ್‌ ರಾಷ್ಟ್ರಗಳು ಸುತ್ತಲೂ ಮರುಭೂಮಿಯಿಂದ ಕೂಡಿರುತ್ತವೆ. ಆದರೆ ಪ್ರಕೃತಿ ಇಲ್ಲೀಗ ಸೋಜಿಗ ಮೆರೆದಿದೆ.

ಸೌದಿಯ  ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ  ಹಿಮಪಾತವಾಗಿದೆ.  ಮರಭೂಮಿ ಪ್ರದೇಶ ಹಾಗೂ ರಸ್ತೆಗಳಲ್ಲಿ ಹಿಮ ಬೀಳುತ್ತಿದ್ದು, ಜನರು ಹೌಹಾರಿ ಹೋಗಿದ್ದಾರೆ. ಆದರೆ ಹಿಮದ ಈ ಸುಂದರ ದೃಶ್ಯಗಳನ್ನು ಮೊಬೈಲ್​ಗಳಲ್ಲಿ ಸೆರೆ ಹಿಡಿಯುತ್ತಿದ್ದಾರೆ.  ಹಿಮಾಲಯ ಪರ್ವತದ ಸಾಲುಗಳಲ್ಲಿ ಹಿಮ ಬಿದ್ದಿರುವುದು ಭಾಸವಾಗುತ್ತಿದೆ ಎಂದು ಕಮೆಂಟ್​ಗಳಲ್ಲಿ ಹೇಳಲಾಗುತ್ತಿದೆ. ಇಷ್ಟೇ ಅಲ್ಲದೇ ಸೌದಿಯಲ್ಲಿ  ಭಾರಿ ಮಳೆ ಕೂಡ ಆಗಿದೆ.  ಈ ಪ್ರದೇಶವು ಸದಾ ಶುಷ್ಕ ವಾತಾವರಣದ ಪ್ರದೇಶ ಆಗಿರುವ ಹಿನ್ನೆಲೆಯಲ್ಲಿ, ಮಳೆ ಕೂಡ ಕಡಿಮೆಯೇ. ಆದರೆ ಇದೀಗ  ಅಲ್-ಜಾವ್ಫ್ ಪ್ರದೇಶದಲ್ಲಿ ಭಾರೀ ಹಿಮಪಾತವಾಗಿರುವ ಜೊತೆಗೆ ಮಳೆ ಕೂಡ ಜೋರಾಗಿ ಬಂದಿದೆ.   ಹಿಮಪಾತದ ಜೊತೆಗೆ ಜಲಪಾತಗಳನ್ನೂ ಸೃಷ್ಟಿಸಿರುವುದನ್ನು ವೈರಲ್​ ವಿಡಿಯೋಗಳಲ್ಲಿ ನೋಡಬಹುದಾಗಿದೆ.  ಆಲಿಕಲ್ಲು ಕೂಡ ಕೆಲವು ಕಡೆಗಳಲ್ಲಿ ಬಿದ್ದಿವೆ ಎನ್ನಲಾಗಿದೆ.

ಹೆಣ್ಣನ್ನು ಸೆಳೆಯಲು ಹಣ್ಣುಗಳ ಅಲಂಕಾರ! ನೆಲ ಕ್ಲೀನ್‌ ಮಾಡಿ ಅದ್ಭುತ ನೃತ್ಯ- ಅಬ್ಬಾ ಇದೆಂಥ ವಿಸ್ಮಯ: ವಿಡಿಯೋ ವೈರಲ್
 
ಇಂಥ ನಂಬಲಸಾಧ್ಯ ಘಟನೆಗೆ ಸೌದಿ ಜನರು ಮಾತ್ರವಲ್ಲದೇ ಗಲ್ಫ್​ ರಾಷ್ಟ್ರಗಳಲ್ಲಿನ ಜನರೂ ಆಶ್ಚರ್ಯಚಕಿತರಾಗಿದ್ದಾರೆ. ಇದೇ ಮೊದಲ ಬಾರಿಗೆ ಇಂಥದ್ದೊಂದು ಘಟನೆ ನೋಡಿ ಅದನ್ನು ಕ್ಯಾಮೆರಾಗಳಲ್ಲಿ ಸೆರೆ ಮಾಡಿಕೊಂಡು ಸೋಷಿಯಲ್​ ಮೀಡಿಯಾಗಳಲ್ಲಿ ಅಪ್​ಲೋಡ್​ ಮಾಡುತ್ತಿದ್ದಾರೆ. ‘ಇಂದು ಜಗತ್ತಿಗೆ ಒಂದು ಅಚ್ಚರಿ ಕಾದಿದೆ.  ಯಾವಾಗಲೂ ಒಣ ಭೂಮಿಯಾಗಿದ್ದ ಈ ಪ್ರದೇಶವು ಈಗ ಚಳಿಗಾಲದ ವಂಡರ್‌ಲ್ಯಾಂಡ್ ಆಗಿದೆ. ಅಭೂತಪೂರ್ವ ಹಿಮ ಬೀಳುವ ಪ್ರದೇಶ, ಭಾರಿ ಮಳೆಯಿಂದಾಗಿ ಈ ಜಾಗವು ಅದ್ಭುತವಾಗಿ ಕಾಣುತ್ತಿದೆ ಎಂದು ಎಕ್ಸ್ ಖಾತೆಯಲ್ಲಿ ವಿಡಿಯೋ ಶೇರ್​ ಮಾಡಲಾಗಿದೆ. ಪ್ರಕೃತಿ ಈ ರೀತಿ ಬದಲಾಗುತ್ತಿರುವುದು ಒಳ್ಳೆಯ ಲಕ್ಷಣವಲ್ಲ ಎಂದೂ ಹೇಳಲಾಗುತ್ತಿದೆ. 

ಅಂದಹಾಗೆ ಈ ಬಾರಿ, ಇಂಥದ್ದೊಂದು ರೀತಿಯ  ವಿಭಿನ್ನ ಹವಾಮಾನವನ್ನು ಸೌದಿ ಅರೇಬಿಯಾದ ಜೊತೆಗೆ  ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಸಹ ಎದುರಿಸುತ್ತಿದೆ. ಆದರೆ ಪ್ರಕೃತಿಯ ಈ ವಿಚಿತ್ರಗಳ ವೈಜ್ಞಾನಿಕ ವಿಶ್ಲೇಷಣೆ ಮಾಡಬಹುದೇ ವಿನಾ ಮನುಷ್ಯರು ಇನ್ನೇನೂ ಮಾಡಲು ಸಾಧ್ಯವಿಲ್ಲ. ಹೀಗೆಯೇ ಆಗುತ್ತದೆ ಎಂದು ನಿಖರವಾಗಿ ಹೇಳಲು ಇದುವರೆಗೆ ಯಾವುದೇ ಸಂಶೋಧಕರಿಗೂ ಸಾಧ್ಯವಾಗಿಲ್ಲ, ಇಂಥ ಘಟನೆಗಳು ಸಂಭವಿಸಿದ ಮೇಲೆ ಇದು ಇಂಥ ಕಾರಣಕ್ಕೆ ಆಗಿರಲಿಕ್ಕೆ ಸಾಕು ಎಂದೋ, ಇಲ್ಲವೇ ಇನ್ನು ಇಂತಿಷ್ಟು ದಿನ ಇದೇ ಸ್ಥಿತಿ ಮುಂದುವರೆಯಬಹುದು ಎಂದಷ್ಟೇ ಹೇಳಬಹುದು. ಆದರೆ ಅದು ಕೂಡ ಯಾವಾಗಲೂ ಸತ್ಯವೇ ಆಗಿರಬೇಕೆಂದೇನೂ ಇಲ್ಲ. ಅದರ ವಿಡಿಯೋ ಈ ಕೆಳಗಿದೆ.

ನನ್ನದಲ್ಲದ ತಪ್ಪಿಗೆ ಭಿಕ್ಷುಕಿಯಾಗಿ ಜೀವನ ಮಾಡ್ತಿದ್ದೇನೆ: ಭಾರತದಿಂದ ಓಡಿ ಹೋದ ರಾಖಿ ಸಾವಂತ್ ಕಣ್ಣೀರು!
 

Latest Videos
Follow Us:
Download App:
  • android
  • ios