ಕುಡಿದು ವಾಹನ ಚಲಾಯಿಸಿದರೆ ಆಫ್‌ ಆಗುತ್ತೆ ವಾಹನ ಎಂಜಿನ್‌!

ನಗರದ ಜಿಕೆವಿಕೆ ಆವರಣದಲ್ಲಿ ನಡೆಯುತ್ತಿರುವ ಭಾರತೀಯ ವಿಜ್ಞಾನ ಕಾಂಗ್ರೆಸ್‌ ವಸ್ತುಪ್ರದರ್ಶನದಲ್ಲಿ ಶಾಲಾ ಮಕ್ಕಳು ಸಿದ್ಧಪಡಿಸಿರುವ ವಿವಿಧ ಬಗೆಯ ಆವಿಷ್ಕಾರಗಳು ಗಮನ ಸೆಳೆಯುತ್ತಿವೆ.

Students Intelligence Shows in Bengaluru Science Congress

ಬೆಂಗಳೂರು [ಜ.06]:  ಹವಾನಿಯಂತ್ರಿತ ವಾಹನದ ಚಾಲಕ ಕುಡಿದು ಚಾಲನೆಗೆ ಮುಂದಾದರೆ ವಾಹನದ ಎಂಜಿನ್‌ ಏಕಾಏಕಿ ಆಫ್‌ ಆಗಿ ಸೈರನ್‌ ಸಹ ಬಾರಿಸುತ್ತದೆ! ವಾಹನದಲ್ಲಿ ಬೆಂಕಿ ಕಾಣಿಸಿಕೊಂಡರೆ ದ್ವಾರಗಳು ಸ್ವಯಂಚಾಲಿತವಾಗಿ ತೆರೆದುಕೊಳ್ಳಲಿವೆ! ಪೊಲೀಸರು, ಕಾರ್ಮಿಕರು, ರೈತರು ಸವಾರರು ಧೂಳು ಹಾಗೂ ಹೊಗೆಯಿಂದ ಅನುಭವಿಸುವ ಕಿರಿಕಿರಿ ತಪ್ಪಿಸಲು ‘ಮ್ಯಾನ್‌ ಫ್ರೆಂಡ್ಲಿ ಮಲ್ಟಿಹೆಲ್ಮೆಟ್‌’...

ನಗರದ ಜಿಕೆವಿಕೆ ಆವರಣದಲ್ಲಿ ನಡೆಯುತ್ತಿರುವ ಭಾರತೀಯ ವಿಜ್ಞಾನ ಕಾಂಗ್ರೆಸ್‌ ವಸ್ತುಪ್ರದರ್ಶನದಲ್ಲಿ ಶಾಲಾ ಮಕ್ಕಳು ಸಿದ್ಧಪಡಿಸಿರುವ ವಿವಿಧ ಬಗೆಯ ಆವಿಷ್ಕಾರಗಳು ಗಮನ ಸೆಳೆಯುತ್ತಿವೆ.

ಆಲ್ಕೋಹಾಲ್‌ ಸೆನ್ಸರ್‌:  ತುಮಕೂರು ಜಿಲ್ಲೆಯ ಹುಳಿಯಾರು ಪಟ್ಟಣದ ವಿದ್ಯಾವಾರಿಧಿ ಇಂಟರ್‌ ನ್ಯಾಷನಲ್‌ ಶಾಲೆಯ ಒಂಬತ್ತನೇ ತರಗತಿ ವಿದ್ಯಾರ್ಥಿನಿ ಆರ್‌.ಕೆ.ದರ್ಶಿನಿ ‘ಥರ್ಮಲ್‌ ಸೆನ್ಸರ್‌’ ಮತ್ತು ‘ಆಲ್ಕೋಹಾಲ್‌ ಸೆನ್ಸರ್‌’ ಆಧಾರಿತ ತಂತ್ರಜ್ಞಾನ ಆವಿಷ್ಕರಿಸಿ ಸಾಧನೆ ಮಾಡಿದ್ದಾರೆ.

ಹವಾ ನಿಯಂತ್ರಿತ ವಾಹನಗಳಿಗೆ ಈ ಸೆನ್ಸರ್‌ ಅಳವಡಿಕೆ ಮಾಡಬಹುದು. ಚಾಲಕ ಪಾನಮತ್ತನಾಗಿ ವಾಹನ ಚಲಾಯಿಸಲು ಮುಂದಾದರೆ ವಾಹನದ ಎಂಜಿನ್‌ ಆಫ್‌ ಆಗುತ್ತದೆ. ತಕ್ಷಣ ಕೆಂಪು ದೀಪ ಆನ್‌ ಆಗಿ ವಾಹನದ ಸೈರನ್‌ ಸಹ ಬಾರಿಸುತ್ತದೆ. ಈ ಮೂಲಕ ವಾಹನದ ಪ್ರಯಾಣಿಕರನ್ನು ಎಚ್ಚರಿಸಲು ನೆರವಾಗುತ್ತದೆ. ಡ್ರಿಂಕ್‌ ಆ್ಯಂಡ್‌ ಡ್ರೈವ್‌ನಿಂದ ಅನಾಹುತಗಳಾಗುತ್ತಿದ್ದು, ಕೆಲ ಪ್ರಕರಣಗಳಲ್ಲಿ ಪ್ರಾಣಹಾನಿಯಾಗುತ್ತಿದೆ. ಇಂತಹ ಅಪಘಾತ ತಪ್ಪಿಸುವ ನಿಟ್ಟಿನಲ್ಲಿ ಈ ಸೆನ್ಸರ್‌ ಉಪಯೋಗಕ್ಕೆ ಬರಲಿದೆ ಎಂದು ವಿದ್ಯಾರ್ಥಿ ವಿಜ್ಞಾನಿ ಆರ್‌.ಕೆ.ದರ್ಶಿನಿ ಹೇಳಿದರು.

ಚಾಲಕನ ಆಸನದ ಎದುರು ಈ ಸೆನ್ಸರ್‌ ಉಪಕರಣ ಅಳವಡಿಕೆ ಮಾಡಬೇಕು. ಚಾಲಕ ಮದ್ಯ ಸೇವಿಸಿ ಆಸನದಲ್ಲಿ ಕುಳಿತು ವಾಹನ ಸ್ಟಾರ್ಟ್‌ ಮಾಡಿದರೆ, ಕೆಲವೇ ಸೆಕೆಂಡ್‌ಗಳಲ್ಲಿ ವಾಹನ ಆಫ್‌ ಆಗುತ್ತದೆ. ವಾಹನಗಳಲ್ಲಿ ಈ ಸೆನ್ಸರ್‌ ಉಪಕರಣ ಅಳವಡಿಕೆಯಿಂದ ಮದ್ಯ ಸೇವಿಸಿ ಚಾಲನೆ ಹಾಗೂ ಅದರಿಂದ ಆಗುವ ಅನಾಹುತಗಳನ್ನು ತಪ್ಪಿಸಬಹುದು ಎಂದು ಆರ್‌.ಕೆ.ದರ್ಶಿನಿಯ ಮಾರ್ಗದರ್ಶಿ ಶಿಕ್ಷಕ ಕೆ.ಎನ್‌.ರಾಮ್‌ ಕುಮಾರ್‌ ವಿವರಿಸಿದರು.

ಕಡಿಮೆ ಬೆಲೆ; ಟಾಟಾ ಅಲ್ಟ್ರೋಝ್ ಎಲೆಕ್ಟ್ರಿಕ್ ಕಾರು ಲಾಂಚ್ ಡೇಟ್ ಬಹಿರಂಗ!.

ಥರ್ಮಲ್‌ ಸೆನ್ಸರ್‌ :  ಇನ್ನು ಹವಾನಿಯಂತ್ರಿತ ವಾಹನಗಳಲ್ಲಿ ಸಂಭವಿಸುವ ಅಗ್ನಿ ಅವಘಡಗಳಿಂದ ಪ್ರಯಾಣಿಕರನ್ನು ಪಾರು ಮಾಡುವ ನಿಟ್ಟಿನಲ್ಲಿ ‘ಥರ್ಮಲ್‌ ಸೆನ್ಸರ್‌’ ನೆರವಾಗಲಿದೆ. ಸಾಮಾನ್ಯವಾಗಿ ಹವಾನಿಯಂತ್ರಿತ ವಾಹನಗಳಲ್ಲಿ ಕೂಲ್‌ ವಾತಾವರಣ ಇರುತ್ತದೆ. ಒಂದು ವೇಳೆ ಆಕಸ್ಮಿಕವಾಗಿ ಅಗ್ನಿ ಅನಾಹುತವಾಗಿ ವಾಹನದೊಳಗಿನ ಉಷ್ಣಾಂಶ 50 ಡಿಗ್ರಿಗೆ ತಲುಪಿದರೆ, ಏಕಾಏಕಿ ವಾಹನದ ದ್ವಾರಗಳು ತೆರೆದುಕೊಳ್ಳಲಿವೆ. ಇದರಿಂದ ಪ್ರಯಾಣಿಕರನ್ನು ಅನಾಹುತದಿಂದ ಸುಲಭವಾಗಿ ಪಾರು ಮಾಡಬಹುದು. ಅಲ್ಲದೆ, ದೊಡ್ಡ ಮಟ್ಟದಲ್ಲಿ ಅನಾಹುತ ಆಗದಂತೆ ತಪ್ಪಿಸಲು ಸಹಕಾರಿಯಾಲಿದೆ.

ಮ್ಯಾನ್‌ ಫ್ರೆಂಡ್ಲಿ ಮಲ್ಟಿಹೆಲ್ಮೆಟ್‌

ತೆಲಂಗಾಣ ಜಿಲ್ಲೆಯ ಚಂದನಪುರದ ಸರ್ಕಾರಿ ಶಾಲೆಯ ಆರನೇ ತರಗತಿ ವಿದ್ಯಾರ್ಥಿ ಡಿ.ಹರ್ಷಿತಾ ಸಂಚಾರ ಪೊಲೀಸರು, ಕಾರ್ಮಿಕರು, ರೈತರು ಸವಾರರು ಧೂಳು ಹಾಗೂ ಹೊಗೆಯಿಂದ ಅನುಭವಿಸುವ ಕಿರಿಕಿರಿ ತಪ್ಪಿಸಲು ‘ಮ್ಯಾನ್‌ ಫ್ರೆಂಡ್ಲಿ ಮಲ್ಟಿಹೆಲ್ಮೆಟ್‌’ ಆವಿಷ್ಕರಿಸುವ ಮೂಲಕ ಗಮನ ಸೆಳೆದಿದ್ದಾರೆ.

ಹೊಸ ವರ್ಷದ ಆರಂಭದಲ್ಲೇ ಶಾಕ್; ಕಿಯಾ ಸೆಲ್ಟೋಸ್ ಕಾರು ಬೆಲೆ ಹೆಚ್ಚಳ!

ಹಳೆಯ ಹೆಲ್ಮೆಟ್‌, ಸ್ಮೋಕ್‌ ಸೆನ್ಸರ್‌ ಹಾಗೂ ಎರಡು ಪುಟ್ಟಬ್ಯಾಟರಿ ಅಳವಡಿಸಿಕೊಂಡು ಈ ಮಲ್ಟಿಹೆಲ್ಮೆಟ್‌ ಸಿದ್ಧಪಡಿಸಲಾಗಿದೆ. ಹೆಲ್ಮೆಟ್‌ ಮೇಲ್ಭಾಗದಲ್ಲಿ ಎರಡು ಚಿಕ್ಕ ಫ್ಯಾನ್‌ ಅಳವಡಿಸಿ, ಅದಕ್ಕೆ ಬ್ಯಾಟರಿ ಸಂಪರ್ಕ ಕಲ್ಪಿಸಲಾಗುತ್ತದೆ. ಅಂತೆಯೆ ಹೆಲ್ಮೆಟ್‌ ಮುಂಭಾಗಕ್ಕೆ ಸ್ಮೋಕ್‌ ಸೆನ್ಸರ್‌ ಹಾಕಲಾಗಿದೆ. ಹೊಗೆ, ಧೂಳು, ಮುಖದ ಬಳಿ ಬಂದಾಗ ಈ ಸೆನ್ಸರ್‌ ಗ್ರಹಿಸುತ್ತದೆ. ಬಳಿಕ ಸ್ವಯಂಚಾಲಿತವಾಗಿ ಫ್ಯಾನ್‌ ಆನ್‌ ಆಗಿ ಗಾಳಿ ಬೀಸುತ್ತದೆ. ಇದರಿಂದ ಧೂಳು ಹಾಗೂ ಹೊಗೆ ದೂರ ಹೋಗುತ್ತದೆ ಎಂದು ಡಿ.ಹರ್ಷಿತಾ ವಿವರಿಸಿದರು.

ಸಂಚಾರ ಪೊಲೀಸರು, ದ್ವಿಚಕ್ರವಾಹನ ಸವಾರರು, ರೈತರು, ಕಾರ್ಪೆಂಟರ್‌ಗಳು, ವೆಲ್ಡಿಂಗ್‌ ಕಾರ್ಮಿಕರು ಸೇರಿದಂತೆ ಹಲವರಿಗೆ ಈ ಹೆಲ್ಮೆಟ್‌ ಉಪಯೋಗಕ್ಕೆ ಬರಲಿದೆ. ಅಲ್ಲದೆ, ಬಾಯಿ ಹಾಗೂ ಮೂಗಿನ ಮೂಲಕ ವಿಷಕಾರಿ ಹೊಗೆ, ಬ್ಯಾಕ್ಟೀರಿಯಾಗಳು ದೇಹ ಸೇರಿ ರೋಗಗಳಿಗೆ ಕಾರಣವಾಗುವುದನ್ನು ತಪ್ಪಿಸಬಹುದು ಎಂದು ಮಾಹಿತಿ ನೀಡಿದರು.

Latest Videos
Follow Us:
Download App:
  • android
  • ios