Asianet Suvarna News Asianet Suvarna News

ಹೊಸ ವರ್ಷದ ಆರಂಭದಲ್ಲೇ ಶಾಕ್; ಕಿಯಾ ಸೆಲ್ಟೋಸ್ ಕಾರು ಬೆಲೆ ಹೆಚ್ಚಳ!

2019ರಲ್ಲಿ ಬಿಡುಗಡೆಯಾದ ಕಿಯಾ ಸೆಲ್ಟೋಸ್ ಕಾರು ಹೊಸ ದಾಖಲೆ ಬರೆದಿತ್ತು. ಮಾರಾಟ ಕುಸಿತದ ನಡುವೆಯೂ ಸೆಲ್ಟೋಸ್ ಕಾರು ಗ್ರಾಹಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿತ್ತು. ಕ್ರೆಟಾ ಕಾರಿಗಿಂತ ಕಡಿಮೆ ಬೆಲೆ ಹೊಂದಿದ್ದ ಸೆಲ್ಟೋಸ್ ಇದೀಗ ಹೊಸ ವರ್ಷದ ಆರಂಭದಲ್ಲೇ ಬೆಲೆ ಹೆಚ್ಚಳ ಮಾಡಿದೆ. 

Kia motors hike seltos suv car price up to 35000 rs
Author
Bengaluru, First Published Jan 3, 2020, 2:36 PM IST
  • Facebook
  • Twitter
  • Whatsapp

ಅನಂತಪುರಂ(ಜ.03): ಹೊಸ ವರ್ಷದ ಆರಂಭದಲ್ಲಿ ಕಿಯಾ ಮೋಟಾರ್ಸ್ ಭಾರತೀಯರಿಗೆ ಶಾಕ್ ನೀಡಿದೆ. 2019ರಲ್ಲಿ ಕಡಿಮೆ ಬೆಲೆಯ ಕಾರಾಗಿದ್ದ ಕಿಯಾ ಸೆಲ್ಟೋಸ್ ಇದೀಗ ಬೆಲೆ ಹೆಚ್ಚಳ ಮಾಡಿದೆ.  ಕಿಯಾ ಸೆಲ್ಟೋಸ್ ಎಲ್ಲಾ ವೇರಿಯೆಂಟ್ ಕಾರುಗಳ ಬೆಲೆಯಲ್ಲಿ ಏರಿಕೆಯಾಗುತ್ತಿದೆ. ಕನಿಷ್ಠ 20,000 ರೂಪಾಯಿಂದ ಗರಿಷ್ಠ 35,000 ರೂಪಾಯಿ ವರೆಗೆ ಹೆಚ್ಚಳವಾಗಲಿದೆ ಎಂದು ಕಂಪನಿ ಅಧೀಕೃತ ಹೇಳಿಕೆ ನೀಡಿದೆ.

ಇದನ್ನೂ ಓದಿ: ಕಿಯಾ ಸೆಲ್ಟೋಸ್ ಕಾರಿನ ಸುರಕ್ಷತಾ ಫಲಿತಾಂಶ ಬಹಿರಂಗ!

2019ರಲ್ಲಿ ಕಿಯಾ ಸೆಲ್ಟೋಸ್  45,294 ಕಾರು ಗ್ರಾಹಕರ ಕೈಸೇರಿದೆ. ಡಿಸೆಂಬರ್ ತಿಂಗಳಲ್ಲಿ ಕಿಯಾ ಸೆಲ್ಟೋಸ್ 4,713  ಕಾರು ಮಾರಾಟವಾಗಿದೆ. ಕಳೆದ ವರ್ಷ ಕಿಯಾ ಸೆಲ್ಟೋಸ್ ಕಾರಿನ ಆರಂಭಿಕ ಬೆಲೆ 9.69 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಹೊಂದಿತ್ತು. ಇದೀಗ ಬೆಲೆ ಏರಿಕೆಯಾಗಿದೆ.

ಇದನ್ನೂ ಓದಿ: ಟೊಯೊಟಾ ಇನೋವಾ ಪ್ರತಿಸ್ಪರ್ಧಿ ಕಿಯಾ ಕಾರ್ನಿವಲ್ ಟೀಸರ್ ಬಿಡುಗಡೆ!.

ಸದ್ಯ ಕಿಯಾ ಮೋಟಾರ್ಸ್ ಟೊಯೊಟಾ ಇನೋವಾ ಪ್ರತಿಸ್ಪರ್ಧಿ ಕಿಯಾ ಕಾರ್ನಿವಲ್ ಕಾರು ಬಿಡುಗಡೆ ಮುಂದಾಗಿದೆ. ಈ ಕಾರಿನ ಬಳಿಕ ಮಾರುತಿ ಬ್ರೆಜ್ಜಾ ಕಾರಿಗೆ ಪ್ರತಿಸ್ಪರ್ಧಿಯಾಗಿ ಸಬ್ ಕಾಂಪಾಕ್ಟ್ suv ಕಾರು ಬಿಡುಗಡೆ ಮಾಡಲಿದೆ. ಇದರ ಜೊತೆಗೆ ಎಲೆಕ್ಟ್ರಿಕ್ ಕಾರು ಕೂಡ ಭಾರತದ ಮಾರುಕಟ್ಟೆ ಪ್ರವೇಶಿಸಲಿದೆ.
 

Follow Us:
Download App:
  • android
  • ios