ಈ ವರ್ಷದ ಮೊದಲ ಸೂರ್ಯಗ್ರಹಣಕ್ಕೆ ಕೌಂಟ್‌ಡೌನ್ಭಾರತದಲ್ಲಿ ಅರುಣಾಚಲ ಪ್ರದೇಶ ಮತ್ತು ಲಡಾಖ್‌ನ ಕೆಲವೇ ಕೆಲವು ಭಾಗಗಳಲ್ಲಿ ಮಾತ್ರವೇ ಕಾಣಿಸಲಿದೆ ಕೌತುಕಉತ್ತರ ಅಮೆರಿಕ, ಯುರೋಪ್ ಮತ್ತು ಏಷ್ಯಾದ ಭಾಗಗಳಲ್ಲಿ ಪೂರ್ತಿ ಗ್ರಹಣ ಗೋಚರಿಸಲಿದೆ
ನವದೆಹಲಿ(ಜೂ.10): ವಾರ್ಷಿಕ ಸೂರ್ಯ ಗ್ರಹಣವು ಗುರುವಾರ ಸಂಭವಿಸಲಿದೆ. ಆದರೆ ಅರುಣಾಚಲ ಪ್ರದೇಶ ಮತ್ತು ಲಡಾಖ್‌ನ ಕೆಲವೇ ಕೆಲವು ಭಾಗಗಳಲ್ಲಿ ಮಾತ್ರವೇ ಈ ಗ್ರಹಣ ಕಾಣಿಸಿಕೊಳ್ಳಲಿದೆ ಎಂದು ಖಭೌತ ಶಾಸ್ತ್ರಜ್ಞರು ತಿಳಿಸಿದ್ದಾರೆ.
ದೇಶದ ಈಶಾನ್ಯ ಭಾಗಗಳಾದ ಅರುಣಾಚಲ ಪ್ರದೇಶ ಮತ್ತು ಲಡಾಖ್‌ನಲ್ಲಿ ಮಾತ್ರವೇ ಈ ಗ್ರಹಣ ಸಂಭವಿಸಲಿದ್ದು, ದೇಶದ ಯಾವುದೇ ಭಾಗಗಳಲ್ಲಿ ಸೂರ್ಯ ಗ್ರಹಣ ಕಂಡುಬರುವುದಿಲ್ಲ. ಈ ಪ್ರಕಾರ ಅರುಣಾಚಲ ಪ್ರದೇಶದಲ್ಲಿ ಸಂಜೆ 5.52ಕ್ಕೆ ಮತ್ತು ಲಡಾಖ್‌ನಲ್ಲಿ ಸಂಜೆ 6.15ರ ವೇಳೆಗೆ 3-4 ನಿಮಿಷಗಳ ಕಾಲ ಗ್ರಹಣ ಗೋಚರಿಸಲಿದೆ.
ಆದರೆ ಉತ್ತರ ಅಮೆರಿಕ, ಯುರೋಪ್ ಮತ್ತು ಏಷ್ಯಾದ ಭಾಗಗಳಲ್ಲಿ ಪೂರ್ತಿ ಗ್ರಹಣ ಕಂಡುಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತೀ ಬಾರಿ ಗ್ರಹಣ ಬಂದಾಗ ನಂಬಿಕೆ ಅಪನಂಬಿಕೆ ಬಗ್ಗೆ ಚರ್ಚೆ ಶುರುವಾಗುತ್ತವೆ. ವಿಜ್ಞಾನಿಗಳ ಪ್ರಕಾರ ಸೂರ್ಯಗ್ರಹಣ ಎನ್ನುವಂತದ್ದು ಸೌರಮಂಡಲದಲ್ಲಿ ನಡೆಯುವ ಒಂದು ಸಹಜ ಪ್ರಕ್ರಿಯೆ ಹಾಗೂ ಒಂದು ಕೌತುಕ. ಆದರೆ, ಜ್ಯೋತಿಷಿಗಳು ಹೇಳೋ ಪ್ರಕಾರ ಈ ಗ್ರಹಣ ತುಂಬಾ ಅಪಾಯಕಾರಿ. ಗ್ರಹಣದ ಪ್ರಭಾವದಿಂದ ಪಂಚಭೂತಗಳಲ್ಲಿ ವ್ಯತ್ಯಾಸ ಉಂಟಾಗಿ, ಪ್ರಕೃತಿ ವಿಕೋಪಗಳು ಹೆಚ್ಚಾಗಬಹುದು ಎಂದು ವಿಶ್ಲೇಷಿಸುತ್ತಾರೆ.
