ನಕ್ಷತ್ರ ಗ್ರಹವ ನುಂಗುವ ಪ್ರಕ್ರಿಯೆ ವೀಕ್ಷಿಸಿದ ವಿಜ್ಞಾನಿಗಳು!

ನೂರಾರು ಕೋಟಿ ವರ್ಷಗಳಷ್ಟು ಹಳೆಯದಾದ, ಸಾವಿನಂಚಿನಲ್ಲಿರುವ ನಕ್ಷತ್ರವೊಂದು ತನ್ನ ಸಮೀಪದಲ್ಲಿರುವ ಗ್ರಹವೊಂದನ್ನು ನುಂಗುವ ಪ್ರಕ್ರಿಯೆಯನ್ನು ವಿಜ್ಞಾನಿಗಳ ತಂಡವೊಂದು ವೀಕ್ಷಿಸಿದೆ.

Scientists watched the process of the star swallowing the planet akb

ನ್ಯೂಯಾರ್ಕ್: ನೂರಾರು ಕೋಟಿ ವರ್ಷಗಳಷ್ಟು ಹಳೆಯದಾದ, ಸಾವಿನಂಚಿನಲ್ಲಿರುವ ನಕ್ಷತ್ರವೊಂದು ತನ್ನ ಸಮೀಪದಲ್ಲಿರುವ ಗ್ರಹವೊಂದನ್ನು ನುಂಗುವ ಪ್ರಕ್ರಿಯೆಯನ್ನು ವಿಜ್ಞಾನಿಗಳ ತಂಡವೊಂದು ವೀಕ್ಷಿಸಿದೆ. ನುಂಗುವ ಮೊದಲು ಅಥವಾ ನುಂಗಿದ ನಂತರದ ಘಟನಾವಳಿಗಳನ್ನು ವಿಜ್ಞಾನಿಗಳು ವೀಕ್ಷಿಸಿದ್ದರಾದರೂ, ನೇರವಾಗಿ ನುಂಗುವ ಪ್ರಕ್ರಿಯೆಯನ್ನು ವೀಕ್ಷಿಸಿದ್ದು ಇದೇ ಮೊದಲು.

ಮುಂದೊಂದು ದಿನ ಸೂರ್ಯ ಕೂಡಾ ತನ್ನ ಸಾವಿನ ಅಂಚಿನಲ್ಲಿ ಸೌರಮಂಡಲದಲ್ಲಿರುವ ಭೂಮಿ ಸೇರಿದಂತೆ ಎಲ್ಲಾ ಗ್ರಹಗಳನ್ನು ನುಂಗುವುದು ಖಚಿತವಾದ ಕಾರಣ, ಈ ಬೆಳವಣಿಗೆ ವಿಜ್ಞಾನಿಗಳಲ್ಲಿ ಸಾಕಷ್ಟುಕುತೂಹಲ ಮೂಡಿಸಿದೆ.

ಜ್ಯೇಷ್ಠ ಮಾಸದ ಸೂಪರ್ ಮೂನ್; ಈ ಖಗೋಳ ಕೌತುಕ ನೋಡಿ ಸಂತೋಷಪಡಿ

ಏನು ವೀಕ್ಷಣೆ?:

1000 ಕೋಟಿ ವರ್ಷಗಳಷ್ಟುಹಳೆಯದಾದ, ಇದೀಗ ಸಾವಿನ ಅಂಚಿನಲ್ಲಿರುವ ನಮ್ಮ ಸೂರ್ಯನ ಗಾತ್ರದ ನಕ್ಷತ್ರವೊಂದು ತನ್ನ ಮೂಲ ಗಾತ್ರಕ್ಕಿಂತ ಲಕ್ಷಾಂತರ ಪಟ್ಟು ಹಿಗ್ಗುತ್ತಾ ಹಿಗ್ಗುತ್ತಾ, ತನ್ನ ಸುತ್ತಮುತ್ತಲಿನ ಗ್ರಹಗಳನ್ನು ನುಂಗಿದೆ. ಹೀಗೆ ನಕ್ಷತ್ರವು ಗ್ರಹವನ್ನು ನುಂಗಿದ ವೇಳೆ ಬೃಹತ್‌ ಪ್ರಮಾಣದಲ್ಲಿ ಬಿಳಿಯ ಬಣ್ಣದ ಬೆಳಕು ಹೊರಚಿಮ್ಮಿದೆ. ಭೂಮಿಯಿಂದ 12000 ಬೆಳಕಿನ ವರ್ಷಗಳಷ್ಟುದೂರದಲ್ಲಿ ಈ ಘಟನೆ ನಡೆದಿದ್ದು 2020ರಲ್ಲಿ. ಆಗ ಆಗಿದ್ದೇನು ಎಂದು ಅರಿಯಲು ವಿಜ್ಞಾನಿಗಳಿಗೆ ಒಂದು ವರ್ಷ ಬೇಕಾಗಿದೆ. ಅಧ್ಯಯನದ ಬಳಿಕ ಇದು ನಕ್ಷತ್ರವೊಂದು ಗ್ರಹವನ್ನು ನುಂಗುವ ಪ್ರಕ್ರಿಯೆ ಎಂದು ಖಚಿತಪಟ್ಟಿದೆ. ಮಸಾಚ್ಯುಸೆಟ್ಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ಹಾರ್ವರ್ಡ್‌ ವಿವಿ ಮತ್ತು ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ವಿಜ್ಞಾನಿಗಳ ತಂಡ ಇಂಥದ್ದೊಂದು ಪ್ರಕ್ರಿಯೆಯನ್ನು ವೀಕ್ಷಿಸಿತ್ತು ಎಂಬ ವರದಿಯನ್ನು ನೇಚರ್‌ ಮ್ಯಾಗಜಿನ್‌ನಲ್ಲಿ ಪ್ರಕಟಿಸಲಾಗಿದೆ.

1337 ವರ್ಷಗಳಲ್ಲೇ ಭೂಮಿಗೆ ಅತಿ ಸಮೀಪ ಬರಲಿರುವ ಚಂದ್ರ! ಇಂದೇ ಈ ಖಗೋಳ ಕೌತುಕ

Latest Videos
Follow Us:
Download App:
  • android
  • ios