ಜಗತ್ತಿಗೆ ಈವರೆಗೂ ತಿಳಿದಿರುವ ಪ್ರಕಾರ ಭೂಮಿಯಲ್ಲಿರುವುದು 5 ಸಾಗರ  ಆದರೆ ವಿಜ್ಞಾನಿಗಳ ತಂಡವೊಂದು ಇದೀಗ 6ನೇ ಮಹಾಸಾಗರ ಪತ್ತೆಯಾಗಿದೆ ಎಂದು ಘೋಷಣೆ ಮಾಡಿದೆ.

ವಾಷಿಂಗ್ಟನ್: ಜಗತ್ತಿಗೆ ಈವರೆಗೂ ತಿಳಿದಿರುವ ಪ್ರಕಾರ ಭೂಮಿಯಲ್ಲಿರುವುದು 5 ಸಾಗರ. ಅವುಗಳೆಂದರೆ ಪೆಸಿಫಿಕ್, ಅಟ್ಲಾಂಟಿಕ್, ಹಿಂದೂ ಮಹಾಸಾಗರ, ಅರ್ಕ್‌ಟಿಕ್, ಅಂಟಾರ್ಟಿಕಾ ಮಹಾಸಾಗರಗಳು. ಆದರೆ ವಿಜ್ಞಾನಿಗಳ ತಂಡವೊಂದು ಇದೀಗ 6ನೇ ಮಹಾಸಾಗರ ಪತ್ತೆಯಾಗಿದೆ ಎಂದು ಘೋಷಣೆ ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭೂಮಿಯ ಮೇಲ್ಮನಿಂದ 700 ಕಿ.ಮೀ ಆಳದಲ್ಲಿರುವ ಈ ಸಾಗರ, ಹಾಲಿ 3 ಸಮುದ್ರಗಳ ಒಟ್ಟು ವಿಸ್ತೀರ್ಣದಷ್ಟು ಬೃಹತ್ ಗಾತ್ರ ಹೊಂದಿದೆ. ನಾರ್ತ್‌ವೆಸ್ಟರ್ನ್ ವಿವಿಯ ವಿಜ್ಞಾನಿಗಳ ತಂಡ ಭೂಮಿಯ ಕಂಪನ ಅಳೆಯಲು ಬಳಸುವ ಸಿಸ್ಟೋಗ್ರಾಫ್ ಗಳನ್ನು ಅಮೆರಿಕದಾದ್ಯಂತ 2000 ಸ್ಥಳಗಳಲ್ಲಿ ಅಳವಡಿಸಿದ್ದಾರೆ. ಇವುಗಳಿಂದ ಸಂಗ್ರಹಿಸಿದ 500 ಭೂಕಂಪನಗಳ ಕುರಿತು ಅಧ್ಯಯನ ಮಾಡಿದ್ದಾರೆ. ಈ ವೇಳೆ ಕೆಲ ಕಡೆಗಳಲ್ಲಿ ಅಲೆಯ ತೀವ್ರತೆ ಕಡಿಮೆಯಾಗಿದ್ದನ್ನು ಕಂಡಿದ್ದಾರೆ. ಇದು ಅಲ್ಲಿ ನೀರಿನ ಇರುವಿಕೆಯನ್ನು ಸೂಚಿಸುತ್ತಿದೆ. ರಿಂಗ್‌ವುಡೈಟ್ ಎಂಬ ಮೆತ್ತಗಿನ ನೀಲಿ ಕಲ್ಲುಗಳ ಮಧ್ಯೆ ಈ ನೀರು ಬಂಧಿಯಾಗಿರಬಹುದು. ರಿಂಗ್‌ವುಡೈಟ್ ಭೂಮಿಯಾಳದಿಂದ ಒಸರಿದ ನೀರಿನಿಂದ ಸೃಷ್ಟಿಯಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಹಿಮಾಲಯದ ಅಡಿಯಲ್ಲಿ ಅಡಗಿರೋದು ಏನು? ತಿಳಿದರೆ ಶಾಕ್ ಆಗುತ್ತೀರಿ