ಅಪಾಯದ ಸೂಚನೆ ನೀಡಿದ ವಿಜ್ಞಾನಿಗಳು, ಭೂಮಿಯ ಕಡೆ ತಿರುಗಿದ 'ಕಪ್ಪುರಂಧ್ರ'!
ಮಾರ್ಚ್ 21 ರಂದು ಪ್ರಕಟವಾದ ಸಂಶೋಧನೆಯು ನಕ್ಷತ್ರಪುಂಜವನ್ನು ಈಗ ನಾಲ್ಕು ಮಿಲಿಯನ್ ಬೆಳಕಿನ ವರ್ಷಗಳಾದ್ಯಂತ ದೈತ್ಯ ರೇಡಿಯೊ ಗ್ಯಾಲಕ್ಸಿ ಎಂದು ವರ್ಗೀಕರಿಸಲಾಗಿದೆ ಎಂದು ಬಹಿರಂಗಪಡಿಸಿದೆ.
ನವದೆಹಲಿ (ಮಾ.28): ಬಾಹ್ಯಾಕಾಶದಲ್ಲಿ ಆಗಿರುವ ಪ್ರಮುಖ ವಿದ್ಯಮಾನವನ್ನು ರಾಯಲ್ ಆಸ್ಟ್ರಾನಾಮಿಕಲ್ ಸೊಸೈಟಿ ಮಾರ್ಚ್ 21 ರಂದು ಪ್ರಕಟ ಮಾಡಿರುವ ತನ್ನ ಸಂಶೋಧನೆಯಲ್ಲಿ ತಿಳಿಸಿದೆ. ಇದು ಅಪಾಯದ ಸೂಚನೆ ತಿಳಿಸುವ ಸಂಗತಿಯಾಗಿದ್ದು, ಬಾಹ್ಯಾಕಾಶದಲ್ಲಿ ಬೃಹತ್ ಕಪ್ಪುರಂಧ್ರವನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಇದರ ದಿಕ್ಕು ನೇರಾನೇರವಾಗಿ ಭೂಮಿಯ ಕಡೆಗೆ ಇದೆ ಎಂದು ಹೇಳಿದೆ. ಇನ್ನೂ ಅಚ್ಚರಿಯ ಸಂಗತಿಯೆಂದರೆ, ಈ ಕಪ್ಪುರಂಧ್ರದಿಂದ ಹೊರಹೊಮ್ಮುತ್ತಿರುವ ಕಿರಣಗಳು ಭೂಮಿಯ ಕಡೆಗೆ ತಲುಪುತ್ತಿದ್ದು, ಇದು ಭೂಮಿಯ ಮೇಲೆ ವಾಸ ಮಾಡುವ ಜೀವಸಂಕುಲಕ್ಕೆ ಬಹಳ ಅಪಾಯಕಾರಿ ಎಂದು ಹೇಳಿದೆ. ರಾಯಲ್ ಆಸ್ಟ್ರೋನಾಮಿಕಲ್ ಸೊಸೈಟಿಯ ವಿಜ್ಞಾನಿಗಳ ತಂಡವು ನಕ್ಷತ್ರಪುಂಜವನ್ನು ಮರುವರ್ಗೀಕರಿಸಿದೆ, ಅವರು ಸೂಪರ್‌ಮ್ಯಾಸಿವ್ ಬ್ಲ್ಯಾಕ್‌ಹೋಲ್ ತನ್ನ ದಿಕ್ಕನ್ನು ಬದಲಾಯಿಸಿದ್ದು ನೇರವಾಗಿ ಭೂಮಿಯ ಕಡೆಗೆ ಎದುರಿಸುತ್ತಿದೆ ಎಂದು ಹೇಳಿದೆ. ಈ ಗ್ಯಾಲಕ್ಸಿಯು ಭೂಮಿಯಿಂದ 657 ಮಿಲಿಯನ್ ಬೆಳಕಿನ ವರ್ಷಗಳಷ್ಟು (ಒಂದು ಬೆಳಕಿನ ವರ್ಷ ಎಂದರೆ 94.6 ಟ್ರಿಲಿಯನ್ ಕಿಲೋಮೀಟರ್ ದೂರ) ದೂರವಿದೆ ಎಂದು ವಿಜ್ಞಾನಿಗಳು ತಿಳಿಸಿದ್ದು, ಇದಕ್ಕೆ ಪಿಬಿಸಿಜೆ 2333.9-2343 ಎಂದು ಹೆಸರಿಸಲಾಗಿದೆ.
ಮಾರ್ಚ್ 21 ರಂದು ಪ್ರಕಟವಾದ ಸಂಶೋಧನೆಯು ನಕ್ಷತ್ರಪುಂಜವನ್ನು ಈಗ ದೈತ್ಯ ರೇಡಿಯೊ ಗ್ಯಾಲಕ್ಸಿ ಎಂದು ವರ್ಗೀಕರಿಸಿದೆ ಎಂದು ಬಹಿರಂಗಪಡಿಸಿದೆ. ಇದು ಭೂಮಿ ಇರುವ ಮಿಲ್ಕಿ ವೇ ಗ್ಯಾಲಕ್ಸಿಗಿಂತ 40 ಪಟ್ಟು ದೊಡ್ಡದಾಗಿದೆ.. ನಾಲ್ಕು ಮಿಲಿಯನ್ ಬೆಳಕಿನ ವರ್ಷದಷ್ಟು ಉದ್ದವಿದೆ ಎಂದು ಅಂದಾಜು ಮಾಡಲಾಗಿದೆ. ನಕ್ಷತ್ರಪುಂಜವು ಬ್ಲಾಜರ್ (ಸಕ್ರಿಯ ಕಪ್ಪುರಂಧ್ರ) ಅನ್ನು ಹೊಂದಿದ್ದು, ಸಕ್ರಿಯ ಗ್ಯಾಲಕ್ಸಿಯ ನ್ಯೂಕ್ಲಿಯಸ್ ಕೂಡ ಇದೆ. ಅದರ ಮಧ್ಯಭಾಗದಲ್ಲಿ ರಿಯಲ್ಟಿವಿಸ್ಟಿಕ್ ಜೆಟ್ (ಇದನ್ನು ಸೂಪರ್ಮಾಸಿವ್ ಬ್ಲ್ಯಾಕ್ಹೋಲ್ ಎಂದೂ ಕರೆಯುತ್ತಾರೆ) ಹೊಂದಿದೆ. ಇದರ ನಡುವೆ ಕಪ್ಪುರಂಧ್ರ ಭೂಮಿಯ ಕಡೆಗೆ ದಿಕ್ಕು ಮಾಡು ಹಠಾತ್ ಆಗಿ ತಿರುಗಿರುವುದು ಅಚ್ಚರಿಗೆ ಕಾರಣವಾಗಿದ್ದು, ಹೀಗಾಗಲು ಹೇಗೆ ಸಾಧ್ಯ ಎನ್ನುವುದರ ಬಗ್ಗೆ ಯೋಚನೆಯಲ್ಲಿ ಮಗ್ನರಾಗಿದ್ದಾರೆ.
ಬ್ಲಾಜರ್‌ಗಳು ಬಹಳ ಶಕ್ತಿಯುತವಾದ ವಸ್ತುಗಳು. ಸದ್ಯದ ಮಟ್ಟಿಗೆ ಇದನ್ನು ಬ್ರಹ್ಮಾಂಡದಲ್ಲಿಯೇ ಅತ್ಯಂತ ಶಕ್ತಿಶಾಲಿ ವಿದ್ಯಮಾನವೆಂದು ಪರಿಗಣಿಸಲಾಗಿದೆ. ನಕ್ಷತ್ರಪುಂಜವು ತನ್ನ ದಿಕ್ಕನ್ನು 90 ಡಿಗ್ರಿಗಳಷ್ಟು ಬದಲಿಸಿದೆ ಮತ್ತು ನೇರವಾಗಿ ನೀಲಿ ಗ್ರಹದ ಕಡೆಗೆ ಮುಖಮಾಡಿದೆ ಎಂದು ಸಂಶೋಧನೆಯು ಬಹಿರಂಗಪಡಿಸಿದೆ. ಆದರೆ, ಇದರಿಂದ ಹೊರಬರುತ್ತಿರುವ ವಿಕಿರಣ ಭೂಮಿಯನ್ನು ತಲುಪುತ್ತಿದೆ. ಈ ರಂಧ್ರ ಎಷ್ಟು ದೊಡ್ಡದಾಗಿದೆಯೆಂದರೆ, ಲೆಕ್ಕವಿಲ್ಲದಷ್ಟು ಸೂರ್ಯ ಇದರಲ್ಲಿ ಲೀನವಾಗಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.
ನಮ್ಮ ಗ್ಯಾಲಕ್ಸಿಯಲ್ಲಿ ಇರಬಾರದ ಕಪ್ಪುಕುಳಿ: ಎಷ್ಟು ದೊಡ್ಡದಿದೆ ಎಂಬದು ಕೇಳಿ!
ಪಿಬಿಸಿಜೆ 2333.9-2343 ಮತ್ತೊಂದು ನಕ್ಷತ್ರಪುಂಜದೊಂದಿಗೆ ಡಿಕ್ಕಿ ಹೊಡೆದಿರಬಹುದು ಎಂದು ಅವರು ಊಹಿಸಿದ್ದರೂ, ನಕ್ಷತ್ರಪುಂಜದ ದಿಕ್ಕಿನಲ್ಲಿ ತೀವ್ರವಾದ ಬದಲಾವಣೆಗೆ ಕಾರಣವೇನು ಎಂಬುದು ವಿಜ್ಞಾನಿಗಳಿಗೆ ಇನ್ನೂ ತಿಳಿದಿಲ್ಲ. ಕಪ್ಪು ಕುಳಿಯ ದಿಕ್ಕು ನಮ್ಮ ನಕ್ಷತ್ರಪುಂಜದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದು ಕೂಡ ಸ್ಪಷ್ಟವಾಗಿಲ್ಲ.
ವಿಶ್ವದ ಅತ್ಯಂತ ದೊಡ್ಡ ಕಪ್ಪುರಂಧ್ರ: ಬೆಳಕು ಹಾಯಲು ಬಿಡದು ಬೇಡಿದರೂ ಇಂದ್ರ!
ಐನ್ ಸ್ಟೈನ್ ಅನ್ವೇಷಣೆಗಳ ಪ್ರಕಾರ, ಕಪ್ಪು ರಂಧ್ರದ ಒಳಗಿನಿಂದ ಬೆಳಕು ಹೊರಬರಲು ಸಾಧ್ಯವಿಲ್ಲ. ಅದಕ್ಕಾಗಿಯೇ ಕಪ್ಪು ಕುಳಿಗಳನ್ನು ಪ್ರಕೃತಿಯ ಅತ್ಯಂತ ಹಿಂಸಾತ್ಮಕ ಪ್ರಕ್ರಿಯೆ ಎಂದು ಕರೆಯಲಾಗುತ್ತದೆ. ಅವು ಅನಿಲ, ಧೂಳು, ನಕ್ಷತ್ರಗಳು, ಗ್ರಹಗಳು, ಬೆಳಕಿನ ಅಂತಿಮ ಸ್ಥಾನ. ನಕ್ಷತ್ರಗಳು ಸಾವಿನ ಕೊನೆಯ ಘಟ್ಟ ಎನ್ನುತ್ತಾರೆ. ಆದರೆ, ಈ ಕಪ್ಪು ರಂಧ್ರ ಪ್ರಕ್ರಿಯೆ ಎಲ್ಲಿಂದ ಆರಂಭವಾಗುತ್ತದೆ ಎನ್ನುವ ಮಾಹಿತಿ ಈವರೆಗೂ ತಿಳಿದಿಲ್ಲ.