ಮಂಗಳ ಗ್ರಹದ ಶಬ್ಧ, ದೃಶ್ಯ ಸೆರೆ ಹಿಡಿಯಿತಾ ನಾಸಾದ ಸೂನತ ರೋವರ್| ವೈರಲ್ ಆದ ವಿಡಿಯೋ ಹಿಂದಿನ ಸತ್ಯವೇನು?
ನವದೆಹಲಿ(ಫೆ.22): ಟ್ವಿಟರ್ ಸೇರಿ ಎಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ವಿಡಿಯೋ ಒಂದು ಭಾರೀ ವೈರಲ್ ಆಗುತ್ತಿದೆ. ಇದು ಮಂಗಳನ ಅಂಗಳ ತಲುಪಿದ ನೂತನ ಪರ್ಸವಿರನ್ಸ್(NASA's New Mars Rover)ದ್ದೆಂದು ಹೇಳಲಾಗಿದೆ. ಅಲ್ಲದೇ ಈ ವಿಡಿಯೋದಲ್ಲಿ ರೋವರ್‌ನಲ್ಲಿ ಮಂಗಳ ಗ್ರಹದಲ್ಲಿ ಕೇಳಿ ಬಂದ ಶಬ್ಧವೂ ರೆಕಾರ್ಡ್ ಆಗಿದೆ. ಭಾರತದ ಭೂ ವಿಜ್ಞಾನ ಸಚಿವರಿಂದ ಹಿಡಿದು ಮಾಧವನ್ ರಾಜೀವನ್, ಲೇಖಕ ಜೇಮ್ಸ್ ಹಾಲೆಂಡ್ ಹೀಗೆಡ ಅನೇಕ ಗಣ್ಯರು ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಜೇಮ್ಸ್ ಹಾಲೆಂಡ್ ಎಲ್ಲಾ ಕೆಲಸವನ್ನು 26 ಸೆಕೆಂಡ್‌ಗಳವರೆಗೆ ತಡೆ ಹಿಡಿದು ಅನ್ಯ ಗ್ರಹದಿಂದ ಕೇಳಿ ಬಂದ ಈ ಶಬ್ಧವಿರುವ ಈ ವಿಡಿಯೋವನ್ನು ನೋಡಿದೆ. ಎಂದಿದ್ದಾರೆ. ಆದರೆ ಇದು ನಿಜಾನಾ ಎಂದು ಪರಿಶೀಲಿಸಿದಾಗ ಈ ವಿಡಿಯೋ ನಾಸಾದ ಕ್ಯೂರೋಸಿಟಿ ಮಾರ್ಸ್ ರೋವರ್‌ದ್ದೆಂದು ತಿಳಿದು ಬಂದಿದೆ. ಇದನ್ನು ಬಾಹ್ಯಾಕಾಶ ಸಂಸ್ಥೆಯ ಯೂಟ್ಯೂಬ್ ಪೇಜ್‌ನಲ್ಲಿ 2020ರ ಮಾರ್ಚ್ 4 ರಂದು ಅಪ್ಲೋಡ್ ಮಾಡಲಾಗಿದೆ.
Mars, fascinating. pic.twitter.com/WSyq8Ojna2
— Anonymous (@YourAnonOne) February 19, 2021
ನಾಸಾದನ್ವಯ ಇದು ಮಂಗಳಗ್ರಹದ ಮೌಂಟ್ ಶಾರ್ಪ್ ಶಿಖರದ 360 ಡಿಗ್ರಿಯ್ಲಲಿ ಸೆರೆ ಹಿಡಿಯಲಾಗಿದೆ ಎಂದು ತಿಳಿದು ಬಂದಿದೆ. ಈ ಫೂಟೇಜ್ 2019ರ ನವೆಂಬರ್ 24 ರಿಂದ ಡಿಸೆಂಬರ್‌ನೊಳಗೆ ಸೆರೆ ಹಿಡಿಯಲಾಗಿದೆ. ಮಿಷನ್‌ನಲ್ಲಿದ್ದ ತಂಡ
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 22, 2021, 11:48 AM IST