ಬೆಂಗಳೂರು (ಅ. 31): ಖಗೋಳ ಕೌತುಕಗಳಲ್ಲಿ ಒಂದಾದ ಬ್ಲ್ಯೂಮೂನ್‌ ಗೆ ಇಂದು ನಭೋಮಂಡಲ ಸಾಕ್ಷಿಯಾಗಲಿದೆ.  ಇದು ಈ ತಿಂಗಳಲ್ಲಿ ಬರುವ ಎರಡನೇ ಹುಣ್ಣಿಮೆಯಾಗಿದೆ.   ಅ.1ರಂದು ಮೊದಲ ಹುಣ್ಣಿಮೆ ಸಂಭವಿಸಿತ್ತು.

ಗ್ರೆಗೋರಿಯನ್‌ ಕ್ಯಾಲೆಂಡರ್‌ ಪ್ರಕಾರ ಒಂದು ಹುಣ್ಣಿಮೆಯಿಂದ ಇನ್ನೊಂದು ಹುಣ್ಣಿಮೆ (ಲೂನಾರ್‌ ಮಂಥ್‌) ನಡುವಿನ ಅವಧಿ 29 ದಿನ, 44 ನಿಮಿಷ 38 ಸೆಕೆಂಡ್‌ ಆಗಿರುತ್ತದೆ. ಇದರಲ್ಲಿ 30 ದಿನ ತುಂಬಲು ಬಾಕಿ ಉಳಿದ ಸಮಯ ಸೇರಿ ಸೇರಿ ಕೊನೆಗೊಂದು ತಿಂಗಳಲ್ಲಿ ಎರಡು ಹುಣ್ಣಿಮೆ ಸಂಭವಿಸುತ್ತದೆ. ಇದನ್ನೇ ಬ್ಲೂಮೂನ್‌ ಎನ್ನಲಾಗುತ್ತದೆ. ಅ.31ರಂದು ಸಂಭವಿಸುತ್ತಿರುವುದು ಇದೇ ಬ್ಲೂಮೂನ್‌. 31 ದಿನಗಳು ಇರುವ ತಿಂಗಳಲ್ಲಿ ಇಂಥ ಬ್ಲೂಮೂನ್‌ ಸಾಮಾನ್ಯ. ಆದರೆ 30 ದಿನಗಳು ಇರುವ ತಿಂಗಳಲ್ಲಿ ಬಲು ಅಪರೂಪ. ಈ ಬಗ್ಗೆ ವಿಜ್ಞಾನಿಗಳು, ಜ್ಯೋತಿಷಿಗಳು ಏನಂತಾರೆ? ಕೇಳೋಣ ಬನ್ನಿ..!