Asianet Suvarna News Asianet Suvarna News

Plants Respond to Pain: ಪ್ರಾಣಿಗಳಷ್ಟೇ ಅಲ್ಲ, ನೋವಾದಾಗ ಸಸ್ಯಗಳೂ ಕಿರುಚುತ್ತವೆ ಗೊತ್ತಾ?

*ಪ್ರಾಣಿಗಳಂತೇ ಸಸ್ಯಗಳೂ ನೋವಾದಾಗ ಕಿರುಚುತ್ತವೆ
*ನೀರು ಪೂರೈಕೆ ಕಡಿಮೆಯಾದಾಗ ಯಾತನೆ ಅನುಭವಿಸುತ್ತವೆ
*ಟೆಲ್ ಅವಿವ್ ವಿಶ್ವವಿದ್ಯಾಲಯ ಅಧ್ಯಯನದಲ್ಲಿ ಬಹಿರಂಗ

Plants Scream When You Break Their Stem Or Dont Give Them Enough Water Study Reveals mnj
Author
Bengaluru, First Published Dec 18, 2021, 11:31 AM IST

Tech Desk: ಸಹಜವಾಗಿ ಸಮಾಜದಲ್ಲಿ ಪ್ರಾಣಿ-ಪಕ್ಷಿ ಹಿಂಸೆಗಳ ಬಗ್ಗೆ ಚರ್ಚೆ ನಡೆಯುತ್ತದೆ. ಪ್ರಾಣಿಗಳಿಗೆ ನೀಡಿದಷ್ಟು ಮಹತ್ವ ಸಸ್ಯಗಳಿಗೆ (Plants) ನೀಡುವುದು ವಿರಳ. ಮನೆ ಗಾರ್ಡನ್‌ನಲ್ಲಿ ಬೆಳೆದಿರುವ ಸಸ್ಯಗಳನ್ನು ಕಿತ್ತು ಹಾಕುವಷ್ಟು ಸುಲಭದ ಕೆಲಸ ಇನ್ನೊಂದಿಲ್ಲ. ಮನೆ ಕಟ್ಟುವಾಗ ದೊಡ್ಡ ಮರಗಳನ್ನು ಕಡಿದು ಹಾಕುವುದು ಲೆಕ್ಕಕ್ಕಿಲ್ಲ. ರಸ್ತೆ ನಿರ್ಮಾಣ ಕಾಮಗಾರಿಗಳಲ್ಲಿ ಸಸ್ಯಗಳ ಮಾರಣಹೋಮಕ್ಕೆ ಪಾರವೇ ಇಲ್ಲ. ಆದರೆ ಸಸ್ಯ ಸಂಕುಲಕ್ಕೆ ನೀವು ನೋವುಂಟು ಮಾಡಿದಾಗ ಅವುಗಳು ಕೂಡ ಪ್ರತಿಕ್ರಿಯಿಸುತ್ತವೆ ಎಂಬುದು ನಿಮಗೆ ಗೊತ್ತಾ? ಪ್ರಾಣಿಗಳಿಗೆ (ಮನುಷ್ಯರು ಸೇರಿ) ಹಿಂಸೆಯಾದಂತೆ ಸಸ್ಯಗಳನ್ನು ಕಡಿದಾಗ ಅವುಗಳಿಗೂ ಹಿಂಸೆಯಾಗುತ್ತದೆ. ಪ್ರಾಣಿಗಳೂ ಕಿರುಚುವಂತೆ ಸಸ್ಯಗಳು ಕಿರುಚುತ್ತವೆ!

ಹೌದೂ! ಸಸ್ಯಗಳ ಎಲೆ, ರೆಂಬೆ ಕೊಂಬೆಗಳನ್ನು ಕಿತ್ತಾಗ ಅವುಗಳು ಕಿರುಚುತ್ತವೆ ಎಂದು ಅಧ್ಯಯನವೊಂದರಲ್ಲಿ ಬಹಿರಂಗವಾಗಿದೆ. ಇಸ್ರೇಲ್‌ನ ಟೆಲ್ ಅವಿವ್ ಯೂನಿವರ್ಸಿಟಿಯ (Tel Aviv Univerisity) ಸಂಶೋಧಕರು ಕೆಲವು ಸಸ್ಯಗಳು ಪರಿಸರದಲ್ಲಿ ಕೆಲವು ರೀತಿಯ ಒತ್ತಡವನ್ನು ಎದುರಿಸಿದಾಗ  ಕಿರುಚುತ್ತವೆ (ಶಬ್ದ ಮಾಡುತ್ತವೆ) ಎಂದು ಕಂಡುಹಿಡಿದಿದ್ದಾರೆ. ಟೊಮೇಟೊ (Tomato) ಮತ್ತು ತಂಬಾಕು (Tobaco) ಗಿಡಗಳಲ್ಲಿ ನೀರನ್ನು ಮಿತಿಗೊಳಿಸಿ ಅವುಗಳ ಕಾಂಡಗಳನ್ನು ಕತ್ತರಿಸಿ ಈ ಸಂಶೋಧನೆ ಮಾಡಲಾಗಿದೆ. ಜತೆಗೆ ಸಸ್ಯಗಳ ಪ್ರತಿಕ್ರಿಯ ಗಮನಿಸಿಲು  ಹೆಚ್ಚಿನ ಆವರ್ತನದ (High Frequency) ಮೈಕ್ರೊಫೋನ್ ಅನ್ನು ಸಸ್ಯಗಳಿಂದ 10 ಸೆಂಟಿಮೀಟರ್ ದೂರದಲ್ಲಿ ಇರಿಸಲಾಗಿದೆ. 

ಸಸ್ಯಗಳು ತಮ್ಮ ಸಂಕಷ್ಟದ ಬಗ್ಗೆ ಹೇಳುವ ಪರಿ?

ಸಸ್ಯಗಳು ಒತ್ತಡಕ್ಕೆ ಒಳಗಾದಾಗ 20 ಮತ್ತು 100 ಕಿಲೋಹರ್ಟ್ಜ್ ನಡುವೆ ಅಲ್ಟ್ರಾಸಾನಿಕ್ ಆವರ್ತನಗಳನ್ನು (Ultrasonic Frequencies) ಹೊರಸೂಸುತ್ತವೆ. ಇದು ಹತ್ತಿರದ ಸುತ್ತಮುತ್ತಲಿನ ಇತರ ಸಸ್ಯಗಳು ಮತ್ತು ಜೀವಿಗಳಿಗೆ ತಮ್ಮ ಸಂಕಷ್ಟದ ಬಗ್ಗೆ ಹೇಳುವ ಪರಿಯಾಗಿರಬಹುದು ಎಂದು ಸಂಶೋಧಕರ ಊಹಿಸಿದ್ದಾರೆ. 

ಸಂಶೋಧಕರು ಟೊಮೆಟೊ ಸಸ್ಯದ ಕಾಂಡವನ್ನು ಕತ್ತರಿಸಲು ಪ್ರಯತ್ನಿಸಿದಾಗ ಮೈಕ್ರೊಫೋನ್ ಒಂದು ಗಂಟೆ ಅಥವಾ ಅದಕ್ಕಿಂತ ಹೆಚ್ಚು ಕಾಲ 25 ಅಲ್ಟ್ರಾಸಾನಿಕ್ ಡಿಸ್ಟ್ರೆಸ್ (ಯಾತನೆ) ಶಬ್ದಗಳನ್ನು (Distress Sounds) ಹೊರಸೂಸುತ್ತದೆ ಎಂದು ಪತ್ತೆ ಮಾಡಿದ್ದಾರೆ. ಮತ್ತೊಂದೆಡೆ, ಅವರು ಟೊಮೆಟೊ ಮತ್ತು ತಂಬಾಕು ಸಸ್ಯಗಳೆರಡನ್ನೂ ನೀರಿನಿಂದ ವಂಚಿತಗೊಳಿಸಿದಾಗ, ಟೊಮ್ಯಾಟೊ 35 ಅಲ್ಟ್ರಾಸಾನಿಕ್ ಡಿಸ್ಟ್ರೆಸ್ ಸೌಂಡ್‌ಗಳಲ್ಲಿ ಜೋರಾಗಿ  ಯಾತನೆಯ ಶಬ್ದಗಳನ್ನು ಮಾಡಿತು ಮತ್ತು ತಂಬಾಕು 11 ಅಲ್ಟ್ರಾಸಾನಿಕ್ ಡಿಸ್ಟ್ರೆಸ್ ಸೌಂಡ್‌ ಮಾಡಿತು ಎಂದು ತಿಳಿದು ಬಂದಿದೆ.

ಕೃಷಿ ಕ್ಷೇತ್ರದಲ್ಲಿ ಅಧ್ಯಯನ ಅಳವಡಿಕೆ?

ಅವರು ಕೆಲವು ಸಸ್ಯಗಳನ್ನು ಸಹಜವಾಗಿಟ್ಟಾಗ ಈ ಸಸ್ಯಗಳು ಗಂಟೆಗೆ ಕೇವಲ 1 ಅಲ್ಟ್ರಾಸಾನಿಕ್ ಶಬ್ದವನ್ನು ಹೊರಸೂಸುತ್ತವೆ ಎಂದು ಕಂಡುಹಿಡಿದ್ದಾರೆ. ಸಂಶೋಧನೆಯಲ್ಲಿ ಬಹಿರಂಗವಾದ ಮಾಹಿತಿಯನ್ನು ಮಷೀನ್‌ ಲರ್ನಿಂಗ್‌ ಬಳಸಿ ಅಧ್ಯಯನ ಮಾಡಿದ್ದಾರೆ. ಈ ಅಧ್ಯಯನವನ್ನು ಕೃಷಿ ಕ್ಷೇತ್ರದಲ್ಲಿ ಬಳಸುವ ಪ್ರಯತ್ನ ಮಾಡಲಾಗಿದೆ. ಈ ಸಂಶೋಧನೆ ಇನ್ನೂ ಪ್ರಗತಿಯಲ್ಲಿದೆ. ಸಸ್ಯಗಳ ನೋವನ್ನೂ ಅರಿತು ಕೃಷಿಕರು ಸರಿಯಾದ ವಿಧಾನಗಳನ್ನು ಬಳಸಿದರೆ ಹೆಚ್ಚು ಫಸಲು ಬರುವ ಸಾಧ್ಯತೆಗಳು ಕಂಡುಬರುತ್ತಿವೆ. ಹೀಗಾಗಿ ಈ ಸಂಶೋಧನೆಯನ್ನು ಮುಂದುವರೆಸಿದ್ದು ಕೃಷಿ ಕ್ಷೇತ್ರದಲ್ಲಿ ಇದು ಮಹತ್ತರ ಬದಲಾವಣೆ ತರಲಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಲೈವ್ ಸೈನ್ಸ್‌ನಲ್ಲಿ (Live Science) ಮೊದಲು ಪ್ರಕಟಿಸಲಾಗಿದೆ ಪತ್ರಿಕೆಯಲ್ಲಿ "ಈ ಸಂಶೋಧನೆಗಳು ಸಸ್ಯ ಸಾಮ್ರಾಜ್ಯದ ಬಗ್ಗೆ ನಾವು ಯೋಚಿಸುವ ವಿಧಾನವನ್ನು ಬದಲಾಯಿಸಬಹುದು, ಈ ವಿಷಯದ ಬಗ್ಗೆ ಇಲ್ಲಿವರೆಗೂ ಮೌನವಹಿಸಲಾಗಿದೆ" ಎಂದು ಸಂಶೋಧಕರು ಹೇಳಿದ್ದಾರೆ. 

ಇದನ್ನೂ ಓದಿ:

1) Pinaka-ER: ಹೊಸ ರಾಕೆಟ್ ಲಾಂಚರ್ ಪಿನಾಕಾ ಯಶಸ್ವಿ ಪರೀಕ್ಷೆ, ಭಾರತಕ್ಕೆ ಮತ್ತೊಂದು ಗರಿ

2) Gaganyaan 2023: ಗಗನಯಾನಕ್ಕೂ ಮುನ್ನ ಮೊದಲ ಮಾನವ ರಹಿತ ಮಿಷನ್ ಉಡಾವಣೆ!

3) Floating city: ಸಿದ್ಧವಾಗುತ್ತಿದೆ ಜಗತ್ತಿನ ಮೊದಲ ತೇಲುವ ನಗರ

Follow Us:
Download App:
  • android
  • ios