ಕಿಲಿಮಂಜಾರೋ ಭಾರತದಲ್ಲಿ ಕೇಳದ ಹೆಸರೇನಲ್ಲ. ಹಲವು ಹಾಡುಗಳಲ್ಲಿ, ಹಾಡುಗಳ ದೃಶ್ಯಗಳಲ್ಲಿ ಕಿಲಿಮಂಜಾರೋ ಚಿತ್ರಣವಿದೆ. ಇದೀಗ ವಿಮಾನದ ಪೈಲೆಟ್ ಅದ್ಭುತ ದಶ್ಯ ಸೆರೆ ಹಿಡಿದ್ದಾರೆ. ಈ ದೃಶ್ಯ ಹಲವು ಚರ್ಚೆಗೆ ಕಾರಣವಾಗಿದೆ. 

ಕಿಲಿಮಂಜಾರೋ ಪರ್ವತದ ಅದ್ಭುತ ದೃಶ್ಯಗಳನ್ನು ಹಲವು ಸಿನಿಮಾಗಳಲ್ಲಿ, ಡಾಕ್ಯುಮೆಂಟರಿಗಳಲ್ಲಿ ನೋಡಿರುತ್ತೀರಿ. ಆದರೆ ಕಿಲಿಮಂಜಾರೋ ಮೌಂಟ್ ಮೇಲಿನ ಬರ್ಡ್ ಐ ವ್ಯೂವ್ ಚಿತ್ರಣ ಹೆಚ್ಚಿನವರು ನೋಡಿರಲು ಸಾಧ್ಯವಿಲ್ಲ. ಇದೀಗ ವಿಮಾನದ ಪೈಲೆಟ್ ಕಿಲಿಮಂಜಾರೋ ಪರ್ವದ ಮೇಲಿಂದ ಸಾಗುವಾಗ ಅದ್ಭುತ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಈ ದೃಶ್ಯ ಇದೀಗ ಹಲವರನ್ನು ಚಕಿತಗೊಳಿಸಿದೆ. ಅದ್ಭುತ ಪ್ರಾಕೃತಿಕ ಸೌಂದರ್ಯಕ್ಕೆ ಹಲವರು ಮನಸೋತಿದ್ದಾರೆ. ಇದೇ ವೇಳೆ ಈ ಪರ್ವತಗಳಲ್ಲಿ ಅನ್ಯಗ್ರಹ ಜೀವಿಗಳು ವಾಸವಿತ್ತಾ ಅನ್ನೋ ಚರ್ಚೆಗೂ ಕಾರಣವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪರ್ವತದ ಸೌಂದರ್ಯ ವಿಡಿಯೋದಲ್ಲಿ ಸೆರೆ

ಕೀನ್ಯಾ ಏರ್‌ವೇಸ್ ವಿಮಾನದ ಕ್ಯಾಪ್ಟನ್ ಅಹಮ್ಮದ್ ಈ ಅದ್ಭುತ ದೃಶ್ಯ ಸೆರೆ ಹಿಡಿದಿದ್ದಾರೆ. ಆಫ್ರಿಕಾದ ಅತೀ ಎತ್ತರದ ಪರ್ವತ ಇದಾಗಿದೆ. ಮಂಜಿನ ಹೊದಿಕೆಯಿಂದ ಆವೃತ್ತವಾಗಿರುವ ಏಕೈಕ ಪರ್ವದ ಸುಂದರ ದೃಶ್ಯ ಈ ವಿಡಿಯೋದಲ್ಲಿದೆ. ಪರ್ವತದ ಸುತ್ತಲಿರುವ ಮೋಡ, ಕಿಲಿಮಂಜಾರೋ ಬೆಟ್ಟದ ಮಧ್ಯಭಾಗದಲ್ಲಿರುವ ದೊಡ್ಡ ಜ್ವಾಲಾಮುಖಿ ಗುಳಿ ಈ ಪರ್ವತದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ.

ಜ್ವಾಲಾಮುಖಿಗಳಿಂದ ಈ ಪರ್ವತದ ಮೇಲ್ಬಾಗ ವಿಶೇಷ ರೀತಿಯಲ್ಲಿ ಕಾಣಿಸುತ್ತದೆ. ದೂರದಿಂದ ಚಂದ್ರನ ಮೇಲಿನ ಗುಳಿಯಂತೆ ಗೋಚರಿಸುತ್ತದೆ. ಇದೇ ಕಾರಣಕ್ಕೆ ಇಲ್ಲಿ ಅನ್ಯಗ್ರಹ ಜೀವಿ ವಾಸವಿತ್ತಾ ಅನ್ನೋ ಪ್ರಶ್ನೆಗಳು ಹುಟ್ಟಿಕೊಂಡಿದೆ. ಆಫ್ರಿಕಾದಲ್ಲಿ ಈ ಪರ್ವತವಿರುವ ಕಾರಣ ಅನ್ಯಗ್ರಹ ಜೀವಿಗಳ ವಾಸಸ್ಥಾನವಲ್ಲ.ಆದರೆ ಹಲವು ಬಾರಿ ಈ ಕುರಿತು ಚರ್ಚೆಗಳಾಗಿದೆ.

Scroll to load tweet…

ಯಾವುದೇ ಪರ್ವತಶ್ರೇಣಿಗಳಿಗೆ ಹೊಂದಿಕೊಳ್ಳದ ಏಕೈಕ ಪರ್ವತ

ಕಿಲಿಮಂಜಾರೋ ಪರ್ವತ ಚಾರಣಿಗರಿಗೆ ಅತ್ಯಂತ ಪ್ರಿಯವಾದ ಪರ್ವತ. ಮೌಂಟ್ ಕಿಲಿಮಂಜಾರೋ ಪೂರ್ವ ಆಫ್ರಿಕಾದ ಟಾಂಜಾನಿಯಾ (Tanzania) ದೇಶದಲ್ಲಿದೆ. ಈ ಪರ್ವತದ ಎತ್ತರ ಸಮುದ್ರ ಮಟ್ಟದಿಂದ ಬರೋಬ್ಬರಿ 5,895 ಮೀಟರ್ (19,341 ಅಡಿ). ಕಿಲಿಮಂಜಾರೋ ಕೇವಲ ಪರ್ವತವಲ್ಲ, ಇದು ಮೂರು ವಿಶಿಷ್ಟ ಜ್ವಾಲಾಮುಖಿಗಳನ್ನು (Kibo, Mawenzi, ಮತ್ತು Shira) ಹೊಂದಿರುವ ಪರ್ವತವಾಗಿದೆ. ಯಾವುದೇ ಬೆಟ್ಟ, ಗುಡ್ಡ, ಪರ್ವತ ಶ್ರೇಣಿಗಳಿಗೆ ಹೊಂದಿಕೊಂಡಿರದೆ ಏಕೈಕವಾಗಿ ನಿಂತಿರುವ ವಿಶ್ವದ ಅತೀ ದೊಡ್ಡ ಪರ್ವತ ಅನ್ನೋ ಕೀರ್ತಿಯೂ ಕಿಲಿಮಂಜಾರೋಗಿದೆ.

ಈ ಪರ್ವತದ ತುದಿ ಇಡೀ ವರ್ಷ ಮಂಜಿನಿಂದ ಆವರಿಸಿಕೊಂಡಿರುತ್ತದೆ. ವಿಶೇಷ ಅಂದರೆ ಸಮಭಾಜಕ ವೃತ್ತ (Equator)ಹತ್ತಿರವಿದೆ. ಕಿಲಿಮಂಜಾರೋ ಪರ್ವತದ ಕೆಳಗೆ ಬಂದರೆ ಉಷ್ಣವಲಯ, ಮೇಲೆ ಹೋದರೆ ತಂಪಾದ ಹವಾಮಾನವಿದೆ. ಇದೇ ಕಾರಣದಿಂದ ಚಾರಣಿಗರಿಗೆ ಇದು ಅತ್ಯಂತ ಸವಾಲಿನ ಪರ್ವತವಾಗಿದೆ.

ಭಾರತೀಯ ಸಿನಿಮಾ ಶೂಟಿಂಗ್

ಖ್ಯಾತ ನಿರ್ದೇಶಕ ಶಂಕರ್ ನಿರ್ದೇಶನದ, ಸೂಪರ್‌ಸ್ಟಾರ್ ರಜನಿಕಾಂತ್ ಮತ್ತು ಐಶ್ವರ್ಯಾ ರೈ ನಟನೆಯ ರೋಬೋಟ್(ಎಂದಿರನ್( ಸಿನಿಮಾದ ಅತ್ಯಂತ ಜನಪ್ರಿಯ ಹಾಡು ಕಿಲಿಮಂಜಾರೋ... ಲಡ್ಕಿ ಪರ್ವತ್ ಕಿ ಯಾರೋ. ಹಾಡಿನ ಕೆಲ ದೃಶ್ಯ ಈ ಪರ್ವತದ ಸುತ್ತ ಮುತ್ತ ಚಿತ್ರೀಕರಣಗೊಂಡಿದೆ. ಸೂರ್ಯ ಮತ್ತು ತಮನ್ನಾ ನಟನೆಯ, ಕೆ. ವಿ. ಆನಂದ್ ನಿರ್ದೇಶನದ ತಮಿಳು ಆಕ್ಷನ್-ಥ್ರಿಲ್ಲರ್ ಸಿನಿಮಾ 'ಅಯಾನ್ ಕೆಲ ದೃಶ್ಯಗಳನ್ನು ಇಲ್ಲಿ ಚಿತ್ರೀಕರಿಸಲಾಗಿದೆ.