ಸೂರ್ಯನ ಬರಿಗಣ್ಣಿನಿಂದ ನೋಡಿದೂರ ಸ್ಪಷ್ಟತೆ ಕಾಣುವುದಿಲ್ಲ, ಟೆಲಿಸ್ಕೋಪ್ ಮೂಲಕ, ಉಪಗ್ರಹಗಳ ಮೂಲಕ ಸೆರೆ ಹಿಡಿದರೂ ಬೆಂಕಿ ಉಂಡೆ ರೀತಿ ಕಾಣಿಸುವ ಫೋಟೋ, ವಿಡಿಯೋ ಲಭ್ಯವಿದೆ. ಆದರೆ ನಾಸಾ ಇದೀಗ ಅತ್ಯಂತ ಸ್ಪಷ್ಟ ದೃಶ್ಯ ಸೆರೆ ಹಿಡಿದಿದೆ. ಈ ವಿಸ್ಮಯ ಇಲ್ಲಿದೆ.

ಸೂರ್ಯನ ಕುರಿತು ಇಸ್ರೋದ ಆದಿತ್ಯ ಸೇರಿದಂತೆ ಹಲವು ಉಪಗ್ರಹ ಸೂರ್ಯನ ಹತ್ತಿರದ ಫೋಟೋ ಸೆರೆ ಹಿಡಿದಿದೆ. ಎಲ್ಲವೂ ಬೆಂಕಿಯ ಉಂಡೆಯಂತೆ ಮಾತ್ರ ಕಾಣುವ ಚಿತ್ರಗಳಾಗಿದೆ. ಆದರೆ ಮೊದಲ ಬಾರಿಗೆ ನಾಸಾ ಹೈ ರೆಸಲ್ಯೂಶನ್ ಇರುವ ಸೂರ್ಯನ ಸ್ಪಷ್ಟ ಚಿತ್ರ ಸೆರೆ ಹಿಡಿದಿದೆ. ವಿಶೇಷ ಅಂದರೆ ಸೂರ್ಯನ ಮೇಲೇ ವಿಚಿತ್ರ ಅಲೆಗಳ ಚಲನ ಕುರಿತ ದೃಶ್ಯಲನ್ನು ನಾಸಾ ಸೆರೆ ಹಿಡಿದಿದೆ. ಇದುವರೆಗೆ ಸೂರ್ಯನ ಚಿತ್ರಗಳನ್ನು ನೋಡಿ ಕಲ್ಪಿಸಿಕೊಂಡ, ತಿಳಿದುಕೊಂಡ ರೀತಿಗೂ ಈ ದೃಶ್ಯಗಳಿಗೂ ಭಾರಿ ವ್ಯತ್ಯಾಸವಿದೆ. ಸೂರ್ಯನ ಮೇಲ್ಮೆ ಹೀಗೂ ಇದೆಯಾ ಅನ್ನೋ ಅಚ್ಚರಿಗೆ ಕಾರಣವಾಗಿದೆ.

ದೈತ್ಯ ಅಲೆಗಳು ಸೆರೆ

ಸೂರ್ಯನ ಕುರಿತು ನಿರಂತರ ಸಂಶೋಧನೆಗಳು ನಡೆಯುತ್ತಿದೆ. ಈ ಪೈಕಿ ನಾಸಾದ ಸಂಶೋಧನೆ ಇದೀಗ ಜಗತ್ತನ್ನೆ ಬೆರಗುಗೊಳಿಸಿದೆ. ನಾಸಾ ತಂತ್ರಜ್ಞಾನ ಹಾಗೂ ಆಸ್ಟ್ರೋಫಿಸಿಕಲ್ ಟೆಲಿಸ್ಕೋಪ್ ಮೂಲಕ ಅತ್ಯಂತ ಸ್ಪಷ್ಟ ಹಾಗೂ ಹೈ ರೆಸಲ್ಯೂಶನ್ ಚಿತ್ರ ಸೆರೆ ಹಿಡಿಯಲಾಗಿದೆ. ಬೆಂಕಿಯ ಉಂಡೆ ಸೂರ್ಯನ ಮೇಲ್ಮೈ ಮೇಲೆ ನಡೆಯುವ ತೀವ್ರ ಚಲನೆ, ದೈತ್ಯ ಗಾತ್ರದ ಅಲೆಗಳ ವಿಶೇಷತೆ ಈ ದೃಶ್ಯದಲ್ಲಿ ಸೆರೆಯಾಗಿದೆ. ಈ ಚಿತ್ರ ಹಾಗೂ ದೃಶ್ಯಗಳು ಇದೀಗ ಜಾಗತಿಕ ಮಟ್ಟದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಖಗೋಳ, ಸೌರಮಂಡಲ ಕುರಿತ ಅಧ್ಯಯನದಲ್ಲಿ ಸೂರ್ಯನ ಅಧ್ಯಯನ ಅತ್ಯಂತ ಸವಾಲಿನಿಂದ ಕೂಡಿದೆ. ಈ ಸವಾಲು ಹಾಗೂ ಹಲವು ವರ್ಷಗಳ ಅಧ್ಯಯನಕ್ಕೆ ಇದೀಗ ಈ ಸಂಶೋಧನೆ ಹೊಸ ಆಯಾಮ ನೀಡಲಿದೆ.

ಸೂರ್ಯನ ಬಿಸಿ ವಾತಾವರಣದ ಮೇಲಿನ ಪ್ರಕ್ರಿಯೆ

ಸಮುದ್ರದಲ್ಲಿ ಅತೀಯಾದ ಗಾಳಿಗೆ ದೈತ್ಯ ಅಲೆಗಳು ಎಳುತ್ತವೆ. ಭೌತಶಾಸ್ತ್ರದ ಪ್ರಕ್ರಿಯೆ ಪ್ರಕಾರ, ಸೂರ್ಯನ ಹೊರ ವಾತಾವರಣದಲ್ಲೂ ಇದೇ ರೀತಿಯ ಘಟನೆ ಸಂಭವಿಸುತ್ತದೆ. ವಿಭಿನ್ನ ವೇಗ ಹಾಗೂ ಸಾಂದ್ರತೆಯ ಪ್ಲಾಸ್ಮಾ ಪದರಗಳ ಹಾದುಹೋಗುವಾಗ ಈ ಅಸ್ಥಿರತೆ ಉಂಟಾಗುತ್ತದೆ. ಸೂರ್ಯನ ಬಿಸಿ ವಾತಾವರಣ ಮೇಲಿನ ಈ ಪ್ರಕ್ರಿಯೆ ಸಾಮಾನ್ಯ ಟೆಲಿಸ್ಕೋಪ್ ಲೆನ್ಸ್‌ನಲ್ಲಿ ಪತ್ತೆಯಾಗುವುದಿಲ್ಲ. ವಿಶೇಷ ಹಾಗೂ ಹೈರೆಸಲ್ಯೂಶನ್ ಟೆಲಿಸ್ಕೋಪ್‌ನಲ್ಲಿ ಈ ಸೂರ್ಯನ ಮೇಲೆ ನಡೆಯುತ್ತಿರುವ ದೈತ್ಯ ಅಲೆಗಳ ಪಕ್ರಿಯೆ ಮೊದಲ ಬಾರಿಗೆ ಗೋಚರವಾಗಿದೆ.

ಸೂರ್ಯನ ಕರೋನಾ ವಿಭಾಗ ಸೂರ್ಯನ ಮೇಲ್ಮೈಗಿಂತ ಲಕ್ಷಾಂತರ ಡಿಗ್ರಿ ಸೆಲ್ಶಿಯಸ್ ಬಿಸಿಯಾಗಿರುತ್ತದೆ. ಈ ದೃಶ್ಯ, ಚಿತ್ರಗಳು ವಿಜ್ಞಾನಿಗಳಿಗೆ ಅತೀ ದೊಡ್ಡ ಸಾಕ್ಷ್ಯ ನೀಡಿದೆ. ಸೂರ್ಯನ ಶಕ್ತಿ, ಸೂರ್ಯನ ಮೇಲಿನ ಬಿಸಿ ವಾತವಾರಣ, ದೈತ್ಯ ಅಲೆಗಳ ಸೃಷ್ಟಿ ಸೇರಿದಂತೆ ಹಲವು ಸೂಕ್ಷ್ಮತೆಗಳು ವಿಜ್ಞಾನಿಗಳಿಗೆ ಸಂಶೋಧನೆಗೆ ವೇಗ ನೀಡಿದೆ. ಸೂರ್ಯನ ಮೇಲೆ ನಡೆಯುವ ಈ ಪಕ್ರಿಯೆಗಳು ಭೂಮಿ ಮೇಲೆ, ವಾತಾವರಣ ಮೇಲೂ ಪ್ರಭಾವ ಬೀರಲಿದೆ. ಸೌರ ಜ್ವಾಲೆಗಳು, ಪ್ಲಾಸ್ಮಾ ಕಿರಣಗಳು ಉಪಗ್ರಹ ಜಾಲ, ಜಿಪಿಎಸ್ ವ್ಯವಸ್ಥೆ, ವಿದ್ಯುತ್ ಗ್ರಿಡ್ ಮೇಲೆ ಪರಿಣಾಮ ಬೀರುತ್ತದೆ.

Scroll to load tweet…