ಇದು ಹಾರರ್ ಚಿತ್ರವಲ್ಲ.. ಇರುವೆಯ ಮುಖದ ಕ್ಲೋಸ್ ಅಪ್ ಕ್ಲಿಕ್!
Microscopic Photography ಇರುವೆಯ ಮುಖದ ಕ್ಲೋಸ್ ಅಪ್ ಚಿತ್ರಕ್ಕೆ 2022ರ ನಿಕಾನ್ ಫೋಟೋಮೈಕ್ರೋಗ್ರಫಿ ಪ್ರಶಸ್ತಿ ಸಿಕ್ಕಿದೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಗಮನಸೆಳೆದಿದೆ.
ನವದೆಹಲಿ (ಅ.22): ಸಾಮಾಜಿಕ ಮಾಧ್ಯಮ ಬಳಕೆದಾರರು ಇರುವೆಯ ಫೋಟೋಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇರುವೆಯ ಮುಖದ ಚಿತ್ರವನ್ನು ಅತ್ಯಂತ ಸೂಕ್ಮ್ಷವಾಗಿ ತೆಗೆಯಲಾಗಿದ್ದು ಅದಕ್ಕೆ ದೈತ್ಯ ಚಿತ್ರದ ಆಯಾಮ ನೀಡಲಾಗಿದೆ. ಈ ಚಿತ್ರ 2022ರ ನಿಕಾನ್ ಫೋಟೊಮೈಕ್ರೋಗ್ರಫಿ ಸ್ಪರ್ಧೆಗೆ ಸಲ್ಲಿಸಲಾದ ಅನೇಕ ಗಮನಾರ್ಹ ಚಿತ್ರಗಳಲ್ಲಿ ಒಂದಾಗಿತ್ತು. ಸ್ಪರ್ಧೆಯು ಸೂಕ್ಷ್ಮದರ್ಶಕಗಳನ್ನು ಬಳಸಿ ತೆಗೆಯಲಾದ ಅತ್ಯುತ್ತಮ ಛಾಯಾಚಿತ್ರಗಳನ್ನು ಗುರುತಿಸುತ್ತದೆ. ನಿರೀಕ್ಷೆಯಂತೆಯೇ ಇರುವೆಯ ಮುಖದ ಚಿತ್ರಕ್ಕೆ ಈ ಬಾರಿಯ ಪ್ರಶಸ್ತಿ ಸಿಕ್ಕಿದೆ. ಲಿಥುವೇನಿಯಾದ ಡಾ. ಯುಜೆನಿಜಸ್ ಕವಲಿಯೌಸ್ಕಾಸ್ ಅವರು ಈ ಚಿತ್ರವನ್ನು ತೆಗೆದಿದ್ದಾರೆ. ಸೂಕ್ಷ್ಮದರ್ಶಕದ ಅಡಿಯಲ್ಲಿ ಇರುವೆಯಂಥ ಅತ್ಯಂತ ಪುಟ್ಟ ಕೀಟದ ಮುಖವನ್ನು ಐದು ಪಟ್ಟು ದೊಡ್ಡದಾಗಿ ನೋಡಿದಾಗ ಭಯದ ಭಾವನೆ ಉಂಟುಮಾಡುವಂತಿದೆ. ಛಾಯಾಚಿತ್ರದಲ್ಲಿ ಇರುವೆಯ ಮುಖದಲ್ಲಿನ ಕಣ್ಣುಗಳು ನೇರಳೆ ಬಣ್ಣದಲ್ಲಿದೆ, ಚಿನ್ನದ ಬಣ್ಣದ ಹಲ್ಲುಗಳನ್ನು ಇದು ಹೊಂದಿರುವಂತೆ ಕಂಡಿದೆ. ಒಟ್ಟಾರೆ ಇರುವೆಯ ಮುಖ ಹಾರರ್ ಚಿತ್ರದಲ್ಲಿ ಪಾತ್ರದಂತೆ ಕಾಣುತ್ತಿದೆ.
ಯುಜೆನಿಜಸ್ ಕವಲಿಯೌಸ್ಕಾಸ್ ತೆಗೆದಿರುವ ಈ ಚಿತ್ರ (ants face) ಸೋಶಿಯಲ್ ಮೀಡಿಯಾದಲ್ಲಿ ಗಮನಸೆಳೆದಿದ್ದು, ಒಬ್ಬ ವ್ಯಕ್ತಿ ಇದು ಅತ್ಯಂತ ಭಯಾನಕ ಚಿತ್ರ ಎಂದು ಹೇಳಿದ್ದಾರೆ. ಟ್ವಿಟರ್‌ನಲ್ಲಿ ಈ ಕುರಿತಾಗಿ ಬರೆದುಕೊಂಡಿರುವ ಅವರು, ಈಗ ಇರುವೆಯ ಕುರಿತಾಗಿ ನನ್ನ ಗ್ರಹಿಕೆ ಖಂಡಿತವಾಗಿ ಬದಲಾಗಿದೆ ಎಂದಿದ್ದಾರೆ. ಇನ್ನೊಂದೆಡೆ, ಮನುಷ್ಯರು ಯಾವುದೇ ಸಮಸ್ಯೆ ಇಲ್ಲದೆ ಬದುಕಬೇಕು ಎನ್ನುವ ಕಾರಣಕ್ಕಾಗಿ ಪ್ರಕೃತಿ ಇವುಗಳನ್ನು ಬಹಳ ಚಿಕ್ಕದಾಗಿ ರಚನೆ ಮಾಡಿವೆ ಎಂದಿದ್ದಾರೆ. ಬಹುಶಃ ಆಂಟ್ಜ್ ಎನ್ನುವ ಚಿತ್ರದಲ್ಲಿ ಇರುವೆಯನ್ನು ತಪ್ಪಾಗಿ ಬಿಂಬಿಸಿದ್ದಾರೆ ಎಂದು ಬರೆದಿದ್ದರೆ, ಮತ್ತೊಬ್ಬ 'ಈ ಚಿತ್ರವನ್ನ ನೋಡಿದ ಬಳಿ ನಾನು ಮತ್ತೆ ಮಲಗೋದಿಲ್ಲ' ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಫೋಟೋಗ್ರಾಫರ್ ಯುಜೆನಿಜಸ್ ಕವಲಿಯೌಸ್ಕಾಸ್ (Lithuanian photographer Eugenijus Kavaliauskas), 'ಪ್ರಕೃತಿಯಲ್ಲಿ ಭಯಾನಕ ಎನ್ನುವಂಥ ವಿಚಾರವೇ ಇಲ್ಲ' ಎಂದಿದ್ದಾರೆ.
ಕಾಮಸೂತ್ರ ಶೈಲಿಯಲ್ಲಿ ಮಾಡೆಲ್ ಪದ್ಮಾ ಲಕ್ಷ್ಮಿಯ ನಗ್ನ ಫೋಟೋಶೂಟ್
ಲಿಥುವೇನಿಯಾದ ನನ್ನ ಮನೆಯ ಪಕ್ಕದಲ್ಲಿಯೇ ದೊಡ್ಡ ಅರಣ್ಯವಿದೆ. ಹಾಗಾಗಿ ಇಂಥ ಚಿತ್ರಗಳನ್ನುತೆಗೆಯುವುದು ನನಗೆ ಸುಲಭ. ಇರುವೆಯ ಮುಖದ ಚಿತ್ರ ಇಷ್ಟು ಡಿಟೇಲ್ ಆಗಿ ತೆಗೆದಾಗ ಇದನ್ನು ನಿಕಾನ್ ಸ್ಮಾಲ್ ವರ್ಲ್ಡ್ ಫೋಟೋಮೈಕ್ರೋಗ್ರಫಿ (2022 Nikon Small World Photomicrography Competition) ಕಳಿಸಬಹುದು ಎಂದನಿಸಿತ್ತು. ಆದರೆ, ಪ್ರಶಸ್ತಿ ಬಂದಿದ್ದು ಖುಷಿಯಾಗಿದೆ ಎಂದಿದ್ದಾರೆ. ಸೃಷ್ಟಿಕರ್ತ ಜಗತ್ತಿನ ಜೀವಿಗಳನ್ನು ಯಾವೆಲ್ಲಾ ರೀತಿಯಲ್ಲಿ ವಿನ್ಯಾಸ ಮಾಡಿದ್ದಾನೆ ಎನ್ನುವ ನೋಡುವ ಕುತೂಹಲ ನನಗಂತೂ ಇದೆ. ಹಾಗಾಗಿ ಈ ರೀತಿಯ ಚಿತ್ರಗಳನ್ನು ತೆಗೆಯುವುದು ನನಗೆ ಇಷ್ಟ. ಪ್ರತಿ ಪ್ರಾಣಿಗಳನ್ನು, ಕೀಟಗಳನ್ನು ಅಮೂಲಾಗ್ರವಾಗಿ ಚಿತ್ರಿಸುತ್ತೇನೆ. ಫೋಟೋಗ್ರಫಿಯ ಮೂಲ ಉದ್ದೇಶವೇ ಅನ್ವೇಷಣೆ ಎಂದು ಕವಲಿಯೌಸ್ಕಾಸ್ ಹೇಳುತ್ತಾರೆ.
ಸಾವಿನಲ್ಲೂ ಸಾರ್ಥಕತೆ: ಕಿರುತೆರೆ ನಟಿ ವೈಶಾಲಿ ನೇತ್ರದಾನ ಮಾಡಿದ ಪೋಷಕರು
ಇರುವೆಯ ಈ ಚಿತ್ರ ನಿಮ್ಮನ್ನು ಆಕರ್ಷಿಸಿದರೆ, ನೀವು ನಿಕಾನ್ ಸ್ಮಾಲ್ ವರ್ಲ್ಡ್ ಪ್ರಶಸ್ತಿ ವಿಜೇತರ ಸಂಪೂರ್ಣ ಸಂಗ್ರಹವನ್ನು ನೋಡಲೇಬೇಕು. 2022 ರ ಅತ್ಯುತ್ತಮ ಚಿತ್ರವನ್ನು ಜಿನೀವಾ ವಿಶ್ವವಿದ್ಯಾನಿಲಯದ ಗ್ರಿಗೊರಿ ಟಿಮಿನ್ ಚಿತ್ರೀಕರಿಸಿದ್ದಾರೆ ಮತ್ತು ಇದು ಮಡಗಾಸ್ಕರ್ ಗೆಕ್ಕೊದ ಚಿತ್ರವಾಗಿದೆ. 63 ಪಟ್ಟು ದೊಡ್ಡದಾಗಿ ಈ ಚಿತ್ರವನ್ನು ಅಭಿವೃದ್ಧಿ ಮಾಡಲಾಗಿದ್ದು, ಅತ್ಯಂತ ವಿಸ್ಮಯಗಳನ್ನು ಹೊರಹಾಕಿದೆ. ಸಯಾನ್-ಬಣ್ಣದ ನರಗಳು ಸೇರಿದಂತೆ ಗೆಕ್ಕೊದ ಎಲ್ಲಾ ಆಂತರಿಕ ಅಂಗಗಳು ಅದರ ಪಾರದರ್ಶಕ ಚರ್ಮ, ಸ್ನಾಯುರಜ್ಜು ಮತ್ತು ಮೂಳೆಗಳ ಮೂಲಕ ಸ್ಪಷ್ಟವಾಗಿ ಗೋಚರಿಸಿವೆ. ನಿಕಾನ್ ಫೋಟೋಗ್ರಫಿ ಸ್ಪರ್ಧೆಯು 48 ವರ್ಷಗಳಿಂದ ನಡೆಯುತ್ತಿದೆ. ಕಳೆದ ಗುರುವಾರ, ನಿಕಾನ್ ಕಾರ್ಪೋರೇಷನ್ ಈ ಬಾರಿಯ ಸ್ಪರ್ಧೆಗೆ 1300 ಅರ್ಜಿಗಳು ಬಂದಿದ್ದವು ಅದರಲ್ಲಿ ವಿಜೇತರನ್ನು ಪ್ರಕಟಿಸಲಾಗಿದೆ ಎಂದಿದೆ.