ಎಲ್ಲಾ ಮೋಡಗಳು ಮಳೆ ತರಿಸುವುದಿಲ್ಲ, ಮಳೆ ತರಿಸುವ ಎಲ್ಲಾ ಮೋಡಗಳು ಸಿಡಿಲು ಮಿಂಚಿಗೆ ಕಾರಣವಾಗುವುದಿಲ್ಲ. ಹಾಗಾದರೆ ಗುಡುಗು ಸಹಿತ ಮಳೆ ಮೋಡ ಹೇಗಿರುತ್ತೆ? ಬಾಹ್ಯಾಕಾಶದಿಂದ ಅದ್ಭುತ ದೃಶ್ಯವನ್ನು ನಾಸಾ ಹಂಚಿಕೊಂಡಿದೆ.
ಭಾರತದಲ್ಲಿ ಜೂನ್ ತಿಂಗಳಿನಿಂದ ಮಳೆಗಾಲ. ಮೇ ಅಂತ್ಯದಿಂದಲೇ ಮುಂಗಾರು ಅಪ್ಪಳಿಸಿ ಮಳೆ ಆರಂಭಗೊಳ್ಳುತ್ತದೆ. ಆದರೆ ಈ ಬಾರಿ ರೈತರು ಕಂಗಾಲಾಗಿದ್ದಾರೆ, ನದಿಗಳು ಬತ್ತಿ ಹೋಗಿದೆ. ಜಲಾಶಯ ಒಣಗಿದೆ. ನೀರಿಗೆ ಈಗಲೇ ಹಾಹಾಕಾರ ಸೃಷ್ಟಿಯಾಗುತ್ತಿದೆ. ಎಲ್ ನಿನೋ ಕಾರಣದಿಂದ ಜೂನ್ ಅಂತ್ಯವಾದರೂ ಮಳೆ ಇಲ್ಲ. ಹಲವೆಡೆ ಮೋಡ ಆವರಿಸಿಕೊಳ್ಳುತ್ತಿದೆ, ಆದರೆ ಮಳೆ ಇಲ್ಲ. ಇದರ ನಡುವೆ ನಾಸಾದ ಗಗನಯಾತ್ರಿಗಳು ಅದ್ಭುತ ದೃಶ್ಯವೊಂದನ್ನು ಹಂಚಿಕೊಂಡು ಮಾಹಿತಿ ನೀಡಿದ್ದಾರೆ. ನಾವು ಭೂಮಿ ಮೇಲೆ ನಿಂತು ಆಗಸದಲ್ಲಿನ ಮೋಡ ನೋಡಿ ಮಳೆ ಅಂದಾಜು ಮಾಡುತ್ತೇವೆ. ಆದರೆ ನಾಸಾ ಗಗನಯಾತ್ರಿಗಳು ಬಾಹ್ಯಾಕಾಶದಿಂದ ಮೋಡಗಳ ಕುರಿತು ಮಹತ್ವದ ಮಾಹಿತಿ ನೀಡಿದ್ದಾರೆ. ಗಡುಗು ಸಹಿತ ಮಳೆ ಮೋಡ ಬಾಹ್ಯಾಕಾಶದಿಂದ ಹೇಗೆ ಕಾಣುತ್ತಿದೆ ಅನ್ನೋ ಫೋಟೋವನ್ನು ಹಂಚಿಕೊಂಡಿದ್ದಾರೆ.
ಅಂತಾರಾಷ್ಟ್ರೀಯ ಬಾಹ್ಯಕಾಶದಿಂದ ಅದ್ಭುತ ನೋಟ
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ನಾಸಾ ಗಗನಯಾತ್ರಿಗಳು ಈ ಅದ್ಭುತ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಪ್ರಕೃತಿಯ ವಿಸ್ಮಯ, ಆಗಸ, ಬಾಹ್ಯಾಕಾಶ ಹಾಗೂ ಭೂಮಿ ನಡುವಿನ ಸಂಪರ್ಕ, ಭೂಮಿಯಲ್ಲಿ ನಡೆಯುವ ಪ್ರಕೃತಿ ನಾಶ ಹೇಗೆ ಪರಿಣಾಮ ಬೀರುತ್ತದೆ ಅನ್ನೋ ಸ್ಪಷ್ಟ ಚಿತ್ರಣ ಸ್ಪಷ್ಟವಾಗಿ ಗೋಚರಿಸುತ್ತಿದೆ.
ಮಳೆ ಮೋಡಗಳ ನಡುವಿನ ಮಿಂಚು ಸೆರೆ
ನಾಸಾ ಗಗನಯಾತ್ರಿ ಮ್ಯಾಥ್ಯೂ ಡೊಮಿನಿಕ್ ಈ ಅದ್ಭುತ ಚಿತ್ರ ಸೆರೆ ಹಿಡಿದಿದ್ದಾರೆ. ಇಂಟರ್‌ನ್ಯಾಶಲ್ ಸ್ಪೇಸ್ ಸ್ಟೇಶನ್‌ನಲ್ಲಿರುವ ಕಪೋಲಾ ವೀಕ್ಷಣಾ ವಿಂಡೋ ಮೂಲಕ ಈ ಫೋಟೋ ಸೆರೆ ಹಿಡಿದ್ದಾರೆ. ಇವುಗಳು ಕೇವಲ ಮಳೆ ಮೋಡಗಳಲ್ಲಿ ಗುಡುಗ ಸಹಿತ ಮಳೆ ಭರಿಸುವ ಮೋಡಗಳು ಎಂದು ಡೋಮಿನಿಕ್ ಮ್ಯಾಥ್ಯೂ ಹೇಳಿದ್ದಾರೆ. ರಾತ್ರಿ ಸಮಯದಲ್ಲಿ ಈ ಮೋಡಗಳ ನಡುವೆ ಸೃಷ್ಟಿಯಾಗುವ ಹಠಾತ್ ಮಿಂಚಿನ ಕುರಿತು ಡೋಮಿನಿಕ್ ಹೇಳಿದ್ದಾರೆ. ಗುಡುಗು ಸಹಿತ ಮೋಡಗಳ ನಡುವಿನ ಮಿಂಚು ಸೆರೆಹಿಡಿಯಲು ಟೈಮ್ ಲ್ಯಾಪ್ಸ್ ಸೆಟ್ಟಿಂಗ್ಸ್ ಮೂಲಕ ದೃಶ್ಯ ಸೆರೆ ಹಿಡಿದಿದ್ದಾರೆ.
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಹಲವು ಅದ್ಭುತಗಳಿಗೆ ಸಾಕ್ಷಿಯಾಗಿದೆ. ಬಾಹ್ಯಾಕಾಶದಿಂದ ಭೂಮಿ ಹೇಗೆ ಕಾಣುತ್ತಿದ್ದೆ, ಸೂರ್ಯೋದನ, ಚಂದ್ರ ಸೇರಿದಂತೆ ಹಲವು ವಿಸ್ಮಯಗಳನ್ನು ಈ ಬಾಹ್ಯಾಕಾಶದಿಂದ ಗಗನಯಾತ್ರಿಗಳು ಸೆರೆ ಹಿಡಿದ್ದಾರೆ. ಇದೀಗ ಈ ಗುಡುಗು ಸಹಿತ ಮಳೆ ಮೋಡಗಳ ಫೋಟೋಗಳಿಗೆ ಹಲವರು ಮೂಕವಿಸ್ಮಿತರಾಗಿದ್ದಾರೆ. ಬಾಹ್ಯಾಕಾಶದಿಂದ ಈ ದೃಶ್ಯಗಳನ್ನು ನೋಡಿ ಅನುಭವಿಸುವುದೇ ಅದ್ಭುತ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.


