ಇದು ಸ್ವತಃ ನಾಸಾ ಹೇಳಿದ ಅಚ್ಚರಿ..ಭೂಮಿ ಮೇಲಿನ ಪ್ರತಿ ವ್ಯಕ್ತಿ ಕೂಡ ಕೋಟ್ಯಧಿಪತಿ ಆಗಬಹುದು!
ನಾಸಾ ಒಂದು ಕ್ಷುದ್ರಗ್ರಹದ ಹಿಂದೆ ಬಿದ್ದಿದೆ. ಅದಕ್ಕಾಗಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಯೋಜನೆಯನ್ನೂ ರೂಪಿಸಿದೆ. ಅಷ್ಟಕ್ಕೂ ನಾಸಾ ಈ ಕ್ಷುದ್ರಗ್ರಹದ ಹಿಂದೆ ಬಿದ್ದಿರೋದಕ್ಕೆ ಕಾರಣ ಅದರಲ್ಲಿನ ಸಂಪತ್ತು..!
NASA New Mission: ಕೆಲವು ವರ್ಷಗಳ ಹಿಂದೆ ನಾಸಾ ಸೌರಮಂಡಲದ ಅಂಚಿಗೆ ಕಳಿಸಿದ್ದ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್‌ನ ಮೂಲಕ ಅತಿದೊಡ್ಡ ಯಶಸ್ಸನ್ನು ಸಂಪಾದಿಸಿದೆ. ಬಾಹ್ಯಾಕಾಶದಲ್ಲಿ ಜೇಮ್ಸ್ ವೆಬ್ ಟೆಲಿಸ್ಕೋಪ್ ಸಂಪದ್ಭರಿತ ಸೈಕ್ ಕ್ಷುದ್ರಗ್ರಹವನ್ನು ಕಂಡುಹಿಡಿದಿದೆ. ಈ ಕ್ಷುದ್ರಗ್ರಹದಲ್ಲಿ ನೀರಿನ ಅಂಶವನ್ನು ಒಳಗೊಂಡಿರುವುದು ಗೊತ್ತಾಗಿದೆ. ಏಕೆಂದರೆ, ಕ್ಷುದ್ರಗ್ರಹದಲ್ಲಿ ತುಕ್ಕಿನ ಅಂಶ ಪತ್ತೆಯಾಗಿದೆ. ಈ ನೋಟವು ಇದರ ರಚನೆಯ ಬಗ್ಗೆ ಅಮೂಲ್ಯವಾದ ಮಾಹಿತಿ ನೀಡಬಹುದು. ಜಗತ್ತಿನ ಶ್ರೀಮಂತ ದೇಶಗಳು ಎಂದಾಗ ಎಲ್ಲರಿಗೂ ಕಣ್ಣು ಹೋಗುವುದು ಅಮೆರಿಕದ ಮೇಲೆ, ಇಂಧನ ಸಂಪತ್ತಿನ ದೇಶ ಎಂದಾಗ ಸೌದಿ ಅರೇಬಿಯಾ, ಇರಾಕ್, ಇರಾನ್ ದೇಶಗಳು ನೆನಪಾಗುತ್ತವೆ. ಇನ್ನು ಆಫ್ರಿಕಾದ ಕೆಲವು ದೇಶಗಳು ವಜ್ರದ ಗಣಿಗಳಿಗೆ ಹೆಸರುವಾಸಿಯಾಗಿವೆ. ಆದರೆ, ಸೈಕ್ ಕ್ಷುದ್ರಗ್ರಹದಲ್ಲಿರುವ ಸಂಪತ್ತು ಈ ರೀತಿಯದ್ದಲ್ಲ. ಅಂದಾಜು ಇಲ್ಲಿನ ಸಂಪತ್ತು 10000000 ಕೋಟಿ ರೂಪಾಯಿ ಎನ್ನಲಾಗಿದೆ. ಇದರಿಂದ ಭೂಮಿಯ ಮೇಲಿರುವ ಪ್ರತಿ ವ್ಯಕ್ತಿಗಳು ಕೂಡ ಕೋಟ್ಯಧಿಪತಿಯಾಗಬಹುದು ಎನ್ನುವ ಲೆಕ್ಕಾಚಾರವಿದೆ.
ಮಂಗಳ ಮತ್ತು ಗುರುಗ್ರಹದ ನಡುವಿನ ಮುಖ್ಯ ಕ್ಷುದ್ರಗ್ರಹ ಪಟ್ಟಿಯಲ್ಲಿರುವ ಕ್ಷುದ್ರಗ್ರಹ 16 ಸೈಕ್, ಅದರ ವಿಶಿಷ್ಟ ಗುಣಲಕ್ಷಣಗಳಿಂದಾಗಿ ಎದ್ದು ಕಾಣುತ್ತದೆ. 173 ಮೈಲಿಗಳು (280 ಕಿಲೋಮೀಟರ್‌ಗಳು) ತನ್ನ ವಿಶಾಲವಾದ ಬಿಂದುವಿನಲ್ಲಿ ವ್ಯಾಪಿಸಿರುವ ಸೈಕ್ ದೀರ್ಘಕಾಲದಿಂದ ಸಂಶೋಧಕರ ಕುತೂಹಲಕ್ಕೆ ಕಾರಣವಾಗಿತ್ತು. ಆರಂಭದಲ್ಲಿ ಇದು ಸಂಪೂರ್ಣವಾಗಿ ಲೋಹದ ಕ್ಷುದ್ರಗ್ರಹ ಎಂದು ನಂಬಲಾಗಿತ್ತು. ಆದರೆ, ಇದರಲ್ಲಿನ ಹೊಳೆಯುವ ಮೇಲ್ಮೈ ಕಾರಣದಿಂದಾಗಿ ಇದು ಕಬ್ಬಿಣದಿಂದ ಸಮೃದ್ಧವಾಗಿರುವ ಕ್ಷುದ್ರಗ್ರಹವಾಗಿರಬಹುದು ಎಂದು ಅಂದಾಜಿಸಲಾಗಿತ್ತು. ಈ ಊಹೆಯು ಭೂಮಿ ಮತ್ತು ಇತರ ಭೂಮಿಯ ಗ್ರಹಗಳ ರಚನೆಯ ಬಗ್ಗೆ ಸೈಕ್ ಸುಳಿವುಗಳನ್ನು ನೀಡುತ್ತದೆ ಎಂದು ಸೂಚಿಸಿತು. ಕೆಲವು ಅಂದಾಜುಗಳು ಸೈಕ್‌ನ ಲೋಹದ ಘಟಕಗಳ ಮೌಲ್ಯ $100,000 ಕ್ವಾಡ್ರಿಲಿಯನ್‌ನಲ್ಲಿ ಎನ್ನಲಾಗಿದೆ.
16 ಸೈಕ್ ಕ್ಷುದ್ರಗ್ರಹವನ್ನ ನಾಸಾ ತೇಲುವ ಚಿನ್ನದ ಗಣಿ ಎಂದು ಕರೆಯುತ್ತಿದೆ. 1852ರಲ್ಲಿ ಇಟಾಲಿಯನ್ ಖಗೋಳಶಾಸ್ತ್ರಜ್ಞ ಅನ್ನಿಬೆಲ್ ಡಿ ಗ್ಯಾಸ್ಪಾರಿಸ್ ಮೊದಲ ಬಾರಿಗೆ ಇದನ್ನು ಕಂಡುಹಿಡಿದಿದ್ದರು. 16 ಸೈಕ್ ಎಂದರೆ, ಗ್ರೀಕ್ ದೇವತೆಯ ಹೆಸರು. ಈ ಕ್ಷುದ್ರಗ್ರಹದಲ್ಲಿ ಇರುವ ಅಪಾರ ಪ್ರಮಾಣದ ಸಂಪತ್ತಿನ ಕಾರಣಕ್ಕಾಗಿ ಈ ಹೆಸರನ್ನು ಇಡಲಾಗಿದೆ.
ಭೂಮಿ ಹಾಗೂ ಸೂರ್ಯನಿಗಿಂತ ಮೂರು ಪಟ್ಟು ದೂರದಲ್ಲಿ ಈ ಕ್ಷುದ್ರಗ್ರಹವಿದೆ. 2023ರಲ್ಲಿ ನಾಸಾ ಮಾನವ ರಹಿತ ನೌಕೆಯನ್ನು ಸೈಕ್‌ನತ್ತ ಉಡಾವಣೆ ಮಾಡಿದೆ. ಈ ನೌಕೆ 2029ರ ವೇಳೆಗೆ ಈ ಕ್ಷುದ್ರಗ್ರಹದ ಗುರುತ್ವಾಕರ್ಷಣೆ ವಲಯಕ್ಕೆ ಪ್ರವೇಶ ಪಡೆದುಕೊಳ್ಳಬಹುದು ಎಂದು ಅಂದಾಜಿಸಲಾಗಿದೆ.
ಮಂಗಳ ಗ್ರಹದ ಬೃಹತ್ ಕಲ್ಲುಗಳ ಕೆಳಗೆ ಇದೆ ಸರೋವರ, ನಾಸಾದ ಹೊಸ ಶೋಧನೆ!
2031ರವರೆಗೆ ಇದು ಕ್ಷುದ್ರಗ್ರಹವನ್ನು ಸುತ್ತಲಿದ್ದು, ಇದರ ಅಧ್ಯಯನ ನಡೆಸಲಿದೆ. 1.2 ಶತಕೋಟಿ ಡಾಲರ್‌ಅನ್ನು ನಾಸಾ ಈ ಯೋಜನೆಗಾಗಿ ಮೀಸಲಿಟ್ಟಿದೆ. ಹಾಗಂತ ನಾಸಾ ಈ ಕ್ಷುದ್ರಗ್ರಹದಲ್ಲಿರುವ ಸಂಪತ್ತವನ್ನು ಭೂಮಿಗೆ ತರುವುದಾಗಲಿ, ಅಲ್ಲಿ ಗಣಿಗಾರಿಕೆ ಮಾಡುವುದಾಗಲಿ ಯಾವುದೇ ಯೋಚನೆಯಲ್ಲಿಲ್ಲ. ಇಷ್ಟು ಪ್ರಮಾಣ ಲೋಹ ಸಮೃದ್ಧ ಕ್ಷುದ್ರಗ್ರಹ ರೂಪುಗೊಂಡಿರುವುದು ಹೇಗೆ ಎನ್ನುವುದನ್ನು ಅಧ್ಯಯನ ಮಾಡುವ ಗುರಿ ಹೊಂದಿದೆ.
ಇಲ್ಲಿವೆ ನಾಸಾ ರೆಕಮಂಡ್ ಮಾಡಿದ ಗಾಳಿಯನ್ನು ಸ್ವಚ್ಛಗೊಳಿಸುವ 10 ಇಂಡೋರ್ ಪ್ಲಾಂಟ್‌ಗಳು
ಕೆಲವು ಅಂದಾಜಿನ ಪ್ರಕಾರ, ಈ ಕ್ಷುದ್ರಗ್ರಹದ ಪಥವನ್ನು ಭೂಮಿಯತ್ತ ತಿರುಗಿಸಿದರೆ, ಗಣಿಗಾರಿಕೆ ಸಾಧ್ಯವಾಗಬಹುದು ಎನ್ನಲಾಗಿದೆ. ಭೂಮಿಯ ಮೇಲಿನ ಎಲ್ಲಾ ಖನಿಜ ಸಂಪತ್ತು ಖಾಲಿಯಾದ ಬಳಿಕ, ಕ್ಷುದ್ರಗ್ರಹದಿಂದ ಸಂಪತ್ತನ್ನು ಪಡೆಯಲು ಮಾನವ ಯೋಚನೆ ಮಾಡಬಹುದು ಎನ್ನಲಾಗಿದೆ.