* ಮಂಗಳ ಗ್ರಹದ ಬಂಡೆಯ ಮಾದರಿಯೊಂದನ್ನು ಸಂಗ್ರಹಿಸುವ ನಾಸಾ ಪ್ರಯತ್ನ* ಬಂಡೆಯ ಮಾದರಿಯೊಂದನ್ನು ಸಂಗ್ರಹಿಸಿಯ ಭವಿಷ್ಯದ ಅಧ್ಯಯನಕ್ಕೆ ಬಳಸುವ ಯೋಜನೆ* ನೆಲವನ್ನು ಕೊರೆದು ಒಂದಿಷ್ಟುಮಾದರಿ ಸಂಗ್ರಹಿಸಿ ಅದನ್ನು ರವಾನಿಸಿದ್ದ ರೋಬೋಟ್

ವಾಷಿಂಗ್ಟನ್‌(ಆ.08): ಮಂಗಳ ಗ್ರಹದ ಬಂಡೆಯ ಮಾದರಿಯೊಂದನ್ನು ಸಂಗ್ರಹಿಸಿಯ ಭವಿಷ್ಯದ ಅಧ್ಯಯನಕ್ಕೆ ಬಳಸುವ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಮೊದಲ ಯತ್ನ ವಿಫಲವಾಗಿದೆ.

ನಾಸಾ ಹಾರಿಬಿಟ್ಟಿದ್ದ ಪರ್ಸೀವರೆನ್ಸ್‌ ನೌಕೆಯಲ್ಲಿನ ರೋಬೋಟ್‌, ನೆಲವನ್ನು ಕೊರೆದು ಒಂದಿಷ್ಟುಮಾದರಿ ಸಂಗ್ರಹಿಸಿ ಅದನ್ನು ರವಾನಿಸಿತ್ತು. ಆದರೆ ಪರಿಶೀಲನೆ ವೇಳೆ ಅದು ಬಂಡೆಯಲ್ಲ ಎಂಬುದು ಖಚಿತಪಟ್ಟಿದೆ. ಆದರೆ ನಾವು ಮುಂದಿನ ದಿನಗಳಲ್ಲಿ ಯಶಸ್ಸು ಕಾಣುವ ವಿಶ್ವಾಸದಲ್ಲಿದ್ದೇವೆ ಎಂದು ನಾಸಾ ವಿಜ್ಞಾನಿಗಳು ಹೇಳಿಕೊಂಡಿದ್ದಾರೆ.

Scroll to load tweet…

‘ಇದು ನಾವಂದುಕೊಂಡ ರಂಧ್ರವಲ್ಲದಿರಬಹುದು, ಹೊಸ ಸ್ಥಳವನ್ನು ಅಗೆಯುವಾಗ ಅಡ್ಡಿಗಳು ಸಾಮಾನ್ಯ. ಮುಂದಿನ ಬಾರಿ ನಾವು ಈ ಪ್ರಯತ್ನದಲ್ಲಿ ಸಫಲವಾಗುತ್ತೇವೆ ಎಂದು ನಾಸಾದ ಸಹಾಯಕ ನಿರ್ದೇಶಕ ಥಾಮಸ್‌ ಝರ್ಬಚೆನ್‌ ಹೇಳಿದರು.