ವಾಷಿಂಗ್ಟನ್(ಮಾ.30): ಮಂಗಳ ಗ್ರಹದ ಅಧ್ಯಯನಕ್ಕೆ ನಿರ್ಮಿಸಲಾಗಿರುವ ನಾಸಾದ ವಿಶೇಷ ಹೆಲಿಕಾಪ್ಟರ್ ನ ಪ್ರಯೋಗಾರ್ಥ ಪರೀಕ್ಷೆ ಯಶಸ್ವಿಯಾಗಿದೆ.

4 ಪೌಂಡ್(1.8 ಕೆಜಿ) ತೂಕವಿರುವ ಈ ವಿಶೇಷ ಹೆಲಿಕಾಪ್ಟರ್‌ನ್ನು ಅತ್ಯಾಧುನಿಕ ತಂತ್ರಜ್ಞಾನದ ಸಹಾಯದಿಂದ ನಿರ್ಮಿಸಲಾಗಿದ್ದು, ಮಂಗಳ ಗ್ರಹದ ಮೇಲೆ ಕರ್ತವ್ಯ ನಿರ್ವಹಿಸಲು ಸಜ್ಜಾಗಿದೆ ಎಂದು ನಾಸಾ ತಿಳಿಸಿದೆ.

ರಾತ್ರಿ ವೇಳೆಯಲ್ಲಿ ಮಂಗಳ ಗ್ರಹದಲ್ಲಿ -90 ಡಿಗ್ರಿ ಸೆಲ್ಸಿಯಸ್ ಗಿಂತಲೂ ಹಚ್ಚು ಶೀತ ವಾತಾವರಣ ಇರುತ್ತದೆ. ಇಂತಹ ವಾತಾವರಣದಲ್ಲೂ ಈ ಹೆಲಿಕಾಪ್ಟರ್ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದೆ ಎಂದು ನಾಸಾ ತಿಳಿಸಿದೆ.

ಮಾರ್ಸ್ ಹೆಲಿಕಾಪ್ಟರ್‌ನ ಮಾದರಿಯ ಪ್ರಯೋಗಾರ್ಥ ಪರೀಕ್ಷೆ ಯಶಸ್ವಿಯಾಗಿದ್ದು, ಒಟ್ಟು 75 ನಿಮಿಷಗಳ ಹಾರಾಟ ಯಶಸ್ವಿಯಾಗಿದೆ ಎಂದು ನಾಸಾ ಸ್ಪಷ್ಟಪಡಿಸಿದೆ.