ಭೂಮಿಯ ಕಡೆಗೆ ಬರುತ್ತಿರುವ ಅಪಾಯಕಾರಿ ಕ್ಷುದ್ರಗ್ರಹ, ನಾಸಾ ಎಚ್ಚರಿಕೆ!

ನಾಸಾದ ಬಹುನಿರೀಕ್ಷಿತ ಡಾರ್ಟ್ ಮಿಷನ್ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ಇದರ ಬೆನ್ನಲ್ಲಿಯೇ ನಾಸಾ ಅಪಾಯಕಾರಿ ಕ್ಷುದ್ರಗ್ರಹವೊಂದು, ಮಂಗಳವಾರ ಭೂಮಿಗೆ ಅಪ್ಪಳಿಸಲಿದೆ ಎಂದು ಎಚ್ಚರಿಕೆ ನೀಡಿದೆ.
 

nasa issues warning dangerous asteroid hurtling towards earth today sept 27 san

ನ್ಯೂಯಾರ್ಕ್‌ (ಸೆ. 27): ಕಳೆದ ಕೆಲವು ವಾರಗಳಿಂದ ಬಾಹ್ಯಾಕಾಶದಲ್ಲಿ ಮಾನವನ ಸಾಕಷ್ಟು ಚಟುವಟಿಕೆಗಳು ನಡೆಯುತ್ತಿವೆ. ಭೂಮಿಯತ್ತ ಮುಂದಿನ ದಿನಗಳಲ್ಲಿ ಬರಲಿದ್ದ ಬೃಹತ್‌ ಕ್ಷುದ್ರಗ್ರಹವನ್ನು ಡಾರ್ಟ್‌ ಮಿಷನ್‌ ಬಳಸಿಕೊಂಡು ಅದರ ದಾರಿ ತಪ್ಪಿಸಲು ಯಶಸ್ವಿಯಾದ ಬೆನ್ನಲ್ಲಿಯೇ, ಮತ್ತೊಂದು ಕ್ಷುದ್ರಗ್ರಹ ಭೂಮಿಗೆ ಮಂಗಳವಾರ ಅಪ್ಪಳಿಸಲಿದೆ ಎಂದು ಎಚ್ಚರಿಕೆ ನೀಡಿದೆ. ಬಾಹ್ಯಾಕಾಶ ನೌಕೆಯನ್ನು ಬಳಸಿಕೊಂಡು ಡಿಮೋಫಾರ್ಸ್‌ ಕ್ಷುದ್ರಗ್ರಹವನ್ನು ಅದರ ಪಥದಿಂದ ಹೊರಹಾಕಲು ನಾಸಾ ತನ್ನ ಮೊದಲ ಗ್ರಹಗಳ ರಕ್ಷಣಾ ಪರೀಕ್ಷೆಯ ವ್ಯವಸ್ಥೆಯ ಪರೀಕ್ಷೆಯನ್ನೂ ಈ ಮೂಲಕ ಯಶಸ್ವಿ ಮಾಡಿದೆ. ಸಂಭಾವ್ಯ ಕ್ಷುದ್ರಗ್ರಹವನ್ನು ಅದರ ಪಥದಿಂದ ಹೊರಹಾಕಲು ಬಾಹ್ಯಾಕಾಶ ಸಂಸ್ಥೆಯೊಂದು ಮಾಡಿದ ಮೊದಲ ಪ್ರಯತ್ನ ಇದಾಗಿದೆ. ಡಿಮೋಫಾರ್ಸ್‌ನಷ್ಟು ದೊಡ್ಡದಾದ ಕ್ಷುದ್ರಗ್ರಹವು ಭೂಮಿಯ ಸಮೀಪ ಸದ್ಯದ ಮಟ್ಟಿಗೆ ಬರುವುದಿಲ್ಲವಾದರೂ, ಚಿಕ್ಕ ಚಿಕ್ಕ ಕ್ಷುದ್ರಗಳು ಆಗಾಗ ಭೂಮಿಗೆ ಬಂದು ಅಪ್ಪಳಿಸುವುದು ನಡೆಯುತ್ತಲೇ ಇರುತ್ತದೆ. ಈಗ ನಾಸಾ ನೀಡಿರುವ ಎಚ್ಚರಿಕೆಯ ಪ್ರಕಾರ, ಒಂದು ಪುಟ್ಟ ಕ್ಷುದ್ರಗ್ರಹವು ಮಂಗಳವಾರ ಭೂಮಿಗೆ ಅಪ್ಪಳಿಸಬಹುದು ಎಂದು ಅಂದಾಜಿಸಿದೆ. ಈ ಕುರಿತಾಗಿ ಕಳೆದ ಕೆಲವು ವಾರಗಳಿಂದಲೂ ನಾಸಾ ಎಚ್ಚರಿಕೆ ನೀಡುತ್ತಲೇ ಇತ್ತು.

ಭೂಮಿಯತ್ತ ಬರುತ್ತಿರುವ 2022 ಎಸ್‌ಜಡ್‌2 ಕ್ಷುದ್ರಗ್ರಹ: ಸೆಪ್ಟೆಂಬರ್‌ 27 ಅಂದರೆ ಇಂದು ಅಂದಾಜು ಒಂದು ಮನೆಯಷ್ಟು ದೊಡ್ಡದಾದ ಕ್ಷುದ್ರಗ್ರಹವೊಂದು ಭೂಮಿಯತ್ತ ಬರುತ್ತಿದೆ ಎಂದು ನಾಸಾ ಎಚ್ಚರಿಕೆ ರವಾನಿಸಿದೆ. ಈಗಾಗಲೇ ಈ ಕ್ಷುದ್ರಗ್ರಹವು ತನ್ನ ಪಥದಲ್ಲಿದೆ. ಗಂಟೆಗೆ 12, 276 ಕಿಲೋಮೀಟರ್‌ ವೇಗದಲ್ಲಿ ಇದು ಭೂಮಿಯತ್ತ ಬರುತ್ತಿದೆ. ಇದು ಅಂದಾಜು ಹೈಪರ್‌ಸಾನಿಕ್‌ ಖಂಡಾಂತರ ಕ್ಷಿಪಣಿಯಷ್ಟು ವೇಗ ಎಂದು ಹೇಳಲಾಗಿದೆ. ನಾಸಾದ ಪ್ರಕಾರ, ಈ ಕ್ಷುದ್ರಗ್ರಹವು ಇಂದು ಭೂಮಿಗೆ ಅತ್ಯಂತ ಸಮೀಪದ ಸ್ಥಳಕ್ಕೆ ಬರಲಿದೆ. ಕೇವಲ 566, 000 ಕಿಲೋಮೀಟರ್‌ ದೂರ ಅಥವಾ 0.00379852 ಖಗೋಳ ಘಟಕದ ದೂರದಲ್ಲಿ ಬರಲಿದೆ ಎಂದು ಹೇಳಿದೆ. ಇದು ಚಂದ್ರನಿಂದ ಕೆಲವೇ ಲಕ್ಷ ಕಿಲೋಮೀಟರ್‌ಗಳ ದೂರ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

ದಿ ಸ್ಕೈ ಲೈವ್‌ ಡಾಟ್‌ಕಾಮ್‌ ಪ್ರಕಾರ, 2022 ಎಸ್‌ಜಡ್‌2 ಕ್ಷುದ್ರಗ್ರಹ ಪ್ರಸ್ತುತ ನಮ್ಮಿಂದ 594, 860 ಕಿಲೋಮೀಟರ್‌ ದೂರದಲ್ಲಿದೆ. ಇದು 0.003976 ಖಗೋಳ ಘಟಕಕ್ಕೆ ಸಮನಾಗಿರುತ್ತದೆ. ಈ ಕ್ಷುದ್ರಗ್ರಹ (ಎನ್‌ಇಓ) 2022 ಎಸ್‌ಜಡ್‌2ನಿಂದ ಭೂಮಿಗೆ ಬೆಳಕು ಪ್ರಯಾಣಿಸಲು 1. 9842 ಸೆಕೆಂಡ್‌ಗಳಷ್ಟು ಬೇಕಾಗಬಹುದು. ಖಗೋಳ ಘಟಕ ಎನ್ನುವುದು (astronomy Unit) ಮೂಲತಃ ಭೂಮಿ ಮತ್ತು ಸೂರ್ಯನ ನಡುವಿನ ಅಥವಾ ಸರಾಸರಿ ಅಂತರಕ್ಕೆ ಸಮಾನವಾದ ಉದ್ಧದ ಘಟಕ ಎನ್ನಲಾಗುತ್ತದೆ. ಅಂದರೆ, 149, 597, 870.7 ಕಿಲೋಮೀಟರ್‌.

ನಾಸಾ ಚಂದ್ರಯಾನಕ್ಕೆ ತಾಂತ್ರಿಕ ದೋಷ: ಆರ್ಟೆಮಿಸ್‌ 1 ಯೋಜನೆ ಮುಂದೂಡಿಕೆ

ಈ 2022 ಎಸ್‌ಜಡ್‌2 ಹೆಸರಿನ ಕ್ಷುದ್ರಗ್ರಹವು, ಭೂಮಿಯ ಅನಿಹ ಅಂದರೆ 3.51 ಲಕ್ಷ ಮೈಲಿ ದೂರದಿಂದ ಹಾದು ಹೋಗಬಹುದು ಎಂದು ನಾಸಾ ಅಂದಾಜಿಸಿದೆ. 30 ಫೀಟ್‌ ಉದ್ದವಿರುವ ಕ್ಷುದ್ರಗ್ರಹ ಇದಾಗಿದೆ. ಅದೇ ರೀತಿ, 2022 ಎಸ್‌ಡಿ10 ಕ್ಷುದ್ರಗ್ರಹವು ಕೂಡ ಮಂಗಳವಾರ ಭೂಮಿಯ ಸನಿಹದಿಂದ ಹಾದು ಹೋಗಲಿದೆ. ಇದರ ಅಂದಾಜು ಗಾತ್ರ 40 ಫೀಟ್‌ ಆಗಿದೆ. ಅಂದಾಜು 1,170,000 ಕಿಲೋಮೀಟರ್‌ ದೂರದಿಂದ ಇದು ಹಾದು ಹೋಗಲಿದೆ. 

James Webb Telescope ತೆಗೆದ ಅದ್ಭುತ ಚಿತ್ರ, ಬಾಹ್ಯಾಕಾಶದಲ್ಲಿ ಕಂಡಿತು ಕೃಷ್ಣನ ಸುದರ್ಶನ ಚಕ್ರ!

ಮಂಗಳವಾರ ಮುಂಜಾನೆ ಮೊದಲ ಬಾರಿಗೆ ಮಾನವ ಬಾಹ್ಯಾಕಾಶ ನೌಕೆ ಬಳಸಿ ಕ್ಷುದ್ರಗ್ರಹಕ್ಕೆ ಡಿಕ್ಕಿ ಹಡೆಸಿದ್ದಾನೆ ನಾಸಾದ ಬಾಹ್ಯಾಕಾಶ ನೌಕೆ DART ಇಂದು ಭಾರತೀಯ ಕಾಲಮಾನ ಮುಂಜಾನೆ 4:44 ಕ್ಕೆ ಡೈಮಾರ್ಫಸ್ ಹೆಸರಿನ ಕ್ಷುದ್ರಗ್ರಹಕ್ಕೆ ಡಿಕ್ಕಿ ಹೊಡೆದಿದೆ. ಕ್ಷುದ್ರಗ್ರಹವು ಬೆದರಿಕೆಯಾಗಿ ಭೂಮಿಯ ಕಡೆಗೆ ಚಲಿಸುವ ಮಾರ್ಗವನ್ನು ಬದಲಾಯಿಸುವ ಮೊದಲ ಪರೀಕ್ಷೆಯಾಗಿದೆ. ನಾಸಾದ 42 ಅಡಿ ಮತ್ತು 570 ಕೆಜಿ ಬಾಹ್ಯಾಕಾಶ ನೌಕೆ DART 2560 ಅಡಿ ಮತ್ತು 5 ಶತಕೋಟಿ ಕೆಜಿ ಕ್ಷುದ್ರಗ್ರಹ ಡಿಮಾರ್ಫಸ್‌ಗೆ ಡಿಕ್ಕಿ ಹೊಡೆದಿದೆ. ಈ ಘರ್ಷಣೆಯು ಭೂಮಿಯಿಂದ ಸುಮಾರು 11 ಮಿಲಿಯನ್ ಕಿಲೋಮೀಟರ್ ದೂರದಲ್ಲಿ ಸಂಭವಿಸಿದೆ. ನಾಸಾ ಪ್ರಕಾರ, ಡಾರ್ಟ್ ಸುಮಾರು 22.5 ಸಾವಿರ ಕಿಮೀ / ಗಂ ವೇಗದಲ್ಲಿ ಕ್ಷುದ್ರಗ್ರಹದೊಂದಿಗೆ ಡಿಕ್ಕಿ ಹೊಡೆದಿದೆ.

Latest Videos
Follow Us:
Download App:
  • android
  • ios