ಆಲ್ಮಟಿ[ಫೆ.07]: ಕಳೆದ 11 ತಿಂಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ವಾಸವಿದ್ದ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಗಗನಯಾತ್ರಿ ಕ್ರಿಸ್ಟಿನಾ ಕೋಚ್‌ ಗುರುವಾರ ಸುರಕ್ಷಿತವಾಗಿ ಭೂಮಿಗೆ ಮರಳಿದರು. ಈ ಮೂಲಕ ಬಾಹ್ಯಾಕಾಶದಲ್ಲಿ ಮಹಿಳಾ ಗಗನಯಾತ್ರಿಯೊಬ್ಬರು ಅತೀ ದೀರ್ಘಕಾಲೀನ ಯಾತ್ರೆ ಕೈಗೊಂಡ ಕೀರ್ತಿ ಕೋಚ್‌ ಅವರ ಪಾಲಾಗಿದೆ.

2016-17ರಲ್ಲಿ ನಾಸಾದ ಹಿರಿಯ ಗಗನಯಾತ್ರಿ ಪೆಗ್ಗಿ ವಿಟ್ಸನ್‌ 289 ದಿನಗಳ ಕಾಲ ಬಾಹ್ಯಾಕಾಶದಲ್ಲಿ ವಾಸವಿದ್ದಿದ್ದು ಇದುವರೆಗಿನ ದಾಖಲೆಯಾಗಿತ್ತು. ಯುರೋಪ್‌ನ ಬಾಹ್ಯಾಕಾಶವಾಗಿರುವ ಲೂಕಾ ಪರ್ಮಿಟನೊ ಹಾಗೂ ರಷ್ಯಾದ ಅಲೆಕ್ಸಾಂಡರ್‌ ಸ್ಕೊ$್ವಟ್ರ್ಸೊವ್‌ ಬಾಹ್ಯಾಕಾಶ ಸಂಸ್ಥೆಗಳೊಂದಿಗೆ ಬಾಹ್ಯಾಕಾಶದಲ್ಲಿ 328 ದಿನಗಳ ಕಾಲ ಕಾಲ ಕಳೆದಿರುವ ಕೋಚ್‌ ಅವರು ಗುರುವಾರ ಬೆಳಗ್ಗೆ 9.12 ನಿಮಿಷಕ್ಕೆ ಭೂಮಿ ಮೇಲೆ ಕಾಲಿಟ್ಟರು.

ಸೂರ್ಯಾಸ್ತದ ನೆರಳಲ್ಲಿ ಮಿಲ್ಕಿ ವೇ : ಗ್ರ್ಯಾಂಡ್ ಕ್ಯಾನ್ಯನ್ ಮಡಿಲಲ್ಲಿ ಮಲಗಿದ ಕ್ಷಿರಪಥ!

ಕಳೆದ ವರ್ಷದ ಮಾಚ್‌ರ್‍ 14ರಂದು ಕೋಚ್‌ ಅವರು ಬಾಹ್ಯಾಕಾಶ ಯಾತ್ರೆಗೆ ತೆರಳಿದ್ದರು.