ಚಿನ್ನ ಎಂದು ಕಲ್ಲನ್ನು ಮನೆಯಲ್ಲಿಟ್ಟ ವ್ಯಕ್ತಿಗೆ ಜಾಕ್‌ಪಾಟ್, ವಿಜ್ಞಾನಿಗಳಿಂದ ರಹಸ್ಯ ಬಯಲು!
ವಿಶೇಷವಾಗಿ ಕಂಡ ಕಲ್ಲೊಂದನ್ನು ಕಳೆದ ಹಲವು ವರ್ಷಗಳಿಂದ ಜೋಪಾನವಾಗಿಟ್ಟುಕೊಂಡಿದ್ದ ವ್ಯಕ್ತಿಯ ಅದೃಷ್ಠ ಖುಲಾಯಿಸಿದೆ. ಇದು ಚಿನ್ನ ಅಲ್ಲ, ಆದರೆ ಚಿನ್ನಕ್ಕಿಂತ ದುಬಾರಿ ಎಂದು ವಿಜ್ಞಾನಿಗಳು ಈ ಕಲ್ಲನ್ನು ವಶಕ್ಕೆ ಪಡೆದ ಘಟನೆ ನಡೆದಿದೆ.
ಮೆಲ್ಬೋರ್ನ್(ಡಿ.31) ಭೂಮಿಯಲ್ಲಿ ಸಿಗುವ ವಿಶೇಷ ಕಲ್ಲು,ಶಿಲೆಗಳನ್ನು ಸಂಗ್ರಹಿಸುವ ಹವ್ಯಾಸ. ಹೀಗೆ ಸಂಗ್ರಹಿಸುವಾಗ ಕಡು ಬಣ್ಣದ ಕಲ್ಲೊಂದು ಈತನ ಗಮನ ಸೆಳೆದಿದೆ. ಈ ಕಲ್ಲನ್ನು ಮನೆಗೆ ತಂದ ಈತ ಬರೋಬ್ಬರಿ 9 ವರ್ಷಗಳಿಂದ ಜೋಪಾನವಾಗಿಟ್ಟಿದ್ದಾನೆ. ಇಷ್ಟೇ ಅಲ್ಲ ಈ ಕಲ್ಲಿನ ಒಳಗೆ ಚಿನ್ನ ಇರಬಹುದು ಎಂದು ಒಡೆಯುವ ಪ್ರಯತ್ನ ಮಾಡಿದ್ದಾನೆ. ಎಲ್ಲಾ ಸಾಧನಗಳ ಮೂಲಕ ಪ್ರಯತ್ನಿಸಿದರೂ ಸಫಲವಾಗಿಲ್ಲ. 17 ಕೆಜಿ ತೂಕದ ಈ ಕಲ್ಲುನ್ನು ಒಡೆಯಲು, ಪುಡಿ ಮಾಡುವ ಮಾತು ಬಿಡಿ, ಒಂದು ಸಣ್ಣ ಬಿರುಕು ಕೂಡ ಮೂಡಲಿಲ್ಲ. ಕೊನೆಗೆ ಕಲ್ಲು ಸೇರಿದಂತೆ ಶಿಲೆಗಳ ವಸ್ತುಸಂಗ್ರಹಾಲಯಕ್ಕೆ ಕೊಂಡೊಯ್ದ ಈತನಿಗೆ ಅಚ್ಚರಿಯಾಗಿದೆ. ಕಾರಣ ಈ ಕಲ್ಲನ್ನು ಪರಿಶೀಲಿಸಿದ ವಿಜ್ಞಾನಿಗಳು ಇದೀಗ 1000 ವರ್ಷಗಳ ಹಿಂದೆ ಭೂಮಿಗೆ ಬಿದ್ದ ಉಲ್ಕಾ ಶಿಲೆ ಎಂದಿದ್ದಾರೆ. ಇದು ಚಿನ್ನಕ್ಕಿಂತ ಹಲವು ಪಟ್ಟು ದುಬಾರಿ ಎಂದಿದ್ದಾರೆ.
ಆಸ್ಟ್ರೇಲಿಯಾದ ಡೇವಿಡ್ ಹೊಲ್ 2015ರಲ್ಲಿ ಜಮೀನಿನಲ್ಲಿ ಈ ವಸ್ತು ಪತ್ತೆಯಾಗಿದೆ. ನೋಡಲು ಕಲ್ಲಿನ ರೀತಿಯಲ್ಲಿದೆ. ತೂಕ 17 ಕೆಜಿ.ಕೊಂಚ ಕೆಂಪು ಬಣ್ಣ ಮಿಶ್ರಿತ ಈ ಕಲ್ಲು ಮೊದಲ ನೋಟದಲ್ಲೇ ಡೇವಿಡ್ ಹೊಲ್ ಆಕರ್ಷಿಸಿತ್ತು. ಹೀಗಾಗಿ ಇದನ್ನು ಸಂಗ್ರಹಿಸಿ ಮನೆಗೆ ತಂದಿದ್ದ. ಈ ಕಲ್ಲಿನ ಒಳಗೆ ಚಿನ್ನ ಇರುವ ಸಾಧ್ಯತೆ ಇದೆ ಎಂದು ಮನೆಗೆ ತಂದು ಒಡೆಯುವ ಪ್ರಯತ್ನ ಮಾಡಿದ್ದ. ಆದರೆ ಅದೇನೆ ಮಾಡಿದರೂ ಈ ಕಲ್ಲು ಒಡೆಯಲು ಸಾಧ್ಯವಾಗಿಲ್ಲ.
ಮನೆ ಮೇಲೆ ಬಿದ್ದ ಕಲ್ಲು ಮಾರಾಟ ಮಾಡಿ ಕೋಟ್ಯಾಧಿಪತಿಯಾದ ವ್ಯಕ್ತಿ!
2025ರಿಂದ 2024ರ ವರೆಗೆ ಮನೆಯಲ್ಲಿಟ್ಟುಕೊಂಡ ಈ ಕಲ್ಲನ್ನು ಹಲವು ಮಶಿನ್ ಮೂಲಕ ಒಡೆಯಲು ಪ್ರಯತ್ನಿಸಿದ್ದಾನೆ. ಕೊನೆಗೆ ಆ್ಯಸಿಡ್ ಸೇರಿದಂತೆ ಇತರ ರಾಸಾಯನಿಕ ವಸ್ತುಗಳ ಮೂಲಕ ಒಡೆಯಲು ಪ್ರಯತ್ನಿಸಿದ್ದಾನೆ. ಯಾವುದೂ ಸಾಧ್ಯವಾಗಿಲ್ಲ. ಬರೋಬ್ಬರಿ 9 ವರ್ಷಗಳ ಪ್ರಯತ್ನ ವಿಫಲಗೊಂಡಿದೆ. 17 ಕೆಜಿ ತೂಕದ ಈ ಕಲ್ಲು ಒಂದಿಷ್ಟು ಬಣ್ಣ ಮಾಸದೆ, ಆಕಾರವೂ ಬದಲಾಗದೆ ಹಾಗೇ ಉಳಿದುಕೊಂಡಿದೆ. ತನ್ನಿಂದ ಇನ್ನೇನು ಮಾಡಲು ಸಾಧ್ಯವಿಲ್ಲ ಎಂದು ಅರಿತ ಡೇವಿಡ್ ನೇರವಾಗಿ ಮೆಲ್ಬೋರ್ನ್‌ನಲ್ಲಿರುವ ವಸ್ತುಸಂಗ್ರಹಾಲಯಕ್ಕೆ ಈ ಕಲ್ಲನ್ನು ಕೊಂಡೊಯ್ದಿದ್ದಾನೆ.
ಸಂಗ್ರಹಾಲಯದ ವಿಜ್ಞಾನಿಗಳ ಬಳಿ ಈ ಕಲ್ಲು ಒಡೆಯಲು ಸಾಧ್ಯವಾಗುತ್ತಿಲ್ಲ. ಎಲ್ಲಾ ಪ್ರಯತ್ನಗಳ ಬಳಿಕವೂ ಹಾಗೇ ಇದೆ ಎಂದಿದ್ದಾನೆ. ಈ ಕಲ್ಲನ್ನು ಒಮ್ಮೆ ಪರಿಶೀಲಿಸಲು ಮನವಿ ಮಾಡಿದ್ದಾನೆ. ಈತನ ಮನವಿ ಪುರಸ್ಕರಿಸಿದ ಮೆಲ್ಬೋರ್ನ್ ವಸ್ತುಸಂಗ್ರಹಾಲಯದ ವಿಜ್ಞಾನಿಗಳು ಕಲ್ಲು ಪರಿಶೀಲಿಸಲು ಮುಂದಾಗಿದ್ದಾರೆ. ಮೊದಲ ನೋಟದಲ್ಲಿ ಈ ಕಲ್ಲು ವಿಜ್ಞಾನಿಗಳ ಅಚ್ಚರಿಗೆ ಕಾರಣವಾಗಿದೆ. ಬಳಿಕ ವೈಜ್ಞಾನಿಕ ತಪಾಸಣೆ ಆರಂಭಿಸಿದ್ದಾರೆ.
ಸಂಶೋಧನೆ ಮುಂದುವರಿದಿದೆ. ಕಲ್ಲಿನ ಇಂಚಿಂಚು ಪರಿಶೋಧಿಸಿದ್ದಾರೆ. ವೈಜ್ಞಾನಿಕ ಪರೀಕ್ಷೆಗಳು ಆರಂಭಗೊಂಡಿದೆ. ಪರೀಕ್ಷೆಗಳು ಆರಂಭಗೊಳ್ಳುತ್ತಿದ್ದಂತೆ ವಿಜ್ಞಾನಿಗಳು ಪುಳಕಿತರಾಗಿದ್ದಾರೆ. ಕಾರಣ ಇದು ಗ್ರಹಗಳಿಂದ ಬಿದ್ದ ಉಲ್ಕಾ ಶಿಲೆ ಅನ್ನೋದು ದೃಢಪಟ್ಟಿದೆ. ಕಬ್ಬಿಣ ಹಾಗೂ ಸ್ಫಟಿಕದಂತ ಖನಿಜಗಳಿಂದ ಕೂಡಿ ಉಲ್ಕಾ ಶಿಲೆ. 17 ಕೆಜಿ ತೂಕದ ಈ ಕಲ್ಲು ಮೇರಿಬರೋ ಉಲ್ಕಾಶಿಲೆ ಅನ್ನೋದನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಮತ್ತೊಂದು ವಿಶೇಷ ಅಂದರೆ ಬರೋಬ್ಬರಿ 4.6 ಶತಕೋಟಿ ವರ್ಷಗಳ ಹಳೆಯದಾದ H5 ಕೊಂಡ್ರೈಟ್( ಬದಲಿಸಲು, ಕರಗಿಸಲು, ಯಾವದೇ ರೀತಿಯಲ್ಲೂ ವಿರೂಪಗೊಳಿಸಲು ಸಾಧ್ಯವಾಗದ ಉಲ್ಕಾಶಿಲೆ)ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಇದು ಅತ್ಯತ ಅಪರೂಪದ ಹಾಗೂ ಅಸಾಧಾರಣ ಉಲ್ಕಾ ಶಿಲೆಯಾಗಿದೆ. ಇದರ ಬೆಲೆ ಚಿನ್ನಕ್ಕಿಂತ ಹಲವು ಪಟ್ಟು ಹೆಚ್ಚು. 17 ಕೆಜಿಯ ಉಲ್ಕಾ ಶಿಲೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಮಿಲಿಯನ್ ಡಾಲರ್‌ಗಿಂತ ಹೆಚ್ಚು ಎಂದು ವಿಜ್ಞಾನಿಗಳು ಇದರ ಮೌಲ್ಯ ಅಂದಾಜು ಮಾಡಿದ್ದಾರೆ.
ಶನಿಗ್ರಹದಂತೆ ಭೂಮಿಗೂ ಉಂಗುರಗಳಿದ್ದವು, ವಿಜ್ಞಾನಿಗಳ ಸಂಶೋಧನೆಯಿಂದ ಬಹಿರಂಗ!