ಜೂನ್ 14ಕ್ಕೆ ಆಗಸದಲ್ಲಿ ಕಾಣಲಿದೆ ಸ್ಟ್ರಾಬೆರಿ ಮೂನ್!
ರೋಸ್ ಮೂನ್, ಹಾಟ್ ಮೂನ್, ಹನಿ ಮೂನ್ ಅಥವಾ ಮೀಡ್ ಮೂನ್ ಎನ್ನುವ ಹೆಸರಿನಿಂದಲೂ ಸ್ಟ್ರಾಬೆರಿ ಮೂನ್ ಅನ್ನು ಕರೆಯಲಾಗುತ್ತದೆ. ವರ್ಷದ ಈ ಸಮಯದಲ್ಲಿ ಅಂದರೆ, ಸ್ಟ್ರಾಬೆರಿ ಹೆಕ್ಕುವ ಸೀಸನ್ ನಲ್ಲಿ ಕಾಣಿಸಿಕೊಳ್ಳುವ ಸೂಪರ್‌ಮೂನ್ ಕಾರಣಕ್ಕಾಗಿ ಸ್ಟ್ರಾಬೆರಿ ಮೂನ್ ಎನ್ನುವ ಹೆಸರು ಬಂದಿದೆ.
ನವದೆಹಲಿ (ಜೂನ್ 13): ಇನ್ನೇನು ಕೆಲವೇ ದಿನಗಳಲ್ಲಿ ಜೂನ್ ತಿಂಗಳ ಹುಣ್ಣಿಮೆ ಬರಲಿದೆ. ಆದರೆ, ಆಕಾಶಕಾಯಗಳ ಕುರಿತಾಗಿ ಆಸಕ್ತಿ ಇರುವ ವ್ಯಕ್ತಿಗಳಿಗೆ ಈ ತಿಂಗಳ ಹುಣ್ಣಮೆ ಬಹಳ ವಿಶೇಷ. ಯಾಕೆಂದರೆ, ಈ ಬಾರಿ ಕಾಣಿಸಿಕೊಳ್ಳಲಿರುವುದು ಸ್ಟ್ರಾಬೆರಿ ಮೂನ್ (Strawberry Moon).
ಸ್ಟ್ರಾಬೆರಿ ಚಂದ್ರನನ್ನು ರೋಸ್ ಮೂನ್, ಹಾಟ್ ಮೂನ್, ಹನಿ ಮೂನ್ ಅಥವಾ ಮೀಡ್ ಮೂನ್ ಎಂದೂ ಕರೆಯಲಾಗುತ್ತದೆ. ವರ್ಷದ ಈ ಸಮಯದಲ್ಲಿ ಅಂದರೆ, ಸ್ಟ್ರಾಬೆರಿ ಹೆಕ್ಕುವ ಸೀಸನ್ ನಲ್ಲಿ ಕಾಣಿಸಿಕೊಳ್ಳುವ ಸೂಪರ್‌ಮೂನ್ ಕಾರಣಕ್ಕಾಗಿ ಸ್ಟ್ರಾಬೆರಿ ಮೂನ್ ಎನ್ನುವ ಹೆಸರು ಬಂದಿದೆ. ಏಕೆಂದರೆ ಜೂನ್ ತಿಂಗಳು ಸ್ಟ್ರಾಬೆರಿಗಳನ್ನು ಕೊಯ್ಲು ಮಾಡಲು ಸಿದ್ಧವಾಗಿರುವ ತಿಂಗಳು. ವರ್ಷದ ಈ ಸಮಯದಲ್ಲಿ ಜೇನನ್ನು (Honey) ಕೂಡ ಕೊಯ್ಲು ಮಾಡಲಿರುವ ಕಾರಣ ಇದನ್ನು ಹನಿ ಮೂನ್ ಎಂದೂ ಕರೆಯಲಾಗುತ್ತದೆ.
ಸ್ಟ್ರಾಬೆರಿ ಮೂನ್ ಕಾಣುವ ದಿನವನ್ನು ಉತ್ತರ (North) ಹಾಗೂ ಪಶ್ಚಿಮ (Western) ಭಾರತದ ಜನರು ವಟ ಪೂರ್ಣಿಮ (Vat Purnima) ಹಬ್ಬವನ್ನು ಆಚರಣೆ ಮಾಡುತ್ತಾರೆ. ವಟ್ ಪೂರ್ಣಿಮೆಯ ದಿನವು ಸಾವಿತ್ರಿ ಮತ್ತು ಸತ್ಯವಾನರ ದಂತಕಥೆಯನ್ನು ಆಧರಿಸಿದೆ ಮತ್ತು ಈ ದಿನದಂದು, ಅನೇಕ ಭಾರತೀಯ ಮಹಿಳೆಯರು ತಮ್ಮ ಸಂಗಾತಿಯ ದೀರ್ಘಾಯುಷ್ಯಕ್ಕಾಗಿ ಉಪವಾಸ ಮಾಡುತ್ತಾರೆ.
ಯಮರಾಜನಿಗೆ ಸವಾಲು ಹಾಕಿ ಸಾವಿತ್ರಿ ತನ್ನ ಪತಿ ಸತ್ಯವಾನನ್ನು ಉಳಿಸಿಕೊಂಡಿದ್ದಳು ಆ ಕಾರಣಕ್ಕಾಗಿ ವಟ ಪೂರ್ಣಿಮೆಯ ದಿನದಂದು ಸಾವಿತ್ರಿಯನ್ನು ಭಾರತೀಯ ಹೆಣ್ಣುಮಕ್ಕಳು ಪೂಜೆ ಮಾಡುತ್ತಾರೆ. ಆ ದಿನವಿಡೀ ವಿವಾಹಿತ ಮಹಿಳೆಯರು ಉಪವಾಸ ಮಾಡುತ್ತಾರೆ.
ಚಂದ್ರನ ಹಂತಗಳು ಬಹುತೇಕ ಪ್ರತಿ ತಿಂಗಳು ಸಂಭವಿಸುತ್ತವೆ. ಭೂಮಿಯು ಅವುಗಳ ನಡುವೆ ಇರುವಾಗ ಚಂದ್ರನು ಸೂರ್ಯನ ಎದುರು ಇರುವಾಗ ಇದು ಸಂಭವಿಸುತ್ತದೆ. ಈ ಸಮಯದಲ್ಲಿ, ಭೂಮಿಗೆ ಎದುರಾಗಿರುವ ಚಂದ್ರನ ಭಾಗವು ಪ್ರಕಾಶಮಾನವಾಗಿ ಸಂಪೂರ್ಣ ವೃತ್ತವನ್ನು ರೂಪಿಸುತ್ತದೆ.
ಜ್ಯೇಷ್ಠ ಮಾಸದ ಸೂಪರ್ ಮೂನ್; ಈ ಖಗೋಳ ಕೌತುಕ ನೋಡಿ ಸಂತೋಷಪಡಿ
ತನ್ನ ಗಾತ್ರದ ಕಾರಣಕ್ಕಾಹಿ ಜೂನ್‌ನ ಸ್ಟ್ರಾಬೆರಿ ಚಂದ್ರನನ್ನು "ಸೂಪರ್ ಮೂನ್" ಎಂದೂ ಕರೆಯಲಾಗುತ್ತದೆ ಈ ಸಮಯದಲ್ಲಿ ಸೂಪರ್ ಮೂನ್ ಅದರ ಕಕ್ಷೆಯಲ್ಲಿ ಭೂಮಿಗೆ ಹತ್ತಿರದಲ್ಲಿದೆ. ಈ ವರ್ಷ, ಸ್ಟ್ರಾಬೆರಿ ಚಂದ್ರನು ಜೂನ್ 14 ರಂದು 7:52 am EDT (ಈಸ್ಟರ್ನ್ ಡೇಲೈಟ್ ಸಮಯ) ಯಲ್ಲಿ ಆಕಾಶದಲ್ಲಿ ಕಾಣಿಸಿಕೊಳ್ಳುತ್ತಾನೆ. ಆದಾಗ್ಯೂ, ಚಂದ್ರನು ಒಂದು ದಿನ ಮೊದಲು ಮತ್ತು ನಂತರ ಪೂರ್ಣವಾಗಿ ಗೋಚರಿಸುತ್ತಾನೆ. ಇದರರ್ಥ ಜೂನ್ 13 ಮತ್ತು ಜೂನ್ 15 ರಂದು ಚಂದ್ರನು ಸಂಪೂರ್ಣವಾಗಿ ಕಾಣಿಸಿಕೊಳ್ಳುತ್ತಾನೆ.
ಇಂದು ವರ್ಷದ ಮೊದಲ ಚಂದ್ರಗ್ರಹಣ:ಹಲವೆಡೆ ಬ್ಲಡ್ ಮೂನ್ ಗೋಚರ
ಚಂದ್ರನು ಭಾರತೀಯ ಕಾಲಮಾನ ಸಂಜೆ 5:22 ರ ಸುಮಾರಿಗೆ ತನ್ನ ಉತ್ತುಂಗವನ್ನು ತಲುಪುತ್ತಾನೆ ಆದರೆ ಒಂದು ರಾತ್ರಿ ಮೊದಲು ಮತ್ತು ನಂತರ ಸಮಾನವಾಗಿ ಸುಂದರವಾಗಿ ಕಾಣುತ್ತಾನೆ. ಜನರು ಬೈನಾಕ್ಯುಲರ್‌ಗಳನ್ನು ಬಳಸಿಕೊಂಡು ಸೊಗಸಾದ ಸ್ಟ್ರಾಬೆರಿ ಚಂದ್ರನನ್ನು ವೀಕ್ಷಿಸಬಹುದು.