Viral Video: ಆಗಸದಲ್ಲೇ ಬೆಂಕಿ ಚೆಂಡು; ಜಪಾನ್‌ನ ಸ್ಪೇಸ್ ಒನ್ ಕೈರೋಸ್ ರಾಕೆಟ್ ಉಡಾವಣೆ ಮತ್ತೆ ವಿಫಲ!
ಜಪಾನ್‌ನ ಮೊದಲ ಖಾಸಗಿ ಬಾಹ್ಯಾಕಾಶ ಕಂಪನಿ ಸ್ಪೇಸ್ ಒನ್‌ನ ಕೈರೋಸ್ ರಾಕೆಟ್ ಉಡಾವಣೆ ಎರಡನೇ ಬಾರಿ ವಿಫಲವಾಗಿದೆ. ಉಡಾವಣೆಯಾದ ಕೆಲವೇ ನಿಮಿಷಗಳಲ್ಲಿ ರಾಕೆಟ್ ನಿಯಂತ್ರಣ ತಪ್ಪಿ ಆಕಾಶದಲ್ಲಿಯೇ ಸ್ಫೋಟಗೊಂಡಿದೆ.
ನವದೆಹಲಿ (ಡಿ.21): ಜಪಾನ್‌ನ ಖಾಸಗಿ ಬಾಹ್ಯಾಕಾಶ ಕಂಪನಿ ಸ್ಪೇಸ್ ಒನ್‌ನ ಕೈರೋಸ್ ರಾಕೆಟ್ ಉಡಾವಣೆ ಎರಡನೇ ಬಾರಿ ವಿಫಲವಾಗಿದೆ. ಉಡಾವಣೆಯಾದ ಕೆಲವೇ ನಿಮಿಷಗಳಲ್ಲಿ ರಾಕೆಟ್ ನಿಯಂತ್ರಣ ತಪ್ಪಿ ಆಕಾಶದಲ್ಲಿಯೇ ಸ್ಫೋಟಗೊಂಡಿದೆ. ತೈವಾನ್ ಬಾಹ್ಯಾಕಾಶ ಸಂಸ್ಥೆ ಸೇರಿದಂತೆ ಐದು ಸಣ್ಣ ಉಪಗ್ರಹಗಳನ್ನು ಕೈರೋಸ್ ರಾಕೆಟ್ ಒಯ್ಯುತ್ತಿತ್ತು. ಭೂಮಿಯಿಂದ 500 ಕಿ.ಮೀ ದೂರದಲ್ಲಿರುವ ಕಕ್ಷೆಗೆ ಉಪಗ್ರಹಗಳನ್ನು ಸೇರಿಸುವುದು ಇದರ ಉದ್ದೇಶವಾಗಿತ್ತು.
ಇದರಿದ ಸ್ಪೇಸ್ ಒನ್ ಕಂಪನಿಯ ಕೈರೋಸ್ ಬಾಹ್ಯಾಕಾಶ ಉಡಾವಣಾ ವಾಹನಕ್ಕೆ ಭಾರೀ ಹಿನ್ನಡೆಯಾಗಿದೆ. ಈ ರಾಕೆಟ್‌ನ ಎರಡನೇ ಉಡಾವಣೆ ಕೂಡ ಲಿಫ್ಟ್‌ಆಫ್ ಆದ ಕೆಲವು ನಿಮಿಷಗಳಲ್ಲೇ ವಿಫಲವಾಗಿದೆ. 18 ಮೀಟರ್ ಎತ್ತರದ ಸಾಲಿಡ್-ಫ್ಯುಯಲ್ ರಾಕೆಟ್ ಕೈರೋಸ್ ಆಗಿತ್ತು. ಜಪಾನ್‌ನ ಸ್ಪೇಸ್‌ಪೋರ್ಟ್ ಕೀಯಿಂದ ಉಡಾವಣೆಯಾದ ಕೆಲವೇ ನಿಮಿಷಗಳಲ್ಲಿ ಕೈರೋಸ್ ರಾಕೆಟ್ ನಿಯಂತ್ರಣ ಕಳೆದುಕೊಂಡಿತು. ಇದರಿಂದ ಉಡಾವಣೆಯನ್ನು ನಿಲ್ಲಿಸಲು ಪ್ರಯತ್ನಿಸಲಾಯಿತು ಎಂದು ರಾಯಿಟರ್ಸ್ ವರದಿ ಮಾಡಿದೆ. ಕೈರೋಸ್ ರಾಕೆಟ್ ಉಡಾವಣೆ ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ ಎಂದು ಸ್ಪೇಸ್ ಒನ್ ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದಾಗಿ ಕೃತಕ ಉಪಗ್ರಹಗಳನ್ನು ಯಶಸ್ವಿಯಾಗಿ ಬಾಹ್ಯಾಕಾಶಕ್ಕೆ ಕಳುಹಿಸುವ ಜಪಾನ್‌ನ ಮೊದಲ ಖಾಸಗಿ ಕಂಪನಿ ಎಂಬ ಹೆಗ್ಗಳಿಕೆಗೆ ಸ್ಪೇಸ್ ಒನ್‌ನ ಎರಡನೇ ಪ್ರಯತ್ನಕ್ಕೆ ಹಿನ್ನಡೆಯಾಗಿದೆ.
Belagavi: ಇನ್ನೊಂದು ವಾರದಲ್ಲಿ ಮಗುವಿಗೆ ಜನ್ಮ ನೀಡಬೇಕಿದ್ದ ಗರ್ಭಿಣಿಯ ದಾರುಣ ಹತ್ಯೆ!
ಸ್ಪೇಸ್ ಒನ್‌ಗೆ ಇದು ಸತತ ಎರಡನೇ ಉಡಾವಣಾ ವೈಫಲ್ಯವಾಗಿದೆ. 2024ರ ಮಾರ್ಚ್‌ನಲ್ಲಿ ಕೈರೋಸ್ ರಾಕೆಟ್ ಉಡಾವಣೆಗೆ ಮಾಡಿದ ಪ್ರಯತ್ನ ವಿಫಲವಾಗಿತ್ತು. ಆಗ ಉಡಾವಣೆಯಾದ ಕೇವಲ ಐದು ಸೆಕೆಂಡ್‌ಗಳಲ್ಲಿ ರಾಕೆಟ್ ಸ್ಫೋಟಗೊಂಡಿತ್ತು. ಈ ವೈಫಲ್ಯದಿಂದ ಪಾಠ ಕಲಿತು ಕೆಲವು ಬದಲಾವಣೆಗಳೊಂದಿಗೆ ಕೈರೋಸ್ ರಾಕೆಟ್‌ನ ಎರಡನೇ ಉಡಾವಣೆಗೆ ಸ್ಪೇಸ್ ಒನ್ ಪ್ರಯತ್ನಿಸಿತ್ತು. ಆದರೆ ಈ ಯೋಜನೆ ಕೂಡಾ ನಾಟಕೀಯವಾಗಿ ಅಂತ್ಯಗೊಂಡಿದೆ. ಕ್ಯಾನನ್ ಸೇರಿದಂತೆ ದೊಡ್ಡ ಕಂಪನಿಗಳ ಬೆಂಬಲದೊಂದಿಗೆ 2018ರಲ್ಲಿ ಜಪಾನ್‌ನ ಮೊದಲ ಖಾಸಗಿ ಬಾಹ್ಯಾಕಾಶ ಉಡಾವಣಾ ಕಂಪನಿಯಾಗಿ ಸ್ಪೇಸ್ ಒನ್ ಆರಂಭವಾಗಿತ್ತು.
ಫೆಬ್ರವರಿಯಲ್ಲೂ ಭೂಮಿಗೆ ಬರೋದಿಲ್ಲ ಸುನೀತಾ ವಿಲಿಯಮ್ಸ್, ಖಚಿತಪಡಿಸಿದ ನಾಸಾ!