ಜನವರಿ 29 ರಂದು ಜಿಎಸ್‌ಎಲ್‌ವಿ-ಎಫ್15 ಎನ್‌ವಿಎಸ್-02 ಮಿಷನ್ ಉಡಾವಣೆಯೊಂದಿಗೆ ಇಸ್ರೋದ 100ನೇ ಉಪಗ್ರಹ ಉಡಾವಣೆ ನಡೆಯಲಿದೆ

ಶ್ರೀಹರಿಕೋಟಾ (ಜ.27): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನೂರನೇ ಉಡಾವಣೆಗೆ ಸಜ್ಜಾಗಿದೆ. ಜನವರಿ 29 ರಂದು ಜಿಎಸ್‌ಎಲ್‌ವಿ-ಎಫ್15 ಎನ್‌ವಿಎಸ್-02 ಮಿಷನ್ ಉಡಾವಣೆಯೊಂದಿಗೆ ಇಸ್ರೋದ 100ನೇ ಉಡಾವಣೆ ನಡೆಯಲಿದೆ. ಎನ್‌ವಿಎಸ್-02 ನಾವಿಕ್ ಉಪಗ್ರಹ ವ್ಯವಸ್ಥೆಯ ಭಾಗವಾಗಿದೆ. ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಎರಡನೇ ಉಡಾವಣಾ ಕೇಂದ್ರದಿಂದ ಈ ಉಡಾವಣೆ ನಡೆಯಲಿದೆ.

ಸ್ವದೇಶಿ ಕ್ರಯೋಜೆನಿಕ್ ಹಂತವನ್ನು ಹೊಂದಿರುವ ಜಿಎಸ್ಎಲ್‌ವಿ-ಎಫ್15 ಎನ್‌ವಿಎಸ್-02 ಉಪಗ್ರಹವನ್ನು ಭೂಸ್ಥಿರ ವರ್ಗಾವಣೆ ಕಕ್ಷೆಗೆ ಸ್ಥಾಪಿಸಲಿದೆ. ಎರಡನೇ ಉಡಾವಣಾ ತಾಣದಿಂದ ಉಡಾವಣೆ ನಡೆಯಲಿದೆ. ಎನ್‌ವಿಎಸ್ ಸರಣಿಯ ಎರಡನೇ ಉಪಗ್ರಹ ಮತ್ತು ಭಾರತೀಯ ನ್ಯಾವಿಗೇಷನ್ ವ್ಯವಸ್ಥೆಯ (ನಾವಿಕ್) ಭಾಗವಾಗಿದೆ ಎನ್‌ವಿಎಸ್-02. ನಾವಿಕ್ ಭಾರತದ ಸ್ವದೇಶಿ ಪ್ರಾದೇಶಿಕ ನ್ಯಾವಿಗೇಷನ್ ಉಪಗ್ರಹ ವ್ಯವಸ್ಥೆ ಎಂದು ಇಸ್ರೋ ಹೇಳಿದೆ. ನ್ಯಾವಿಗೇಷನ್ ಮತ್ತು ರೇಂಜಿಂಗ್‌ಗಾಗಿ ಭಾರತ ಸ್ವದೇಶಿಯವಾಗಿ ಅಭಿವೃದ್ಧಿಪಡಿಸಿದ ಸ್ಥಾನ ನಿರ್ಣಯ ವ್ಯವಸ್ಥೆಯೇ ಭಾರತೀಯ ಪ್ರಾದೇಶಿಕ ನ್ಯಾವಿಗೇಷನ್ ವ್ಯವಸ್ಥೆ. ಇದರ ಮತ್ತೊಂದು ಹೆಸರು ನಾವಿಕ್‌

ಅಮೆರಿಕದ ಜಿಪಿಎಸ್, ರಷ್ಯಾದ ಗ್ಲೋನಾಸ್, ಚೀನಾದ ಬೇಡೌ ಮತ್ತು ಯುರೋಪಿಯನ್ ಒಕ್ಕೂಟದ ಗೆಲಿಲಿಯೋಗೆ ಸ್ಪರ್ಧೆಯೊಡ್ಡುವ ನ್ಯಾವಿಗೇಷನ್ ವ್ಯವಸ್ಥೆಯನ್ನು ಇಸ್ರೋ ತಯಾರಿಸುತ್ತಿದೆ. ಭಾರತ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿಖರವಾದ ಸ್ಥಾನ, ವೇಗ ಮತ್ತು ಸಮಯ ಸೇವೆಗಳನ್ನು ಒದಗಿಸಲು ನಾವಿಕ್ ಅನ್ನು ವಿನ್ಯಾಸಗೊಳಿಸಲಾಗಿದೆ. ಎಲ್ಲಾ ರೀತಿಯ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳು, ಸ್ಥಳ ಆಧಾರಿತ ಸೇವೆಗಳು ಮತ್ತು ಸಮೀಕ್ಷೆಗಳಿಗೆ ನಾವಿಕ್ ಪ್ರಯೋಜನಕಾರಿ. ಭಾರತದಾದ್ಯಂತ ಮತ್ತು ದೇಶದ ಗಡಿಗಳಿಂದ 1500 ಕಿ.ಮೀ ವ್ಯಾಪ್ತಿಯಲ್ಲಿ ನಾವಿಕ್ ಕಾರ್ಯನಿರ್ವಹಿಸುತ್ತದೆ. ಮಿಲಿಟರಿ ಉದ್ದೇಶಗಳ ಜೊತೆಗೆ, ದೇಶದ ಮೀನುಗಾರಿಕಾ ದೋಣಿಗಳು, ಹಡಗುಗಳು ಮತ್ತು ವಾಣಿಜ್ಯ ವಾಹನಗಳಿಗೆ ಈಗಾಗಲೇ ನಾವಿಕ್ ಲಭ್ಯವಿದೆ. ಸ್ಟ್ಯಾಂಡರ್ಡ್ ಪೊಸಿಷನಿಂಗ್ ಸರ್ವೀಸ್ (ಎಸ್‌ಪಿಎಸ್) ಮತ್ತು ನಿರ್ಬಂಧಿತ ಸೇವೆ (ಆರ್‌ಎಸ್) ಎಂಬ ಎರಡು ರೀತಿಯ ಸೇವೆಗಳನ್ನು ನ್ಯಾವಿಕ್ ಒದಗಿಸುತ್ತದೆ.

ಇಸ್ರೋದ ಮಹತ್ವಾಕಾಂಕ್ಷಿ ಯೋಜನೆಯಾದ ಮೊದಲ ಮಾನವ ರಹಿತ ಗಗನ ಯಾನದ ಮಾಡ್ಯೂಲ್‌ ರವಾನೆ

ಎನ್‌ವಿಎಸ್-02 ಉಪಗ್ರಹ ನ್ಯಾವಿಗೇಷನ್ ವ್ಯವಸ್ಥೆಯ ಭಾಗವಾಗಿದೆ. ಇದು ಭಾರತೀಯ ಪ್ರದೇಶದಲ್ಲಿ ನ್ಯಾವಿಗೇಷನ್ ಸೇವೆಗಳನ್ನು ಒದಗಿಸುತ್ತದೆ. ಜಿಎಸ್ಎಲ್‌ವಿ-ಎಫ್15 ರಾಕೆಟ್ ಮೂಲಕ ಉಪಗ್ರಹವನ್ನು ಭೂಸ್ಥಿರ ವರ್ಗಾವಣೆ ಕಕ್ಷೆಗೆ ಸ್ಥಾಪಿಸಲಾಗುತ್ತದೆ. ಭಾರತದ ನ್ಯಾವಿಗೇಷನ್ ಸೇವೆಗಳಲ್ಲಿ ಸ್ವಾವಲಂಬನೆ ಕಡೆಗೆ ಒಂದು ಪ್ರಮುಖ ಹೆಜ್ಜೆಯಾಗಿದೆ ನಾವಿಕ್ ಉಪಗ್ರಹ ವ್ಯವಸ್ಥೆ. ಭಾರತೀಯ ಕೈಗಾರಿಕೆಗಳಿಗೆ ಆರ್ಥಿಕ ಲಾಭವನ್ನು ಒದಗಿಸಲು ನಾವಿಕ್‌ಗೆ ಸಾಧ್ಯವಾಗುತ್ತದೆ. ಇದು ಭಾರತೀಯ ಪ್ರದೇಶದಲ್ಲಿ ನ್ಯಾವಿಗೇಷನ್ ಸೇವೆಗಳನ್ನು ಒದಗಿಸುತ್ತದೆ, ಇದರಿಂದಾಗಿ ವಿದೇಶಿ ನ್ಯಾವಿಗೇಷನ್ ವ್ಯವಸ್ಥೆಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ನಿಖರ ಮತ್ತು ವಿಶ್ವಾಸಾರ್ಹ ಸ್ಥಾನ ಮತ್ತು ಸಮಯ ಸೇವೆಗಳನ್ನು ಒದಗಿಸಲು ನ್ಯಾವಿಕ್ ಅನ್ನು ವಿನ್ಯಾಸಗೊಳಿಸಲಾಗಿದೆ ಮತ್ತು ವಾಯುಯಾನ, ಸಮುದ್ರ ಮತ್ತು ಭೂ ಸಾರಿಗೆ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಪ್ರಯೋಜನವಾಗಲಿದೆ ಎಂದು ವರದಿಗಳು ತಿಳಿಸಿವೆ.

ಸೀಮೆಎಣ್ಣೆ ದೀಪದಲ್ಲಿ ಓದುವ ವೇಳೆಯಲ್ಲೇ ಬಾಹ್ಯಾಕಾಶದ ಬೆಳಕು ಕಂಡ ವಿ.ನಾರಾಯಣನ್‌!