ಇಡ್ಲಿ- ಸಾಂಬಾರ್‌, ಉಪ್ಪಿಟ್ಟು ಕೂಡ 2022ರಲ್ಲಿ ಅಂತರಿಕ್ಷಕ್ಕೆ!| ಇಸ್ರೋ ಗಗನಯಾನಿಗಳಿಗಾಗಿ ಮೈಸೂರಿನಲ್ಲಿ ತಯಾರಿ

ನವದೆಹಲಿ[ಜ.08]: ದಕ್ಷಿಣ ಭಾರತೀಯರ ಜನಪ್ರಿಯ ಉಪಾಹಾರಗಳಾದ ಇಡ್ಲಿ- ಸಾಂಬಾರ್‌, ಉಪ್ಪಿಟ್ಟು ಹಾಗೂ ತೆಂಗಿನಕಾಯಿ ಚಟ್ನಿ ಕೂಡ ಬಾಹ್ಯಾಕಾಶಕ್ಕೆ ಹೋಗಲಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

2022ರಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮೊದಲ ಬಾರಿಗೆ ಮಾನವರನ್ನು ಅಂತರಿಕ್ಷಕ್ಕೆ ಕಳುಹಿಸಲು ಉದ್ದೇಶಿಸಿದೆ. ಭೂ ಕೆಳ ಕಕ್ಷೆಯಲ್ಲಿ 5ರಿಂದ 6 ದಿನಗಳ ಕಾಲ ಬಾಹ್ಯಾಕಾಶ ನೌಕೆಯಲ್ಲಿ ಗಗನಯಾತ್ರಿಗಳು ಇರಲಿದ್ದಾರೆ. ಅವರ ಹಸಿವು ನೀಗಿಸಲೆಂದು ಮೈಸೂರಿನ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ ವಿಶಿಷ್ಟ ಆಹಾರಗಳನ್ನು ತಯಾರಿಸಿದೆ. ಅದರಲ್ಲಿ ಇಡ್ಲಿ- ಸಾಂಬಾರ್‌, ಉಪ್ಪಿಟ್ಟು, ತೆಂಗಿನಕಾಯಿ ಚಟ್ನಿಯೂ ಇದೆ.

ದೇಶದ ಗಗನಯಾನಿಗಳಿಗೆ ಚಿತ್ರದುರ್ಗ ಬಳಿ ತರಬೇತಿ: ವಿಜ್ಞಾನನಗರಿಯಲ್ಲಿ ಇಸ್ರೋ ಕೇಂದ್ರ!

ಈ ಆಹಾರಗಳನ್ನು ಬಿಸಿ ಮಾಡಿಕೊಳ್ಳಲು ಹೀಟರ್‌ಗಳನ್ನು ಕೂಡ ಇಸ್ರೋ ಬಾಹ್ಯಾಕಾಶಕ್ಕೆ ರವಾನಿಸುತ್ತಿದೆ. ಈಗಾಗಲೇ ನಾಲ್ವರು ಗಗನಯಾತ್ರಿಗಳನ್ನು ಇಸ್ರೋ ಆಯ್ಕೆ ಮಾಡಿದ್ದು, ಜನವರಿ ಮೂರನೇ ವಾರದಿಂದ ರಷ್ಯಾದಲ್ಲಿ ಅವರಿಗೆ ತರಬೇತಿ ಪ್ರಾರಂಭವಾಗಲಿದೆ.