Asianet Suvarna News Asianet Suvarna News

'ನನ್ನ ಪ್ರೀತಿಯ ಭಾರತ..' ಸ್ಯಾಟಲೈಟ್‌ನಿಂದ ತೆಗೆದ ಭೂಮಿಯ ಆಕರ್ಷಕ ಚಿತ್ರ ರಿಲೀಸ್‌ ಮಾಡಿದ ಇಸ್ರೋ!

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತನ್ನ ಇಒಎಸ್‌-06 ಉಪಗ್ರಹದಿಂದ ಸೆರೆಹಿಡಿಯಲಾದ ಭೂಮಿಯ ಚಿತ್ರಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದೆ.

ISRO shares images of Earth captured by EOS 06 satellite san
Author
First Published Mar 31, 2023, 6:24 PM IST

ನವದೆಹಲಿ (ಮಾ.31): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ತನ್ನ ಇಒಎಸ್‌-06 ಉಪಗ್ರಹದಿಂದ ಸೆರೆಹಿಡಿಯಲಾದ ಭೂಮಿಯ ಚಿತ್ರಗಳನ್ನು ಹಂಚಿಕೊಂಡಿದೆ. ಚಿತ್ರಗಳು ಓಷನ್ ಕಲರ್ ಮಾನಿಟರ್ ಬಳಸಿ ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್ (ಎನ್‌ಆರ್‌ಎಸ್‌ಸಿ) ರಚಿಸಿದ ಮೊಸಾಯಿಕ್‌ಗಳಾಗಿವೆ. (OCM). ಆಕರ್ಷಕವಾಗಿ ಸೆರೆಹಿಡಿದ ಈ ಚಿತ್ರಗಳನ್ನು ಅದರಲ್ಲೂ ಭಾರತದ ಚಿತ್ರಗಳನ್ನು ಜೋಡಿ ಜನರು ಅಚ್ಚರಿಗೊಂಡಿದ್ದಾರೆ. ಇಒಎಸ್‌-06 ನಲ್ಲಿ ಓಷನ್ ಕಲರ್ ಮಾನಿಟರ್‌ನಿಂದ ಚಿತ್ರಗಳನ್ನು ಬಳಸಿಕೊಂಡು ಎಸ್‌ಆರ್‌ಎಸ್‌ಸಿ/ಇಸ್ರೋನಿಂದ ರಚಿಸಲಾದ ಗ್ಲೋಬಲ್ ಫಾಲ್ಸ್ ಕಲರ್ ಕಾಂಪೋಸಿಟ್ ಮೊಸಾಯಿಕ್ ಇದಾಗಿದೆ. 2023ರ ಫೆಬ್ರವರಿ 1 ರಿಂದ 15ರವರೆಗಿನ ಅವಧಿಯಲ್ಲಿ 1 ಕಿಮೀ ಪ್ರಾದೇಶಿಕ ರೆಸಲ್ಯೂಶನ್ ಹೊಂದಿರುವ ಮೊಸಾಯಿಕ್ 300 ಜಿಬಿ ಡೇಟಾವನ್ನು ಪ್ರಕ್ರಿಯೆಗೊಳಿಸಿದ ನಂತರ 2939 ಚಿತ್ರಗಳನ್ನು ಸಂಯೋಜಿಸಿ ಭೂಮಿಯ ಚಿತ್ರವನ್ನು ತೆಗೆಯಲಾಗಿದೆ' ಎಂದು ಭೂಮಿಯ ಅದ್ಭುತ ಚಿತ್ರಗಳನ್ನು ಹಂಚಿಕೊಳ್ಳುವ ವೇಳೆ ಇಸ್ರೋ ಬರೆದುಕೊಂಡಿದೆ.ಬಾಹ್ಯಾಕಾಶ ಸಂಸ್ಥೆ ತನ್ನದೇ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ ಮತ್ತೊಂದು ಚಿತ್ರವನ್ನು ಹಂಚಿಕೊಂಡಿದೆ. "ಒಸಿಎಂ ಭೂಮಿಯನ್ನು 13 ವಿಭಿನ್ನ ತರಂಗಾಂತರಗಳಲ್ಲಿ ಗ್ರಹಣೆ ಮಾಡುತ್ತದೆ. ಅದರೊಂದಿಗೆ ಜಾಗತಿಕ ಸಾಗರಗಳಿಗೆ ಭೂಮಿ ಮತ್ತು ಸಾಗರ ಬಯೋಟಾದಲ್ಲಿ ಜಾಗತಿಕ ಸಸ್ಯವರ್ಗದ ಹೊದಿಕೆಯ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ" ಎಂದು ತಿಳಿಸಿದೆ.

ಓಷ್ಯನ್‌ಸ್ಯಾಟ್‌-3 ಎಂಬುದು ಪಿಎಸ್‌ಎಲ್ವಿ-ಸಿ54 ಮಿಷನ್‌ನ ಭಾಗವಾಗಿ 2022ರ ನವೆಂಬರ್ 26ರಂದು ಇಸ್ರೋನಿಂದ ಉಡಾವಣೆಗೊಂಡ ನ್ಯಾನೊ ಉಪಗ್ರಹವಾಗಿದೆ. ಇದು ಸಮುದ್ರಶಾಸ್ತ್ರ ಮತ್ತು ವಾತಾವರಣದ ಸಂಶೋಧನೆಗೆ ಬದ್ಧವಾಗಿರುವ ಹಲವಾರು ಇಸ್ರೋ ಉಪಗ್ರಹಗಳಲ್ಲಿ ಒಂದಾಗಿದೆ. ಓಷ್ಯನ್‌ಸ್ಯಾಟ್‌-3 ಅನ್ನು ಮೂರು ಪ್ರಮುಖ ಸಾಧನಗಳೊಂದಿಗೆ ಉಡಾವಣೆ ಮಾಡಲಾಗಿತ್ತು. ಓಷನ್ ಕಲರ್ ಮಾನಿಟರ್ (OCM-3), ಸಮುದ್ರದ ಮೇಲ್ಮೈ ತಾಪಮಾನ ಮಾನಿಟರ್ (SSTM), ಕು-ಬ್ಯಾಂಡ್ ಸ್ಕ್ಯಾಟರೋಮೀಟರ್ (SCAT-3), ಮತ್ತು ARGOS, ಇದು ಭೂಮಿಯನ್ನು ಹಲವು ತರಂಗಗಳಲ್ಲಿ  ವೀಕ್ಷಿಸಲು ಅನುವು ಮಾಡಿಕೊಡುತ್ತದೆ. 

ಇಂದು ಉಪಗ್ರಹ ಬೀಳಿಸುವ ಕಸರತ್ತು: ಫೆಸಿಫಿಕ್‌ ಸಾಗರದಲ್ಲಿ ಪತನಕ್ಕೆ ಇಸ್ರೋ ಭಾರಿ ಸಾಹಸ

ಇಸ್ರೋ ಈ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದಂತೆ ಸೋಶಿಯಲ್‌ ಮೀಡಿಯಾದಲ್ಲಿ ಇದು ವೈರಲ್‌ ಆಗಿದೆ. ಟ್ವಿಟರ್‌ ಹಾಗೂ ಫೇಸ್‌ಬುಲ್‌ ಬಳಕೆದಾರರು, ವಿಶೇಷವಾಗಿ ಭಾರತ ಹಾಗೂ ಇಡೀ ವಿಶ್ವವನ್ನು ನೋಡಿ ಅಚ್ಚರಿ ಪಟ್ಟಿದ್ದಾರೆ. 'ಇಂಥದ್ದೇ ಕೆಲವು ವಿಚಾರಗಳು ನಮ್ಮ ದೇಶದ ಬಗ್ಗೆ ನನಗೆ ಹೆಮ್ಮೆ ಮೂಡಿಸುವಂತೆ ಮಾಡುತ್ತದೆ' ಎಂದು ಒಬ್ಬ ವ್ಯಕ್ತಿ ಬರೆದುಕೊಂಡಿದ್ದರೆ, ನೀಲಿಗ್ರಹ ಭೂಮಿಯ ಟೋನ್‌ ಆಗಿದೆ ಎಂದು ಇನ್ನೊಬ್ಬರು ಬರೆದಿದ್ದಾರೆ. ಈ ಸುಂದರ ಚಿತ್ರಗಳನ್ನು ನೋಡುವುದೇ ಕಣ್ಣಿಗೆ ಹಬ್ಬ ಎಂದು ಇನ್ನೊಬ್ಬರು ಬರೆದಿದ್ದಾರೆ.

ಚಂದ್ರಯಾನ - 3ಗೆ ಬಲ: ಪ್ರಮುಖ ರಾಕೆಟ್ ಎಂಜಿನ್ ಪರೀಕ್ಷೆಯಲ್ಲಿ ISROಗೆ ಯಶಸ್ಸು

Follow Us:
Download App:
  • android
  • ios