Asianet Suvarna News Asianet Suvarna News

ಡೈನೋಸಾರ್ಸ್‌ ರೀತಿ ಮಾನವ ಕೂಡ ಭೂಮಿಯ ಮೇಲೆ ನಶಿಸಿ ಹೋಗ್ತಾನೆ: ಇಸ್ರೋ ಚೀಫ್‌ ಸೋಮನಾಥ್

ಭೂಮಿ ಎಂದೆಂದಿಗೂ ಮಾನವನ ಪಾಲಿಗೆ ಸುರಕ್ಷಿತವಾಗಿರುವುದಿಲ್ಲ ಎಂದು ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್ ಹೇಳಿದ್ದಾರೆ. ಮಾನವರು ಸಹ ಶಾಶ್ವತವಾಗಿ ಭೂಮಿ ಮೇಲೆ ಇರುವುದಿಲ್ಲ. ಇಲ್ಲಿಂದ ಡೈನೋಸಾರ್ಸ್‌ ನಿರ್ಮಾಮವಾದ ರೀತಿಯಲ್ಲೇ ಮಾನವರು ಕೂಡ ನಶಿಸಿ ಹೋಗುತ್ತಾರೆ. ಆದ್ದರಿಂದ ಮಾನವರು ಸುರಕ್ಷಿತವಾಗಿರಲು ಸಾಧ್ಯವಿರುವ ಬಾಹ್ಯಾಕಾಶದಲ್ಲಿ ಹೊಸ ಭೂಮಿ, ಹೊಸ ಆಯಾಮಗಳನ್ನು ಕಂಡುಹಿಡಿಯುವುದು ಅಗತ್ಯವಾಗಿದೆ ಎಂದಿದ್ದಾರೆ.
 

ISRO Chief S Somnath says Humans will not be on earth forever they will become extinct san
Author
Bengaluru, First Published Jul 22, 2022, 3:32 PM IST

ನವದೆಹಲಿ (ಜುಲೈ 22): ಮಾನವನಿಗೆ ಭೂಮಿಯೇ ಸುರಕ್ಷಿತ ಸ್ಥಳವಾಗಿರುವಾಗ, ಶ್ರೇಷ್ಠ ಸ್ಥಳ ಎಂದಿರುವಾಗ ಬಾಹ್ಯಾಕಾಶಕ್ಕೆ ಮನುಷ್ಯರನ್ನು ಕಳಿಸುವ ಅಗತ್ಯವೇನು ಇಂಥದ್ದೊಂದು ಪ್ರಶ್ನೆಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮುಖ್ಯಸ್ಥ ಡಾ.ಎಸ್.ಸೋಮನಾಥ್ ಅವರಿಗೆ ಇತ್ತೀಚೆಗೆ ಕೇಳಲಾಗಿತ್ತು. ಅದಕ್ಕೆ ಅವರು ನೀಡಿರುವ ಉತ್ತರ ಸಾಕಷ್ಟು ಗಮನಸೆಳೆದಿದೆ. ಭೂಮಿ ಅಂತ್ಯವಾಗುವವರೆಗೂ ಇದರ ಮೇಲೆಮಾನವ ಉಳಿಯುತ್ತಾನೆ ಎನ್ನುವ ಕನಸು ಕಾಣಬೇಡಿ. ಡೈನೋಸಾರ್ಸ್‌ಗಳಂತೆ ಮುಂದೊಂದು ದಿನ ಮನುಷ್ಯನೂ ಕೂಡ ಈ ಭೂಮಂಡಲದಿಂದ ನಾಶವಾಗುತ್ತಾನೆ. ಇದಕ್ಕೆ ಒಂದೋ ಆತನೇ ಕಾರಣನಾಗುತ್ತಾನೆ. ಇಲ್ಲವೇ, ಪ್ರಕೃತಿ ಅಥವಾ ಬಾಹ್ಯಾಕಾಶದಿಂದ ಬರುವ ಕ್ಷುದ್ರಗಹಗಳು ಕಾರಣವಾಗುತ್ತವೆ ಎಂದು ಹೇಳಿದ್ದಾರೆ. ಭೂಮಿಯ ನೈಸರ್ಗಿಕ ಉಪಗ್ರಹ ಎನಿಸಿಕೊಳ್ಳುವ ಚಂದ್ರ ಮತ್ತು ಮಂಗಳ ಗ್ರಹಗಳ ಮೇಲೆ ನಿರಂತರವಾಗಿ ಕ್ಷುದ್ರಗ್ರಹಗಳ ದಾಳಿ ಆಗುತ್ತಿರುತ್ತವೆ ಎಂದು ಇಸ್ರೋ ಮುಖ್ಯಸ್ಥರು ಹೇಳಿದ್ದಾರೆ.  ಏಕೆಂದರೆ ಅವುಗಳನ್ನು ರಕ್ಷಿಸಲು ಅಲ್ಲಿ ಯಾವುದೇ ವಾತಾವರಣವಿಲ್ಲ.ಭೂಮಿಯು ವಾತಾವರಣವನ್ನು ಹೊಂದಿದೆ, ಆದ್ದರಿಂದ ನೀವು ಕ್ಷುದ್ರಗ್ರಹಗಳ ದಾಳಿಯಿಂದ ರಕ್ಷಿಸಲ್ಪಟ್ಟಿದ್ದೀರಿ. ಮನುಷ್ಯರು ಭೂಮಿಯ ಮೇಲೆ ಶಾಶ್ವತವಾಗಿ ಉಳಿಯುವುದಿಲ್ಲ. ಡೈನೋಸಾರ್‌ಗಳು ಬುದ್ಧಿವಂತರಲ್ಲದ ಕಾರಣ ಕೊಲ್ಲಲ್ಪಟ್ಟವು. ಆದರೆ, ಮನುಷ್ಯ ಬುದ್ಧಿವಂತ. ಆದರೆ, ಭೂಮಿಯ ಮೇಲೆ ಮನುಷ್ಯನ ಜೀವನ ಸೀಮಿತ. ಮನುಷ್ಯರು ವಾಸಿಸಲು ಹೊಸ ಸ್ಥಳವನ್ನು ಆಯ್ಕೆ ಮಾಡದೇ ಇದ್ದಲ್ಲಿ, ಒಂದು ದಿನ ಭೂಮಿಯೂ ಕೊನೆಗೊಳ್ಳುತ್ತದೆ. ಮನುಷ್ಯ ಜನಾಂಗವೂ ನಾಶವಾಗುತ್ತದೆ ಎಂದಿದ್ದಾರೆ.

ಅನ್ವೇಷಣೆಗಳು ಅಗತ್ಯ: ಅಂಟಾರ್ಟಿಕಾದಲ್ಲಿ ಪ್ರಪಂಚದಾದ್ಯಂತ ಕೇಂದ್ರಗಳಿವೆ. ಭಾರತವೂ ಮೂರು ಕೇಂದ್ರಗಳನ್ನು ಹೊಂದಿದೆ. ಇದರ ಅಗತ್ಯವೇನು ಎಂದು ಕೇಳಬಹುದು. ಏಕೆಂದರೆ ಭವಿಷ್ಯದಲ್ಲಿ ನಾವು ಕೆಲವು ಸ್ಥಳಗಳು ಮತ್ತು ಪ್ರದೇಶಗಳಿಗೆ ಕಾಲಿಡದಿದ್ದರೆ, ನಾವು ಅಲ್ಲಿಂದ ಹೊರಹಾಕಲ್ಪಡುತ್ತೇವೆ. ಭಾರತವು ಚಂದ್ರನ ಮೇಲೆ ಕಾಲಿಡದಿದ್ದರೆ, ಭವಿಷ್ಯದಲ್ಲಿ ಪ್ರಪಂಚದಾದ್ಯಂತದ ಜನರು ಭಾರತವನ್ನು ಚಂದ್ರನಿಂದ ಹೊರಹಾಕುತ್ತಾರೆ. ಆದ್ದರಿಂದ ನಾವು ಅಂಟಾರ್ಟಿಕಾದಲ್ಲಿ ನಮ್ಮ ಮೂರು ನಿಲ್ದಾಣಗಳನ್ನು ನಿರ್ಮಿಸಿದ್ದೇವೆ. ನಾವು ಚಂದ್ರನನ್ನು ತಲುಪಿದೆವು. ಮಂಗಳ ಗ್ರಹಕ್ಕೂ ನಾವು ಇದೇ ಕಾರಣಕ್ಕೆ ತಲುಪಿದ್ದೇವೆ ಎಂದಿದ್ದಾರೆ.

ಜುಲೈ 20ಕ್ಕೆ ಭೂಮಿಗೆ ಅಪ್ಪಳಿಸಲಿದೆ ಸೌರ ಜ್ವಾಲೆ ಚಂಡಮಾರುತ, NOAA ಎಚ್ಚರಿಕೆ!

ಗಗನ್‌ಯಾನ ಕೊನೆಯ ನಿಲ್ದಾಣವಲ್ಲ, ಬಾಹ್ಯಾಕಾಶ ನಿಲ್ದಾಣವೂ ನಿರ್ಮಾಣವಾಗಲಿದೆ: ಗಗನ್‌ಯಾನ ನಮ್ಮ ಹೊಸ ಪ್ರಯತ್ನವಷ್ಟೇ ಎಂದು ಸೋಮನಾಥ್ ಹೇಳಿದ್ದಾರೆ. ಮಾನವ ಸಹಿತ ಗಗನಯಾನದ ಬಗ್ಗೆಯೂ ಗಮನ ನೀಡಿದ್ದೇವೆ. 100 ವರ್ಷಗಳ ನಂತರ, ನಾವು ಬಾಹ್ಯಾಕಾಶದಲ್ಲಿ ನಮ್ಮ ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸುತ್ತೇವೆ. ಗಗನ್‌ಯಾನದವರೆಗೆ ಮಾತ್ರ ನಿಲ್ಲುವುದಿಲ್ಲ. ವಿಶ್ವದ ದೊಡ್ಡ ಬಾಹ್ಯಾಕಾಶ ಕಾರ್ಯಾಚರಣೆಯಲ್ಲಿ ದೊಡ್ಡ ದೇಶಗಳು ತೊಡಗಿಸಿಕೊಳ್ಳಬೇಕು ಎಂದು ನಾವು ಬಯಸುತ್ತೇವೆ. ಆಗ ಭಾರತದ ಒಬ್ಬ ಅಥವಾ ಇಬ್ಬರು ಗಗನಯಾತ್ರಿಗಳು ಆ ತಂಡದ ಭಾಗವಾಗಬೇಕು. ಬಾಹ್ಯಾಕಾಶದ ಮಹಾನ್ ಅನ್ವೇಷಣೆಯಲ್ಲಿ ನಮ್ಮನ್ನು ಸೇರಿಸಿಕೊಳ್ಳಬೇಕು ಎಂದು ಎಸ್‌. ಸೋಮನಾಥ್ (S SOMNATH) ಹೇಳಿದ್ದಾರೆ.

ಬಾಹ್ಯಾಕಾಶದಲ್ಲಿ ಚೀನಾದಿಂದ ಸೌರ ವಿದ್ಯುತ್ ಸ್ಥಾವರ? 2028ಕ್ಕೆ ವಿದ್ಯುತ್ ಉತ್ಪಾದನೆ

ನಮ್ಮ ಮುಂದಿನ ಪೀಳಿಗೆಗಳು ಸೌರವ್ಯೂಹದ ಹೊರಗೆ ಪ್ರಯಾಣಿಸುತ್ತದೆ: ಭಾರತವು ಚಂದ್ರಯಾನ-1, ಮಂಗಳಯಾನ ಸೇರಿದಂತೆ ಹಲವು ಮಿಷನ್‌ಗಳನ್ನು ಮಾಡಿದ್ದು, ನಮ್ಮ ದೇಶ, ನಮ್ಮ ವಿಜ್ಞಾನಿಗಳು, ನಮ್ಮ ಜನರು ಮತ್ತು ನಮ್ಮ ಇಸ್ರೋ (INDIAN SPACE RESEARCH ORGANIZATION) ವಿಶ್ವದ ಯಾವುದೇ ದೇಶದೊಂದಿಗೆ ಸ್ಪರ್ಧಿಸಬಹುದು ಎಂಬುದನ್ನು ತೋರಿಸಿಕೊಟ್ಟಿದೆ ಎಂದು ಸೋಮನಾಥ್ ಹೇಳಿದರು. ಆದರೆ ನಮಗೆ ಅತ್ಯಂತ ಮುಖ್ಯವಾದ ವಿಷಯವೆಂದರೆ ಜನರ ಸುರಕ್ಷತೆ, ಆರೋಗ್ಯ ಮತ್ತು ಸಮೃದ್ಧಿ. ಅದಕ್ಕಾಗಿಯೇ ಹವಾಮಾನ, ಕೃಷಿ, ವಿಪತ್ತು, ಸಂಚರಣೆ, ಸಂವಹನದಂತಹ ಸೌಲಭ್ಯಗಳನ್ನು ನಾವು ಅವರಿಗೆ ನೀಡುತ್ತಿದ್ದೇವೆ. ನಮ್ಮ ಮುಂದಿನ ತಲೆಮಾರುಗಳು ಇತರ ಗ್ರಹಗಳಿಗೆ ಮಾತ್ರವಲ್ಲ, ಸೌರವ್ಯೂಹದ ಮತ್ತು ಅದಕ್ಕೂ ಮೀರಿದ ಬಾಹ್ಯ ಗ್ರಹಗಳಿಗೆ ಹೋಗುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Follow Us:
Download App:
  • android
  • ios