Asianet Suvarna News Asianet Suvarna News

ಚಂದ್ರಯಾನ-3 ಯಶಸ್ಸು: ಇಸ್ರೋ ಸೋಮನಾಥ್‌ಗೆ ವಿಶ್ವಬಾಹ್ಯಾಕಾಶ ಪ್ರಶಸ್ತಿ

ಚಂದ್ರಯಾನ-3 ಯೋಜನೆ ಯಶಸ್ವಿಯಾದ ಕಾರಣ ಅಧ್ಯಕ್ಷ ಎಸ್.ಸೋಮನಾಥ್ ಅವರಿಗೆ ಅಂತಾರಾಷ್ಟ್ರೀಯ ಖಗೋಳಶಾಸ್ತ್ರೀಯ ಒಕ್ಕೂಟವು (ಐಎಎಫ್) ವಿಶ್ವ ಬಾಹ್ಯಾಕಾಶ ಪ್ರಶಸ್ತಿ ನೀಡಿ ಗೌರವಿಸಿದೆ ಎಂದು ಇಸ್ರೋ ಹೇಳಿದೆ.

ISRO Chief S Somanath Honored with Global Space Award for Chandrayaan 3 Success
Author
First Published Oct 15, 2024, 12:33 PM IST | Last Updated Oct 15, 2024, 12:33 PM IST

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಮಹತ್ವಾಕಾಂಕ್ಷಿ ಚಂದ್ರಯಾನ-3 ಯೋಜನೆ ಯಶಸ್ವಿಯಾದ ಕಾರಣ ಅಧ್ಯಕ್ಷ ಎಸ್.ಸೋಮನಾಥ್ ಅವರಿಗೆ ಅಂತಾರಾಷ್ಟ್ರೀಯ ಖಗೋಳಶಾಸ್ತ್ರೀಯ ಒಕ್ಕೂಟವು (ಐಎಎಫ್) ವಿಶ್ವ ಬಾಹ್ಯಾಕಾಶ ಪ್ರಶಸ್ತಿ ನೀಡಿ ಗೌರವಿಸಿದೆ ಎಂದು ಇಸ್ರೋ ಹೇಳಿದೆ. ಚಂದ್ರಯಾನ-3, ಕಡಿಮೆ ಖರ್ಚಿನ ತಂತ್ರಜ್ಞಾನ ಸದ್ಬಳಕೆ, ಈ ಹಿಂದೆ ಯಾರೂ ಇಳಿಯದ ಚಂದ್ರನ ದಕ್ಷಿಣ ಭಾಗಕ್ಕೆ ಚಂದ್ರಯಾನ ಇಳಿದಿರುವುದು ನಾವೀನ್ಯತೆಗೆ ಜಾಗತಿಕ ಪುರಾವೆಯಾಗಿದೆ. ಹೀಗಾಗಿ ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್ ಅವರಿಗೆ ವಿಶ್ವ ಬಾಹ್ಯಾಕಾಶ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ ಎಂದು ಐಎಎಫ್
ಹೇಳಿದೆ ಎಂದು ಇಸ್ರೋ ತಿಳಿಸಿದೆ.

3 ವಿಮಾನ, ಒಂದು ರೈಲಿಗೆ ಹುಸಿ ಬಾಂಬ್ ಬೆದರಿಕೆ ಕರೆ
ನವದೆಹಲಿ: ದುಷ್ಕರ್ಮಿಗಳು, 3 ವಿಮಾನ ಮತ್ತು ಒಂದು ವಿಮಾನಕ್ಕೆ ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ ಘಟನೆ ಸೋಮವಾರ ನಡೆದಿದೆ. ಮುಂಬೈನಿಂದ 239ಜನರನ್ನು ಹೊತ್ತು ನ್ಯೂಯಾರ್ಕ್‌ಗೆ ತೆರಳುತ್ತಿದ್ದ ಏರಿಂಡಿಯಾ ವಿಮಾನಕ್ಕೆ ಸೋಮವಾರ ಬಾಂಬ್ ಬೆದರಿಕೆ ಕರೆ ಬಂದಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ದೆಹಲಿಯಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಯಿತು. ತಪಾಸಣೆ ಬಳಿಕ ಹುಸಿ ಬಾಂಬ್ ಕರೆ ಎನ್ನುವುದು ಬಯಲಾಗಿದೆ. ಇದಲ್ಲದೆ ಮುಂಬೈನಿಂದ ಮಸ್ಕತ್, ಜೆಡ್ಡಾಕ್ಕೆ ಹೊರಟಿದ್ದ ಇಂಡಿಗೋ ವಿಮಾನಗಳಿಗೆ ಹಾಗೂ ಮುಂಬೈ- ಹೌರಾ ರೈಲಿಗೂ ಬೆದರಿಕೆ ಹಾಕಲಾಗಿತ್ತು. ಆದರೆ ತಪಾಸಣೆ ಬಳಿಕ ಇದು ಹುಸಿ ಕರೆ ಎಂದು ಖಚಿತಪಟ್ಟಿದೆ.

8 ವರ್ಷಗಳ ಹಿಂದೆ 104 ಸ್ಯಾಟಲೈಟ್‌ಅನ್ನು ಬಾಹ್ಯಾಕಾಶಕ್ಕೆ ಹೊತ್ತೊಯ್ದಿದ್ದ PSLV-C37 ನೌಕೆಯ ಭಾಗ ಭೂಮಿಗೆ ವಾಪಸ್‌!

ಆಹಾರ ವಸ್ತುಗಳ ಬೆಲೆ ಹೆಚ್ಚಳ: ಚಿಲ್ಲರೆ ಹಣದುಬ್ಬರ ಶೇ.4.9ಕ್ಕೆ ಏರಿಕೆ
ನವದೆಹಲಿ: ಆಹಾರ ಪದಾರ್ಥಗಳ ಬೆಲೆ ಏರಿಕೆಯ ಪರಿಣಾಮ ಸೆಪ್ಟೆಂಬರ್ ತಿಂಗಳ ಚಿಲ್ಲರೆ ಹಣದುಬ್ಬರವು ಶೇ.5.49ಕ್ಕೆ ಏರಿಕೆಯಾಗಿದೆ. ಆಗಸ್ಟ್ ತಿಂಗಳಲ್ಲಿ ಹಣ ದುಬ್ಬರವು ಶೇ.3.65ರಲ್ಲಿತ್ತು ಎಂದು ರಾಷ್ಟ್ರೀಯ ದತ್ತಾಂಶ ಕಚೇರಿ ಹೇಳಿದೆ. ಆಗಸ್ಟ್‌ನಲ್ಲಿ ಆಹಾರ ಪದಾ ರ್ಥಗಳ ಮೇಲಿನ ಹಣದುಬ್ಬರವು ಶೇ.5.66ರಷ್ಟಿತ್ತು. ಅದೇ ಸೆಪ್ಟೆಂಬರ್‌ಗೆ ಶೇ.9.24ಕ್ಕೆ ಏರಿಕೆಯಾಗಿದೆ.

ಚಂದ್ರಯಾನ-3 ರಹಸ್ಯ ಬೇಧಿಸಿದ ಇಸ್ರೋ: ಭಾರತದ ಹೊಸ ಬಾಹ್ಯಾಕಾಶ ಮೈಲಿಗಲ್ಲು

Latest Videos
Follow Us:
Download App:
  • android
  • ios