ಇಸ್ರೋದ ಚಂದ್ರಯಾನ 3 ಮೈಲಿಗಲ್ಲಿಗೆ ಐಎಸ್ ಫೆಡರೇಶನ್‌ನಿಂದ ವಿಶ್ವ ಬಾಹ್ಯಾಕಾಶ ಪ್ರಶಸ್ತಿ ಗರಿ!

ಚಂದ್ರನ ಮೇಲೆ ಯಶಸ್ವಿಯಾಗಿ ಉಪಗ್ರಹ ಇಳಿಸಿ ಅಧ್ಯಯನ ನಡೆಸಿದ ಭಾರತ ಜಗತ್ತಿನ ತನ್ನ ಶಕ್ತಿ ಸಾಮರ್ಥ್ಯವನ್ನು ಸಾಬೀತುಪಡಿಸಿತ್ತು. ಇದೀಗ ಈ ಐತಿಹಾಸಿಕ ಮಲ್ಲಿಗಲ್ಲಿಗೆ ಇಸ್ರೋ ವಿಶ್ವ ಬಾಹ್ಯಾಕಾಶ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. 
 

Isro chandrayaan 3 awarded World space honour for milestone by International Astronautical Federation ckm

ಬೆಂಗಳೂರು(ಜು.22) ಚಂದ್ರನ ದಕ್ಷಿಣ ಧ್ರುವದ ಮೇಲೆ ಯಶಸ್ವಿಯಾಗಿ ಉಪಗ್ರಹ ಇಳಿಸಿದ ಮೊದಲ ರಾಷ್ಟ್ರ ಭಾರತ ಅನ್ನೋ ಹೆಗ್ಗಳಿಗೆ ಬರೆದ ಇಸ್ರೋ ಜಗತ್ತನ್ನೇ ತನ್ನತ್ತ ತಿರುಗಿ ನೋಡುವಂತೆ ಮಾಡಿದೆ. ಈ ಐತಿಹಾಸಿಕ ಸಾಧನೆಗೆ ಅಂತಾರಾಷ್ಟ್ರೀಯ ಅಸ್ಟ್ರೋನಾಟಿಕಲ್ ಫೆಡರೇಶನ್ ಭಾರತಕ್ಕೆ ವಿಶ್ವ ಬಾಹ್ಯಾಕಾಶ ಪ್ರಶಸ್ತಿ ನೀಡಿ ಗೌರವಿಸಿದೆ. ಭಾರತಕ್ಕೂ ಮೊದಲು ಅಮೆರಿಕ, ರಷ್ಯಾ ಹಾಗೂ ಚೀನಾ ಈ ಪ್ರಶಸ್ತಿಗೆ ಭಾಜನರಾಗಿದೆ. ಇದೀಗ ಭಾರತ ಪ್ರತಿಷ್ಠಿತ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

ವಿಶ್ವ ಬಾಹ್ಯಾಕಾಶ ಪ್ರಶಸ್ತಿಯನ್ನು ಅಕ್ಟೋಬರ್ 14ರಂದು ಪ್ರಧಾನ ಮಾಡಲಾಗುತ್ತದೆ. 75ನೇ ಅಂತಾರಾಷ್ಟ್ರೀಯ ಅಸ್ಟ್ರೊನಾಟಿಕಲ್ ಕಾಂಗ್ರೆಸ್ ಸಮಾರಂಭದ ಉದ್ಘಾಟನಾ ದಿನ ಈ ಪ್ರಶಸ್ತಿಯನ್ನು ಇಸ್ರೋಗೆ ಪ್ರಧಾನ ಮಾಡಲಾಗುತ್ತದೆ. ಇಟಲಿಯ ಮಿಲನ್‌ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಇದೀಗ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆಯಾಗಿರುವ ಭಾರತಕ್ಕೆ ಅಭಿನಂದನೆಗಳ ಮಹೂಪೂರವೇ ಹರಿದು ಬರುತ್ತಿದೆ.

ರಾಮಸೇತುವಿನ ಮತ್ತಷ್ಟು ರಹಸ್ಯ ಬಿಚ್ಚಿಟ್ಟ ಇಸ್ರೋ!

ಆಗಸ್ಟ್ 23, 2023ರಂದು ಇಸ್ರೋ ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ನೌಕೆ ಇಳಿಸಿತ್ತು. ಅತ್ಯಂತ ಕಡಿಮೆ ಖರ್ಚಿನಲ್ಲಿ ಇಸ್ರೋ ಯಶಸ್ವಿಯಾಗಿ ಚಂದ್ರಯಾನ ಮಾಡಿತ್ತು. ಭಾರತ ಇದೀಗ  ಚಂದ್ರಯಾನ 3 ಯಶಸ್ವಿ ಲ್ಯಾಂಡಿಂಗ್‌ ವರ್ಷಾಚರಣೆಗೆ ಸಜ್ಜಾಗುತ್ತಿದೆ. ಇದರ ಬೆನ್ನಲ್ಲೇ ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ ಭಾರತಕ್ಕೆ ಪ್ರತಿಷ್ಠಿತ ಪ್ರಶಸ್ತಿ ಘೋಷಿಸಿರುವುದು ಭಾರತೀಯರ ಸಂಭ್ರಮ ಇಮ್ಮಡಿಗೊಳಿಸಿದೆ.

ಇಸ್ರೋ ಸಾಧನೆಯನ್ನು ಅಮೆರಿಕ, ಚೀನಾ, ರಷ್ಯಾ ಸೇರಿದಂತೆ ಹಲವು ದೇಶಗಳು ಕೊಂಡಾಡಿತ್ತು. ವಿಶೇಷವಾಗಿ ಅತ್ಯಂತ ಕಡಿಮೆ ಖರ್ಚಿನಲ್ಲಿ ಯಶಸ್ವಿಯಾಗಿ ಚಂದ್ರನ ಮೇಲೆ ಕಾಲಿಟ್ಟ ಭಾರತ ಮಾದರಿ ಇದೀಗ ಬಹುತೇಕ ರಾಷ್ಟ್ರಗಳು ಅಳವಡಿಸಿಕೊಳ್ಳಲು ಯತ್ನಿಸುತ್ತಿದೆ. ಇದಕ್ಕಾಗಿ ಇಸ್ರೋದ ನೆರವು ಪಡೆಯುತ್ತಿದೆ. ಇಷ್ಟೇ ಅಲ್ಲ ಇಸ್ರೋ ತನ್ನ ಉಡ್ಡಯನ ಕೇಂದ್ರದಿಂದ ಇತರ ದೇಶಗಳ ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾಯಿಸಿದ ಸಾಧನೆ ಮಾಡಿದೆ.

ಈಗಾಗಲೇ ಸೂರ್ಯನ ಅಧ್ಯಯನಕ್ಕೆ ಆದಿತ್ಯ ಎಲ್1 ನೌಕೆ ಕಳುಹಿಸಿ ಅಧ್ಯಯನ ಆರಂಭಿಸಿರುವ ಇಸ್ರೋ, ಇದೀಗ ಮಾನವ ಸಿಹಿತ ಚಂದ್ರಯಾನಕ್ಕೆ ತಯಾರಿ ನಡೆಸುತ್ತಿದೆ. ಈ ಕುರಿತು ಇತ್ತೀಚೆಗೆ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಮಾಹಿತಿ ನೀಡಿದ್ದರು. ಚಂದ್ರನ ಮೇಲೆ ಮಾನವ ಸಹಿತ ಗಗನಯಾತ್ರೆಗೆ ವಾಯುಪಡೆಯ ಇಬ್ಬರು ಪೈಲೆಟ್ ಆಯ್ಕೆ ಮಾಡಲಾಗಿದೆ. ಅವರಿಗೆ ತರಭೇತಿ ನೀಡಿ ಯಾರು ಮಾಡದ ಸಾಹಸಕ್ಕೆ ಮಾಡಲಾಗುತ್ತದೆ ಎಂದಿದ್ದಾರೆ.  

ದೇಶದ ಮೊದಲ ಮಾನವ ಸಹಿತ ಬಾಹ್ಯಾಕಾಶಯಾನದಲ್ಲಿ ಪ್ರಧಾನಿ ಮೋದಿ ಪ್ರಯಾಣ, ಏನಂದ್ರು ಇಸ್ರೋ ಅಧ್ಯಕ್ಷ ಸೋಮನಾಥ್‌?

Latest Videos
Follow Us:
Download App:
  • android
  • ios