Asianet Suvarna News Asianet Suvarna News

ತನ್ನ ಕಕ್ಷೆಯಲ್ಲಿ 7 ವರ್ಷ ಪೂರೈಸಿದ ಮಾರ್ಸ್ ಸ್ಪೇಸ್‌ಕ್ರಾಫ್ಟ್!

ಮಂಗಳಯಾನ (Mars Orbiter Mission) ಬಾಹ್ಯಾಕಾಶ ನೌಕೆ ಅಚ್ಚರಿ ಎಂಬ ರೀತಿಯಲ್ಲಿ ಏಳು ವರ್ಷಗಳನ್ನು ಪೂರೈಸಿದೆ. ಈ ಬಗ್ಗೆ ಇಸ್ರೋ ಅಧಿಕಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ವಾಸ್ತವದಲ್ಲಿ ಈ ನೌಕೆಯ ಆಯಷ್ಯ ಆರು ತಿಂಗಳ ಎಂದು ಹೇಳಲಾಗಿತ್ತು. ಆದರೆ, ಅದನ್ನು ಮೀರಿ ನೌಕೆ ಕಾರ್ಯನಿರ್ವಹಿಸುತ್ತಿದೆ.

Indias Mars Orbiter spacecraft completes seven years in its orbit
Author
Bengaluru, First Published Sep 27, 2021, 6:09 PM IST

ಭಾರತದ ಮಾರ್ಸ್ ಆರ್ಬಿಟರ್(Mars Orbiter) ಬಾಹ್ಯಾಕಾಶ ನೌಕೆ(Spacecraft) ತನ್ನ ಕಕ್ಷೆಯಲ್ಲಿ ಏಳು ವರ್ಷಗಳನ್ನು ಪೂರೈಸಿದೆ. ವಿಶೇಷ ಎಂದರೆ ಇದಕ್ಕೆ ಆರು ತಿಂಗಳ ಆಯುಷ್ಯ ಎಂದು ಮಾತ್ರ ಹೇಳಲಾಗಿತ್ತು. ಅದನ್ನು ಮೀರಿ ನೌಕೆ ಕಾರ್ಯನಿರ್ವಹಣೆ ಮಾಡುತ್ತಿದೆ.

"ಇದು ನಿಜಕ್ಕೂ ತೃಪ್ತಿಕರ ಭಾವನೆ" ಎಂದು ಕೆ ರಾಧಾಕೃಷ್ಣನ್ ಹೇಳಿದ್ದಾರೆ. ಇವರು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಅಧ್ಯಕ್ಷರಾಗಿ ಮಾರ್ಸ್ ಆರ್ಬಿಟರ್ ಮಿಷನ್ (ಮಂಗಳಯಾನ) ತಂಡದ ನೇತೃತ್ವ ವಹಿಸಿದ್ದರು. MOM ಇಸ್ರೋದ ಚೊಚ್ಚಲ ಅಂತರ್ ಗ್ರಹ ಕಾರ್ಯವಾಗಿದೆ. ನವೆಂಬರ್ 5, 2013 ರಂದು ಉಡಾವಣೆ ಮಾಡಲಾಯಿತು, ಅದರ ಮೊದಲ ಪ್ರಯತ್ನದಲ್ಲಿ 2014 ರ ಸೆಪ್ಟೆಂಬರ್ 24 ರಂದು ಮಂಗಳನ ಕಕ್ಷೆಗೆ ಯಶಸ್ವಿಯಾಗಿ ಸೇರಿಸಲಾಯಿತು.

ಚಂದ್ರನ ಕಪ್ಪು ಭಾಗದಲ್ಲಿ ಮಂಜುಗಡ್ಡೆ ಪತ್ತೆ!

MOM ಪ್ರಾಥಮಿಕವಾಗಿ ತಂತ್ರಜ್ಞಾನ ಪ್ರದರ್ಶನ ಉದ್ಯಮವಾಗಿದೆ. ಎಲ್ಲಾ ಮಿಷನ್ ಉದ್ದೇಶಗಳನ್ನು ಯಶಸ್ವಿಯಾಗಿ ಪೂರೈಸಲಾಗಿದೆ ಎಂದು ಬೆಂಗಳೂರಿನ ಪ್ರಧಾನ ಕಚೇರಿಯ ಭಾರತದ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ(ISRO)ಯ ಅಧಿಕಾರಿಗಳು ತಿಳಿಸಿದ್ದಾರೆ. ವ್ಯವಸ್ಥೆಗಳು ಮತ್ತು ಉಪವ್ಯವಸ್ಥೆಗಳ ವಿನ್ಯಾಸ ಮತ್ತು ಸಾಕ್ಷಾತ್ಕಾರ, ಅಂತರ್ ಗ್ರಹ ಕಾರ್ಯಾಚರಣೆಗೆ ಉಡಾವಣೆ, ಇತರ ಗ್ರಹದ ಕಕ್ಷೆಯಲ್ಲಿ ಅಳವಡಿಕೆ, ಬಾಹ್ಯಾಕಾಶ ನೌಕೆಯ ಕಾರ್ಯಾಚರಣೆ ಮತ್ತು ಮಂಗಳ ಕಕ್ಷೆಯ ಸುತ್ತ ವೈಜ್ಞಾನಿಕ ಉಪಕರಣಗಳು ಸೇರಿದಂತೆ ಇನ್ನಿತರ ಸಂಗತಿಗಳ ಬಗ್ಗೆ ತಿಳಿದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ಈಗ ದೊರತೆ ಅನುಭವದಿಂದಾಗಿ ಭವಿಷ್ಯದ ಅಂತರ್ ಗ್ರಹ ಕಾರ್ಯಗಳನ್ನು ಕೈಗೊಳ್ಳಲು ಇಸ್ರೋ ವಿಜ್ಞಾನಿಗಳ ಆತ್ಮವಿಶ್ವಾಸವನ್ನು ಹೆಚ್ಚಿಸಲು ಕಾರಣವಾಗಿದೆ. ISRO ಬಾಹ್ಯಾಕಾಶ ನೌಕೆ ಮತ್ತು ಅದರ ಐದು ವೈಜ್ಞಾನಿಕ ಸಾಧನಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ಅಧಿಕಾರಿಗಳು MOM ಬಾಹ್ಯಾಕಾಶ ನೌಕೆಯಿಂದ ಪಡೆಯುತ್ತಿರುವ ದತ್ತಾಂಶಗಳ ವೈಜ್ಞಾನಿಕ ವಿಶ್ಲೇಷಣೆ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.

ಬಾಹ್ಯಾಕಾಶ ನೌಕೆಯ ಆರೋಗ್ಯದ ಬಗ್ಗೆ, MOM ನ ಕಾರ್ಯಕ್ರಮ ನಿರ್ದೇಶಕರಾಗಿದ್ದ ಎಂ ಅಣ್ಣಾದೊರೈ(M Annadurai), ಬಾಹ್ಯಾಕಾಶ ನೌಕೆಯ "ಚಲಿಸುವ ಅಂಶಗಳು ಕೆಲವು ಸಮಸ್ಯೆಗಳನ್ನು ಎದುರಿಸುತ್ತಿವೆ ಮತ್ತು ಕೆಲವು ಅಂಶಗಳನ್ನು ನಾವು ಬದಲಾಯಿಸಬೇಕಾಗಿದೆ" ಎಂದು ಹೇಳಿದರು. "ನಾವು ಏಳನೇ ವರ್ಷದಲ್ಲಿದ್ದೇವೆ ಎಂದು ಪರಿಗಣಿಸಿ ಬಾಹ್ಯಾಕಾಶ ನೌಕೆಯ ಆರೋಗ್ಯವು ಉತ್ತಮವಾಗಿದೆ" ಎಂದು ಅಣ್ಣಾದೊರೈ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಬಾಹ್ಯಾಕಾಶ ನೌಕೆ ಬಹುಶಃ ಇನ್ನೂ ಒಂದು ವರ್ಷದ ಮಿಷನ್ ಲೈಫ್ ಹೊಂದಿರಬೇಕೆಂದು ಅವರು ನಿರೀಕ್ಷಿಸುತ್ತಾರೆ.

ಆಪಲ್‌ನಿಂದ ಹೊಸ ಟೆಕ್ನಾಲಜಿ; ಬಳಕೆದಾರರ ಆತಂಕ, ಖಿನ್ನತೆ ಗುರುತಿಸಲಿದೆ ಐಫೋನ್?

ಸುದೀರ್ಘ ಕಾರ್ಯಾಚರಣೆಯ ಕಾರಣಗಳಿಗಾಗಿ, ಅಣ್ಣಾದೊರೈ ಅವರು ಇಸ್ರೋ ಚಂದ್ರಯಾನ -1(ISRO Chandrayan 1) ಸಾಹಸದಿಂದ ಪಾಠಗಳನ್ನು ಕಲಿತ ನಂತರ, ಬಾಹ್ಯಾಕಾಶ ನೌಕೆಯನ್ನು ಪುನರ್ರಚಿಸುವ ಮತ್ತು ಇಂಧನ ನಿರ್ವಹಣೆಯ ಆಪ್ಟಿಮೈಸೇಶನ್, ತಿದ್ದುಪಡಿಗಳನ್ನು ಮಾಡಿದೆ ಎಂದು ಹೇಳಿದರು.

ಭೂಮಿಯ ರಿಮೋಟ್ ಸೆನ್ಸಿಂಗ್ ಉಪಗ್ರಹಗಳು ಸಾಮಾನ್ಯವಾಗಿ ಏಳರಿಂದ ಒಂಬತ್ತು ವರ್ಷಗಳ ಮಿಷನ್ ಲೈಫ್ ಹೊಂದಿರುವುದನ್ನು ಗಮನಿಸಿದ ಅವರು, ಮಂಗಳನ ಸುತ್ತಲೂ ಬಾಹ್ಯಾಕಾಶ ನೌಕೆ ಇಷ್ಟು ದೀರ್ಘಾವಧಿಯವರೆಗೆ ಕಾರ್ಯನಿರ್ವಹಿಸಬಹುದೆಂದು ಗೊತ್ತಾಗಿರುವದು ಅತ್ಯಂತ ತೃಪ್ತಿಕರ ಕ್ಷಣವಾಗಿದೆ ಎಂದು ಹೇಳಿದರು. MOM ನ ವೈಜ್ಞಾನಿಕ ಉತ್ಪಾದನೆಯು Low ಎಂದು ಕೆಲವು ಕಡೆಗಳಲ್ಲಿ ಕೆಲವು ಟೀಕೆಗಳಿಗೆ ಉತ್ತರವಾಗಿ ಅಣ್ಣಾದೊರೈ ಇದು ಹೆಚ್ಚು ತಂತ್ರಜ್ಞಾನ-ಪ್ರದರ್ಶನ ಯೋಜನೆಯಾಗಿದೆ ಎಂದು ಹೇಳಿದ್ದಾರೆ. 

ಪಿಎಸ್‌ಎಲ್‌ವಿ(PSLV) ಮೂಲಕ ಬಾಹ್ಯಾಕಾಶ ನೌಕೆಯನ್ನು ಉಡಾಯಿಸಲಾಯಿತು ಮತ್ತು ಜಿಎಸ್‌ಎಲ್‌ವಿ(PSLV) ಆಗ ಕಾರ್ಯಾಚರಣೆಯ ಸ್ಥಿತಿಯಲ್ಲಿರಲಿಲ್ಲ ಎಂದು ಅವರು ಗಮನಸೆಳೆದರು. ವೈಜ್ಞಾನಿಕ ಉಪಕರಣಗಳಿಗಾಗಿ ISRO ಕೇವಲ 15 ಕೆಜಿಯನ್ನು ಮಾತ್ರ ಹಂಚಬಹುದು, ಮತ್ತು ವಿಜ್ಞಾನಿಗಳು ಅವುಗಳನ್ನು ಅಭಿವೃದ್ಧಿಪಡಿಸಲು ಲಭ್ಯವಿರುವ ಸಮಯ ಕೇವಲ 18-19 ತಿಂಗಳುಗಳು.

ಇಳೆಗೆ ಮುತ್ತಿಕ್ಕಿದ ಸ್ಪೇಸ್ಎಕ್ಸ್ ಇನ್ಸಿಪಿರೇಷನ್-4 ನಾಗರಿಕ ಗಗನಯಾತ್ರಿಗಳು

"ನಾವು ಮಾಡಿದ್ದಕ್ಕಿಂತ ಉತ್ತಮವಾಗಿ ನಾವು ಮಾಡಬಹುದಿತ್ತು ಎಂದು ನಾನು ಭಾವಿಸುವುದಿಲ್ಲ" ಎಂದು ಅಣ್ಣಾದೊರೈ ಹೇಳಿದರು. ಬಾಹ್ಯಾಕಾಶ ನೌಕೆ ಈಗಾಗಲೇ ಮೂರು ಮಂಗಳ ವರ್ಷಗಳನ್ನು ಒಳಗೊಂಡಿದೆ ಎಂದು ಇಸ್ರೋ ಅಧಿಕಾರಿಗಳು ತಿಳಿಸಿದ್ದಾರೆ (ಒಂದು ಮಂಗಳ ವರ್ಷವು ಎರಡು ಭೂಮಿಯ ವರ್ಷಗಳು). "ಮಂಗಳನಲ್ಲಿ ಒಂದು ಋತುವಿನಿಂದ ಇನ್ನೊಂದು ಋತುವಿಗೆ, ಒಂದು ಮಂಗಳ ವರ್ಷದಿಂದ ಇನ್ನೊಂದು ಮಂಗಳ ವರ್ಷಕ್ಕೆ ಹೇಗೆ ಬದಲಾವಣೆಗಳು ಸಂಭವಿಸುತ್ತವೆ ಎಂಬುದನ್ನು ನಾವು ನೋಡಿದ್ದೇವೆ" ಎಂದು ಅವರು ಹೇಳಿದರು.

Follow Us:
Download App:
  • android
  • ios