ಬ್ರಹ್ಮಾಂಡದಲ್ಲಿ 136 ಜ್ಯೋತಿರ್ವರ್ಷ ದೂರದಲ್ಲಿ ಅಡಗಿದ್ದ ಮಸುಕಾದ ಗ್ಯಾಲಕ್ಸಿ ಪತ್ತೆ!

ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್‌ನ ಸಂಶೋಧಕರ ತಂಡವು ಅಂತರರಾಷ್ಟ್ರೀಯ ಸಹಯೋಗಿಗಳೊಂದಿಗೆ ತಿಳಿದಿರುವ ಇಂಟರ‍್ಯಾಕ್ಟಿಂಗ್ ಗೆಲಾಕ್ಸಿ ಅಧ್ಯಯನ ಮಾಡುವಾಗ ಈ ನಕ್ಷತ್ರಪುಂಜವನ್ನು ಗುರುತಿಸಿದೆ. 

Indian researchers discover faint galaxy forming new stars 136 light years away mnj

ಬೆಂಗಳೂರು (ಮಾ. 02): ಭಾರತೀಯ ಖಗೋಳಶಾಸ್ತ್ರಜ್ಞರು ಮಸುಕಾದ ಆದರೆ ಇದುವರೆಗೆ ಪತ್ತೆಯಾಗದ ನಕ್ಷತ್ರ ರೂಪಿಸುವ ಗ್ಯಾಲಕ್ಸಿವೊಂದನ್ನು ಕಂಡುಹಿಡಿದಿದ್ದಾರೆ. ಇದು ದೊಡ್ಡದಾದ, ಪ್ರಕಾಶಮಾನವಾದ ಗ್ಯಾಲಕ್ಸಿ ಮುಂದೆ ಅಡಗಿಕೊಂಡಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಭೂತದಂತಹ ನೋಟವನ್ನು ಹೊಂದಿರುವ ಗ್ಯಾಲಕ್ಸಿ ಅದರೊಳಗೆ ಇನ್ನೂ ರೂಪುಗೊಳ್ಳುತ್ತಿರುವ ನಕ್ಷತ್ರಗಳ ಸುಳಿವುಗಳನ್ನುಹೊಂದಿದ್ದು ನಮ್ಮ ಗ್ಯಾಲಕ್ಸಿ ನೆರೆಹೊರೆಯಲ್ಲಿ ಕೇವಲ 136 ಮಿಲಿಯನ್ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿದೆ.

ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್‌ನ ಸಂಶೋಧಕರ ತಂಡವು ಅಂತರಾಷ್ಟ್ರೀಯ ಸಹಯೋಗಿಗಳೊಂದಿಗೆ ತಿಳಿದಿರುವ ಇಂಟರ‍್ಯಾಕ್ಟಿಂಗ್ ಗೆಲಾಕ್ಸಿ (Interacting Galaxy), NGC6902A ಅಧ್ಯಯನ ಮಾಡುವಾಗ ಈ ಹೊಸ ಗ್ಯಾಲಕ್ಸಿಯನ್ನು ಗುರುತಿಸದ್ದಾರೆ. ಗ್ಯಾಲಕ್ಸಿ NGC6902Aನ ನೈಋತ್ಯ ಹೊರ ಪ್ರದೇಶದ ಬಣ್ಣದ ಚಿತ್ರವು, ನೀಲಿ ಹೊರಸೂಸುವಿಕೆಯನ್ನು ತೋರಿಸಿದೆ ಎಂದು ಖಗೋಳಶಾಸ್ತ್ರಜ್ಞರು ಗಮನಿಸಿದ ಬಳಿಕೆ ಹೊಸ ಗ್ಯಾಲಕ್ಸಿಯ ಮೊದಲ ಸುಳಿವು ಸಿಕ್ಕಿದೆ.

ಇಂಟರ‍್ಯಾಕ್ಟಿಂಗ್ ಗೆಲಕ್ಸಿಗಳು (ಘರ್ಷಣೆ ಗೆಲಕ್ಸಿಗಳು) ಪರಸ್ಪರರ ಗುರುತ್ವಾಕರ್ಷಣೆಯ ಕ್ಷೇತ್ರಗಳ ಮೂಲಕ ಅಡಚಣೆಗೆ ಕಾರಣವಾಗುವ ಗೆಲಕ್ಸಿಗಳಾಗಿವೆ. ಈ ಗೆಲಕ್ಸಿಗಳು ವಿಲೀನಗೊಳ್ಳುವುದರಿಂದ ಹೊಸ ನಕ್ಷತ್ರಗಳ ಸೃಷ್ಟಿಗೆ ಕಾರಣವಾಗಬಹುದು.

ಇದನ್ನೂ ಓದಿ: ಸೂರ್ಯನ ಅತ್ಯಂತ ಸ್ಪಷ್ಟ ಚಿತ್ರ ಸೆರೆಹಿಡಿದ ಯುರೋಪಿಯನ್ ಸೋಲಾರ್ ಆರ್ಬಿಟರ್!

ಗುರುತಿಸಲು ಕಷ್ಟ: 136 ಜ್ಯೋತಿರ್ವಷ ದೂರದಲ್ಲಿ ಗ್ಯಾಲಕ್ಸಿಯು ಕಡಿಮೆ ಮೇಲ್ಮೈ ಹೊಳಪನ್ನು ಹೊಂದಿದ್ದು, ಅದು ಸುತ್ತಮುತ್ತಲಿನ ರಾತ್ರಿಯ ಆಕಾಶಕ್ಕಿಂತ ಕನಿಷ್ಠ ಹತ್ತು ಪಟ್ಟು ದುರ್ಬಲವಾಗಿರುತ್ತದೆ, ಹೀಗಾಗಿ ಇದನ್ನು ಗುರುತಿಸಲು ಕಷ್ಟವಾಗುತ್ತದೆ. ಆದಾಗ್ಯೂ, ಆಪ್ಟಿಕಲ್ ಟೆಲಿಸ್ಕೋಪ್‌ಗಳು ಹೆಚ್ಚು ಹೆಚ್ಚು ಶಕ್ತಿಯುತವಾಗುತ್ತಾ ಹೋದಂತೆ, ಈ ಗೆಲಕ್ಸಿಗಳಿಂದ ಹೊರಸೂಸಲ್ಪಡುವ ಈ ಮಸುಕಾದ ಹೊಳಪನ್ನು ಪಡೆದುಕೊಳ್ಳಲು ಸಮರ್ಥವಾಗಿವೆ. ಅಂತಹ ಮಸುಕಾದ ಗೆಲಕ್ಸಿಗಳು ಬ್ರಹ್ಮಾಂಡದ ದ್ರವ್ಯರಾಶಿಯ 15% ನಷ್ಟು ಭಾಗವನ್ನು ಹೊಂದಿರಬಹುದು ಎಂದು ಸಂಶೋಧಕರು ಹೇಳಿದ್ದಾರೆ.

ಈ ಹೊರಸೂಸುವಿಕೆಗಳು ಅತ್ಯಂತ ಬೃಹತ್  ನಕ್ಷತ್ರಪುಂಜದಲ್ಲಿ ಅತ್ಯಂತ ಅಲ್ಪಾವಧಿಯ ನಕ್ಷತ್ರಗಳಾದ O ಮತ್ತು B ಪ್ರಕಾರದ ಯುವ ನಕ್ಷತ್ರಗಳಿಂದ ( Young Stars) ಬರುತ್ತಿದ್ದವು. ಈ ಹೆಚ್ಚುವರಿ ಬೆಳಕು, ಪರಸ್ಪರ ಕ್ರಿಯೆಯ ಕಾರಣವನ್ನು ನಿರ್ಧರಿಸಲು ಹಾಗೂ ವಿಲಕ್ಷಣ ವೈಶಿಷ್ಟ್ಯವನ್ನು ಹೆಚ್ಚು ವಿವರವಾಗಿ ತನಿಖೆ ಮಾಡಲು ಸಂಶೋಧಕರನ್ನು ಪ್ರೇರೇಪಿಸಿತು.

ಸ್ಪೆಕ್ಟ್ರಾದಲ್ಲಿನ ಹೊರಸೂಸುವಿಕೆ ರೇಖೆಗಳನ್ನು ಬಳಸಿಕೊಂಡು ಹಿಂದೆ ತಿಳಿದಿರುವ ನಕ್ಷತ್ರಪುಂಜ ಮತ್ತು ಮಸುಕಾದ ನಕ್ಷತ್ರ-ರೂಪಿಸುವ ಪ್ರದೇಶಗಳಾದ NGC6902Aನ ಅಂತರವನ್ನು ಸಂಶೋಧಕರು ಅಳೆದಿದ್ದಾರೆ. ಈಗ ಈ ನಕ್ಷತ್ರ-ರೂಪಿಸುವ ಪ್ರದೇಶಗಳು ಸುಮಾರು 136 ಮಿಲಿಯನ್ ಜ್ಯೋತಿರ್ವಷಗಳ್ಟು ದೂರದಲ್ಲಿವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಆದರೆ NGC6902Aಯ ಅಂತರವು ಸುಮಾರು 825 ಮಿಲಿಯನ್ ಜ್ಯೋತಿರ್ವರ್ಷಗಳು. ಹೀಗಾಗಿ ಪ್ರಸರಣ ನೀಲಿ ಹೊರಸೂಸುವಿಕೆಯು ಮುಂಭಾಗದ ನಕ್ಷತ್ರಪುಂಜದಿಂದ ಬಂದಿದೆ ಎಂದರ್ಥ. 

ಇದನ್ನೂ ಓದಿ: Planets beyond Solar ನಮ್ಮ ಸೌರವ್ಯೂಹದ ಆಚೆ 5,000 ಕ್ಕೂ ಹೆಚ್ಚು ಪ್ರಪಂಚ!

ಇದನ್ನು UVIT J2022 ಎಂದು ಹೆಸರಿಸಲಾಗಿದ್ದು, ಗ್ಯಾಲಕ್ಸಿಯು NGC 6902Aಯ ಬಾಲದ ಒಂದು ಭಾಗ ಅಥವಾ ಮತ್ತೊಂದು ಇಂಟರ‍್ಯಾಕ್ಟಿಂಗ್‌ ಗ್ಯಾಲಕ್ಸಿ ಎಂದು ಈ ಹಿಂದೆ ತಪ್ಪಾಗಿ ಭಾವಿಸಲಾಗಿತ್ತು. 'ಆಸ್ಟ್ರೊನಮಿ & ಆಸ್ಟ್ರೋಫಿಸಿಕ್ಸ್' ಜರ್ನಲ್‌ನಲ್ಲಿ ಪ್ರಕಟವಾದ ಈ ಅಧ್ಯಯನವು, ಇದೇ ರೀತಿಯ ಮುಂಭಾಗದ ಅಥವಾ ಹಿನ್ನೆಲೆ ಗೆಲಕ್ಸಿಗಳೊಂದಿಗೆ ಅವುಗಳ ಸೂಪರ್‌ಪೋಸಿಷನ್‌ನಿಂದ ಇಂಟರ‍್ಯಾಕ್ಟಿಂಗ್ ಗೆಲಕ್ಸಿಗಳೆಂದು ತಪ್ಪಾಗಿ ಅರ್ಥೈಸಲಾದ ಪ್ರಸರಣ ಗೆಲಕ್ಸಿಗಳಿರುವ (Diffuse Galaxies) ಸಾಧ್ಯತೆಗಳನ್ನು ಹುಟ್ಟುಹಾಕುತ್ತದೆ. 

Indian researchers discover faint galaxy forming new stars 136 light years away mnj

ಬ್ಯಾರಿಯೋನಿಕ್ ಮ್ಯಾಟರ್: ಸಂಶೋಧನೆಯ ನೇತೃತ್ವವನ್ನು ಭಾರತದ ಜ್ಯೋತಿ ಯಾದವ್, ಮೌಸುಮಿ ದಾಸ್ ಮತ್ತು ಸುಧಾಂಶು ಬಾರ್ವೆ ಜೊತೆಗೆ ಕಾಲೇಜ್ ಡಿ ಫ್ರಾನ್ಸ್‌ನ ಫ್ರಾಂಕೋಯಿಸ್ ಕೊಂಬ್ಸ್ ವಹಿಸಿದ್ದರು.ನಮ್ಮ ಸುತ್ತಲೂ ಕಾಣುವ ವಸ್ತುವನ್ನು ಬ್ಯಾರಿಯೋನಿಕ್ ಮ್ಯಾಟರ್ (Baryonic Matter) ಎಂದು ಕರೆಯಲಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ಬ್ರಹ್ಮಾಂಡದ ದ್ರವ್ಯರಾಶಿಯ ಐದು ಪ್ರತಿಶತದಷ್ಟು ಬ್ಯಾರಿಯೋನಿಕ್ ಮ್ಯಾಟರ್ ಇರಬೇಕು ಎಂದು ಕಾಸ್ಮಾಲಾಜಿಕಲ್ ಅಧ್ಯಯನಗಳು ಸೂಚಿಸುತ್ತವೆ.

ಉಳಿದ ದ್ರವ್ಯರಾಶಿಯು ಡಾರ್ಕ್ ಮ್ಯಾಟರ್ ಮತ್ತು ಡಾರ್ಕ್ ಎನರ್ಜಿಯಂತಹ (Dark Mater or Energy) ಅಜ್ಞಾತ ರೂಪಗಳಿಂದ ಕೂಡಿರಬಹುದು. ಯೂನಿವರ್ಸ್‌ನಲ್ಲಿರುವ ಬ್ಯಾರಿಯೋನಿಕ್ ವಿಷಯದ ಐದು ಪ್ರತಿಶತದ ಬಗ್ಗೆ ನಮಗೆ ಇನ್ನೂ ಸ್ಪಷ್ಟವಾದ ತಿಳುವಳಿಕೆ ಇಲ್ಲ; ಎಲ್ಲಾ ಬ್ಯಾರಿಯನ್‌ಗಳು ಎಲ್ಲಿವೆ ಎಂದು ನಮಗೆ ತಿಳಿದಿಲ್ಲ. ಈ ದುರ್ಬಲ ಗೆಲಕ್ಸಿಗಳು ವಿಶ್ವದಲ್ಲಿ ಕಾಣೆಯಾದ ಬ್ಯಾರಿಯನ್‌ಗಳ ಮೂಲವನ್ನು ಅರ್ಥಮಾಡಿಕೊಳ್ಳಲು ಕೊಂಡಿಯಾಗಿ ಕಾರ್ಯನಿರ್ವಹಿಸುತ್ತವೆ.

Latest Videos
Follow Us:
Download App:
  • android
  • ios