ಸೂರ್ಯನ ಅತ್ಯಂತ ಸ್ಪಷ್ಟ ಚಿತ್ರ ಸೆರೆಹಿಡಿದ ಯುರೋಪಿಯನ್ ಸೋಲಾರ್ ಆರ್ಬಿಟರ್!
ಸೂರ್ಯನನ್ನು ಅಧ್ಯಯನ ಮಾಡುತ್ತಿರುವ ಯುರೋಪಿಯನ್ ಸೋಲಾರ್ ಆರ್ಬಿಟರ್ ನಮ್ಮ ನಕ್ಷತ್ರದ ಅತ್ಯಂತ ವಿವರವಾದ ಚಿತ್ರವನ್ನು ಕ್ಲಿಕ್ ಮಾಡಿದೆ. ಚಿತ್ರವು 83 ಮಿಲಿಯನ್‌ಗಿಂತಲೂ ಹೆಚ್ಚು ಪಿಕ್ಸೆಲ್‌ಗಳನ್ನು ಒಳಗೊಂಡಿದೆ.
Most detailed image of the Sun: ಯುರೋಪಿಯನ್ ಸೋಲಾರ್ ಆರ್ಬಿಟರ್, ಈ ತಿಂಗಳು ಸೂರ್ಯನಿಗೆ ಅತಿ ಹತ್ತಿರದಲ್ಲಿ ಸಾಗುತ್ತಿದ್ದು, ಇದು ನಮ್ಮ ಸೌರವ್ಯೂಹದ ಅತ್ಯಂತ ಪ್ರಕಾಶಮಾನವಾದ ನಕ್ಷತ್ರ ಸೂರ್ಯನ ಅತ್ಯಂತ ವಿವರವಾದ ಚಿತ್ರಗಳಲ್ಲಿ ಒಂದನ್ನು ಭೂಮಿಗೆ ಕಳುಹಿಸಿದೆ. ಇತ್ತೀಚಿನ ಚಿತ್ರ, ಮಾರ್ಚ್ 7 ರಂದು ಸೆರೆಹಿಡಿಯಲಾದ 25 ವಿಭಿನ್ನ ಚಿತ್ರಗಳ ಸಂಯೋಜನೆಯಾಗಿದ್ದು ಸೂರ್ಯನ ಅತ್ಯಂತ ಸ್ಪಷ್ಟ ಚಿತ್ರವನ್ನು ತೋರಿಸುತ್ತದೆ.
ಯುರೋಪಿಯನ್ ಬಾಹ್ಯಾಕಾಶ ನೌಕೆಯಲ್ಲಿರುವ ಎಕ್ಸ್‌ಟ್ರೀಮ್ ಅಲ್ಟ್ರಾವೈಲೆಟ್ ಇಮೇಜರ್ (ಇಯುಐ) ಚಿತ್ರವನ್ನು ಸೆರೆಹಿಡಿದಿದ್ದು ಹೆಚ್ಚಿನ ರೆಸಲ್ಯೂಶನ್‌ನಲ್ಲಿ ಸೂರ್ಯನ ಸಂಪೂರ್ಣ ಡಿಸ್ಕ್ ಮತ್ತು ಹೊರಗಿನ ವಾತಾವರಣವಾಗಿರುವ ಕರೋನಾವನ್ನು (corona) ತೋರಿಸುತ್ತದೆ. ಕರೋನಲ್ ಎನ್ವಿರಾನ್ಮೆಂಟ್ (SPICE) ಉಪಕರಣದ ಸ್ಪೆಕ್ಟ್ರಲ್ ಇಮೇಜಿಂಗ್‌ನಿಂದ ತೆಗೆದ ಮತ್ತೊಂದು ಚಿತ್ರವು 50 ವರ್ಷಗಳಲ್ಲಿಯೇ ತೆಗೆಸ ವಿಭಿನ್ನ ಚಿತ್ರವಾಗಿದೆ.
ಚಿತ್ರ ಸೆರೆಹಿಡಯಲು ನಾಲ್ಕು ಗಂಟೆ: ಸೋಲಾರ್ ಆರ್ಬಿಟರ್ ಸರಿಸುಮಾರು 75 ಮಿಲಿಯನ್ ಕಿಲೋಮೀಟರ್ ದೂರದಲ್ಲಿದ್ದಾಗ, ನಮ್ಮ ಪ್ರಪಂಚ ಮತ್ತು ಅದರ ಮೂಲ ನಕ್ಷತ್ರದ ನಡುವಿನ ಅರ್ಧದಾರಿಯಲ್ಲೇ ಚಿತ್ರಗಳನ್ನು ತೆಗೆಯಲಾಗಿದೆ. "ಪ್ರತಿ ಟೈಲ್ ಸುಮಾರು 10 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ, ಹೀಗಾಗಿ ಒಂದರ ನಂತರ ಒಂದರಂತೆ ತೆಗೆದುಕೊಳ್ಳಲಾಗಿದೆ, ಪೂರ್ಣ ಚಿತ್ರವನ್ನು ನಾಲ್ಕು ಗಂಟೆಗಳಿಗಿಂತ ಹೆಚ್ಚು ಕಾಲ ಸೆರೆಹಿಡಿಯಲಾಗಿದೆ, ಇದರಲ್ಲಿ ಬಾಹ್ಯಾಕಾಶ ನೌಕೆಯು ಒಂದು ವಿಭಾಗದಿಂದ ಮುಂದಿನ ಕಡೆಗೆ ಪಾಯಿಂಟ್ ಮಾಡುವ ಸಮಯವೂ ಸೇರಿದೆ" ಎಂದು ಐರೋಪ್ಯ ಬಾಹ್ಯಾಕಾಶ ಸಂಸ್ಥೆ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಎಕ್ಸ್‌ಟ್ರೀಮ್ ಅಲ್ಟ್ರಾವೈಲೆಟ್ ಇಮೇಜರ್‌ನ ಹೆಚ್ಚಿನ-ರೆಸಲ್ಯೂಶನ್ ದೂರದರ್ಶಕವು ಅಂತಹ ಹೆಚ್ಚಿನ ಪ್ರಾದೇಶಿಕ ರೆಸಲ್ಯೂಶನ್‌ನ ಚಿತ್ರಗಳನ್ನು ತೆಗೆದುಕೊಳ್ಳುತ್ತದೆ, ಸಂಪೂರ್ಣ ಸೂರ್ಯನನ್ನು ಆವರಿಸಲು 25 ಪ್ರತ್ಯೇಕ ಚಿತ್ರಗಳನ್ನು ಜೋಡಿಸುವುದು ಅಗತ್ಯವಿದೆ. ಒಟ್ಟಾರೆಯಾಗಿ ಅಂತಿಮ ಚಿತ್ರವು 9148 x 9112 ಪಿಕ್ಸೆಲ್ ಗ್ರಿಡ್‌ನಲ್ಲಿ 83 ಮಿಲಿಯನ್‌ಗಿಂತಲೂ ಹೆಚ್ಚು ಪಿಕ್ಸೆಲ್‌ಗಳನ್ನು ಹೊಂದಿದೆ ಎಂದು ಏಜೆನ್ಸಿ ಹೇಳಿದೆ, ಇದು 4K ಟಿವಿ ಪರದೆಯು ಪ್ರದರ್ಶಿಸಬಹುದಾದ ಚಿತ್ರಕ್ಕಿಂತ ಹತ್ತು ಪಟ್ಟು ಉತ್ತಮವಾಗಿದೆ.
ಮಿಲಿಯನ್ ಡಿಗ್ರಿ ಸೆಲ್ಸಿಯಸ್ ತಾಪಮಾನ: ಚಿತ್ರದಲ್ಲಿ ಸೆರೆ ಹಿಡಿಯಲಾಗಿರುವ ಕರೋನಾ ಅಂದರೆ ಸೂರ್ಯನ ಮೇಲಿನ ವಾತಾವರಣ ಸುಮಾರು ಮಿಲಿಯನ್ ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ಹೊಂದಿದೆ. ಸೂರ್ಯನನ್ನು ಸ್ನ್ಯಾಪ್ ಮಾಡುವುದರ ಹೊರತಾಗಿ, ಬೋರ್ಡ್‌ನಲ್ಲಿರುವ ಉಪಕರಣಗಳು ದತ್ತಾಂಶವನ್ನು ಕೂಡ ಸಂಗ್ರಹಿಸಿವೆ. ಕರೋನಾದಿಂದ ಸೂರ್ಯನ ವಾತಾವರಣದಲ್ಲಿನ ಪದರಗಳನ್ನು ಪತ್ತೆಹಚ್ಚಿ, ಮೇಲ್ಮೈಗೆ ಹತ್ತಿರದ ಕ್ರೋಮೋಸ್ಫಿಯರ್ ಎಂದು ಕರೆಯಲ್ಪಡುವ ಪದರಕ್ಕೆ ಅಧ್ಯಯನ ಕೂಡ ನಡೆಸಿವೆ.
" ಇದು ಕೇವಲ ಪ್ರಾರಂಭವಾಗಿದೆ, ಮುಂಬರುವ ವರ್ಷಗಳಲ್ಲಿ ಬಾಹ್ಯಾಕಾಶ ನೌಕೆಯು ಪದೇ ಪದೇ ಸೂರ್ಯನ ಹತ್ತಿರ ಹಾರುತ್ತದೆ. ಇದು ಸೂರ್ಯನ ಹಿಂದೆ ಗಮನಿಸದ ಧ್ರುವ ಪ್ರದೇಶಗಳನ್ನು ವೀಕ್ಷಿಸಲು ಕ್ರಮೇಣ ತನ್ನ ದೃಷ್ಟಿಕೋನವನ್ನು ಹೆಚ್ಚಿಸುತ್ತದೆ" ಎಂದು ESA ಹೇಳಿದೆ.
ಯುರೋಪಿಯನ್ ಸೋಲಾರ್ ಆರ್ಬಿಟರ್ ಪ್ರಸ್ತುತ ಬುಧನ (Mercury) ಕಕ್ಷೆಯಲ್ಲಿದ್ದು ಮಾರ್ಚ್ 26 ರಂದು ಸೂರ್ಯನಿಗೆ ಹತ್ತಿರವಾಗಲು ಸಿದ್ಧವಾಗಿದೆ. ಬಾಹ್ಯಾಕಾಶದ ನಿರ್ವಾತದಲ್ಲಿ ಪರಿಸರದ ಮೇಲೆ ಪರಿಣಾಮ ಬೀರುವ ಸೌರ ಮಾರುತ ಎಂದು ಕರೆಯಲ್ಪಡುವ ಕಣಗಳ ನಿರಂತರ ಸ್ಟ್ರೀಮನ್ನು ತನಿಖೆ ಮಾಡುತ್ತದೆ. ಮಾರ್ಚ್ 26 ರಂದು ಸೋಲಾರ್ ಆರ್ಬಿಟರ್ ತನ್ನ ಹೊಸ ಗಮ್ಯಸ್ಥಾನವನ್ನು ತಲುಪಿದಾಗ, ಅದು ಸೂರ್ಯನಿಂದ ಭೂಮಿಗೆ ಇರುವ ದೂರದ ಮೂರನೇ ಒಂದು ಭಾಗಕ್ಕಿಂತ ಕಡಿಮೆಯಿರುತ್ತದೆ.