ಚಂದ್ರನ ಅಂಗಳದಿಂದ ಮಂಗಳ ಯಾನ: ನಾಸಾ ಯೋಜನೆಗೆ ಭಾರತೀಯ ಮೂಲದ ಕ್ಷತ್ರಿಯನ ಸಾರಥ್ಯ..!
ಅಮಿತ್ ಕ್ಷತ್ರಿಯ ಅವರು ಅಮೆರಿಕದ ಕ್ಯಾಲಿಫೋರ್ನಿಯಾದ ಪಸಾಡೆನಾದಲ್ಲಿರುವ ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಗಣಿತಶಾಸ್ತ್ರದಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಪದವಿ ಹಾಗೂ ಆಸ್ಟಿನ್‌ನಲ್ಲಿರುವ ಟೆಕ್ಸಾಸ್ ವಿಶ್ವವಿದ್ಯಾಲಯದಿಂದ ಗಣಿತಶಾಸ್ತ್ರದಲ್ಲಿ ಮಾಸ್ಟರ್ ಆಫ್ ಆರ್ಟ್ಸ್ ಸ್ನಾತಕೋತ್ತರ ಪದವಿಯನ್ನು ಹೊಂದಿದ್ದಾರೆ.
ವಾಷಿಂಗ್ಟನ್ (ಏಪ್ರಿಲ್ 1, 2023): ಭಾರತೀಯ ಮೂಲದ ಸಾಫ್ಟ್‌ವೇರ್ ಮತ್ತು ರೋಬೋಟಿಕ್ಸ್ ಎಂಜಿನಿಯರ್ ಅನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಹೊಸದಾಗಿ ಸ್ಥಾಪಿಸಿದ ಮೂನ್ ಟು ಮಾರ್ಸ್ (ಚಂದ್ರನ ಅಂಗಳದಿಂದ ಮಂಗಳ ಯಾನ) ಕಾರ್ಯಕ್ರಮದ ಮೊದಲ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಈ ಕಾರ್ಯಕ್ರಮದೊಂದಿಗೆ, ಕೆಂಪು ಗ್ರಹಕ್ಕೆ ಚಂದ್ರನ ಅಂಗಳದಿಂದ ಪ್ರಯಾಣಿಸಲು ನಾಸಾ ಯೋಜಿಸಿದೆ. ಅಮಿತ್ ಕ್ಷತ್ರಿಯ ಅವರು ಕಚೇರಿಯ ಮೊದಲ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿದ್ದಾರೆ, ಇದು ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ನಾಸಾ ಸಂಸ್ಥೆ ಗುರುವಾರ ಪ್ರಕಟಣೆಯಲ್ಲಿ ತಿಳಿಸಿದೆ. ಈ ಹೊಸ ಕಚೇರಿಯು ಎಕ್ಸ್‌ಪ್ಲೋರೇಶನ್ ಸಿಸ್ಟಮ್ಸ್ ಡೆವಲಪ್‌ಮೆಂಟ್ ಮಿಷನ್ ಡೈರೆಕ್ಟರೇಟ್‌ನಲ್ಲಿ ನೆಲೆಸಿದೆ. ಅದರ ಅಸೋಸಿಯೇಟ್ ಅಡ್ಮಿನಿಸ್ಟ್ರೇಟರ್ ಜಿಮ್ ಫ್ರೀಗೆ ರಿಪೋರ್ಟ್ ಮಾಡಬೇಕು ಎಂದೂ ವರದಿ ಹೇಳಿದೆ.
"ಮೂನ್ ಟು ಮಾರ್ಸ್ ಪ್ರೋಗ್ರಾಂ ಆಫೀಸ್ ಚಂದ್ರನತ್ತ ನಮ್ಮ ದಿಟ್ಟ ಕಾರ್ಯಾಚರಣೆಗಳನ್ನು ಕೈಗೊಳ್ಳಲು ನಾಸಾವನ್ನು ತಯಾರಿಸಲು ಸಹಾಯ ಮಾಡುತ್ತದೆ ಮತ್ತು ಮಂಗಳ ಗ್ರಹದಲ್ಲಿ ಮೊದಲ ಮಾನವರನ್ನು ಇಳಿಸಲು ಸಹಾಯ ಮಾಡುತ್ತದೆ" ಎಂದು ನಾಸಾ ಆಡಳಿತಾಧಿಕಾರಿ ಬಿಲ್ ನೆಲ್ಸನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. "ಪರಿಶೋಧನೆಯ ಸುವರ್ಣಯುಗವು ಇದೀಗ ನಡೆಯುತ್ತಿದೆ, ಮತ್ತು ಈ ಹೊಸ ಕಚೇರಿಯು ಕೆಂಪು ಗ್ರಹಕ್ಕೆ ಮಾನವೀಯತೆಯ ಮುಂದಿನ ಸ್ಥಳವನ್ನು ತಯಾರಿಸಲು ಅಗತ್ಯವಾದ ದೀರ್ಘಾವಧಿಯ ಚಂದ್ರನ ಉಪಸ್ಥಿತಿಯನ್ನು ಯಶಸ್ವಿಯಾಗಿ ಸ್ಥಾಪಿಸಲು ನಾಸಾ ಸಹಾಯ ಮಾಡುತ್ತದೆ." ಎಂದು ಮಾಹಿತಿ ನೀಡಿದ್ದಾರೆ.
ಇದನ್ನು ಓದಿ: ಮಾರ್ಚ್ 28 ರಂದು ಬಾನಂಗಳದಲ್ಲಿ ಖಗೋಳ ವಿಸ್ಮಯ: ಒಟ್ಟಿಗೆ ಕಾಣಿಸಿಕೊಳ್ಳಲಿವೆ 5 ಗ್ರಹಗಳು..!
ಹಾರ್ಡ್‌ವೇರ್ ಅಭಿವೃದ್ಧಿ, ಮಿಷನ್ ಏಕೀಕರಣ ಮತ್ತು ಅಪಾಯ ನಿರ್ವಹಣೆಯಂತಹ ಕಾರ್ಯಗಳು ಕಾರ್ಯಕ್ರಮದ ಒಂದು ಭಾಗವಾಗಿರುತ್ತದೆ. ಇದು ವೈಜ್ಞಾನಿಕ ಆವಿಷ್ಕಾರದ ಹೊಸ ಯುಗವನ್ನು ತೆರೆಯಲು ಮತ್ತು ಮಂಗಳ ಗ್ರಹಕ್ಕೆ ಮಾನವ ಕಾರ್ಯಾಚರಣೆಗಳಿಗೆ ತಯಾರಾಗಲು ಚಂದ್ರನಲ್ಲಿ ಆರ್ಟೆಮಿಸ್ ಕಾರ್ಯಾಚರಣೆಗಳನ್ನು ಬಳಸುತ್ತದೆ.
ಅಮಿತ್ ಕ್ಷತ್ರಿಯ ಅವರು 2003 ರಲ್ಲಿ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ಸಾಫ್ಟ್‌ವೇರ್ ಎಂಜಿನಿಯರ್, ರೋಬೋಟಿಕ್ಸ್ ಎಂಜಿನಿಯರ್ ಮತ್ತು ಬಾಹ್ಯಾಕಾಶ ನೌಕೆ ನಿರ್ವಾಹಕರಾಗಿದ್ದು, ಪ್ರಾಥಮಿಕವಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ (ಐಎಸ್‌ಎಎಸ್) ರೊಬೊಟಿಕ್ ಜೋಡಣೆಯ ಮೇಲೆ ಕೇಂದ್ರೀಕರಿಸಿದ್ದಾರೆ.
ಇದನ್ನೂ ಓದಿ: ಇಸ್ರೋ ಮತ್ತೊಂದು ಸಾಧನೆ: ನಿರುಪಯುಕ್ತ ಉಪಗ್ರಹವನ್ನು ಯಶಸ್ವಿಯಾಗಿ ಇಳಿಸಿದ ಬಾಹ್ಯಾಕಾಶ ಸಂಸ್ಥೆ
ಅಮಿತ್ ಕ್ಷತ್ರಿಯ ಚಂದ್ರ ಮತ್ತು ಮಂಗಳ ಗ್ರಹಗಳಿಗೆ ಮಾನವ ಕಾರ್ಯಾಚರಣೆಗಳಿಗಾಗಿ ಕಾರ್ಯಕ್ರಮ ಯೋಜನೆ ಮತ್ತು ಅನುಷ್ಠಾನಕ್ಕೆ ಜವಾಬ್ದಾರನಾಗಿರುತ್ತಾರೆ. ಅವರು ಈ ಹಿಂದೆ ಕಾಮನ್ ಎಕ್ಸ್‌ಪ್ಲೋರೇಶನ್ ಸಿಸ್ಟಮ್ಸ್ ಡೆವಲಪ್‌ಮೆಂಟ್‌ಗಾಗಿ ಆಕ್ಟಿಂಗ್ ಡೆಪ್ಯೂಟಿ ಅಸೋಸಿಯೇಟ್ ಅಡ್ಮಿನಿಸ್ಟ್ರೇಟರ್ ಆಗಿ ಸೇವೆ ಸಲ್ಲಿಸಿದ್ದಾರೆ. ಈಗ ಹೊಸ ಕಚೇರಿಯಲ್ಲಿ ಬರುವ ಹಲವಾರು ಕಾರ್ಯಕ್ರಮಗಳಲ್ಲಿ ನಾಯಕತ್ವ ಮತ್ತು ಏಕೀಕರಣವನ್ನು ಒದಗಿಸುತ್ತಿದ್ದಾರೆ.
ಅಮಿತ್ ಕ್ಷತ್ರಿಯ ಅವರು ಅಮೆರಿಕದ ಕ್ಯಾಲಿಫೋರ್ನಿಯಾದ ಪಸಾಡೆನಾದಲ್ಲಿರುವ ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಗಣಿತಶಾಸ್ತ್ರದಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಪದವಿ ಹಾಗೂ ಆಸ್ಟಿನ್‌ನಲ್ಲಿರುವ ಟೆಕ್ಸಾಸ್ ವಿಶ್ವವಿದ್ಯಾಲಯದಿಂದ ಗಣಿತಶಾಸ್ತ್ರದಲ್ಲಿ ಮಾಸ್ಟರ್ ಆಫ್ ಆರ್ಟ್ಸ್ ಸ್ನಾತಕೋತ್ತರ ಪದವಿಯನ್ನು ಹೊಂದಿದ್ದಾರೆ. ಅವರು ವಿಸ್ಕಾನ್ಸಿನ್‌ನ ಬ್ರೂಕ್‌ಫೀಲ್ಡ್‌ನಲ್ಲಿ ಜನಿಸಿದ್ದಾರೆ.
ಇದನ್ನೂ ಓದಿ: ಚಂದ್ರಯಾನ - 3ಗೆ ಬಲ: ಪ್ರಮುಖ ರಾಕೆಟ್ ಎಂಜಿನ್ ಪರೀಕ್ಷೆಯಲ್ಲಿ ISROಗೆ ಯಶಸ್ಸು