ಭೂಮಿಗೆ ಅಪ್ಪಳಿಸುತ್ತಿದೆ ಸೌರ ಚಂಡಮಾರುತ, ವಿದ್ಯುತ್, ಮೊಬೈಲ್ ಸಿಗ್ನಲ್ ವ್ಯತ್ಯಯ ಆತಂಕ!
ಸೂರ್ಯನ ರಂಧ್ರದಿಂದ ಹೊರಸೂಸುವ ಸೌರ ಜ್ವಾಲೆ ಮಾರುತ ಇಂದು ಭೂಮಿಗೆ ಅಪ್ಫಳಿಸುತ್ತಿದೆ. ಇದರ ಪರಿಣಾಮವೂ ಭೂಮಿ ಮೇಲೆ ಆಗಲಿದೆ. ಈ ಕುರಿತು ವಿವರ ಇಲ್ಲಿವೆ.
ನವದೆಹಲಿ(ಆ.03): ಅತೀ ವೇಗದ ಸೌರ ಜ್ವಾಲೆ ಚಂಡಮಾರುತು ಇಂದು(ಆ.03) ಭೂಮಿಗೆ ಅಪ್ಪಳಿಸುತ್ತಿದೆ. ಸೂರ್ಯನ ರಂಧ್ರದಿಂದ ಹೊರಸೂಸುವ ಹೆಚ್ಚಿನ ಪ್ರಖರ ಹಾಗೂ ಅತೀ ವೇಗದ ಸೌರ ಮಾರುತಗಳು ಭೂಮಿಯ ಕಾಂತಕ್ಷೇತ್ರಕ್ಕೆ ಅಪ್ಪಳಿಸುತ್ತಿದೆ. ಸೌರ ಮೇಲ್ಮೈನಲ್ಲಿ ಸಂಭವಿಸುವ ಸ್ಫೋಟದಿಂದ ಪ್ರಖರ ಕಾಂತೀಯ ಕಿರಣಗಳು ಭೂಮಿಯತ್ತ ಅತೀ ವೇಗದಲ್ಲಿ ಚಲಿಸಲಿದೆ. ಈ ಸೌರಜ್ವಾಲೆ ಕಿರಣಗಳು ಸಂಯೋಜಿಸಿದಾಗ ಭೂಮಿಯಲ್ಲಿ ಚಂಡ ಮಾರುತಕ್ಕೆ ಕಾರಣವಾಗಬಹುದು. ಈ ಕುರಿತು ರಾಷ್ಟ್ರೀಯ ಸಾಗರ ವಾಯುಮಂಡಲ ಆಡಳಿತ ಬಾಹ್ಯಾಕಾಶ ಕೇಂದ್ರ ಈ ಸೂಚನೆ ನೀಡಿದೆ. ಸೂರ್ಯನ ಕಾಂತೀಯ ಕ್ಷೇತ್ರದ ರೇಖೆಗಳು ಬಾಹ್ಯಕಾಶದ ಹೊರಕ್ಕೆ ಚಿಮ್ಮುತ್ತದೆ. ಆದರೆ ಸೂರ್ಯನ ರಂಧ್ರಗಳಿಂದ ಹೊರಸೂಸುವ ಸೌರ ಜ್ವಾಲೆ ಚಂಡಮಾರುತ ಗಂಟೆಗೆ 2.9 ಮಿಲಿಯನ್ ಕಿಲೋಮೀಟರ್ ವೇಗದಲ್ಲಿ ಚಲಿಸುತ್ತದೆ. ಇದು ಅಪಾಯವನ್ನು ತಂದೊಡ್ಡಲಿದೆ ಎಂದು NOAA ಭವಿಷ್ಯ ನುಡಿದಿದೆ. ಇದರ ವೇಗ ಭೂಕಾಂತೀಯ ಬಿರುಗಾಳಿಗಳನ್ನು ಪ್ರಚೋದಿಸುತ್ತದೆ. ಈ ಚಂಡಮಾರುತ ಭೂಮಿಯ ಕಾಂತೀಯ ಕ್ಷೇತ್ರವೂ ಶಕ್ತಿಯುತ ಕಣಗಳ ಜ್ವಾಲೆಗಳಿಂದ ಸಂಕುಚಿತಗೊಳ್ಳುತ್ತಿದೆ. ಇದರಿಂದ ಭೂಮಿಯಲ್ಲಿ ಕೆಲ ಪರಿಣಾಮಗಳನ್ನು ಬೀರಲಿದೆ.
G1 ಭೂಕಾಂತಿಯಾ ಚಂಡಮಾರುತ ಏರಿಳಿತಗಳನ್ನು ಸೃಷ್ಟಿಸುತ್ತದೆ. ಹೀಗೆ ಅಪ್ಪಳಿಸುವ ಸೌರ ಜ್ವಾಲೆ ಚಂಡಮಾರುತಗಳು ಭೂಮಿಯಲ್ಲಿನ ವಿದ್ಯುತ್ ವ್ಯತ್ಯಯ ಮಾಡಲಿದೆ. ಮೊಬೈಲ್ ನೆಟ್‌ವರ್ಕ್, ಜಿಪಿಎಸ್ ಸಿಸ್ಟಮ್ ಸೇರಿದಂತೆ ಕೆಲ ಉಪಗ್ರಹಗಳ ಕಾರ್ಯಗಳ ಮೇಲೆ ಪರಿಣಾಮ ಬೀರುತ್ತದೆ. ಭೂಮಿ ಮೇಲೆ ಸೃಷ್ಟಿಯಾಗುವ ಮಾರುತವನ್ನು 1 ರಿಂದ 5 ವರೆಗಿನ G ಪ್ರಮಾಣದಲ್ಲಿ ಅಳೆಯಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಸೌರ ಮೇಲ್ಮೈನಲ್ಲಿನ ಸ್ಫೋಟ ಹಾಗೂ ಭೂಮಿಯಲ್ಲಿ ಸೃಷ್ಟಿಯಾಗುವ ಸೌರ ಜ್ವಾಲೆ ಚಂಡಮಾರುತದ ತೀವ್ರ G1 ಪ್ರಮಾಣದಲ್ಲಿರುವ ಸಾಧ್ಯತೆಯನ್ನು ವಿಜ್ಞಾನಿಗಳು ಹೇಳಿದ್ದಾರೆ. G1 ಪ್ರಮಾಣ ಕಡಿಮೆಯಾಗಿದ್ದರೆ, G5 ತೀವ್ರತೆ ಗರಿಷ್ಠ ಪ್ರಮಾಣದಲ್ಲಿರುತ್ತದೆ. ಇದು ಭೂಮಿಯಲ್ಲಿನ ಅನೇಕ ಪ್ರದೇಶಗಳಲ್ಲಿ ರೇಡಿಯೋ ಮತ್ತು ಸಂವಹನ ಅಡಚಣೆಗೆ ಕಾರಣವಾಗಬಹುದು.
ಬಾಹ್ಯಾಕಾಶದಿಂದ ಭೂಮಿಗೆ ಸೌರವಿದ್ಯುತ್: ಚೀನಾ ಸಾಹಸ
G1 ಜ್ವಾಲೆ ಪ್ರಮಾಣ ಕಡಿಮೆಯಾದರೂ ಭೂಮಿಯಲ್ಲಿನ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಿದೆ ಅಥವಾ ದುರ್ಬಗೊಳಿಸುವ ಸಾಧ್ಯತೆ ಹೊಂದಿದೆ. ಪವರ್ ಗ್ರಿಡ್ ಸ್ಥಗಿತಗೊಳ್ಳುವ ಸಂಭವವಿದೆ. ಉಪಗ್ರಹಗಳಿಗೆ ಅಡಚಣೆ ತರುವ ಸಾಧ್ಯತೆ ಹೊಂದಿದೆ. ಇನ್ನು ಚಂಡಮಾರುತ ಅಪ್ಪಳಿಸುವ ಸಂದರ್ಭದಲ್ಲಿ ವಲಸೆ ಹೋಗುವ ಪ್ರಾಣಿಗಳಿಗೂ ಅಪಾಯ ತಂದೊಡ್ಡಲಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. . ಸೌರ ಮೈಲ್ಮೈನಿಂದ ವಿಕಿರಣಗಳು ಅಂದರೆ ಸೌರ ಜ್ವಾಲೆ ಭೂಮಿ ತಲುಪಲು 15 ರಿಂದ 18 ಗಂಟೆ ಸಮಯ ತೆಗೆದುಕೊಳ್ಳಲಿದೆ. ಹೀಗಾಗಿ ವಿಜ್ಞಾನಿಗಳ ಪ್ರಕಾರ ಇಂದು ಭೂಮಿಗೆ ಸೌರಜ್ವಾಲೆ ಅಪ್ಪಳಿಸಲಿದೆ ಎಂದು ವಿಜ್ಞಾನಿಗಳು ಸೂಚಿಸಿದ್ದಾರೆ.
ಸೌರ ಮಂಡಲದಿಂದ ಇಂತಹ ಜ್ವಾಲೆ ಹೊರಸೂಸುವುದ ಸಾಮಾನ್ಯ, ಪ್ರತಿ ದಿನ ಸಣ್ಣ ಸಣ್ಣ ಸ್ಫೋಟಗಳು ಸಂಭವಿಸುತ್ತದೆ. ಆದರೆ ತೀವ್ರತೆ ಕಡಿಮೆ ಇರುವುದರಿಂದ ಜ್ವಾಲೆ ಚಂಡಮಾರುತವಾಗಿ ಭೂಮಿಗೆ ಅಪ್ಪಳಿಸುವುದಿಲ್ಲ. ಇನ್ನು ಸದ್ಯ ನಡೆಯುತ್ತಿರುವ ಸ್ಫೋಟ 11 ವರ್ಷಕ್ಕೊಮ್ಮೆ ನಡೆಯುತ್ತದೆ. ಸೌರ ಚಕ್ರದ ಗರಿಷ್ಠ ಹಂತ ಸಮೀಪಿಸುವಾಗ ಸ್ಫೋಟ ಸಂಭವಿಸುತ್ತದೆ. ಇಷ್ಟೇ ಅಲ್ಲ ಇದರ ತೀವ್ರತೆ ಕೂಡ ಹೆಚ್ಚಾಗಿರುತ್ತದೆ.
ಭವಿಷ್ಯದಲ್ಲಿ ಭಾರತಕ್ಕೆ ಸೂಪರ್ ಸೈಕ್ಲೋನ್‌ಗಳ ಅಪಾಯ?