ಅಶೋಕ್‌ ಟ್ರಸ್ಟ್‌ ಫಾರ್‌ ರೀಸರ್ಚ್‌ ಇನ್‌ ಇಕಾಲಜಿ ಆ್ಯಂಡ್‌ ದಿ ಎನ್ವಿನ್‌ರಾನ್ಮೆಂಟ್‌ ತಂಡವು ಈ ಪ್ರಭೇದವನ್ನು ಕಿರಣಹೊಳ ಗ್ರಾಮದಲ್ಲಿ ಪತ್ತೆ ಮಾಡಿದೆ. ಈ ಹಲ್ಲಿ ಆಪ್ರೋ-ಏಷ್ಯನ್‌ ಗೆಕ್ಕೊನಿಡೈ ಕುಲದ ನೆಮಾಸ್ಪಿಸ್‌ ಗುಂಪಿಗೆ ಸೇರಿದ್ದು, ಇದು ಪಶ್ಚಿಮ ಘಟ್ಟ ಸೇರಿ ಹಲವೆಡೆ ಕಂಡುಬರುತ್ತದೆ. 

ಬೆಂಗಳೂರು(ಮಾ.03): ಮಲೆಮಹದೇಶ್ವರ ವನ್ಯಜೀವಿ ಅರಣ್ಯಧಾಮದಲ್ಲಿ ಪತ್ತೆಯಾಗಿರುವ ಹೊಸ ಪ್ರಭೇದದ ವಿಶಿಷ್ಟವಾದ ಹಲ್ಲಿಗೆ ‘ನೆಮಾಸ್ಪಿಸ್‌ ಗಣೇಶೈಹಿ’ ಎಂದು ಖ್ಯಾತ ಕೃಷಿ ವಿಜ್ಞಾನಿ ಹಾಗೂ ಸಾಹಿತಿ ಪ್ರೊ.ಕೆ.ಎನ್‌.ಗಣೇಶಯ್ಯ ಅವರ ನಾಮಕರಣ ಮಾಡಲಾಗಿದೆ.

ಅಶೋಕ್‌ ಟ್ರಸ್ಟ್‌ ಫಾರ್‌ ರೀಸರ್ಚ್‌ ಇನ್‌ ಇಕಾಲಜಿ ಆ್ಯಂಡ್‌ ದಿ ಎನ್ವಿನ್‌ರಾನ್ಮೆಂಟ್‌ (ಎಟಿಆರ್‌ಇಇ) ತಂಡವು ಈ ಪ್ರಭೇದವನ್ನು ಕಿರಣಹೊಳ ಗ್ರಾಮದಲ್ಲಿ ಪತ್ತೆ ಮಾಡಿದೆ. ಈ ಹಲ್ಲಿ ಆಪ್ರೋ-ಏಷ್ಯನ್‌ ಗೆಕ್ಕೊನಿಡೈ ಕುಲದ ನೆಮಾಸ್ಪಿಸ್‌ ಗುಂಪಿಗೆ ಸೇರಿದ್ದು, ಇದು ಪಶ್ಚಿಮ ಘಟ್ಟ ಸೇರಿ ಹಲವೆಡೆ ಕಂಡುಬರುತ್ತದೆ. ಈ ಹಿಂದೆ 2019ರಲ್ಲಿ ಪತ್ತೆ ಮಾಡಲಾದ ನೆಮಾಸ್ಪಿಸ್‌ ಅಗರವಾಲಿ ಖಂಡೇಕಾರ ಸಹೋದರಿ ತಳಿಯಾಗಿದೆ.

ಚಂದ್ರಯಾನ - 3ಗೆ ಬಲ: ಪ್ರಮುಖ ರಾಕೆಟ್ ಎಂಜಿನ್ ಪರೀಕ್ಷೆಯಲ್ಲಿ ISROಗೆ ಯಶಸ್ಸು

ಗಣೇಶಯ್ಯ ಅವರು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಸಸ್ಯತಳಿಶಾಸ್ತ್ರದ ಬೋಧಕರಾಗಿ ಹಾಗೂ ಎಟಿಆರ್‌ಇಇ ಸಂಸ್ಥಾಪಕ ಟ್ರಸ್ಟಿಯಾಗಿ ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆ. ಜತೆಗೆ ಕನ್ನಡಪ್ರಭ-ಸುವರ್ಣ ನ್ಯೂಸ್‌ ಆಯೋಜಿಸಿರುವ ‘ರೈತರತ್ನ’ ಜ್ಯೂರಿಯೂ ಆಗಿದ್ದಾರೆ. ಅವರ ಗೌರವಾರ್ಥವಾಗಿ ಹಲ್ಲಿಗೆ ಈ ನಾಮಕರಣ ಮಾಡಲಾಗಿದೆ.