Asianet Suvarna News Asianet Suvarna News

Geomagnetic Storm Hits Starlink: ಆಗಸದಿಂದ ಉದುರಿ ಬೀಳುತ್ತಿವೆ ಎಲಾನ್‌ ಮಸ್ಕ್‌ SpaceX ಉಪಗ್ರಹಗಳು!

*ಇಂಟರ್ನೆಟ್‌ಗಾಗಿ 2000 ಉಪಗ್ರಹ ಹಾರಿಬಿಟ್ಟಿರುವ ಮಸ್ಕ್‌
*40 ಉಪಗ್ರಹಗಳು ಭೂಮಿ ಪ್ರವೇಶಿಸುವಾಗ ಭಸ್ಮ
*ಸ್ಪೇಸ್‌ ಎಕ್ಸ್‌ ಕಂಪನಿಗೆ 350 ಕೋಟಿ ರು. ಭಾರಿ ನಷ್ಟ
 

Elon Musks 40 Starlink satellites destroyed by Geomagnetic storm SpaceX says no risk to Earth mnj
Author
Bengaluru, First Published Feb 11, 2022, 8:41 AM IST

ಕೇಪ್‌ ಕೆನವರೆಲ್‌ (ಫೆ. 11): ವಿಶ್ವದ ಅತ್ಯಂತ ಕುಗ್ರಾಮಗಳಿಗೂ ಶರವೇಗದ ಅಂತರ್ಜಾಲ ಸೇವೆ ಒದಗಿಸಲು ಅಮೆರಿಕದ ಉದ್ಯಮಿ ಎಲಾನ್‌ ಮಸ್ಕ್‌ (Elon Musk) ಒಡೆತನದ ಸ್ಪೇಸ್‌ ಎಕ್ಸ್‌ ಕಂಪನಿ ಹಾರಿಬಿಟ್ಟಿದ್ದ 40 ಉಪಗ್ರಹಗಳು ಆಗಸದಿಂದ ಧರೆಯತ್ತ ಉದುರಿದ ಘಟನೆ ಬುಧವಾರ ನಡೆದಿದೆ. ಆದರೆ ಇವು ನಿಗದಿತ ಕಕ್ಷೆಯಿಂದ ಭೂಮಿಯ ವಾತಾವರಣಕ್ಕೆ ಪ್ರವೇಶಿಸುತ್ತಲೇ ಸುಟ್ಟು ಭಸ್ಮವಾಗಿರುವ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ. 

ಆದರೆ ಈ ಬೆಳವಣಿಗೆಯು ಮುಂದಿನ ದಿನಗಳಲ್ಲಿ ಅತ್ಯಂತ ಕೆಳ ಕಕ್ಷೆಯಲ್ಲಿರುವ ಇಂಥ ಉಪಗ್ರಹಗಳಿಂದ ಅಪಾಯದ ಸಾಧ್ಯತೆಯ ಕುರಿತು ಆತಂಕ ಹುಟ್ಟುಹಾಕಿದೆ. ಇತ್ತೀಚೆಗೆ ಕರ್ನಾಟಕದ ಕರಾವಳಿ ಸೇರಿ ದೇಶದ ಹಲವು ರಾಜ್ಯಗಳಲ್ಲಿ ರಾತ್ರಿ ವೇಳೆ ಸರಪಳಿಯ ಆಕಾರದಲ್ಲಿ ಕಾಣಿಸಿಕೊಂಡಿದ್ದ ಬೆಳಕು ಇದೇ ರೀತಿಯ ಉಪಗ್ರಹಗಳ ಚಲನೆಯದ್ದಾಗಿತ್ತು.

ಇದನ್ನೂ ಓದಿ: ಭಾರತದಲ್ಲಿ ವ್ಯಾಪಾರ, ಚೀನಾದಲ್ಲಿ ಉದ್ಯೋಗ ಸೃಷ್ಟಿ? ಎಲಾನ್‌ ಮಸ್ಕ್‌ ಟೆಸ್ಲಾಗೆ ಕೇಂದ್ರ ಸರ್ಕಾರ ಟಾಂಗ್!

ಉಪಗ್ರಹ ಧರೆಗೆ: ಭೂಮಿಯಿಂದ 550 ಕಿ.ಮೀ ಎತ್ತರದ ಕೆಳ ಕಕ್ಷೆಯಲ್ಲಿ ಇಡೀ ಭೂಮಿಯ ಸುತ್ತಲೂ 2400ಕ್ಕೂ ಹೆಚ್ಚು ಉಪಗ್ರಹಗಳನ್ನು ಕೂರಿಸಲು ಅಮೆರಿಕದ ಸ್ಪೇಸ್‌ ಎಕ್ಸ್‌ ಕಂಪನಿ ಮುಂದಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ 2000ಕ್ಕೂ ಹೆಚ್ಚು ಉಪಗ್ರಹಗಳನ್ನು ಹಾರಿಬಿಡಲಾಗಿದ್ದು, ಅವು ಹಲವು ದೇಶಗಳಲ್ಲಿ ಅಂತರ್ಜಾಲ ಸೇವೆ ನೀಡುತ್ತಿವೆ.

ಇದೇ ಯೋಜನೆಯ ಭಾಗವಾಗಿ ಕಂಪನಿ ಕಳೆದ ವಾರ ತಲಾ 260 ಕೆಜಿಯ 49 ಉಪಗ್ರಹಗಳನ್ನು ಹಾರಿಬಿಟ್ಟಿತ್ತು. ಆದರೆ ಭೂಮಿಯ ಕಾಂತೀಯ ವಲಯದಲ್ಲಿ ಕಾಣಿಸಿಕೊಂಡ ದಿಢೀರ್‌ ಕಾಂತಿಯ ಅಲೆಯ ಪರಿಣಾಮ ಕನಿಷ್ಠ 40 ಉಪಗ್ರಹಗಳು ತಮ್ಮ ಕಕ್ಷೆಯಿಂದ ಭೂಮಿಯೆಡೆಗೆ ಸೆಳೆಯಲ್ಪಟ್ಟಿವೆ. ಹೀಗಾಗಿ ಈ ಉಪಗ್ರಹಗಳು ಕಕ್ಷೆಯಿಂದ ಭೂಮಿಯ ವಾತಾವರಣ ಪ್ರವೇಶಿಸಿವೆ. ಈ ಹಂತದಲ್ಲಿ ಭಾರೀ ಉಷ್ಣತೆಗೆ ತುತ್ತಾಗಿ ಸುಟ್ಟು ಭಸ್ಮವಾಗಿದೆ.

ಅಷ್ಟುಮಾತ್ರವಲ್ಲ ಮುಂದಿನ ದಿನಗಳಲ್ಲಿ ಇನ್ನಷ್ಟುಉಪಗ್ರಹಗಳು ಕೂಡ ಇದೇ ರೀತಿಯಲ್ಲಿ ಕಕ್ಷೆಯಿಂದ ಭೂಮಿಯ ವಾತಾವರಣ ಪ್ರವೇಶಿಸಿ ಭಸ್ಮವಾಗಲಿವೆ. ಆದರೆ ಅದರಿಂದ ಯಾರಿಗೂ ಅಪಾಯವಿಲ್ಲ ಎಂದು ಸ್ಪೇಸ್‌ ಕಂಪನಿ ಸ್ಪಷ್ಟಪಡಿಸಿದೆ. ಏಕಕಾಲಕ್ಕೆ 40 ಉಪಗ್ರಹಗಳು ಸುಟ್ಟು ಭಸ್ಮವಾಗಿರುವ ಕಾರಣ ಕಂಪನಿಗೆ ಅಂದಾಜು 350 ಕೋಟಿ ರು.ನಷ್ಟವಾಗಿರಬಹುದು ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಕೊರೋನಾ ಕಾಲದಲ್ಲಿ 10 ಪಟ್ಟು ಹೆಚ್ಚಾಯ್ತು ಅದಾನಿ ಆಸ್ತಿ, ಎಲಾನ್ ಮಸ್ಕ್‌ಗೇ ಟಕ್ಕರ್!

ಏನಾಯ್ತು?

- ಇಂಟರ್ನೆಟ್‌ಗಾಗಿ 2000 ಉಪಗ್ರಹ ಹಾರಿಬಿಟ್ಟಿರುವ ಮಸ್ಕ್‌

- ಕಳೆದ ವಾರ 49 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದ್ದ ಸ್ಪೇಸ್‌ ಎಕ್ಸ್‌

- ಭೂಮಿಯ ಕಾಂತೀಯ ಪರಿಣಾಮದಿಂದ 40 ಉಪಗ್ರಹ ಸೆಳೆತ

- ಕಕ್ಷೆ ದಾಟಿ ಭೂಮಿಯ ವಾತಾವರಣ ಪ್ರವೇಶ. ಈ ವೇಳೆ ಭಸ್ಮ

- ಮತ್ತಷ್ಟುಉಪಗ್ರಹ ಬೀಳುವ ಸಾಧ್ಯತೆ ಎಂದ ಸ್ಪೇಸ್‌ ಎಕ್ಸ್‌

ಎಲಾನ್‌ ಮಸ್ಕ್ ಮನವಿ ತಿರಸ್ಕೃತ!: ಲೆಕ್ಟ್ರಿಕ್‌ ಕಾರುಗಳನ್ನು (Electric Vehicles) ಭಾರತಕ್ಕೆ ಆಮದು ಮಾಡಿಕೊಳ್ಳಲು ತೆರಿಗೆ ವಿನಾಯಿತಿ ಕೋರಿದ್ದ ಜಗತ್ತಿನ ನಂ.1 ಶ್ರೀಮಂತ ಎಲಾನ್‌ ಮಸ್ಕ್‌ (Elon Musk) ಒಡೆತನದ ಟೆಸ್ಲಾ ಮಾಡಿದ್ದ ಮನವಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ಪ್ರಸ್ತುತ ಜಾರಿಯಲ್ಲಿರುವ ನಿಯಮಗಳ ಪ್ರಕಾರ ಭಾಗಶಃ ನಿರ್ಮಿತ ವಾಹನಗಳನ್ನು ತಂದು ಇಲ್ಲಿ ಜೋಡಿಸಬಹುದು. ಈ ಮೂಲಕ ಕಡಿಮೆ ತೆರಿಗೆಯ ಸೌಲಭ್ಯ ಪಡೆಯಬಹುದು ಎಂದು ಹೇಳಿದೆ.

‘ಮೋದಿ ಸರ್ಕಾರ ಟೆಸ್ಲಾಗೆ ಸ್ಥಳೀಯವಾಗಿ ಉತ್ಪಾದನೆ ಆರಂಭಿಸಲು ಉತ್ತೇಜಿಸಿದೆ. ಆದರೆ ಮಸ್ಕ್‌ ಮಾತ್ರ ಆಮದು ಮಾಡಿಕೊಂಡ ಎಲೆಕ್ಟ್ರಾನಿಕ್‌ ವಾಹನಗಳ ಮೇಲೆ ಶೇ.100ರಷ್ಟುಇರುವ ತೆರಿಗೆಯನ್ನು ಕಡಿಮೆ ಮಾಡಬೇಕು ಎಂದು ಬಯಸಿದ್ದಾರೆ. ಈ ಮೂಲಕ ಬೇರೆಡೆ ತಯಾರಾದ ವಾಹನವನ್ನು ದೇಶದಲ್ಲಿ ಮಾರಾಟ ಮಾಡುವ ಉದ್ದೇಶ ಹೊಂದಿದ್ದಾರೆ. ಆದರೆ ಇದಕ್ಕೆ ಸರ್ಕಾರ ಒಪ್ಪಿಲ್ಲ’ ಎಂದು ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್‌ ಮಂಡಳಿಯ ಅಧ್ಯಕ್ಷ ವಿವೇಕ್‌ ಜೋಹ್ರಿ ಹೇಳಿದ್ದಾರೆ.

Follow Us:
Download App:
  • android
  • ios