ರಕ್ಷಣಾ ಬಜೆಟ್‌ನ ಶೇ. 5ರಷ್ಟು ಮಾತ್ರ ಸಂಶೋಧನೆಗೆ ಬಳಸಲಾಗುತ್ತಿದೆ ಇದು ಸಾಲದು: ಡಿಆರ್‌ಡಿಒ ಮುಖ್ಯಸ್ಥ
ರಕ್ಷಣಾ ಬಜೆಟ್‌ನ ಶೇ.5ರಷ್ಟು ಮಾತ್ರ ಸಂಶೋಧನೆ ಮತ್ತು ಅಭಿವೃದ್ಧಿಗೆ ಬಳಕೆಯಾಗುತ್ತಿದ್ದು, ಗುರಿ ತಲುಪಲು ಶೇ.10-15ಕ್ಕೆ ಏರಿಕೆಯಾಗಬೇಕೆಂದು ಡಿಆರ್‌ಡಿಒ ಮುಖ್ಯಸ್ಥ ಸಮೀರ್ ಕಾಮತ್ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಏರೋ ಇಂಜಿನ್‌ಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದಿದ್ದಾರೆ.
ನವದೆಹಲಿ: ರಕ್ಷಣಾ ಇಲಾಖೆಯ ಬಜೆಟ್‌ನ ಶೇಕಡಾ 5ರಷ್ಟನ್ನು ಮಾತ್ರ ಸಂಶೋಧನೆ ಹಾಗೂ ಅಭಿವೃದ್ಧಿಗೆ ಬಳಸಲಾಗುತ್ತಿದೆ. ಆದರೆ ಇದರ ಪ್ರಮಾಣ ಕನಿಷ್ಠ 10ರಿಂದ 15ರಷ್ಟಾದರೂ ಏರಿಕೆಯಾಗಬೇಕು ಎಂದು ಡಿಆರ್‌ಡಿಒದ ಮುಖ್ಯಸ್ಥ ಡಾಕ್ಟರ್ ಸಮೀರ್ ವಿ ಕಾಮತ್ ಹೇಳಿದ್ದಾರೆ. ನಾವು ಸಂಶೋಧನೆ ಹಾಗೂ ಅಭಿವೃದ್ಧಿಗೆ ಶೇಕಡಾ 5ರಷ್ಟನ್ನು ಮಾತ್ರ ವಿನಿಯೋಗಿಸುತ್ತಿದ್ದೇವೆ. ನಾವು ನಮ್ಮ ಎಲ್ಲಾ ಗುರಿಯನ್ನು ತಲುಪಬೇಕಾದರೆ ಇದರ ಪ್ರಮಾಣ ಶೇ.10ರಿಂದ 15ರಷ್ಟಾದರೂ ಹೆಚ್ಚಾಗಬೇಕು. ಆದರೆ ಸರ್ಕಾರ ಈ ವಿಚಾರವಾಗಿ ನಿಷ್ಠುರವಾಗಿದೆ.
ಆದರೆ ಆಶಾದಾಯಕ ವಿಚಾರ ಎಂದರೆ ಮುಂದಿನ 5-10 ವರ್ಷಗಳಲ್ಲಿ ನಾವು ಸಂಶೋಧನೆ ಹಾಗೂ ಅಭಿವೃದ್ಧಿಯ ಮೇಲೆ ರಕ್ಷಣಾ ಬಜೆಟ್‌ನ ಶೇಕಡಾ 5ನ್ನು ಶೇಕಡಾ 15 ಆಗಿ ಪರಿವರ್ತಿಸುತ್ತೇವೆ. ಏರೋ ಇಂಜಿನ್‌ಗಳು ನಮ್ಮ ಮೊದಲ ಆದ್ಯತೆಯಾಗಿದೆ. ಇಂದು, ನಾವು ನಮ್ಮ ಯುದ್ಧ ವಿಮಾನಕ್ಕಾಗಿ 4 ನೇ ತಲೆಮಾರಿನ ಏರೋ ಎಂಜಿನ್ ಅನ್ನು ಪ್ರದರ್ಶಿಸಿದ್ದೇವೆ. ಮುಂದೆ ಸಾಗುತ್ತಿದ್ದಂತೆ ನಮಗೆ 6ನೇ ತಲೆಮಾರಿನ ಏರೋ ಇಂಜಿನ್ ಬೇಕು. ಆದರೆ ನಮಗೆ ಈ ಸಾಮರ್ಥ್ಯ ಬೇಕಾದರೆ ದೇಶವು ಸುಮಾರು 4 ರಿಂದ 5 ಬಿಲಿಯನ್ ಡಾಲರ್‌ಗಳಷ್ಟು ಹೂಡಿಕೆ ಮಾಡಬೇಕಾಗುತ್ತದೆ ಎಂಬುದನ್ನು ಅರಿತುಕೊಳ್ಳಬೇಕು. 4 ರಿಂದ 5 ಬಿಲಿಯನ್ ಎಂದರೆ ಸುಮಾರು 40,000-50,000 ಕೋಟಿ ರೂ. ಏಕೆಂದರೆ ನಾವು ಈ ಹಿಂದೆ ಮಾಡಿದ ತಪ್ಪುಗಳನ್ನು ಪುನರಾವರ್ತಿಸಬಾರದು ಎಂದು ಅವರು ಹೇಳಿದ್ದಾರೆ.
ಡಿಆರ್‌ಡಿಒ( ಡಿಫೆನ್ಸ್ ರಿಸರ್ಚ್ & ಡೆವಲಪ್‌ಮೆಂಟ್ ಆರ್ಗನೈಷೇಸನ್ ) ದೇಶದ ಸಂಶೋಧನಾ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ರಕ್ಷಣಾ ಕ್ಷೇತ್ರಕ್ಕೆ ಹಲವು ಅಗತ್ಯ ಉಪಕರಣಗಳನ್ನು ಕೊಡುಗೆ ನೀಡಿದೆ.
ಭಾರತದ ಬತ್ತಳಿಕೆ ಸೇರಿದ ಹೊಸ ಬ್ರಹ್ಮಾಸ್ತ್ರ: ಏನಿದು ಹೈಪರ್ಸಾನಿಕ್ ಮಿಸೈಲ್..?
ಭಾರತ ಮತ್ತೊಂದು ಐತಿಹಾಸಿಕ ಸಾಧನೆ; ಐರನ್ ಡೋಂ ಭೇದಿಸಬಲ್ಲ ಕ್ಷಿಪಣಿ ಪ್ರಯೋಗ ಯಶಸ್ವಿ!