ಬೃಹತ್ ವಿಮಾನದ ಮೂಲಕ ಪ್ರತ್ಯಕ್ಷವಾಯ್ತಾ ಏಲಿಯನ್? ಆಗಸದ ವಿಚಿತ್ರ ಘಟನೆ ವಿಡಿಯೋ

ಇತ್ತೀಚೆಗೆ ಏಲಿಯನ್ ಕುರಿತು ಕುತೂಹಲ ಹೆಚ್ಚಾಗುತ್ತಿದೆ. ಇದಕ್ಕೆ ಸಂಬಂಧಿಸಿದ ಕೆಲ ವಿಡಿಯೋಗಳು ಹರಿದಾಡುತ್ತಿದೆ. ಇದೀಗ ಆಗಸದಲ್ಲಿನ ವಿಚಿತ್ರ ಘಟನೆ ವಿಡಿಯೋ ಒಂದು ಎಲ್ಲರ ಗಮನಸೆಳೆದಿದೆ. ಬೃಹತ್ ಗಾತ್ರದ ವಿಮಾನದ ಮೂಲಕ ಆಗಸದಲ್ಲಿ ಏಲಿಯನ್ ಪ್ರತ್ಯಕ್ಷಗೊಂಡಿದೆ ಎಂದು ಹಲವರು ಸೂಚಿಸಿದ್ದಾರೆ. ಈ ವಿಡಿಯೋ ನೋಡಿ ನಿಮಗೂ ಹಾಗೇ ಅನಿಸುತ್ತಾ?
 

Debate over Alien exist after huge cloud formation at sky video out

ಅನ್ಯ ಗ್ರಹ ಜೀವಿಗಳ ಕುರಿತು ಕುತೂಹಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಳೆದ ಕೆಲ ವರ್ಷಗಳಿಂದ ಏಲಿಯನ್ ಕುರಿತು ಹಲವು ಸುದ್ದಿಗಳು ಅಚ್ಚರಿ ಹುಟ್ಟಿಸಿದೆ. ಏಲಿಯನ್ ಮೃತದೇಹ ಪತ್ತೆ ಕುರಿತು ಸುದ್ದಿ ಸೇರಿದಂತೆ ಹಲವು ವಿಡಿಯೋಗಳು ಹರಿದಾಡಿದೆ. ಈ ವಿಡಿಯೋಗಳು ಏಲಿಯನ್ ಕುರಿತ ಕುತೂಹಲ ಹೆಚ್ಚಿಸಿದೆ. ಏಲಿಯನ್ ಕುರಿತು ಹಲವು ಸಂಶೋಧನೆಗಳು ನಡೆದಿದೆ. ಆದರೆ ಇನ್ನೂ ಅನ್ಯ ಗ್ರಹ ಜೀವಿ ಇರುವಿಕೆಗೆ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ ಏಲಿಯನ್ಸ್ ಇಲ್ಲ ಅನ್ನೋದನ್ನು ತಳ್ಳಿ ಹಾಕಿಲ್ಲ. ಇದಕ್ಕೆ ಪೂರಕವಾಗಿ ಇದೀಗ ಆಗಸದ ಸೋಜಿಗದ ವಿಡಿಯೋ ಒಂದು ಎಲಿಯನ್ ಕುತೂಹಲ ಹೆಚ್ಚಿಸಿದೆ. ಆಗಸದ ಮೋಡದಲ್ಲಿ ಬೃಹತ್ ವೃತ್ತಾಕಾರದ ಘಟನೆ ಸಂಭವಿಸಿದೆ. ಈ ವಿಡಿಯೋವನ್ನು ಸೆರೆ ಹಿಡಿದು ಪೋಸ್ಟ್ ಮಾಡಲಾಗಿದೆ. ಇದು ಏಲಿಯನ್ ಬೃಹತ್ ಗಾತ್ರದ ವಿಮಾನ, ಏಲಿಯನ್ ಹಡಗು ಎಂದು ಹಲವರು ವ್ಯಾಖ್ಯಾನಿಸಿದ್ದಾರೆ.

ಈ ವಿಡಿಯೋದಲ್ಲಿ ಆಗಸದಲ್ಲಿ ಭಾರಿ ಮೋಡಗಳಿದೆ. ಆದರೆ ಈ ಮೋಡಗಳು ವೃತ್ತಕಾರಾದಲ್ಲಿದೆ. ಸಾಮಾನ್ಯವಾಗಿ ಮೋಡಗಳು ಹಿಮದ ಪರ್ವತಗಳಂತೆ ಗೋಚರಿಸುತ್ತದೆ. ಇನ್ನು ಮಳೆಯ ಕಾರ್ಮೋಡಗಳು ದಡ್ಡವಾಗಿ ಕಾಣಿಸುತ್ತದೆ. ಇತ್ತ ಮಳೆ ಮೋಡಗಳು ಒಂದೆಡೆಯಿಂದ ಮತ್ತೊಂದೆಡೆ ಚಲಿಸುವುದನ್ನು ನೋಡಬಹುದು. ಆದರೆ ಈ ಮೋಡಗಳು ಎಲ್ಲಿಗೂ ಚಲಿಸುತ್ತಿಲ್ಲ. ವೃತ್ತಕಾರದಲ್ಲಿರುವ ಈ ಮೋಡ ಆಗಸದಲ್ಲಿ ನಡೆದ ವಿಚಿತ್ರ ಘಟನೆಯಾಗಿದೆ. ಆದರೆ ಈ ವಿಚಿತ್ರ ಘಟನೆಯನ್ನು ಏಲಿಯನ್ ವಿಮಾನ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಆಗಸದಿಂದ ಬಿತ್ತು ದೊಡ್ಡ ಲೋಹದ ಉಂಗುರ, ಗ್ರಾಮಸ್ಥರಲ್ಲಿ ಹೆಚ್ಚಿದ ಏಲಿಯನ್ ಆತಂಕ

Demo2020cracy ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಸ್ಥಳ, ದಿನಾಂಕ ಹಾಗೂ ಇತರ ಮಾಹಿತಿಗಳು ಸ್ಪಷ್ಟವಿಲ್ಲ. ಆದರೆ ಚರ್ಚೆಗಳು ಜೋರಾಗುತ್ತಿದೆ. ಇದು ಆಗಸದ ಕೌತುಕ ಅನ್ನೋ ಅಭಿಪ್ರಾಯಗಳು ವ್ಯಕ್ತವಾಗಿದೆ. ಇದರ ಜೊತೆಗೆ ಏಲಿಯನ್ ಇರಬಹುದು ಅನ್ನೋ ಮಾತುಗಳು ಕೇಳಿಬಂದಿದೆ. ಈ ವಿಡಿಯೋದಿಂದ ಮತ್ತೆ ಏಲಿಯನ್ ಚರ್ಚೆ ತೀವ್ರಗೊಂಡಿದೆ.

ಆದರೆ ಈ ವಿಡಿಯೋ ಪೋಸ್ಟ್ ಮಾಡಿದ ಬೆನ್ನಲ್ಲೇ ಹಲವು ಎಕ್ಸ್ ಬಳಕೆದಾರರು ಆಗಸದಲ್ಲಿ ಮೋಡಗಳ ಕೌತುಕದ ಹಲವು ವಿಡಿಯೋಗಳನ್ನು ಪೋಸ್ಟ್ ಮಾಡಿದ್ದಾರೆ. ಇದು ಆಗಸದಲ್ಲಿ ನಡೆಯುವ ಸಾಮಾನ್ಯ ಪ್ರಕ್ರಿಯೆಯಾಗಿದೆ. ಇದೇ ರೀತಿ ವೃತ್ತಾಕಾರದ ಮೋಡಗಳ ವಿಡಿಯೋ, ಏಲಿಯನ್ ಹೋಲುವ ವಿಡಿಯೋಗಳು ಸೇರಿದಂತೆ ಹಲವು ಮೋಡಗಳ ಕುರಿತು ಕೌತುಕ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. 

 

 

ಕೀನ್ಯಾದಲ್ಲಿ ಏಲಿಯನ್ ಆತಂಕ
ಕೀನ್ಯಾ ಮುಕುಕು ಗ್ರಾಮದಲ್ಲಿ ಡಿಸೆಂಬರ್ 31ರಂದು ಏಲಿಯನ್ ಆತಂಕ ಎದುರಾಗಿತ್ತು. ಮುಕುಕು ಗ್ರಾಮಕ್ಕೆ ಬೃಹತ್ ಉಂಗುರ ಆಕಾರದ ಲೋಹದ ವಸ್ತುವೊಂದು ಬಿದ್ದಿತ್ತು. ಬಿದ್ದ ಶಬ್ದ ಕೇಳಿ ಗ್ರಾಮಸ್ಥರು ಓಡೋಡಿ ಬಂದಿದ್ದಾರೆ. ಅದೃಷ್ಠವಶಾತ್, ಗ್ರಾಮದ ಕುರುಚುಲ ಗಿಡ ಗಂಟೆಗಳ ನಡುವೆ ಈ ಲೋಹದ ವಸ್ತು ಬಿದ್ದಿದೆ. ಏಲಿಯನ್ ಕುರಿತ ವಿಡಿಯೋಗಳಲ್ಲಿ ಅಥವಾ ಆ್ಯನಿಮೇಷನ್‌ಗಳಲ್ಲಿ ಕಾಣುವ ವೃತ್ತಕಾಾರದ ವಿಮಾನದ ರಿಂಗ್ ರೀತಿಯಲ್ಲಿದ್ದ ಈ ಲೋಹದ ವಸ್ತು ಏಲಿಯನ್ ಆತಂಕ ಹೆಚ್ಚಿಸಿತ್ತು. ಸ್ಥಳಕ್ಕೆ ಅಧಿಕಾರಿಗಳು, ಪೊಲೀಸರು, ಸಂಶೋಧಕರು ಆಗಮಿಸಿ ಪರಿಶೀಲಿಸಿದ್ದರು. ಇಡೀ ಪ್ರದೇಶ ಸುತ್ತುವರಿದೆ ಸಂಶೋಧನೆ ಆರಂಭಗೊಂಡಿತ್ತು.

ಇದೇ ವೇಳೆ ಕೀನ್ಯಾ ಬಾಹ್ಯಾಕಾಶ ಸಂಸ್ಥೆ ಕೂಡ ಸ್ಥಳಕ್ಕೆ ಬೇಟಿ ನೀಡಿ ಸಂಶೋಧನೆ ಆರಂಭಿಸಿತ್ತು. ಪ್ರಾಥಮಿಕ ಮಾಹಿತಿಗಳ ಪ್ರಕಾರ ಇದು ಬಾಹ್ಯಾಕಾಶ ನೌಕೆಯ ತ್ಯಾಜ್ಯ ಅನ್ನೋದು ಬಹಿರಂಗವಾಗಿದೆ. ನೌಕೆಯ ತ್ಯಾಜ್ಯ ಕೆಳಕ್ಕೆ ಬಿದ್ದಿದೆ. ಏಲಿಯನ್ ಆತಂಕವಿಲ್ಲ ಎಂದು ಕೀನ್ಯಾ ಬಾಹ್ಯಾಕಾಶ ಸಂಸ್ಥೆ ಹೇಳಿತ್ತು.  ಈ ಕುರಿತು ಕೀನ್ಯಾ ಬಾಹ್ಯಾಕಾಶ ಸಂಸ್ಥೆ ತನಿಖೆ ಮುಂದುವರಿಸಿದೆ.

ವಿಮಾನ ಪ್ರಯಾಣಿಕನ ಮೊಬೈಲ‌ನಲ್ಲಿ ಸೆರೆಯಾಯ್ತಾ ಏಲಿಯನ್? ಮೋಡದ ಮೇಲಿತ್ತು ಜೀವಿ!
 

Latest Videos
Follow Us:
Download App:
  • android
  • ios