Asianet Suvarna News Asianet Suvarna News

30 ಫುಟ್ಬಾಲ್‌ ಮೈದಾನ ಗಾತ್ರದ ಟೆಲಿಸ್ಕೋಪ್‌ ಆರಂಭ!

30 ಫುಟ್ಬಾಲ್‌ ಮೈದಾನ ಗಾತ್ರದ ಟೆಲಿಸ್ಕೋಪ್‌ ಆರಂಭ| ಗುಡ್ಡಗಾಡು ಪ್ರಾಂತ್ಯದಲ್ಲಿ ಈ ಬೃಹತ್‌ ಟೆಲಿಸ್ಕೋಪ್‌ ಅನ್ನು ಸ್ಥಾಪನೆ 

China Launches Gigantic Telescope In Hunt For Life Beyond Earth
Author
Bangalore, First Published Jan 12, 2020, 11:00 AM IST
  • Facebook
  • Twitter
  • Whatsapp

ಶಾಂಘೈ[ಜ.12]: ಭೂಮಿಯ ಆಚೆಗೂ ಜೀವಿಗಳು ಇವೆಯೇ ಎಂಬುದುನ್ನು ಕಂಡುಕೊಳ್ಳುವ ನಿಟ್ಟಿನಿಂದ ನಿರ್ಮಿಸಿದ ವಿಶ್ವದ ಅತಿದೊಡ್ಡ ರೇಡಿಯೋ ಟೆಲಿಸ್ಕೋಪ್‌ ಅನ್ನು ಚೀನಾ ಅಧಿಕೃತವಾಗಿ ಉದ್ಘಾಟಿಸಿದೆ.

ಈ ಟೆಲಿಸ್ಕೋಪ್‌ 5 ಸಾವಿರ ಮೀಟರ್‌ ಸುತ್ತಳತೆ ಹೊಂದಿದೆ. ಅಂದರೆ ಇದು 30 ಫುಟ್ಬಾಲ್‌ ಮೈದಾನದಷ್ಟುದೊಡ್ಡದಾಗಿದೆ. ನೈಋುತ್ಯ ಗುಯ್‌ಝೋವ್‌ ಪ್ರಾಂತ್ಯದ ಗುಡ್ಡಗಾಡು ಪ್ರಾಂತ್ಯದಲ್ಲಿ ಈ ಬೃಹತ್‌ ಟೆಲಿಸ್ಕೋಪ್‌ ಅನ್ನು ಸ್ಥಾಪನೆ ಮಾಡಲಾಗಿದೆ. ಈ ಟೆಲಿಸ್ಕೋಪ್‌ ಚೀನಾದಲ್ಲಿ ‘ಸ್ಕೈ ಐ’ ಎಂಬ ಹೆಸರಿನಿಂದ ಪ್ರಸಿದ್ಧಿ ಪಡೆದಿದೆ.

ಸೌರಮಂಡಲಕ್ಕೆ ಅತಿಥಿಯಾಗಿ ಬಂದ ಧೂಮಕೇತು: ಆದರೆ ಎಲ್ಲಿಂದ ಬಂತು?

2016ರಲ್ಲೇ ಈ ಟೆಲಿಸ್ಕೋಪ್‌ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದರೂ, ಪ್ರಾಯೋಗಿಕವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಇದೀಗ ಟೆಲಿಸ್ಕೊಫ್‌ ಕಾರ್ಯ ಆರಂಭಿಸಲು ಚೀನಾ ಸರ್ಕಾರ ಅನುಮತಿ ನೀಡಿದೆ. ಬಾಹ್ಯಾಕಾಶ ಸಂಶೋಧನೆ, ಗುರುತ್ವ ತರಂಗಗಳ ಪತ್ತೆಗೆ ಈ ಟೆಲಿಸ್ಕೋಪ್‌ ಬಳಕೆ ಆಗಲಿದೆ.

Follow Us:
Download App:
  • android
  • ios