Asianet Suvarna News Asianet Suvarna News

China Space Station: ಬಾಹ್ಯಾಕಾಶದಲ್ಲಿ ಚೀನಾ ಪ್ರಭುತ್ವ, ಈ ವರ್ಷ ಬಾಹ್ಯಾಕಾಶ ನಿಲ್ದಾಣ ರೆಡಿ!

•    ರಷ್ಯಾದ ನಂತರದ ಬಾಹ್ಯಾಕಾಶದಲ್ಲಿ ನಿಲ್ದಾಣ ಸ್ಥಾಪಿಸುತ್ತಿರುವ ಚೀನಾ
•    ಈ ವರ್ಷಕ್ಕೆ 40ಕ್ಕೂ ಅಧಿಕ ಉಡ್ಡಯನಗಳನ್ನು ಕೈಗೊಳ್ಳುವ ಯೋಜನೆ
•    ಬಾಹ್ಯಾಕಾಶ ನಿಲ್ದಾಣದ ಪರೀಕ್ಷೆಯನ್ನು ಆರಂಭಿಸಿರುವ ಚೀನಾ

China announces its space station will be ready by 2022 says report
Author
Bengaluru, First Published Jan 8, 2022, 8:37 PM IST

Tech Desk: ಬಾಹ್ಯಾಕಾಶದಲ್ಲಿ ಪ್ರಮುಖ ಕಾರ್ಯತಂತ್ರದ ಆಸ್ತಿ ಎಂದು ಹೇಳಲಾದ ತನ್ನ ಬಾಹ್ಯಾಕಾಶ ನಿಲ್ದಾಣವು ಈ ವರ್ಷ ಕಾರ್ಯನಿರ್ವಹಿಸಲಿದೆ ಎಂದು ಚೀನಾ ಹೇಳಿಕೊಂಡಿದೆ. ಈ ಬಾಹ್ಯಾಕಾಶ ನಿಲ್ದಾಣವು ಪೂರ್ಣಗೊಂಡರೆ, ಈ ರೀತಿಯ ನಿಲ್ದಾಣ ಹೊಂದಿದ ಜಗತ್ತಿನ ಏಕೈಕ ರಾಷ್ಟ್ರ ಎಂಬ ಖ್ಯಾತಿಗೆ ಚೀನಾ ಪಾತ್ರವಾಗಲಿದೆ. ಈಗಾಗಲೇ ರಷ್ಯಾದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ(ISS) ಇದೆಯಾದರೂ ಅದು, ಅನೇಕ ರಾಷ್ಟ್ರಗಳನ್ನು ಒಳಗೊಂಡ ಜಂಟಿ ಪ್ರಯತ್ನವಾಗಿದೆ. ಹಾಗಾಗಿ, ಈ ವಿಷಯದಲ್ಲಿ ಚೀನಾ ತನ್ನ ಪ್ರಭುತ್ವವನ್ನು ಸಾಧಿಸುತ್ತಿದೆ ಎನ್ನಬಹುದು. ಚೀನಾ ಸರ್ಕಾರವು 2022 ರ ವೇಳೆಗೆ ಬಾಹ್ಯಾಕಾಶ ನಿಲ್ದಾಣದ ನಿರ್ಮಾಣವನ್ನು ಪೂರ್ಣಗೊಳಿಸಲಿದೆ ಎಂದು ಚೀನಾ ಏರೋಸ್ಪೇಸ್ ಸೈನ್ಸ್ ಅಂಡ್ ಟೆಕ್ನಾಲಜಿ ಕಾರ್ಪೊರೇಷನ್ (China Aerospace Science and Technology-CAST)  ಹೇಳಿದೆ.

ಈ ಬಾಹ್ಯಾಕಾಶ ನಿಲ್ದಾಣ ಪೂರ್ಣಗೊಂಡರೆ ಚೀನಾ ಬಾಹ್ಯಾಕಾಶದಲ್ಲಿ ರಷ್ಯಾದ ಐಎಸ್ಎಸ್‌ನೊಂದಿಗೆ ತೀವ್ರ ಸ್ಪರ್ಧೆಗಿಳಿಯುವುದು ಪಕ್ಕಾ ಆಗಿದೆ. ಮುಂಬರುವ ವರ್ಷಗಳಲ್ಲಿ ISS(ರಷ್ಯಾ ಬಾಹ್ಯಾಕಾಶ ನಿಲ್ದಾಣ) ನಿವೃತ್ತಿಯಾಗುತ್ತಿದ್ದಂತೆ, CSS (ಚೀನಾ ಬಾಹ್ಯಾಕಾಶ ನಿಲ್ದಾಣ) ಕಕ್ಷೆಯಲ್ಲಿ ಉಳಿಯಲಿರುವ ಏಕೈಕ ಬಾಹ್ಯಾಕಾಶ ನಿಲ್ದಾಣವಾಗಿರಲಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಿದ್ದಾರೆ. ಪ್ರಸ್ತುತ, ಮೂವರು ಗಗನಯಾತ್ರಿಗಳು, ಒಬ್ಬ ಮಹಿಳೆ, ಬಾಹ್ಯಾಕಾಶದಲ್ಲಿ ನಿಲ್ದಾಣವನ್ನು ನಿರ್ಮಿಸುವ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ, ಯುನೈಟೆಡ್ ಸ್ಟೇಟ್ಸ್(USA) CSS ನ ಬೃಹತ್ ರೊಬೊಟಿಕ್  ಎಚ್ಚರಿಕೆಯನ್ನು ನೀಡಿ, ಇದು ಕಕ್ಷೆಯಿಂದ ವಸ್ತುಗಳನ್ನು ಸೆರೆಹಿಡಿಯಬಹುದು ಎಂದು ಹೇಳಿತ್ತು. ಚೈನಾ ಮ್ಯಾನ್ಡ್ ಸ್ಪೇಸ್ ಇಂಜಿನಿಯರಿಂಗ್ ಆಫೀಸ್ (CMSEO) ಪ್ರಕಾರ, ರೊಬೊಟಿಕ್ ಆರ್ಮ್ ಗುರುವಾರ ಚಲನೆಯಲ್ಲಿತ್ತು ಮತ್ತು 20 ಟನ್ ತೂಕದ ಟಿಯಾನ್‌ಝೌ-2 ಸರಕು ಹಡಗನ್ನು ಯಶಸ್ವಿಯಾಗಿ ತನ್ನೆಡೆಗೆ ಸೆಳೆಯಲು ಯಶಸ್ವಿಯಾಗಿದೆ.

ಇದನ್ನೂ ಓದಿ: Apple CEO Earnings 2021ರಲ್ಲಿ ಊಹೆಗೂ ನಿಲುಕದ ಆದಾಯ ಗಳಿಸಿದ ಆ್ಯಪಲ್ ಸಿಇಒ ಟಿಮ್ ಕುಕ್!

10 ಮೀಟರ್ ಉದ್ದದ ರೊಬೊಟಿಕ್ ಆರ್ಮ್‌ನ ಮೊದಲ ಇಂತಹ ಚಲನೆಯಾಗಿದೆ. ರೋಬೊಟಿಕ್ ಆರ್ಮ್ ಬೆಳಗಿನ ಜಾವದಲ್ಲಿ Tianzhou-2 ತನ್ನೆಡೆಗೆ ಸೆಳೆಯಿತು. CSS ಕೋರ್ ಮಾಡ್ಯೂಲ್‌ನಿಂದ ಅದರ ಸಂಪರ್ಕ ಕಡಿತಗೊಳಿಸಿತು ಮತ್ತು ಅದನ್ನು ಮತ್ತೊಂದು ಸ್ಥಳಕ್ಕೆ ವರ್ಗಾಯಿಸಲು ಯಶಸ್ವಿಯಾಯಿತು ಎಂದು ಅಧು ಹೇಳಿದೆ. ಈ ಪ್ರಯೋಗವು ಕಕ್ಷೆಯಲ್ಲಿರುವಾಗ ಬಾಹ್ಯಾಕಾಶ ನಿಲ್ದಾಣದ ಒಂದು ಭಾಗವನ್ನು ನಡೆಸಲು ಮೆಕ್ಯಾನಿಕಲ್ ಆರ್ಮ್ ಬಳಸಿಕೊಳ್ಳುವ ಕಾರ್ಯಸಾಧ್ಯತೆ ಮತ್ತು ಉಪಯುಕ್ತತೆಯನ್ನು ಪ್ರದರ್ಶಿಸಲು ಸಕ್ಸೆಸ್ ಆಗಿದೆ. ಕಂಪನಿಯ ಪ್ರಕಾರ, ಫಲಿತಾಂಶವು ಈ ವರ್ಷದ ಕೊನೆಯಲ್ಲಿ ಬಾಹ್ಯಾಕಾಶ ನಿಲ್ದಾಣದ ನಿರ್ಮಾಣಕ್ಕಾಗಿ ಕಕ್ಷೆಯಲ್ಲಿ ಹೆಚ್ಚಿನ ಜೋಡಣೆ ಕಾರ್ಯವನ್ನು ಪೂರ್ತಿಗೊಳಿಸಿದೆ.

ಇಲ್ಲಿಯವರೆಗೆ, Tianhe ಕೋರ್ ಮಾಡ್ಯೂಲ್, Tianzhou-2 ಮತ್ತು Tianzhou-3 ಸರಕು ಬಾಹ್ಯಾಕಾಶ ನೌಕೆ, ಮತ್ತು Shenzhou-13 ಅಂತರಿಕ್ಷ ನೌಕೆ ಅಪೂರ್ಣ ಬಾಹ್ಯಾಕಾಶ ನಿಲ್ದಾಣವಾಗಿದೆ. US ವಾಣಿಜ್ಯೋದ್ಯಮಿ ಎಲೋನ್ ಮಸ್ಕ್ ಒಡೆತನದ SpaceX Starlink ಉಪಗ್ರಹಗಳು ಕಕ್ಷೆಯಲ್ಲಿ ತನ್ನ ಗಗನಯಾತ್ರಿಗಳ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಎರಡು "ಕ್ಲೋಸ್ ಎನ್‌ಕೌಂಟರ್" ಆಗಿದ್ದವು ಎಂದು ಚೀನಾ ವಿಶ್ವಸಂಸ್ಥೆಗೆ ಹೇಳಿಕೊಂಡಿತ್ತು. ನಂತರ CSS ಇತ್ತೀಚೆಗೆ ಈ ಬಗ್ಗೆ ಪ್ರಸ್ತಾಪಿಸಿತ್ತು. 

ಇದನ್ನೂ ಓದಿ: Truth Social ಟ್ವಿಟರ್‌ಗೆ ಸೆಡ್ಡು ಹೊಡೆಯಲು ಟ್ರಂಪ್ ರೆಡಿ, ಸಾಮಾಜಿಕ ಜಾಲತಾಣ ಟ್ರೂತ್ ಸೊಶಿಯಲ್ ಫೆ.21ಕ್ಕೆ ಆರಂಭ

ಇದಲ್ಲದೆ, CASTC ಪ್ರಕಾರ, ಚೀನಾವು 2022 ರಲ್ಲಿ 40-ಪ್ಲಸ್ ಬಾಹ್ಯಾಕಾಶ ಉಡ್ಡಯನಗಳನ್ನು ಮಾಡಲಿದೆ. ಇದರಲ್ಲಿ ಹಲವಾರು ಮಾನವ ಸಹಿತ ಬಾಹ್ಯಾಕಾಶ ಯಾತ್ರೆಗಳು ಸೇರಿದ್ದು, ಅಮೆರಿಕದೊಂದಿಗೆ ತೀವ್ರ ಸ್ಪರ್ಧೆಯನ್ನು ಒಡ್ಡಲಿದೆ ಎಂದು ಹೇಳಲಾಗುತ್ತಿದೆ.

ಇದಲ್ಲದೆ, ಕ್ಸಿನ್ಹುವಾ ವರದಿಯ ಪ್ರಕಾರ, ಈ ವರ್ಷ ಎರಡು ಸರಕು ಬಾಹ್ಯಾಕಾಶ ನೌಕೆಗಳು, ಎರಡು ಶೆಂಝೌ ಅಂತರಿಕ್ಷನೌಕೆಗಳು ಮತ್ತು ಎರಡು ಪ್ರಯೋಗಾಲಯ ಮಾಡ್ಯೂಲ್ಗಳನ್ನು ಬಾಹ್ಯಾಕಾಶ ನಿಲ್ದಾಣಕ್ಕಾಗಿ ಪ್ರಾರಂಭಿಸಲು ಚೀನಾ ಗುರಿ ಹಾಕಿಕೊಂಡಿದೆ. ಇತರ ಬಾಹ್ಯಾಕಾಶ ನಿಲ್ದಾಣದ ಕಾರ್ಯಾಚರಣೆಗಳಲ್ಲಿ ಕಕ್ಷೆಯಲ್ಲಿ ಸಂಧಿಸುವ ಮತ್ತು ಡಾಕಿಂಗ್, ಎಕ್ಸ್ಟ್ರಾವೆಹಿಕ್ಯುಲರ್ ಚಟುವಟಿಕೆಗಳು ಮತ್ತು ಹಡಗು ಹಿಂತಿರುಗುವಿಕೆ ಸೇರಿವೆ. ಕಂಪನಿಯ ಪ್ರಕಾರ, ಲಾಂಗ್ ಮಾರ್ಚ್ -6ರಂದು ಎ ಕ್ಯಾರಿಯರ್ ರಾಕೆಟ್ 2022 ರಲ್ಲಿ ಮೊದಲ ಬಾರಿಗೆ ಬಾಹ್ಯಾಕಾಶಕ್ಕೆ ನೆಗೆಯಲಿದೆ.

Follow Us:
Download App:
  • android
  • ios