Asianet Suvarna News Asianet Suvarna News

Chandrayaan-3 Landing: ಚಂದ್ರನ ಮೇಲೆ ಭಾರತದ ಸಾಫ್ಟ್‌ ಲ್ಯಾಂಡಿಗ್‌, ನೀವು ಎಲ್ಲೆಲ್ಲಾ ವೀಕ್ಷಿಸಬಹುದು?

ಚಂದ್ರಯಾನ-3 ಎಲ್ಲಿ, ಯಾವಾಗ ಮತ್ತು ಯಾವ ಸಮಯದಲ್ಲಿ ಲ್ಯಾಂಡಿಂಗ್ ಆಗಲಿದೆ ಎಂದು ಇಸ್ರೋ ಟ್ವೀಟ್ ಮಾಡುವ ಮೂಲಕ ತಿಳಿಸಿದೆ. ನೀವು ಅದನ್ನು ಎಲ್ಲಿ ಲೈವ್ ಆಗಿ ವೀಕ್ಷಿಸಬಹುದು? ಇಡೀ ಜಗತ್ತು ಈ ಅದ್ಭುತ ಕ್ಷಣವನ್ನು ನೋಡುವಂತೆ ಇಸ್ರೋ ವಿವಿಧ ವ್ಯವಸ್ಥೆಗಳನ್ನು ಮಾಡಿದೆ.

Chandrayaan 3 Vikram Lander Soft Landing isro shares live platforms to telecast details san
Author
First Published Aug 20, 2023, 8:53 PM IST

ಬೆಂಗಳೂರು (ಆ.20): ಚಂದ್ರಯಾನ-3 ನೌಕೆಯ ಫೈನಲ್‌ ಟೆಸ್ಟ್‌ನ ದಿನಗಳು ಹತ್ತಿರವಾಗಿದೆ. ಚಂದ್ರನ ಮೇಲೆ ವಿಕ್ರಮ್‌ ಲ್ಯಾಂಡರ್‌ ಇಳಿಯುವ ದಿನಕ್ಕಾಗಿ ಇಸ್ರೋ ಭರ್ಜರಿ ಸಿದ್ಧತೆ ಮಾಡಿದೆ. ರಷ್ಯಾದ ಲೂನಾ 25 ಬಾಹ್ಯಾಕಾಶ ನೌಕೆ ಡಿಬೂಸ್ಟ್‌ ಹಂತದಲ್ಲಿ ಎದುರಿಸಿದ ತಾಂತ್ರಿಕ ದೋಷದಿಂದಾಗಿ ಚಂದ್ರನ ಮೇಲ್ಮೈಗೆ ಅಪ್ಪಳಿಸಿದೆ. ಅದರೊಂದಿಗೆ ದಕ್ಷಿಣ ಧ್ರುವಕ್ಕೆ ಇಳಿದ ಮೊದಲ ದೇಶ ಎನ್ನುವ ಸಾಧನೆ ರಷ್ಯಾ ಪಾಲಿಗೆ ತಪ್ಪಿಹೋಗಿದೆ. ರಷ್ಯಾದ ಪ್ರಯತ್ನ ವಿಫಲವಾದ ಎಚ್ಚರಿಕೆಯ ನಡುವೆಯೇ ಭಾರತ ತನ್ನ ಚಂದ್ರಯಾನ-3ಯ ಸಾಫ್ಟ್‌ ಲ್ಯಾಂಡಿಂಗ್‌ಗೆ ಅಣಿಯಾಗಿದೆ. ಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್‌ ಹೇಳಿರುವ ಪ್ರಕಾರ, ಸೆನ್ಸಾರ್‌ಗಳು, ಆಂಟೆನಾಗಳು ಏನೇ ವೈಫಲ್ಯ ಕಂಡರೂ ಚಂದ್ರನ ನೆಲದಲ್ಲಿ ವಿಕ್ರಮ್‌ ಖಂಡಿತಾ ಲ್ಯಾಂಡಿಂಗ್‌ ಮಾಡಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಇಸ್ರೋ ಈ ಯೋಜನೆಗಾಗಿ ಐದು ವರ್ಷಗಳ ಕಾಲ ಹಗಲು-ರಾತ್ರಿ ಎನ್ನದೆ ಪರಿಶ್ರಮ ಪಟ್ಟಿದ್ದಾರೆ. ಆಗಸ್ಟ್‌ 23 ರಂದು ವಿಕ್ರಮ್‌ ಲ್ಯಾಂಡರ್ ಸಾಫ್ಟ್‌ ಲ್ಯಾಂಡಿಂಗ್‌ ಮಾಡಬೇಕಿದೆ. ಅಮೆರಿಕದ ನಾಸಾ ಪಾಲಿಗೆ 'ಹೂಸ್ಟನ್‌' ಹೇಗೋ, ಇಸ್ರೋ ಪಾಲಿಗೆ ಬೆಂಗಳೂರು. ತನ್ನೆಲ್ಲಾ ನೌಕೆಗಳ ಟ್ರ್ಯಾಕಿಂಗ್‌, ಟೆಲಿಮೆಂಟ್ರಿ ಮತ್ತು ಕಮಾಂಡ್‌ ನೆಟ್‌ವರ್ಕ್‌ ನೋಡಿಕೊಳ್ಳವ 'ಐಸ್ಟ್ರಾಕ್‌' ಇರುವುದು ಬೆಂಗಳೂರಿನಲ್ಲಿ. ಇದೇ ಮಿಷನ್‌ ಕಂಟ್ರೋಲ್‌ ರೂಮ್‌ನಿಂದ ಇಡೀ ದೇಶದಲ್ಲಿ ಚಂದ್ರಯಾನ-3 ಸಾಫ್ಟ್‌ ಲ್ಯಾಂಡಿಂಗ್‌ ನೇರಪ್ರಸಾರವಾಗಲಿದೆ.

ಹಾಗಂತ ಬೆಂಗಳೂರಿನ ಈ ಕಚೇರಿಗೆ ಎಲ್ಲರೂ ಹೋಗಲು ಸಾಧ್ಯವಿಲ್ಲ. ಆದರೆ, ದೇಶದ ಪ್ರಮುಖ ವಿದ್ಯಮಾನವನ್ನು ನೀವು ಹೇಗೆ ವೀಕ್ಷಣೆ ಮಾಡಬಹುದು ಅನ್ನೋದಕ್ಕೆ ಇಲ್ಲಿ ಉತ್ತರವಿದೆ.  ಈ ಸಮಸ್ಯೆಗೆ ಸ್ವತಃ ಇಸ್ರೋ ಪರಿಹಾರ ಕಂಡುಕೊಂಡಿದೆ. ಚಂದ್ರಯಾನ-3 ಇಳಿಯುವುದನ್ನು ನಾವು ಎಲ್ಲಿ ನೋಡಬಹುದು ಎಂದು ಇಸ್ರೋ ಟ್ವೀಟ್ ಮಾಡಿದೆ.



ಈ ಕೆಳಗಿನ ಲಿಂಕ್‌ಗಳನ್ನು ಕ್ಲಿಕ್‌ ಮಾಡುವ ಮೂಲಕ ಚಂದ್ರಯಾನ-3 ಸಾಫ್ಟ್‌ ಲ್ಯಾಂಡಿಂಗ್‌ ವೀಕ್ಷಣೆ ಮಾಡಬಹುದು. ಇದರ ನೇರಪ್ರಸಾರ ಆಗಸ್ಟ್‌ 23ರ ಸಂಜೆ 5.27ಕ್ಕೆ ಆರಂಭವಾಗಲಿದೆ.

ಇಸ್ರೋ ವೆಬ್‌ಸೈಟ್‌: isro.gov.in
ಇಸ್ರೋ ಯೂಟ್ಯೂಬ್‌: youtube.com/watch?v=DLA_64yz8Ss 
ಇಸ್ರೋ ಫೇಸ್‌ಬುಕ್‌:Facebook https://facebook.com/ISRO
ಡಿಡಿ ನ್ಯಾಷನಲ್‌ ಟಿವಿ


ದೇಶವಾಸಿಗಳಿಗೆ ಸಂದೇಶ ನೀಡಿರುವ ಇಸ್ರೋ: ಚಂದ್ರಯಾನ-3 ಯೋಜನೆ ನಿಮಿತ್ತ ಇಸ್ರೋ ದೇಶವಾಸಿಗಳಿಗೆ ಪತ್ರ ಬರೆದಿದೆ. 'ಬಾಹ್ಯಾಕಾಶವನ್ನು ಅನ್ವೇಷಿಸುವ ನಮ್ಮ ಹಂಬಲ ಈಗ ಒಂದು ಮೈಲಿಗಲ್ಲನ್ನು ತಲುಪಿದೆ. ಇದರಲ್ಲಿ ಚಂದ್ರಯಾನ-3ರ ಕೊಡುಗೆ ಅಪಾರ. ಅದರ ಯಶಸ್ವಿ ಸಾಫ್ಟ್ ಲ್ಯಾಂಡಿಂಗ್‌ಗಾಗಿ ನಾವು ಈಗ ಎದುರು ನೋಡುತ್ತಿದ್ದೇವೆ. ಲ್ಯಾಂಡಿಂಗ್‌ನ ಯಶಸ್ಸಿನ ಬಗ್ಗೆ ನಾವು ಸಕಾರಾತ್ಮಕವಾಗಿದ್ದೇವೆ. ಇದರ ಯಶಸ್ಸು ಭಾರತೀಯ ವಿಜ್ಞಾನ, ಎಂಜಿನಿಯರಿಂಗ್, ತಂತ್ರಜ್ಞಾನ ಮತ್ತು ಉದ್ಯಮಕ್ಕೆ ಉತ್ತೇಜನ ನೀಡಲಿದೆ. ಇದು ಬಾಹ್ಯಾಕಾಶ ಪರಿಶೋಧನೆಯ ವಿಷಯದಲ್ಲಿ ರಾಷ್ಟ್ರವನ್ನು ಮುಂದೆ ಕೊಂಡೊಯ್ಯುತ್ತದೆ. ಆಗಸ್ಟ್ 23 ರಂದು ಚಂದ್ರಯಾನ-3 ಲ್ಯಾಂಡಿಂಗ್‌ಗೆ ಸಿದ್ಧತೆಗಳು ನಡೆಯುತ್ತಿವೆ. ಇಡೀ ದೇಶ ಮತ್ತು ವಿಶ್ವವೇ ಅದಕ್ಕಾಗಿ ಕಾಯುತ್ತಿದೆ. ಇಸ್ರೋ ಇದನ್ನು ಹಲವು ವೇದಿಕೆಗಳಲ್ಲಿ ಲೈವ್ ಆಗಿ ತೋರಿಸಲಿದೆ. ಲೈವ್ ಶೋ 23ನೇ ಆಗಸ್ಟ್ 2023 ರಂದು 17:27 PM ಕ್ಕೆ ಪ್ರಾರಂಭವಾಗುತ್ತದೆ. ನೀವು ಇದನ್ನು ಇಸ್ರೋ ವೆಬ್‌ಸೈಟ್, ಇಸ್ರೋದ ಯೂಟ್ಯೂಬ್ ಚಾನೆಲ್, ಇಸ್ರೋದ ಫೇಸ್‌ಬುಕ್ ಪುಟ ಅಥವಾ ಡಿಡಿ ನ್ಯಾಷನಲ್ ಟಿವಿಯಲ್ಲಿ ವೀಕ್ಷಿಸಬಹುದು.

ಬಾಹ್ಯಾಕಾಶ ಯುದ್ಧಭೂಮಿಯಲ್ಲ..ರಷ್ಯಾದ ಲೂನಾ ಸೋಲು ಸಂಭ್ರಮ ಪಡುವ ವಿಚಾರವಲ್ಲ!

ಚಂದ್ರಯಾನ-3 ರ ಸಾಫ್ಟ್ ಲ್ಯಾಂಡಿಂಗ್ ಕೇವಲ ಐತಿಹಾಸಿಕ ಕ್ಷಣವಲ್ಲ. ಬದಲಿಗೆ, ಇದು ಬಾಹ್ಯಾಕಾಶ ಪರಿಶೋಧನೆಯ ಬಗ್ಗೆ ಯುವಕರ ಮನಸ್ಸಿನಲ್ಲಿ ಹಲವು ರೀತಿಯ ಕುತೂಹಲವನ್ನು ಸೃಷ್ಟಿಸುತ್ತದೆ. ಇದು ನಮಗೆ ಹೆಮ್ಮೆಯ ಭಾವನೆ ಮೂಡಿಸುತ್ತದೆ. ಏಕತೆಯ ಭಾವವನ್ನು ನೀಡುತ್ತದೆ. ಈ ಬಾರಿ ಇದನ್ನು ಒಟ್ಟಾಗಿ ಆಚರಿಸುತ್ತೇವೆ. ಇದರಿಂದ ಜಗತ್ತು ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಮೆಚ್ಚುತ್ತದೆ. ಇದರಿಂದ ದೇಶ ಮತ್ತು ವಿಶ್ವದಲ್ಲಿ ವಿಜ್ಞಾನದಲ್ಲಿ ಕುತೂಹಲ ಮತ್ತು ಆವಿಷ್ಕಾರ ಹೆಚ್ಚಲಿದೆ.

ಭಾರತದ ಸೂರ್ಯ ಶಿಖಾರಿ.. 'ಆದಿತ್ಯ' ಮೊದಲ ಚಿತ್ರಗಳನ್ನು ಬಿಡುಗಡೆ ಮಾಡಿದ ಇಸ್ರೋ!

ದೇಶಾದ್ಯಂತ ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳು ಈ ಲೈವ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಈ ಐತಿಹಾಸಿಕ ಕ್ಷಣದ ಭಾಗವಾಗಲು ಇಸ್ರೋ ಮನವಿ ಮಾಡುತ್ತದೆ. ಈ ಅದ್ಭುತ ಕ್ಷಣಕ್ಕೆ ಸಾಕ್ಷಿಯಾಗಲು ನಿಮ್ಮ ವಿದ್ಯಾರ್ಥಿಗಳನ್ನು ಪ್ರೇರೇಪಿಸಿ ಎಂದು ಇಸ್ರೋ ಮನವಿ ಮಾಡಿದೆ.

Follow Us:
Download App:
  • android
  • ios