Asianet Suvarna News Asianet Suvarna News

ಭಾರತದ ಸೂರ್ಯ ಶಿಖಾರಿ.. 'ಆದಿತ್ಯ' ಮೊದಲ ಚಿತ್ರಗಳನ್ನು ಬಿಡುಗಡೆ ಮಾಡಿದ ಇಸ್ರೋ!

ISRO shares first images of Aditya-L1: ಚಂದ್ರನ ನೆಲಮುಟ್ಟುವ ಹಾದಿಯಲ್ಲಿರುವ ಇಸ್ರೋ, ಇದರ ಬೆನ್ನಲ್ಲಿಯೇ ಸೂರ್ಯನನ್ನು ಅಧ್ಯಯನ ಮಾಡಲು ಭಾರತದ ಮೊಟ್ಟಮೊದಲ ಯೋಜನೆಯಾಗಿರುವ ಆದಿತ್ಯ-ಎಲ್‌1 ಉಪಗ್ರಹದ ಚಿತ್ರಗಳನ್ನು ಇಸ್ರೋ ಬಿಡುಗಡೆ ಮಾಡಿದೆ.
 

India first ever mission to study the Sun ISRO shares first images of Aditya L1 satellit san
Author
First Published Aug 15, 2023, 6:22 PM IST

ಶ್ರೀಹರಿಕೋಟಾ(ಆ.15): ಇಸ್ರೋ ತನ್ನ ಮಹತ್ವಾಕಾಂಕ್ಷೆಯ ಮುಂದಿನ ಯೋಜನೆಯ ಅಪ್‌ಡೇಟ್‌ಅನ್ನು ಬಹಿರಂಗ ಮಾಡಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಭಾರತದ ಮೊಟ್ಟಮೊದಲ ಸೂರ್ಯ ಅಧ್ಯಯನ ಯೋಜನೆಗೆ ಆದಿತ್ಯ-ಎಲ್‌1 ಉಪಗ್ರಹವನ್ನು ಉಡಾವಣೆ ಮಾಡಲು ಸಜ್ಜಾಗಿದೆ. ಸೂರ್ಯ ಅಧ್ಯಯನಕ್ಕೆ ಇರುವ ಬಾಹ್ಯಾಕಾಶ ಆಧಾರಿಯ ವೀಕ್ಷಣಾಲಯ ಇದಾಗಿರುತ್ತದೆ. ಆಗಸ್ಟ್‌ 23 ರಂದು ಭಾರತದ ಮಹತ್ವದ ಚಂದ್ರಯಾನ-, ಶಶಿಯ ಮೇಲ್ಮೈಅನ್ನು ಸ್ಪರ್ಶ ಮಾಡಲಿದ್ದರೆ, ಅದಾದ ಮೂರು ದಿನಗಳ ಬಳಿಕ ಅಂದರೆ ಆಗಸ್ಟ್‌ 26 ರಂದು ಪಿಎಸ್‌ಎಲ್‌ವಿ-ಎಕ್ಸ್‌ಎಲ್‌ ರಾಕೆಟ್‌ ಮೂಲಕ ಆದಿತ್ಯ-ಎಲ್‌1 ಉಪಗ್ರಹವನ್ನು ಇಸ್ರೋ ಸೂರ್ಯ ಶಿಖಾರಿಗೆ ಕಳಿಸಲಿದೆ. ಇಸ್ರೋ ಆದಿತ್ಯ-ಎಲ್‌1 ಉಪಗ್ರಹದ ಮೊದಲ ಚಿತ್ರಗಳನ್ನು ಇತ್ತೀಚೆಗೆ ಹಂಚಿಕೊಂಡಿದೆ. ಬೆಂಗಳೂರಿನ ಯುಆರ್‌ ರಾವ್‌ ಸ್ಯಾಟಲೈಟ್‌ ಸೆಂಟರ್‌ನಲ್ಲಿ (ಯುಆರ್‌ಎಸ್‌ಸಿ) ಈ ಉಪಗ್ರಹ ಅಭಿವೃದ್ಧಿ ಮಾಡಲಾಗಿದ್ದು, ಉಡಾವಣೆಗಾಗಿ ಇದನ್ನು ಶ್ರೀಹರಿಕೋಟಾದ ಎಸ್‌ಡಿಎಸ್‌ಸಿ-ಎಸ್‌ಎಚ್‌ಎಆರ್‌ಗೆ ಕಳುಹಿಸಿಕೊಡಲಾಗಿದೆ. ಆದಿತ್ಯ ಎಲ್‌1 ಸೌರ ವಾತಾವರಣವನ್ನು ಅಧ್ಯಯನ ಮಾಡಲು ಯೋಜಿತ ಕರೋನಾಗ್ರಾಫ್ ಬಾಹ್ಯಾಕಾಶ ನೌಕೆಯಾಗಿದ್ದು, ಪ್ರಸ್ತುತ ಇಸ್ರೋ ಮತ್ತು ವಿವಿಧ ಭಾರತೀಯ ಸಂಶೋಧನಾ ಸಂಸ್ಥೆಗಳಿಂದ ವಿನ್ಯಾಸಗೊಳಿಸಲಾಗಿದೆ ಮತ್ತು ಅಭಿವೃದ್ಧಿಪಡಿಸಲಾಗಿದೆ.

ಇದನ್ನು ಭೂಮಿ ಮತ್ತು ಸೂರ್ಯನ ನಡುವಿನ L1 ಬಿಂದುವಿನ ಸುತ್ತ ಹಾಲೋ ಕಕ್ಷೆಯಲ್ಲಿ ಸೇರಿಸಲಾಗುತ್ತದೆ, ಅಲ್ಲಿ ಅದು ಸೌರ ವಾತಾವರಣ, ಸೌರ ಕಾಂತೀಯ ಬಿರುಗಾಳಿಗಳು ಮತ್ತು ಭೂಮಿಯ ಸುತ್ತಲಿನ ಪರಿಸರದ ಮೇಲೆ ಅವುಗಳ ಪ್ರಭಾವವನ್ನು ಅಧ್ಯಯನ ಮಾಡುತ್ತದೆ. ಇಸ್ರೋ ಪಾಲಿಗೆ ಇದು ಐತಿಹಾಸಿಕ ಮಿಷನ್‌ ಆಗಿದೆ. ಅದಕ್ಕೆ ಕಾರಣ ಸೂರ್ಯ ಕುರಿತಾಗಿ ಅಧ್ಯಯನ ಮಾಡಲು ಉಡಾವಣೆ ಮಾಡಲಿರುವ ಮೊಟ್ಟಮೊದಲ ಮಿಷನ್‌ ಇದಾಗಿರುತ್ತದೆ.

ಆದಿತ್ಯ ಎಲ್‌-1 ಎನ್ನುವ ಹೆಸರೇಕೆ?: ಈ ಯೋಜನೆಗೆ ಹೆಸರನ್ನು ಸಂಸ್ಕೃತ ಪದ 'ಆದಿತ್ಯ'ದಿಂದ ತೆಗೆದುಕೊಳ್ಳಲಾಗಿದೆ, ಅಂದರೆ ಸೂರ್ಯ ಅಥವಾ ಸೂರ್ಯನ ದೇವರಿಗೆ ಸಂಬಂಧಪಟ್ಟ ಹೆಸರು ಇದಾಗಿದೆ. ಎಲ್‌1 ಎಂದರೆ ಸೂರ್ಯ-ಭೂಮಿಯ ವ್ಯವಸ್ಥೆಯ ಲಾಗ್ರೇಂಜ್ ಪಾಯಿಂಟ್ 1. ಆದಿತ್ಯ-ಎಲ್ 1 ಬಾಹ್ಯಾಕಾಶ ನೌಕೆಯನ್ನು ಭೂಮಿಯಿಂದ ಸುಮಾರು 1.5 ಮಿಲಿಯನ್ ಕಿಮೀ ದೂರದಲ್ಲಿರುವ ಈ ಲ್ಯಾಗ್ರೇಂಜ್ ಪಾಯಿಂಟ್ 1 ರ ಸುತ್ತ ಹಾಲೋ ಕಕ್ಷೆಯಲ್ಲಿ ಇರಿಸಲಾಗುತ್ತದೆ.

ಇಸ್ರೋ ಪ್ರಕಾರ, "ಎಲ್ 1 ಬಿಂದುವಿನ ಸುತ್ತಲಿನ ಹಾಲೋ ಕಕ್ಷೆಯಲ್ಲಿ ಇರಿಸಲಾದ ಉಪಗ್ರಹವು ಯಾವುದೇ ರಹಸ್ಯ/ಗ್ರಹಣಗಳಿಲ್ಲದೆ ಸೂರ್ಯನನ್ನು ನಿರಂತರವಾಗಿ ವೀಕ್ಷಿಸುವ ಪ್ರಮುಖ ಪ್ರಯೋಜನವನ್ನು ಹೊಂದಿದೆ. ಇದು ಸೌರ ಚಟುವಟಿಕೆಗಳನ್ನು ಮತ್ತು ನೈಜ ಸಮಯದಲ್ಲಿ ಬಾಹ್ಯಾಕಾಶ ಹವಾಮಾನದ ಮೇಲೆ ಅದರ ಪರಿಣಾಮವನ್ನು ವೀಕ್ಷಿಸಲು ಹೆಚ್ಚಿನ ಪ್ರಯೋಜನವನ್ನು ಒದಗಿಸುತ್ತದೆ.

Chandrayaan-3 vs Lunar-25: ಆಮೆ-ಮೊಲದ ಸ್ಪೇಸ್‌ ರೇಸ್‌ನಲ್ಲಿ ಗೆಲ್ಲೋದ್‌ ಯಾರು?

ಆದಿತ್ಯ ಎಲ್‌1 ಇತಿಹಾಸ: ಆದಿತ್ಯ-L1 ಅನ್ನು ಒಂದು ಯೋಜನೆಯನ್ನಾಗಿ 2008ರ ಜನವರಿಯಲ್ಲಿ ಬಾಹ್ಯಾಕಾಶ ಸಂಶೋಧನೆಗಾಗಿ ಸಲಹಾ ಸಮಿತಿಯು ಪರಿಕಲ್ಪನೆ ಮಾಡಿತು. ಇದನ್ನು ಆರಂಭದಲ್ಲಿ ಸೌರ ಕರೋನಾವನ್ನು ಅಧ್ಯಯನ ಮಾಡಲು ಕರೋನಾಗ್ರಾಫ್ ಹೊಂದಿರುವ ಸಣ್ಣ 400 ಕೆಜಿ, ಲೋ ಅರ್ಥ್ ಅಬ್ಸರ್ವೇಶನ್ (LEO) ಉಪಗ್ರಹವಾಗಿ ಕಲ್ಪನೆ ಮಾಡಿಕೊಳ್ಳಲಾಗಿತ್ತು. 2016–2017ರ ಆರ್ಥಿಕ ವರ್ಷಕ್ಕೆ ಪ್ರಾಯೋಗಿಕವಾಗಿ 3 ಕೋಟಿ ರೂಪಾಯಿ ಬಜೆಟ್‌ಅನ್ನು ಇದಕ್ಕೆ ನೀಡಲಾಗಿತ್ತು. ಅಂದಿನಿಂದ ಮಿಷನ್‌ನ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ ಮತ್ತು ಈಗ ಇದನ್ನು ಲ್ಯಾಗ್ರೇಂಜ್ ಪಾಯಿಂಟ್ 1 ರಲ್ಲಿ ಇರಿಸಲು ಸಮಗ್ರ ಸೌರ ಮತ್ತು ಬಾಹ್ಯಾಕಾಶ ಪರಿಸರ ವೀಕ್ಷಣಾಲಯವಾಗಿ ಯೋಜಿಸಲಾಗಿದೆ. 2019ರ ಜುಲೈ ಪ್ರಕಾರ, ಉಡಾವಣೆ ಹೊರತುಪಡಿಸಿ, ಈ ಯೋಜನೆಯ ಒಟ್ಟು ವೆಚ್ಚ 378.53 ಕೋಟಿ ರೂಪಾಯಿ.

ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಸಂಚಲನ; ಚಂದ್ರ-ಭೂಮಿಯ ಫೋಟೋ ಕಳುಹಿಸಿದ ಉಪಗ್ರಹ!

ಚಂದ್ರಯಾನ-3, ಜುಲೈ 14 ರಂದು ಉಡಾವಣೆಯಾದ ಮೂರನೇ ಚಂದ್ರನ ಮಿಷನ್, ಆಗಸ್ಟ್ 23-24 ರಂದು ಚಂದ್ರನ ಮೇಲ್ಮೈಯಲ್ಲಿ ಇಳಿಯಲು ನಿರ್ಧರಿತವಾಗಿದೆ. ಅದಾದ ಕೆಲವೇ ದಿನದಲ್ಲಿ ಇಸ್ರೋ ತನ್ನ ಮೊದಲ ಸನ್ ಮಿಷನ್ ಆದಿತ್ಯ-ಎಲ್ 1 ಅನ್ನು ಸಹ ಉಡಾವಣೆ ಮಾಡಲಿದೆ.

 

 
 
 
 
 
 
 
 
 
 
 
 
 
 
 

A post shared by ISRO (@isro.dos)

Follow Us:
Download App:
  • android
  • ios