Chandrayaan 3: ಭಾರತ ಮತ್ತಷ್ಟು ಬಲಶಾಲಿ, ಚಂದ್ರಯಾನ -3 ಆಗಸ್ಟ್‌ನಲ್ಲಿ ಉಡಾವಣೆ, ಒಟ್ಟು 19 ಮಿಷನ್‌ಗಳ ಗುರಿ!
* ಬಾಹ್ಯಾಕಾಶದಲ್ಲಿ ಭಾರತದ ಮತ್ತೊಂದು ದೈತ್ಯ ಹೆಜ್ಜೆ
* ಚಂದ್ರಯಾನ -3 ಆಗಸ್ಟ್‌ನಲ್ಲಿ ಉಡಾವಣೆ, ಒಟ್ಟು 19 ಮಿಷನ್‌ಗಳ ಗುರಿ
* ಮಾಹಿತಿ ಕೊಟ್ಟ ಕೇಂದ್ರ ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶ ಖಾತೆ ರಾಜ್ಯ ಸಚಿವ ಡಾ.ಜಿತೇಂದ್ರ ಸಿಂಗ್
ನವದೆಹಲಿ(ಫೆ.03): ಭಾರತ ಬಾಹ್ಯಾಕಾಶದಲ್ಲಿ ಮತ್ತೊಂದು ದೈತ್ಯ ಹೆಜ್ಜೆ ಇಡಲಿದೆ. ಚಂದ್ರಯಾನ-3 ಉಡಾವಣೆ ಘೋಷಣೆಯಾಗಿದೆ. ಚಂದ್ರಯಾನ-3ನ್ನು ಆಗಸ್ಟ್ 2022 ರಲ್ಲಿ ಉಡಾವಣೆ ಮಾಡಲು ನಿರ್ಧರಿಸಲಾಗಿದೆ. 2022ರ ಆಗಸ್ಟ್‌ನಲ್ಲಿ ಚಂದ್ರಯಾನ-3 ಉಡಾವಣೆಯಾಗಲಿದೆ ಎಂದು ಕೇಂದ್ರ ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶ ಖಾತೆ ರಾಜ್ಯ ಸಚಿವ ಡಾ.ಜಿತೇಂದ್ರ ಸಿಂಗ್ ಹೇಳಿದ್ದಾರೆ.
ನಿನ್ನೆ (ಫೆಬ್ರವರಿ 2) ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ಡಾ. ಜಿತೇಂದ್ರ ಸಿಂಗ್ ಅವರು ಉತ್ತರಿಸಿದ್ದು, ಚಂದ್ರಯಾನ-2 ರಿಂದ ಕಲಿತ ಪಾಠಗಳು ಮತ್ತು ರಾಷ್ಟ್ರೀಯ ಮಟ್ಟದ ತಜ್ಞರ ಸಲಹೆಗಳ ಆಧಾರದ ಮೇಲೆ ಚಂದ್ರಯಾನ-3 ಅನ್ನು ವಾಸ್ತವಗೊಳಿಸುವ ಕೆಲಸ ನಡೆಯುತ್ತಿದೆ ಎಂದು ಹೇಳಿದರು. ಹಲವಾರು ಸಂಬಂಧಿತ ಹಾರ್ಡ್‌ವೇರ್ ಮತ್ತು ಅವುಗಳ ವಿಶೇಷ ಪರೀಕ್ಷೆಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ ಮತ್ತು ಉಡಾವಣೆಯನ್ನು ಆಗಸ್ಟ್ 2022 ಕ್ಕೆ ನಿಗದಿಪಡಿಸಲಾಗಿದೆ.
ಈ ವರ್ಷ 19 ಹೊಸ ಮಿಷನ್‌ಗಳು
2022 ರಲ್ಲಿ (ಜನವರಿಯಿಂದ ಡಿಸೆಂಬರ್ 22 ರವರೆಗೆ) ಯೋಜಿಸಲಾದ ಮಿಷನ್‌ಗಳ ಸಂಖ್ಯೆ 19 ಎಂದು ಸಚಿವರು ಮಾಹಿತಿ ನೀಡಿದರು. ಅಂದರೆ, 08 ಉಡಾವಣಾ ವಾಹನ ಕಾರ್ಯಾಚರಣೆಗಳು, 07 ಬಾಹ್ಯಾಕಾಶ ನೌಕೆಗಳು ಮತ್ತು 04 ತಂತ್ರಜ್ಞಾನ ಪ್ರದರ್ಶನ ಕಾರ್ಯಾಚರಣೆಗಳು ಇದರಲ್ಲಿ ಸೇರಿವೆ. COVID-19 ಸಾಂಕ್ರಾಮಿಕ ರೋಗದಿಂದಾಗಿ ನಡೆಯುತ್ತಿರುವ ಹಲವಾರು ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರಿವೆ. ಹೆಚ್ಚುವರಿಯಾಗಿ, ಬಾಹ್ಯಾಕಾಶ ಕ್ಷೇತ್ರದ ಸುಧಾರಣೆಗಳು ಮತ್ತು ಹೊಸದಾಗಿ ಪರಿಚಯಿಸಲಾದ ಬೇಡಿಕೆ ಚಾಲಿತ ಮಾದರಿಯ ಹಿನ್ನೆಲೆಯಲ್ಲಿ ಯೋಜನೆಗಳ ಮರು-ಮೌಲ್ಯಮಾಪನ ನಡೆದಿದೆ.
ಚಂದ್ರಯಾನ-2 ಸಂಪೂರ್ಣ ಯಶಸ್ವಿಯಾಗಲಿಲ್ಲ
ಜುಲೈ 22, 2019 ರಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರಯಾನ-2 ಅನ್ನು ಉಡಾವಣೆ ಮಾಡಿದೆ ಎಂಬುವುದು ಉಲ್ಲೇಖನೀಯ. ಆದರೆ ಸೆಪ್ಟೆಂಬರ್ 6 ರಂದು ಲ್ಯಾಂಡರ್‌ನಲ್ಲಿ ತಾಂತ್ರಿಕ ಅಡಚಣೆಯಿಂದ ಅದು ದಾರಿ ತಪ್ಪಿತು. ಇದರ ನಂತರ ಚಂದ್ರನ ಮೇಲೆ ಸುರಕ್ಷಿತವಾಗಿ ಇಳಿಯಲು ಸಾಧ್ಯವಾಗಲಿಲ್ಲ. ಚಂದ್ರನ ಮಣ್ಣನ್ನು ವಿಶ್ಲೇಷಿಸಲು ಅದು ತನ್ನೊಂದಿಗೆ ಕೆಲವು ಸಲಕರಣೆಗಳನ್ನು ತೆಗೆದುಕೊಂಡಿತ್ತು. ಚಂದ್ರಯಾನ-2ರಂತೆ ಚಂದ್ರಯಾನ 3 ಅದೇ ಸಂರಚನೆಯನ್ನು ಹೊಂದಿದೆ. ಆದರೆ ಅದಕ್ಕೆ ಆರ್ಬಿಟರ್ ಇರುವುದಿಲ್ಲ. ಅಂದರೆ, ಚಂದ್ರಯಾನ-2 ರ ಸಮಯದಲ್ಲಿ ಉಡಾವಣೆಯಾದ ಆರ್ಬಿಟರ್ ಅನ್ನು ಚಂದ್ರಯಾನ-3 ಗಾಗಿ ಬಳಸಲಾಗುವುದು. ಚಂದ್ರಯಾನ-2 ರ ಆರ್ಬಿಟರ್ ಇನ್ನೂ ಚಂದ್ರನ ಮೇಲೆ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುವುದು ಉಲ್ಲೇಖನೀಯ. ಅದು ಅಲ್ಲಿಂದ ಡೇಟಾ ಕಳುಹಿಸುತ್ತಿದೆ. ಇದಕ್ಕೂ ಮುನ್ನ ಅಕ್ಟೋಬರ್ 22, 2008 ರಂದು ಚಂದ್ರಯಾನ-1 ಅನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿದೆ.
Satellite Name | Launch Date |
EOS-03 | Aug 12, 2021 |
Amazonia-1 | Feb 28, 2021 |
Satish Dhawan SAT (SDSAT) | Feb 28, 2021 |
UNITYsat | Feb 28, 2021 |
CMS-01 | Dec 17, 2020 |
EOS-01 | Nov 07, 2020 |
GSAT-30 | Jan 17, 2020 |
RISAT-2BR1 | Dec 11, 2019 |
Cartosat-3 | Nov 27, 2019 |
Chandrayaan-2 | Jul 22, 2019 |
RISAT-2B | May 22, 2019 |
EMISAT | Apr 01, 2019 |
GSAT-31 | Feb 06, 2019 |
Microsat-R | Jan 24, 2019 |
Kalamsat-V2 | Jan 24, 2019 |