Asianet Suvarna News Asianet Suvarna News

Chandrayaan 3: ಕೊನೆಗೂ ಚಂದ್ರನ ಮೇಲೆ ಇಳಿಯಿತು ಪ್ರಗ್ಯಾನ್‌ ರೋವರ್‌, ಮೂಡಿತು ಇಸ್ರೋ ಚಿತ್ರ!

ಚಂದ್ರಯಾನ-3ಯ ಅತ್ಯಂತ ಮಹತ್ವದ ಘಟನಾವಳಿಯಾಗಿರುವ ಪ್ರಗ್ಯಾನ್‌ ರೋವರ್‌ಅನ್ನು ಚಂದ್ರನ ನೆಲದ ಮೇಲೆ ಇಳಿಸಿಯುವ ಕಾರ್ಯವಾಗಿದೆ. ಇದನ್ನು ಇಸ್ರೋ ಅಧಿಕೃತವಾಗಿ ಪ್ರಕಟಿಸಬೇಕಿದ್ದರೂ, ಇಸ್ರೋ ಮಾಕ್ಸ್‌ನ ವೈರಲ್‌ ವಿಡಿಯೋ ರೋವರ್‌ ಈಗಾಗಲೇ ಚಂದ್ರನ ನೆಲದ ಮೇಲೆ ಇಳಿದ ವಿಡಿಯೋವನ್ನು ಪ್ರಕಟಿಸಿದೆ.

Chandrayaan 3 pragyan rover Come Out from Vikram Lander Isro Mox Viral Video san
Author
First Published Aug 23, 2023, 11:41 PM IST

ಬೆಂಗಳೂರು (ಆ.23): ವಿಕ್ರಮ್‌ ಲ್ಯಾಂಡರ್‌ ಯಶಸ್ವಿಯಾಗಿ ಚಂದ್ರನ ಮೇಲೆ ಲ್ಯಾಂಡ್‌ ಆದ ಬಳಿಕ ಕೇವ 26 ಕೆಜಿ ತೂಕದ ಪ್ರಗ್ಯಾನ್‌ ರೋವರ್‌ ಚಂದ್ರನ ಮೇಲೆ ಇಳಿಯಲು ಯಶಸ್ವಿಯಾಗಿದೆ. ಈ ಬಗ್ಗೆ ಇಸ್ರೋ ಅಧಿಕೃತವಾಗಿ ಇನ್ನಷ್ಟೇ ಟ್ವೀಟ್‌ ಮಾಡಬೇಕಿದೆ. ಆದರೆ, ಇಸ್ರೋದ ಮಿಷನ್‌ ಕಂಟ್ರೋಲ್‌ ಕಾಂಪ್ಲೆಕ್ಸ್‌ ಅಂದರೆ ಮಾಕ್ಸ್‌ನ ವಿಡಿಯೋವನ್ನು ಇಂಡಿಯನ್‌ ಏರೋಸ್ಪೇಸ್‌ ಆಂಡ್‌ ಡಿಫೆನ್ಸ್‌ ನ್ಯೂಸ್‌ ತನ್ನ ಟ್ವಿಟರ್‌ ಖಾತೆಯಲ್ಲಿ ಪ್ರಕಟಿಸಿದೆ. ಇದರಲ್ಲಿ ವಿಕ್ರಮ್‌ನ ಒಡಲಿನಿಂದ ರಾಂಪ್‌ ಮೂಲಕ ಪ್ರಗ್ಯಾನ್‌ ರೋವರ್‌ ಹೊರಬರುತ್ತಿರುವ ದೃಶ್ಯಾವಳಿಯನ್ನು ತೋರಿಸಲಾಗಿದೆ. ಅದರೊಂದಿಗೆ ಮಾಕ್ಸ್‌ನಲ್ಲಿ ಅಧಿಕಾರಿಗಳು ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದಾರೆ. ಪ್ರಗ್ಯಾನ್‌ ರೋವರ್‌ ಯಶಸ್ವಿಯಾಗಿ ವಿಕ್ರಮ್‌ ಲ್ಯಾಂಡರ್‌ನಿಂದ ಹೊರಬರುವುದರೊಂದಿಗೆ ಚಂದ್ರಯಾನ-3ಯ ದೊಡ್ಡ ಮಟ್ಟದ ಕೆಲಸ ಪೂರ್ಣಗೊಂಡಂತಾಗಿದೆ. ಇನ್ನು 14 ದಿನ ಚಂದ್ರನ ನೆಲದಲ್ಲಿ ಪ್ರಗ್ಯಾನ್‌ ರೋವರ್‌ ತನ್ನ ಕೆಲಸಗಳನ್ನು ಮಾಡಲಿದೆ.

ಪ್ರಗ್ಯಾನ್‌ಅನ್ನು ಚಂದ್ರನ ಮೇಲೆ ಬಿಟ್ಟಿರುವ ವಿಕ್ರಮ್‌ ಲ್ಯಾಂಡರ್‌ಗೆ ಇನ್ನೇನು ಕೆಲಸವಿಲ್ಲವೆ ಅಂತಾ ಅಂದುಕೊಳ್ಳಬೇಡಿ. ಪ್ರಗ್ಯಾನ್‌ ರೋವರ್‌ ಚಂದ್ರನ ಮೇಲೆ ಇರುವಷ್ಟು ದಿನ ವಿಕ್ರಮ್‌ ಲ್ಯಾಂಡರ್‌ನ ಅಕ್ಕಪಕ್ಕದಲ್ಲಿಯೇ ಓಡಾಡಿಕೊಂಡಿರಬೇಕು. ಅದಕ್ಕೆ ಕಾರಣವೂ ಇದೆ. ಇಸ್ರೋ ತನ್ನ ಇಸ್ಟ್ರಾಕ್‌ನಿಂದ ಕಳಿಸುವ ಯಾವುದೇ ಕಮಾಂಡ್‌ ನೇರವಾಗಿ ರೋವರ್‌ಗೆ ಹೋಗೋದಿಲ್ಲ. ಅದು ಮೊದಲಿಗೆ ಮುಟ್ಟುವುದು ವಿಕ್ರಮ್‌ ಲ್ಯಾಂಡರ್‌ನ ಸೆನ್ಸಾರ್‌ಗಳಿಗೆ. ತಾನು ಪಡೆದುಕೊಂಡ ಕಮಾಂಡ್‌ಅನ್ನು ವಿಕ್ರಮ್‌ ಲ್ಯಾಂಡರ್‌, ಪ್ರಗ್ಯಾನ್‌ ರೋವರ್‌ಗೆ ವರ್ಗಾಯಿಸುತ್ತದೆ. ಇನ್ನು ಪ್ರಗ್ಯಾನ್‌ ರೋವರ್‌ ಕೂಡ ಚಂದ್ರನ ಮೇಲೆ ಮಾಡಿರುವ ಯಾವುದೇ ಕೆಲಸಗಳನ್ನು ನೇರವಾಗಿ ಇಸ್ರೋಗೆ ತಿಳಿಸೋದಿಲ್ಲ. ಅದು ಮೊದಲಿಗೆ ವಿಕ್ರಮ್‌ ಲ್ಯಾಂಡರ್‌ಗೆ ತಿಳಿಸಲಿದ್ದು, ವಿಕ್ರಮ್‌ ಭೂಮಿಗೆ ವರ್ಗಾಯಿಸಲಿದ್ದಾನೆ. ಒಟ್ಟಾರೆ ಇಸ್ರೋ ಹಾಗೂ ರೋವರ್‌ ನಡುವಿನ ಕೊಂಡಿಯಾಗಿ ಲ್ಯಾಂಡರ್‌ ಕಾರ್ಯನಿರ್ವಹಿಸಲಿದೆ.


14 ದಿನದ ನಂತರವೂ ಉಳಿಯಲಿದ್ದಾನೆಯೇ ಪ್ರಗ್ಯಾನ್‌: ಚಂದ್ರನಲ್ಲಿ ಪ್ರಗ್ಯಾನ್‌ ರೋವರ್‌ನ ಕೆಲಸ ಇರುವುದು 14 ದಿನಗಳು ಮಾತ್ರ. ಯಾಕೆಂದರೆ, ಭೂಮಿಯ 14 ದಿನಗಳು ಚಂದ್ರನ ಒಂದು ದಿನಕ್ಕೆ ಸಮ. ಆ ಬಳಿಕ ಚಂದ್ರನಲ್ಲಿ ಕತ್ತಲಾಗುತ್ತದೆ. ವಿಕ್ರಮ್‌ ಲ್ಯಾಂಡರ್‌ ಹಾಗೂ ಪ್ರಗ್ಯಾನ್‌ ರೋವರ್‌ಗೆ ಸೂರ್ಯನೇ ಶಕ್ತಿಯ ಮೂಲ. ಒಮ್ಮೆ ಸೂರ್ಯ ಬೆಳಕು ಹೋಗಿ ಕತ್ತಲು ಆವರಿಸಿದರೆ, ರೋವರ್‌ ಹಾಗೂ ಲ್ಯಾಂಡರ್‌ ಶಕ್ತಿಯೇ ಇಲ್ಲದಂತಾಗುತ್ತದೆ. ಇನ್ನು ಚಂದ್ರನ ಕತ್ತಲೆಂದರೆ, ಭೂಮಿಯ ರೀತಿಯಲ್ಲಿ -300 ಡಿಗ್ರಿಗಿಂತಲೂ ಕೆಳಕ್ಕೆ ತಾಪಮಾನ ಕುಸಿಯಲಿದೆ. ಇದೆಲ್ಲವನ್ನೂ ತಾಳಿಕೊಂಡು 14 ದಿನ ಕತ್ತಲೆಯಲ್ಲಿ ನಿಂತರೆ ಮತ್ತೆ ರೋವರ್‌ ಕೆಲಸ ಆರಂಭ ಮಾಡಲೂಬಹುದು. ಆದರೆ, ಇಸ್ರೋ ಮಾತ್ರ ಮುಂದಿನ 14 ದಿನಗಳ ಕೆಲಸಗಳನ್ನು ಮಾತ್ರವೇ ರೋವರ್‌ಗೆ ನಿಗದಿ ಮಾಡಿದೆ. 

Chandrayaan 3: ಮುಂದಿನ ಮೂನ್‌ ಮಿಷನ್‌ ಚಂದ್ರಯಾನ-4, ಮಾಹಿತಿ ನೀಡಿದ ಇಸ್ರೋ ವಿಜ್ಞಾನಿ!

ಇನ್ನು ವಿಕ್ರಮ್‌ ಲ್ಯಾಂಡರ್‌ ಇಳಿಯುವ ವೇಳೆ ಇಂಧನವನ್ನು ಮಿತಪ್ರಮಾಣದಲ್ಲಿ ಬಳಸಿಕೊಂಡಿದೆ ಎಂದು ಇಸ್ರೋ ವಿಜ್ಞಾನಿಗಳು ತಿಳಿಸಿದ್ದಾರೆ. ಮೂಲಗಳ ಪ್ರಕಾರ ಲ್ಯಾಂಡರ್‌ ಮಾಡ್ಯುಲ್‌ನಲ್ಲಿ ಇನ್ನೂ 150 ಕೆಜಿಯ ಇಂಧನ ಬಾಕಿ ಇದೆ. ಇದು ಇಸ್ರೋ ತನ್ನ ಕಾರ್ಯಾಚರಣೆಯನ್ನು ಅತ್ಯಂತ ಯಶಸ್ವಿಯಾಗಿ ಮಾಡಿದ್ದ ಕುರುಹಿನ ರೀತಿ ಇದೆ.

 

Chandrayaan 3: ಚಂದ್ರನ ನೆಲದ ಮೇಲೆ ಕಾಲಿಟ್ಟ ಬಳಿಕ ತೆಗೆದ ಮೊದಲ ಚಿತ್ರ!

 

 

Follow Us:
Download App:
  • android
  • ios