Asianet Suvarna News Asianet Suvarna News

ಜಗತನ್ನೇ ಬೆರಗಾಗಿಸಿದ ಭಾರತ, ಚಂದ್ರಯಾನ 3 ಲ್ಯಾಂಡಿಂಗ್ ಪ್ರಕ್ರಿಯೆ ಆರಂಭಿಸಿದ ಇಸ್ರೋ!

ಇಸ್ರೋಗೆ ಮಹತ್ವದ ಗೆಲುವು ಸಿಕ್ಕಿದೆ. ಚಂದ್ರಯಾನ 3 ಲ್ಯಾಂಡಿಂಗ್ ಪ್ರಕ್ರಿಯೆ ಆರಂಭಗೊಂಡಿದೆ. ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಮೇಲ್ಮೈನಲ್ಲಿ ಇಳಿಸುವ ಪ್ರಕ್ರಿಯೆ ಆರಂಭಗೊಂಡಿದ್ದು, 6.04ರ ವೇಳೆ ಲ್ಯಾಂಡರ್ ಚಂದ್ರನ ಮೇಲೆ ಇಳಿಯಲಿದೆ.
 

Chandrayaan 3 Mission ISRO start soft landing process of vikram Lander in Lunar ckm
Author
First Published Aug 23, 2023, 5:44 PM IST

ಬೆಂಗಳೂರು(ಆ.23) ಇಸ್ರೋದ ಚಂದ್ರಯಾನ 3 ಮಿಷನ್‌ ಹಂತ ಹಂತವಾಗಿ ಯಶಸ್ಸಿನತ್ತ ಹೆಜ್ಜೆ ಇಡುತ್ತಿದೆ. ಚಂದ್ರನ ಕಕ್ಷೆಯಿಂದ ಇದೀಗ ವಿಕ್ರಮ್ ಲ್ಯಾಂಡರ್‌ನ್ನು ಲ್ಯಾಂಡಿಂಗ್ ಮಾಡುವ ಪ್ರಕ್ರಿಯೆಗೆ ಇಸ್ರೋ ಚಾಲನೆ ನೀಡಿದೆ. 5.44ಕಕ್ಕೆ ಸರಿಯಾಗಿ ವಿಕ್ರಮ್ ಲ್ಯಾಂಡರ್ ಇಳಿಕೆ ಪ್ರಕ್ರಿಯೆಯನ್ನು ಇಸ್ರೋ ಆರಂಭಿಸಿದೆ. ಯಾವುದೇ ಅಡೆ ತಡೆ ಇಲ್ಲದೆ ಇಸ್ರೋ ಉದ್ದೇಶಿತ ರೀತಿಯಲ್ಲೇ ವಿಕ್ರಮ್ ಲ್ಯಾಂಡರ್ ಇಳಿಕೆ ಪ್ರಕ್ರಿಯೆ ನಡೆಯುತ್ತಿದೆ. 

ಬೆಂಗಳೂರಿನ ಇಸ್ರೋ ಕೇಂದ್ರದಿಂದ ವಿಕ್ರಮ್ ಲ್ಯಾಂಡರ್ ಲ್ಯಾಂಡಿಂಗ್ ಪ್ರಕ್ರಿಯೆಯನ್ನು ನಿಯಂತ್ರಣ ಮಾಡಲಾಗುತ್ತಿದೆ. ಬೆಂಗಳೂರಿನ ಇಸ್ರೊ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ (ISTRAC) ನಲ್ಲಿರುವ ಮಿಷನ್ ಆಪರೇಷನ್ ಕಾಂಪ್ಲೆಕ್ಸ್ (MOX) ಹಂತ ಹಂತವಾಗಿ ಲ್ಯಾಂಡರ್ ವೇಗವನ್ನು ತಗ್ಗಿಸುತ್ತಿದೆ. ಸಂಜೆ 6.04 ರ ಸುಮಾರಿಗೆ ದಕ್ಷಿಣ ಧ್ರುವ ಪ್ರದೇಶದ ಬಳಿ ರೋವರ್‌ನೊಂದಿಗೆ ಲ್ಯಾಂಡರ್‌ನ ನಿಗದಿತ ಸ್ಪರ್ಶವಾಗಲಿದೆ.

ಪ್ರತಿಗಂಟೆಗೆ ಸರಿಸುಮಾರು ಆರೂವರೆ ಸಾವಿರ ಕಿಲೋಮೀಟರ್ ವೇಗದಲ್ಲಿ ಚಂದ್ರನ ಮೇಲ್ಮೈನತ್ತ ಇಳಿಕೆ ಆರಂಭಗೊಂಡ ವಿಕ್ರಮ್ ಲ್ಯಾಂಡರ್ ಇದೀಗ ವೇಗವನ್ನು ಮೂರೆವರೆ ಸಾವಿರ ಕಿಲೋಮೀಟರ್‌ಗೆ ತಗ್ಗಿಸಲಾಗಿದೆ. ಹಂತ ಹಂತವಾಗಿ ಲ್ಯಾಂಡರ್ ವೇಗವನ್ನು ತಗ್ಗಿಸುವ ಪ್ರಕ್ರಿಯೆ ಆರಂಭಗೊಂಡಿದೆ. ಇಸ್ರೋ ರಫ್ ಬ್ರೇಕಿಂಗ್ ಕೂಡ ಯಶಸ್ವಿಯಾಗಿ ಮಾಡಲಾಗಿದೆ.ಇನ್ನು ಫೈನ್ ಬ್ರೈಕಿಂಗ್ ಹಂತವನ್ನೂ ಇಸ್ರೋ ಯಶಸ್ವಿಗೊಳಿಸಿದೆ. 

ವಿಕ್ರಮ್ ಲ್ಯಾಂಡರ್‌ನಲ್ಲಿರುವ ಸೆನ್ಸಾರ್‌ಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇದೀಗ ಚಂದ್ರನ ಮೇಲಿನಿಂದ ಮೂರೆವರೆ ಕಿಲೋಮೀಟರ್ ಎತ್ತರದಲ್ಲಿರುವ ವಿಕ್ರಮ್ ಲ್ಯಾಂಡರ್ ಇದೀಗ ಹಂತ ಹಂತವಾಗಿ ಇಳಿಕೆ ಪ್ರಕಿಯೆ ನಡೆಯಲಿದೆ.

Follow Us:
Download App:
  • android
  • ios