ಎಂಥಾ ಸೋಜಿಗವಿದು ನೋಡಿ... ಹೊಳೆ ದಾಟಲು ನೀರಿನ ಮೇಲೆ ಸೇತುವೆ ಕಟ್ಟಿದ ಇರುವೆಗಳು: ವೀಡಿಯೋ
ವೈರಲ್ ಆಗಿರುವ ವೀಡಿಯೊದಲ್ಲಿ, ಇರುವೆಗಳು ನೀರಿನ ಮೇಲೆ ಸೇತುವೆ ನಿರ್ಮಿಸಿ, ಆಹಾರವನ್ನು ಸಂಗ್ರಹಿಸಲು ಸಾಗುತ್ತಿರುವುದನ್ನು ಕಾಣಬಹುದು. ಇದು ಅವುಗಳ ಬುದ್ಧಿವಂತಿಕೆ ಮತ್ತು ಒಗ್ಗಟ್ಟಿನ ಶಕ್ತಿಯನ್ನು ಪ್ರದರ್ಶಿಸುತ್ತದೆ.
ಇರುವೆಗಳು ಭೂಮಿಯ ಮೇಲಿರುವ ಅತ್ಯಂತ ಶ್ರಮಜೀವಿಗಳಾಗಿವೆ. ಆಕಾರದಲ್ಲಿ ಪುಟ್ಟದಾಗಿದ್ದರೂ ಅಯುಷ್ಯ ಬಹಳ ಕಡಿಮೆ ಇದ್ದರೂ ಇವುಗಳ ಕೆಲಸ ಹಾಗೂ ಈ ಇರುವೆಗಳ ನಡುವಣ ಒಗ್ಗಟ್ಟು ಮನುಷ್ಯನಿಗೆ ಮಾದರಿಯಾಗಿದೆ. ಎಂಜಿನಿಯರ್‌ಗಳಂತೆ ಕೆಲಸ ಮಾಡುವ ಇವುಗಳು ತಮ ದೇಹದ ತೂಕಕ್ಕಿಂತ ಹೆಚ್ಚಿರುವ ಭಾರವನ್ನು ತಮ್ಮ ಸಂಘಟಿತ ಕಾರ್ಯಗಳಿಂದ ಹೊರುವ ಮೂಲಕ ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಮತ್ತೆ ಮತ್ತೆ ಸಾಬೀತುಪಡಿಸುವಂತಹ ಸಣ್ಣ ಸೂಕ್ಷ ಜೀವಿಗಳಾಗಿವೆ. ಇವುಗಳ ಶ್ರಮ ಬುದ್ಧಿವಂತಿಕೆಯನ್ನು ಸೆರೆ ಹಿಡಿದ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇವುಗಳು ಕೇವಲ ಶ್ರಮಕ್ಕೆ ಮಾತ್ರವಲ್ಲ, ಬುದ್ಧಿವಂತಿಕೆಗೂ ಒಳ್ಳೆಯ ಉದಾಹರಣೆ ಆಗಬಲ್ಲವೂ ಎಂಬುದನ್ನು ಈ ವೀಡಿಯೋ ಸಾಬೀತುಪಡಿಸಿದೆ.
ನೇಚರ್ ಇಸ್ ಅಮೇಜಿಂಗ್ ಎಂಬ ಟ್ವಿಟ್ಟರ್ ಖಾತೆಯಿಂದ ಈ ವೀಡಿಯೋ ವೈರಲ್ ಆಗಿದೆ. ಸಾಮಾನ್ಯವಾಗಿ ಮನುಷ್ಯರು ಹೊಳೆ ನದಿಗಳನ್ನು ದಾಟು ಸೇತುವೆ ಕಟ್ಟುವುದು ಸಾಮಾನ್ಯ ಆದರೆ ಈ ಇರುವೆಗಳು ಸೇತುವೆ ಕಟ್ಟುವುದೆಂದರೆ ಸಣ್ಣ ಮಾತೇನಲ್ಲ, ಹಾಗಂತ ಈ ಇರುವೆಗೂ ಮನುಷ್ಯರಂತೆ ಪ್ರಾಕೃತಿಗೆ ಮಾರಕವಾಗುವಂತಹ ಸಿಮೆಂಟ್ ಕಬ್ಬಿಣ ಬಳಸಿ ಸೇತುವೆ ಕಟ್ಟುತ್ತಿಲ್ಲ, ರಾಮಾಯಣ ಕಾಲದಲ್ಲಿ ಕಪಿಸೈನ್ಯಗಳು ಮಾಡಿದಂತೆ ಕಲ್ಲುಬಂಡೆಗಳನ್ನು ಜೋಡಿಸಿಲ್ಲ, ಇದೇನಿದ್ದರು, ಇರುವೆಗಳು ತಮ್ಮ ಗಾತ್ರವನ್ನು ಗಮನದಲ್ಲಿಟ್ಟುಕೊಂಡು ತಾವು ಮಾತ್ರ ಸಾಗಬಹುದಾದ ತಮ್ಮ ಭಾರವನ್ನು ಮಾತ್ರ ಹೊರಬಹುದಾದಂತಹ ಪುಟ್ಟ ಸೇತುವೆಯನ್ನು ಕಟ್ಟಿವೆ. ಕೇಳಲು ನೋಡಲು ವಿಸ್ಮಯವೆನಿಸಿದರು ಇದು ನಿಜ.
ವೀಡಿಯೋದಲ್ಲಿ ಕಾಣಿಸುವಂತೆ ಹರಿಯುವ ನೀರಿನ ಮೇಲೆ ಕಾಡಿನ ನಡುವೆ ಹರಿಯುತ್ತಿರುವ ಪುಟ್ಟ ನೀರಿನ ತೊರೆಯೊಂದರಲ್ಲಿ ಸಾಗುವುದಕ್ಕಾಗಿ ಇರುವೆಗಳು ನೀರಿನಲ್ಲಿ ಕೊಚ್ಚಿ ಹೋಗದಂತಹ ಉದ್ದನೆಯ ಮಣ್ಣಿನ ಸೇತುವೆಯೊಂದನ್ನು ಕಟ್ಟಿವೆ. ನೀರಿಗೆ ಅಡ್ಡಲಾಗಿ ಸೇತುವೆ ಕಟ್ಟಿದರೆ ನೀರಲ್ಲಿ ಕೊಚ್ಚಿಕೊಂಡು ಹೋಗುವುದು ಪಕ್ಕ. ಇದು ಇರುವೆಗಳಿಗೂ ಗೊತ್ತು. ಇದೇ ಕಾರಣಕ್ಕೆ ಒಂದು ಬದಿಯಿಂದ ಮತ್ತೊಂದು ಬದಿಗೆ ಸಾಗಲು ಉದ್ದಲಾಗಿ ಇರುವೆಗಳು ಸೇತುವೆ ಕಟ್ಟಿವೆ. ಮತ್ತು ನೀರಿನಲ್ಲಿ ಒದ್ದೆಯಾಗದೇ ಆ ಸೇತುವೆಯ ಮೇಲೆ ಇರುವೆಗಳು ಓಡಾಡುತ್ತಿವೆ. ಇರುವೆಗಳ ಈ ಕೆಲಸ ನಮ್ಮ ಕಣ್ಣುಗಳನ್ನೇ ಮುಂದಿರುವುದು ನಿಜವೋ ಸುಳ್ಳೋ ಎಂದು ಸಂಶಯ ಪಡುವಂತೆ ಮಾಡುತ್ತಿದೆ.
ಈ ವೀಡಿಯೋಗೆ ಒಬ್ಬರು ಧ್ವನಿ ನೀಡಿದ್ದು, ಇವುಗಳು ಇರುವೆಗಳು ಎಂದು ತಿಳಿದರೆ ನಿಮಗೆ ಅಚ್ಚರಿಯಾಗಬಹುದಲ್ಲ, ಅವರು ಎಲ್ಲಿಂದ ಬಂದರು ನೋಡಿ, ಸೀದಾ ನೀರಿನ ಮೂಲದಿಂದ ಬಂದರು, ಅವುಗಳು ತಮಗಾಗಿ ಹೀಗೆ ಸೇತುವೆ ಕಟ್ಟಲು ಹೇಗೆ ಸಾಧ್ಯ? ಹಾಗೂ ನೀರಿನ ಮೇಲೆ ಹೀಗೆ ಹೇಗೆ ಅವುಗಳು ನಡೆದಾಡುತ್ತವೆ ನೋಡಿ, ನನ್ನ ಪಾಳಿಗೆ ಇದು 7 ಅಥವಾ 8ನೇ ಅದ್ಭುತವೇ ಆಗಿದೆ. ನಾನು ಇದನ್ನು ಊಹೆಯೂ ಮಾಡಲು ಸಾಧ್ಯವಿಲ್ಲ, ಇದು ನಿಜವಾಗಿಯೂ ನಂಬಲಸಾಧ್ಯವಾಗಿದೆ. ಇರುವೆಗಳು ಇದನ್ನು ಹೇಗೆ ಮಾಡಲು ಸಾಧ್ಯ ಹೇಳಿ ನನಗೆ ಅವುಗಳು ಎಂತಹ ಮ್ಯಾಜಿಕ್ ಮಾಡಿದರು. ಇದನ್ನು ನೀವು ಕಲ್ಪಿಸಿಕೊಂಡಿದ್ದೀರೆ ಎಂದು ಅವರು ನೋಡುಗರನ್ನು ಪ್ರಶ್ನಿಸಿದ್ದಾರೆ.
ಈ ಇರುವೆಗಳು ನಿರ್ಮಿಸಿದ ಸೇತುವೆಯು ಆರಂಭದಲ್ಲಿ ಟೈರ್ ಟ್ರ್ಯಾಕ್‌ಗಳಂತೆ ಕಂಡುಬರುತ್ತದೆ. ಆದರೂ, ಹತ್ತಿರದಿಂದ ನೋಡಿದರೆ ನೂರಾರು ಸಾವಿರ ಇರುವೆಗಳು ಈ ದಾರಿಯನ್ನು ಹಿಡಿದು ನಿಂತಿದ್ದು, ಅದು ಈ ಎರಡು ಸಮಾನಾಂತರ ಮಾರ್ಗಗಳು ಒಮ್ಮುಕವಾಗಿ ಒಂದೇ ರಸ್ತೆಯನ್ನು ರೂಪಿಸಿ ಕೊನೆಯದಾಗಿ ಅವುಗಳು ಭೂಮಿಯ ನೆಲಮಹಡಿಯನ್ನು ಸೇರುತ್ತವೆ. ಮಳೆಕಾಡಿನ ನಡುವೆ ಹೀಗೆ ಸಾಗುವ ಇರುವೆಗಳು ಆಹಾರವನ್ನು ಅರಸಿ ತರುತ್ತವೆ. ಈ ವೀಡಿಯೋ ಬಗ್ಗೆ ನಿಮ್ಮೆ ಅಭಿಪ್ರಾಯವೇನು ಕಾಮೆಂಟ್ ಮಾಡಿ.