ಮಧ್ಯಪ್ರದೇಶದ ಗ್ವಾಲಿಯರ್‌ನ ವಿದ್ಯಾರ್ಥಿ ಮೇಧಾಂಶ್ ತ್ರಿವೇದಿ 80 ಕೆಜಿ ತೂಕದ ವ್ಯಕ್ತಿಯನ್ನು ಹೊರುವ ಸಿಂಗಲ್ ಸೀಟ್ ಡ್ರೋನ್ ಕಾಪ್ಟರ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಡ್ರೋನ್ ಆನಂದ್ ಮಹೀಂದ್ರಾ ಸೇರಿದಂತೆ ಹಲವರಿಂದ ಪ್ರಶಂಸೆ ಪಡೆದಿದೆ.
ಆಕಾಶದಲ್ಲಿ ಹಾರಿ ಚಿತ್ತಾರ ಸೃಷ್ಟಿಸುವ ಸಾಕಷ್ಟು ಡ್ರೋನ್‌ಗಳನ್ನು ನೀವು ನೋಡಿರ್ತಿರಾ? ಹಲವು ಮದುವೆ ಹಾಗೂ ಇನ್ನಿತರ ಸಮಾರಂಭಗಳಲ್ಲಿ ಆಕಾಶದಲ್ಲಿ ಹಾರುತ್ತಾ ಸುಂದರ ದೃಶ್ಯ ವೈಭವವನ್ನು ಸೆರೆ ಹಿಡಿಯುವ ಡ್ರೋನ್ ಅನ್ನು ನೋಡಿರುತ್ತೀರಾ ಇದರ ಜೊತೆಗೆ ಶಸ್ತ್ರಾಸ್ತ್ಗಳು ಹಾಗೂ ತುರ್ತು ಔಷಧಿ ಸಾಗಿಸುವ ಡ್ರೋನ್, ದೇಶದ ಸರಹದ್ದನ್ನು ಕಾಯುವ ಡ್ರೋನನ್ನು ಕೂಡ ನೀವು ನೋಡಿರುತ್ತೀರಾ? ಆದರೆ ಜನರು ಕುಳಿತು ಪಯಣಿಸುವ ಡ್ರೋನ್ ಇದುವರೆಗೆ ಕಂಡು ಹಿಡಿದಿರಲಿಲ್ಲಾ, ಆದರೆ ಈಗ ವಿದ್ಯಾರ್ಥಿಯೊಬ್ಬ ಇದನ್ನೂ ಅವಿಷ್ಕರಿಸಿಬಿಟ್ಟಿದ್ದಾನೆ. ವಿದ್ಯಾರ್ಥಿ ಕಂಡು ಹಿಡಿದ ಈ ಡ್ರೋನ್ ಅಂದಾಜು 80 ಕೆಜಿ ತೂಕ ಹೊಂದಿರುವ ವ್ಯಕ್ತಿಯನ್ನು ಸುಮಾರು ಸುಮಾರು 6 ನಿಮಿಚಗಳವರೆಗೆ ಹೊತ್ತುಕೊಂಡು ಸಾಗಬಲ್ಲದು. ಮಧ್ಯಪ್ರದೇಶದ ಗ್ವಾಲಿಯರ್‌ನ ವಿದ್ಯಾರ್ಥಿಯೊಬ್ಬ ಅವಿಷ್ಕರಿಸಿದ ಈ ಮಾನವ ಸಹಿತ ಡ್ರೋನ್‌ಗೆ ಈಗ ಸಾಮಾಜಿಕ ಜಾಲತಾಣದಲ್ಲಿ ಶ್ಲಾಘನೆ ವ್ಯಕ್ತವಾಗಿದೆ. ಮಹೀಂದ್ರಾ ಗ್ರೂಪ್‌ನ ಮುಖ್ಯಸ್ಥ ಉದ್ಯಮಿ ಆನಂದ್ ಮಹೀಂದ್ರ ಅವರು ಸ್ವತಃ ಈ ವೀಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಹೈಸ್ಕೂಲ್ ವಿದ್ಯಾರ್ಥಿಯೊರ್ವನ ಸಾಧನೆಗ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಮಧ್ಯಪ್ರದೇಶದ ಗ್ವಾಲಿಯರ್‌ನ ವಿದ್ಯಾರ್ಥಿ ಮೇಧಾಂಶ್ ತ್ರಿವೇದಿ ಅವರು ಸಂಪೂರ್ಣವಾಗಿ ತಮ್ಮದೇ ಐಡಿಯಾ ಬಳಸಿ ಸಿಂಗಲ್ ಸೀಟು ಇರುವ ಡ್ರೋನ್ ಕಾಪ್ಟರನ್ನು ಸಿದ್ಧಪಡಿಸಿದ್ದಾರೆ. ಈ ಡ್ರೋನ್ ನಿರ್ಮಾಣಕ್ಕೆ ಮೇಧಾಂಶ್ ಅವರು ಮೂರು ತಿಂಗಳ ಶ್ರಮ ಪಟ್ಟಿದ್ದಾರೆ. ಇದರಲ್ಲಿ 80 ಕೇಜಿ ತೂಕದ ವ್ಯಕ್ತಿ 6 ನಿಮಿಷಗಳ ಕಾಲ ಪ್ರಯಾಣಿಸಬಹುದಾಗಿದೆ. ಹೈಸ್ಕೂಲ್ ವಿದ್ಯಾರ್ಥಿಯ ಈ ಕಾರ್ಯಕ್ಕೆ ಉದ್ಯಮಿ ಆನಂದ್ ಮಹೀಂದ್ರ ಅವರು ಭಾರಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇಂತಹ ಯಂತ್ರವನ್ನು ನಿರ್ಮಿಸುವುದು ಹೇಗೆ ಎಂಬುದರ ಬಗ್ಗೆ ಇಂಟರ್‌ನೆಟ್‌ನಲ್ಲಿ ಸಾಕಷ್ಟು ಮಾಹಿತಿ ಲಭ್ಯವಿರುವುದರಿಂದ ಇದೇನು ಹೊಸತನದ ಆವಿಷ್ಕಾರವಲ್ಲ, ಆದರೆ ಇದು ಎಂಜಿನಿಯರಿಂಗ್‌ನ ಉತ್ಸಾಹ ಮತ್ತು ಕೆಲಸವನ್ನು ಪೂರ್ಣಗೊಳಿಸುವ ಬದ್ಧತೆಯ ಬಗ್ಗೆಯದ್ದಾಗಿದೆ. ನಮ್ಮಲ್ಲಿ ಈ ರೀತಿಯ ಹೆಚ್ಚು ಯುವಜನತೆ ಇದ್ದಷ್ಟೂ ನಾವು ಹೆಚ್ಚು ನವೀನ ರಾಷ್ಟ್ರವಾಗುತ್ತೇವೆ ಎಂದು ಆನಂದ್ ಮಹೀಂದ್ರಾ ಬರೆದುಕೊಂಡಿದ್ದು, ಹೈಸ್ಕೂಲ್ ಹುಡುಗನ ಈ ಹೊಸ ಅವಿಷ್ಕಾರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಈ ವೀಡಿಯೋ ನೋಡಿದ ನೆಟ್ಟಿಗರು ಕೂಡ ಮೇಧಾಂಶ್ ತ್ರಿವೇದಿ ಅವರ ಸಾಧನೆಗೆ ಬಹಳ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸಂಶೋಧನೆಯೂ ಆಸಕ್ತಿ, ಸಮರ್ಪಣೆ ಹಾಗೂ ತಮ್ಮ ಕಲ್ಪನೆಯನ್ನು ವಾಸ್ತವಕ್ಕೆ ತರುವಂತಹ ಆಸಕ್ತಿಯಿಂದ ಉಂಟಾಗುತ್ತದೆ. ಯುವ ಮನಸ್ಸುಗಳು ಅಂತಹ ಉತ್ಸಾಹದಿಂದ ಎಂಜಿನಿಯರಿಂಗ್ ಅನ್ನು ಸ್ವೀಕರಿಸಿದಾಗ, ಅವರು ಹೆಚ್ಚು ಸೃಜನಶೀಲ ಮತ್ತು ಪ್ರಗತಿಶೀಲ ರಾಷ್ಟ್ರಕ್ಕೆ ಅಡಿಪಾಯ ಹಾಕುತ್ತಾರೆ. ಆ ಚೈತನ್ಯವನ್ನು ಬೆಳೆಸುವುದು ಇಲ್ಲಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹೊಸತನಕ್ಕೆ ಕೇವಲ ಜ್ಞಾನ ಸಾಕಾಗಲ್ಲ, ವಿಷಯಗಳನ್ನು ಸಂಭವಿಸುವಂತೆ ಮಾಡುವ ಉತ್ಸಾಹ ಮತ್ತು ಸಮರ್ಪಣೆ ಬೇಕಾಗುತ್ತದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
